‘ರಾಬರ್ಟ್’ ಗಾಯಕಿ ಮಂಗ್ಲಿ ಹಾಡಿಗೆ ಕುಣಿದು ಕುಪ್ಪಳಿಸಿದ ಸದ್ಗುರು! ‘ಕಣ್ಣೇ ಅದಿರಿಂದಿ’ ಬಳಿಕ ಮತ್ತೊಮ್ಮೆ ಮೋಡಿ
ಶಿವರಾತ್ರಿ ವೇದಿಕೆಯಲ್ಲಿ ಮಂಗ್ಲಿ ಗಾನ ಸುಧೆ ಹರಿಸಿದ್ದಾರೆ. ಕಂಚಿನ ಕಂಠದಲ್ಲಿ ಅವರು ಹಾಡಿದ ಸಾಧು ಜಂಗಮ ‘ಆದಿ ದೇವುಡ...’ ಗೀತೆಗೆ ಎಲ್ಲರೂ ತಲೆ ದೂಗಿದ್ದಾರೆ.
ತೆಲುಗು ಗಾಯಕಿ ಮಂಗ್ಲಿ ಅವರ ಜನಪ್ರಿಯತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜಾನಪದ ಗಾಯಕಿಯಾಗಿ ಗುರುತಿಸಿಕೊಂಡಿದ್ದ ಅವರು ಈಗ ಸಿನಿಮಾ ಹಾಡುಗಳ ಮೂಲಕ ಮನೆಮಾತಾಗಿದ್ದಾರೆ. ಕೋಟ್ಯಂತರ ಮಂದಿಯ ಹೃದಯ ಗೆದ್ದಿದ್ದಾರೆ. ‘ರಾಬರ್ಟ್’ ಚಿತ್ರದ ‘ಕಣ್ಣೇ ಅದಿರಿಂದಿ..’ ಹಾಡಿನ ರೀತಿಯೇ ಅವರ ಮತ್ತೊಂದು ಹಾಡು ಈಗ ಭರ್ಜರಿ ಸೌಂಡು ಮಾಡುತ್ತಿದೆ.
ದೇಶದೆಲ್ಲೆಡೆ ಶಿವರಾತ್ರಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗಿದೆ. ಸದ್ಗುರು ಜಗ್ಗಿ ವಾಸುದೇವ್ ಅವರ ಈಶಾ ಫೌಂಡೇಶನ್ನಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಲಕ್ಷಾಂತರ ಜನರ ಎದುರಿನಲ್ಲಿ ಜಾಗರಣೆ ಮಾಡಲಾಗಿದೆ. ಹಾಡು, ನೃತ್ಯ, ಭಜನೆ ನಡುವೆ ಶಿವಭಕ್ತರು ಸಂಭ್ರಮಿಸಿದ್ದಾರೆ. ಇದೇ ವೇದಿಕೆಯಲ್ಲಿ ಮಂಗ್ಲಿ ಗಾನ ಸುಧೆ ಹರಿಸಿದ್ದಾರೆ. ಕಂಚಿನ ಕಂಠದಲ್ಲಿ ಮಂಗ್ಲಿ ಹಾಡಿದ ‘ಸಾಧು ಜಂಗಮ ಆದಿ ದೇವುಡ…’ ಗೀತೆಗೆ ಎಲ್ಲರೂ ತಲೆ ದೂಗಿದ್ದಾರೆ.
ಅಭಿಮಾನಿಗಳು ಮಾತ್ರವಲ್ಲದೆ, ಸದ್ಗುರು ಕೂಡ ಈ ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಈ ವಿಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದು ಮಂಗ್ಲಿ ಅವರ ಜನಪ್ರಿಯ ಗೀತೆ. ಅವರ ಯೂಟ್ಯೂಬ್ ಚಾನೆಲ್ನಲ್ಲಿ ಮಾ.8ರಂದು ಅಪ್ಲೋಡ್ ಆದ ಈ ಸಾಂಗ್ 13 ಲಕ್ಷಕ್ಕಿಂತಲೂ ಅಧಿಕ ಬಾರಿ ವೀಕ್ಷಣೆ ಕಂಡಿದೆ. ಅದೇ ಗೀತೆಯನ್ನು ಈಶಾ ಫೌಂಡೇಶನ್ನ ಶಿವರಾತ್ರಿ ಸಂಭ್ರಮದಲ್ಲಿ ಮಂಗ್ಲಿ ಹಾಡಿದ್ದಾರೆ.
ಇದೇ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಕೂಡ ಭಾಗವಹಿಸಿದ್ದರು. ಸಮಂತಾ ಅಕ್ಕಿನೇನಿ, ರಾಕುಲ್ ಪ್ರೀತ್ ಸಿಂಗ್, ಲಕ್ಷ್ಮೀ ಮಂಚು ಮುಂತಾದವರು ಹಾಜರಿದ್ದರು. ಎಲ್ಲರ ಎದುರಿನಲ್ಲಿ ಮಂಗ್ಲಿ ಮತ್ತೆ ಮಿಂಚಿದ್ದಾರೆ. ತಮಗೆ ಸಿಕ್ಕ ವೇದಿಕೆಯನ್ನು ಅವರು ಚೆನ್ನಾಗಿ ಬಳಸಿಕೊಂಡಿದ್ದಾರೆ. ಕಳೆದ ವರ್ಷ ಶಿವರಾತ್ರಿಯಲ್ಲಿ ಕನ್ನಡದ ಗಾಯಕಿ ಅನನ್ಯಾ ಭಟ್ ಹಾಡಿದ್ದ ‘ಸೋಜಿಗಾದ ಸೂಚು ಮಲ್ಲಿಗೆ…’ ಹಾಡು ಕೂಡ ಇದೇ ರೀತಿ ವೈರಲ್ ಆಗಿತ್ತು. ಈ ವರ್ಷ ಮಂಗ್ಲಿ ಮೋಡಿ ಮಾಡುತ್ತಿದ್ದಾರೆ.
View this post on Instagram
‘ರಾಬರ್ಟ್’ ಸಿನಿಮಾದ ‘ಕಣ್ಣೇ ಅದಿರಿಂದ..’ ಹಾಡು ಫೇಮಸ್ ಆಗುವವರೆಗೂ ಮಂಗ್ಲಿ ಬಗ್ಗೆ ಕನ್ನಡದ ಸಿನಿಪ್ರಿಯರಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಹೈದರಾಬಾದ್ನಲ್ಲಿ ನಡೆದ ರಾಬರ್ಟ್ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ನಲ್ಲಿ ಮಂಗ್ಲಿ ಹಾಡಿದ ‘ಕಣ್ಣೇ ಅದಿರಿಂದ…’ ಗೀತೆ ರಾತ್ರಿ ಬೆಳಗಾಗುವುದರೊಳಗೆ ಸಿಕ್ಕಾಪಟ್ಟೆ ವೈರಲ್ ಆಯಿತು. 19 ಮಿಲಿಯನ್ಗಿಂತಲೂ ಹೆಚ್ಚು ಬಾರಿ ಈ ಹಾಡು ವೀಕ್ಷಣೆ ಕಂಡಿದೆ. ‘ಆನಂದ್ ಆಡಿಯೋ’ ತನ್ನ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಿದ್ದ ಒರಿಜಿನಲ್ ಹಾಡಿಗಿಂತಲೂ ಪ್ರಿ-ರಿಲೀಸ್ ವೇದಿಕೆಯಲ್ಲಿ ಮಂಗ್ಲಿ ಹಾಡಿದ್ದೇ ಹೆಚ್ಚು ವ್ಯೂಸ್ ಪಡೆದುಕೊಂಡಿದೆ. ಇಂದು ಮಂಗ್ಲಿ ಮ್ಯಾಜಿಕ್ಗೆ ಹಿಡಿದ ಕನ್ನಡಿ.
ಇದನ್ನೂ ಓದಿ: Roberrt Telugu Collection: ತೆಲುಗು ನೆಲದಲ್ಲಿ ತೊಡೆತಟ್ಟಿದ ‘ರಾಬರ್ಟ್’! ಆಂಧ್ರ-ತೆಲಂಗಾಣದಲ್ಲಿ ಎಷ್ಟು ಕೋಟಿ ಕಲೆಕ್ಷನ್?