Roberrt Telugu Collection: ತೆಲುಗು ನೆಲದಲ್ಲಿ ತೊಡೆತಟ್ಟಿದ ‘ರಾಬರ್ಟ್​’! ಆಂಧ್ರ-ತೆಲಂಗಾಣದಲ್ಲಿ ಎಷ್ಟು ಕೋಟಿ ಕಲೆಕ್ಷನ್​?

ಎಲ್ಲೆಲ್ಲೂ ‘ರಾಬರ್ಟ್​’ ಜ್ವರ ಜೋರಾಗಿದೆ. ‘ಚಾಲೆಂಜಿಂಗ್​ ಸ್ಟಾರ್​’ ದರ್ಶನ್​ ಅಭಿಮಾನಿಗಳು ಪರರಾಜ್ಯಗಳಲ್ಲೂ ಮುಗಿಬಿದ್ದು ಈ ಸಿನಿಮಾ ನೋಡುತ್ತಿದ್ದಾರೆ.

Roberrt Telugu Collection: ತೆಲುಗು ನೆಲದಲ್ಲಿ ತೊಡೆತಟ್ಟಿದ ‘ರಾಬರ್ಟ್​’! ಆಂಧ್ರ-ತೆಲಂಗಾಣದಲ್ಲಿ ಎಷ್ಟು ಕೋಟಿ ಕಲೆಕ್ಷನ್​?
ದರ್ಶನ್​ನಲ್ಲಿ ರಾಬರ್ಟ್​
Follow us
ಮದನ್​ ಕುಮಾರ್​
|

Updated on: Mar 12, 2021 | 12:30 PM

ದರ್ಶನ್​ ನಟನೆಯ ‘ರಾಬರ್ಟ್​’ ಸಿನಿಮಾ ಶಿವರಾತ್ರಿ ಹಬ್ಬದ ಸಂಭ್ರಮವನ್ನು ದುಪ್ಪಟ್ಟು ಮಾಡಿದೆ. ಎಲ್ಲ ಚಿತ್ರಮಂದಿರಗಳ ಎದುರಲ್ಲಿ ಜಾತ್ರೆಯ ವಾತಾವರಣ ನಿರ್ಮಾಣ ಆಗಿದೆ. ಮೊದಲ ದಿನದ ಎಲ್ಲಾ ಶೋಗಳು ಹೌಸ್​ ಫುಲ್​ ಆಗಿವೆ. ಎರಡನೇ ದಿನವಾದ ಶುಕ್ರವಾರ ಕೂಡ ಬಹುತೇಕ ಅದೇ ವಾತಾವರಣ ಮುಂದುವರಿದಿದೆ. ಆಂಧ್ರ ಮತ್ತು ತೆಲಂಗಾಣದಲ್ಲೂ ಈ ಸಿನಿಮಾ ಧೂಳೆಬ್ಬಿಸುತ್ತಿದೆ.

ಕನ್ನಡ ಸಿನಿಮಾಗಳ ಮಾರುಕಟ್ಟೆ ವಿಸ್ತಾರ ಆಗುತ್ತಿದೆ. ಒಂದು ಕಾಲದಲ್ಲಿ ಪರಭಾಷೆ ಸಿನಿಮಾಗಳ ಹಾವಳಿ ನಡುವೆ ಕನ್ನಡ ಸಿನಿಮಾಗಳಿಗೆ ಕರುನಾಡಿನಲ್ಲಿಯೇ ಚಿತ್ರಮಂದಿರಗಳು ಸಿಗುತ್ತಿರಲಿಲ್ಲ. ಆದರೆ ಈಗ ಪಕ್ಕದ ರಾಜ್ಯಗಳಲ್ಲಿ ಕನ್ನಡ ಸಿನಿಮಾಗಳು ಭರ್ಜರಿ ಸೌಂಡು ಮಾಡುವ ಸಮಯ ಬಂದಿದೆ. ರಾಬರ್ಟ್​ ಚಿತ್ರ ಕನ್ನಡದ ಜೊತೆಗೆ ತೆಲುಗು ವರ್ಷನ್​ನಲ್ಲೂ ತೆರೆಕಂಡಿದ್ದು, ಆಂಧ್ರ ಹಾಗೂ ತೆಲಂಗಾಣದಲ್ಲಿ ಗಮನಾರ್ಹ ಗಳಿಕೆ ಮಾಡಿದೆ.

ಚಿತ್ರತಂಡವೇ ಹೇಳಿಕೊಂಡಿರುವಂತೆ ಆಂಧ್ರ ಹಾಗೂ ತೆಲಂಗಾಣದಲ್ಲಿ ರಾಬರ್ಟ್​ ಚಿತ್ರಕ್ಕೆ ಮೊದಲ ದಿನ 3.12 ಕೋಟಿ ರೂ. ಗಳಿಕೆ ಆಗಿದೆ. ಚಿತ್ರದ ಬಗ್ಗೆ ಅಲ್ಲಿಯೂ ಮೆಚ್ಚುಗೆ ಮಾತುಗಳು ಕೇಳಿಬರುತ್ತಿದ್ದು, ವೀಕೆಂಡ್​ನಲ್ಲಿ ಇನ್ನೂ ಹೆಚ್ಚಿನ ಕಲೆಕ್ಷನ್​ ಆಗುವ ಸಾಧ್ಯತೆ ದಟ್ಟವಾಗಿದೆ. ಟಾಲಿವುಡ್​ ಸಿನಿಪ್ರಿಯರ ವಲಯದಲ್ಲಿಯೂ ರಾಬರ್ಟ್​ ಬಗ್ಗೆ ಹಲವು ದಿನಗಳ ಮುಂಚೆಯೇ ಕ್ರೇಜ್​ ಸೃಷ್ಟಿ ಆಗಿತ್ತು. ಅದಕ್ಕೆ ಪ್ರಮುಖ ಕಾರಣ ಆಗಿದ್ದು ‘ಕಣ್ಣೆ ಅದಿರಿಂದಿ…’ ಹಾಡು. ಚಿತ್ರದ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಗಾಯಕಿ ಮಂಗ್ಲಿ ಹಾಡಿದ ಈ ಗೀತೆ ತೆಲುಗು ಭಾಷಿಕರಿಗೆ ಹೊಸ ಗುಂಗು ಹತ್ತಿಸಿತ್ತು. ಚಿತ್ರಮಂದಿರದಲ್ಲಿ ಈ ಹಾಡು ಪ್ಲೇ ಆಗುತ್ತಿದ್ದಂತೆಯೇ ಜನರು ಹುಚ್ಚೆದ್ದು ಕುಣಿಯುತ್ತಿದ್ದಾರೆ.

ಕರ್ನಾಟಕದಲ್ಲಿ ದರ್ಶನ್​ ಅವರು ಬಾಕ್ಸ್​ ಆಫೀಸ್​ ಸುಲ್ತಾನ ಎಂಬುದು ಮತ್ತೆ ಸಾಬೀತಾಗಿದೆ. ರಾಜ್ಯಾದ್ಯಂತ ಈ ಸಿನಿಮಾ 17 ಕೋಟಿ ರೂ. ಗಳಿಸಿ ದಾಖಲೆ ಬರೆದಿದೆ. ಕರ್ನಾಟಕ ಮತ್ತು ತೆಲುಗು ರಾಜ್ಯಗಳ ಕಲೆಕ್ಷನ್​ ಒಟ್ಟು ಸೇರಿಸಿದರೆ ಮೊದಲ ದಿನವೇ 20 ಕೋಟಿ ರೂ.ಗಳಿಗೂ ಅಧಿಕ ಕಮಾಯಿ ಆದಂತೆ ಆಗುತ್ತದೆ. ದರ್ಶನ್​ ಅವರ ಸಿನಿಖಾತೆಗೆ ಒಂದು ಭರ್ಜರಿ ಹಿಟ್​ ಸಿಕ್ಕಂತಾಗಿದೆ. ಫ್ಯಾಮಿಲಿ ಪ್ರೇಕ್ಷಕರು ಕೂಡ ಈ ಚಿತ್ರವನ್ನು ಇಷ್ಟಪಡುತ್ತಿದ್ದಾರೆ.

ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಅವರು ‘ರಾಬರ್ಟ್​’ ಮೂಲಕ ಗೆಲುವಿನ ಮಾಲೆ ಧರಿಸಿದ್ದಾರೆ. ನಿರ್ದೇಶಕ ತರುಣ್​ ಸುಧೀರ್​ ಮೊಗದಲ್ಲಿ ಯಶಸ್ಸಿನ ನಗು ಮೂಡಿದೆ. ನಟಿ ಆಶಾ ಭಟ್​ ಅವರಿಗೆ ಕನ್ನಡದ ಮೊದಲ ಸಿನಿಮಾದಲ್ಲಿಯೇ ಕರುನಾಡಿನ ಜನರ ಆಶೀರ್ವಾದ ಸಿಕ್ಕಿದೆ. ಒಟ್ಟಾರೆಯಾಗಿ ‘ರಾಬರ್ಟ್​’ ಸಿನಿಮಾ ಸೂಪರ್​ ಹಿಟ್​ ಆಗಿದ್ದು, ಡಿ ಫ್ಯಾನ್ಸ್​ ಹಿರಿಹಿರಿ ಹಿಗ್ಗುತ್ತಿದ್ದಾರೆ.

ಇದನ್ನೂ ಓದಿ: Roberrt 1st Day Collection: ‘ರಾಬರ್ಟ್​’ ಚಿತ್ರಕ್ಕೆ ಮೊದಲ ದಿನವೇ ಯಾವ ಯಾವ ಜಿಲ್ಲೆಗಳಿಂದ ಎಷ್ಟು ಕಲೆಕ್ಷನ್​? ಇಲ್ಲಿದೆ ರಿಪೋರ್ಟ್​

Roberrt Kannada Movie Review: ಒಂದೇ ಟಿಕೆಟ್​ನಲ್ಲಿ ದರ್ಶನ್​ ಫ್ಯಾನ್ಸ್​ಗೆ ರಾಬರ್ಟ್​ ಮತ್ತು ರಾಘವನ ಡಬಲ್​ ಧಮಾಕಾ!

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು