AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

125ನೇ ಚಿತ್ರದಲ್ಲಿ ಶಿವರಾಜ್​ಕುಮಾರ್​ ಡಿಫರೆಂಟ್​ ಲುಕ್​! ಶಿವರಾತ್ರಿ ದಿನವೇ ಸ್ಪೆಷಲ್​ ನ್ಯೂಸ್​

ಶಿವರಾತ್ರಿ ಹಬ್ಬದ ಪ್ರಯುಕ್ತ ‘ಸೆಂಚುರಿ ಸ್ಟಾರ್​’ ಶಿವರಾಜ್​ಕುಮಾರ್​ ಅವರು ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಅದರ ಫಸ್ಟ್​ ಲುಕ್​ ಕೂಡ ಬಹಿರಂಗ ಆಗಿದೆ.

125ನೇ ಚಿತ್ರದಲ್ಲಿ ಶಿವರಾಜ್​ಕುಮಾರ್​ ಡಿಫರೆಂಟ್​ ಲುಕ್​! ಶಿವರಾತ್ರಿ ದಿನವೇ ಸ್ಪೆಷಲ್​ ನ್ಯೂಸ್​
ಶಿವರಾಜ್​ಕುಮಾರ್​ ಹೊಸ ಸಿನಿಮಾ ವೇದ
ಮದನ್​ ಕುಮಾರ್​
| Edited By: |

Updated on: Mar 11, 2021 | 3:52 PM

Share

ಕನ್ನಡದಲ್ಲಿ ನಟ ಶಿವರಾಜ್​ಕುಮಾರ್​ ಅವರು ಅತಿ ವೇಗದಲ್ಲಿ ಸಿನಿಮಾ ಕೆಲಸಗಳನ್ನು ಮುಗಿಸುತ್ತಾರೆ. ಒಂದರ ಹಿಂದೊಂದು ಸಿನಿಮಾಗಳನ್ನು ಪೂರೈಸುತ್ತ ಮುನ್ನುಗ್ಗುತ್ತಿರುವ ಅವರು ಈಗ 125ನೇ ಚಿತ್ರದ ಮೈಲಿಗಲ್ಲು ತಲುಪಿದ್ದಾರೆ. ಶಿವರಾತ್ರಿ ಹಬ್ಬದ ವಿಶೇಷ ದಿನದಂದು ಅವರು ತಮ್ಮ 125ನೇ ಸಿನಿಮಾ ಬಗ್ಗೆ ಬ್ರೇಕಿಂಗ್​ ನ್ಯೂಸ್​ ನೀಡಿದ್ದಾರೆ.

125ನೇ ಚಿತ್ರಕ್ಕೆ ‘ವೇದ’ ಶೀರ್ಷಿಕೆ ಶಿವಣ್ಣನ 125ನೇ ಸಿನಿಮಾಗೆ ‘ವೇದ’ ಎಂದು ಟೈಟಲ್​ ಇಡಲಾಗಿದೆ. ಮಾ.11ರಂದು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳ ಮೂಲಕ ಈ ಸಿನಿಮಾದ ಫಸ್ಟ್​ಲುಕ್​ ಪೋಸ್ಟರ್​ ಅನ್ನು ಶಿವಣ್ಣ ಶೇರ್​ ಮಾಡಿಕೊಂಡಿದ್ದಾರೆ. ಅಭಿಮಾನಿಗಳಿಗೆ ಈ ಪೋಸ್ಟರ್​ ಮೆಚ್ಚುಗೆ ಆಗಿದೆ. ವಿಶೇಷ ಏನೆಂದರೆ ಈ ಚಿತ್ರಕ್ಕೆ ನಿರ್ದೇಶನ ಮಾಡುತ್ತಿರುವುದು ಸ್ಯಾಂಡಲ್​ವುಡ್​ನ ಖ್ಯಾತ ನಿರ್ದೇಶಕ ಎ. ಹರ್ಷ.

ಹರ್ಷ-ಶಿವಣ್ಣ ನಾಲ್ಕನೇ ಸಿನಿಮಾ ಈ ಹಿಂದೆ ‘ಭಜರಂಗಿ’ ಸಿನಿಮಾ ಮೂಲಕ ಶಿವರಾಜ್​ಕುಮಾರ್​ ಮತ್ತು ಎ. ಹರ್ಷ ಮೊದಲ ಬಾರಿಗೆ ಜೊತೆಯಾಗಿ ಕೆಲಸ ಮಾಡಿದ್ದರು. ಆ ಚಿತ್ರ ಸೂಪರ್​ ಹಿಟ್​ ಆಗಿತ್ತು. ನಂತರ ಅವರಿಬ್ಬರ ಕಾಂಬಿನೇಷನ್​ನಲ್ಲಿ ‘ವಜ್ರಕಾಯ’ ಸಿನಿಮಾ ಮೂಡಿಬಂತು. ಈಗ ಬಿಡುಗಡೆಗೆ ಸಜ್ಜಾಗಿರುವ ‘ಭಜರಂಗಿ 2’ ಚಿತ್ರಕ್ಕೂ ಎ. ಹರ್ಷ ನಿರ್ದೇಶನ ಮಾಡಿದ್ದಾರೆ. ಈ ಮೂರು ಸಿನಿಮಾಗಳ ಬಳಿಕ ‘ವೇದ’ ಚಿತ್ರದಲ್ಲೂ ಹರ್ಷ ಮತ್ತು ಶಿವಣ್ಣ ಒಂದಾಗುತ್ತಿದ್ದಾರೆ.

ಕೌತುಕ ಮೂಡಿಸಿದ ಫಸ್ಟ್​ಲುಕ್​ ಪೋಸ್ಟರ್​ ಸಿನಿಮಾ ಹೆಸರಿನ ಜೊತೆಗೆ ಫಸ್ಟ್​ಲುಕ್​ ಪೋಸ್ಟರ್​ ಅನ್ನು ಕೂಡ ಶಿವಣ್ಣ ಅನಾವರಣಗೊಳಿಸಿದ್ದಾರೆ. ಬಿಳಿ ಕೂದಲು ಮತ್ತು ಬಿಳಿ ಗಡ್ಡದಲ್ಲಿ ಕಾಣಿಸಿಕೊಂಡಿರುವ ‘ಸೆಂಚುರಿ ಸ್ಟಾರ್​’ ಹೊಸ ಗೆಟಪ್​ ಗಮನ ಸೆಳೆಯುತ್ತಿದೆ. ಪೋಸ್ಟರ್​ ಮೇಲೆ The Brutal 1960’s ಎಂದು ಬರೆದಿರುವುದರಿಂದ ಈ ಸಿನಿಮಾದ ಕಥೆ 1960ರ ದಶಕದಲ್ಲಿ ಸಾಗಲಿದೆ ಎಂಬ ಸುಳಿವು ಸಿಕ್ಕಿದೆ. ಚಿತ್ರಕ್ಕೆ ‘ವೇದ’ ಎಂದು ಶೀರ್ಷಿಕೆ ಇಡಲು ಕಾರಣ ಏನು? ಯಾವ ಥೀಮ್ ಮೇಲೆ ಸಿನಿಮಾ ತಯಾರಾಗುತ್ತಿದೆ? ಶಿವಣ್ಣನ ಜೊತೆ ಇನ್ನೂ ಯಾರೆಲ್ಲ ನಟಿಸಲಿದ್ದಾರೆ? ಈ ಎಲ್ಲ ಪ್ರಶ್ನೆಗಳಿಗೆ ಇನ್ನಷ್ಟೇ ಉತ್ತರ ಸಿಗಬೇಕಿದೆ.

ಹರ್ಷ ನಿರ್ದೇಶನದ ‘ಭಜರಂಗಿ 2’ ಸಿನಿಮಾದ ಕೆಲಸಗಳು ಈಗಾಗಲೇ ಮುಗಿದಿವೆ. ಮೇ 14ರಂದು ತೆರೆಕಾಣಲಿದ್ದು ದೊಡ್ಡ ಮಟ್ಟದ ನಿರೀಕ್ಷೆ ಮನೆ ಮಾಡಿದೆ. ಆ ಚಿತ್ರ ಬಿಡುಗಡೆ ಆಗುವುದಕ್ಕೂ ಮುನ್ನವೇ ಈ ನಟ-ನಿರ್ದೇಶಕನ ಕಾಂಬಿನೇಷನ್​ನಲ್ಲಿ ‘ವೇದ’ ಅನೌನ್ಸ್​ ಆಗಿದೆ.

ಇದನ್ನೂ ಓದಿ: Shiva Rajkumar: ಚಿತ್ರರಂಗದಲ್ಲಿ 35ವರ್ಷ ಪೂರೈಸಿದ ಶಿವರಾಜ್​ಕುಮಾರ್​ಗೆ ಪ್ರೀತಿಯಿಂದ ಶುಭ ಹಾರೈಸಿದ ಕಿಚ್ಚ ಸುದೀಪ್​

ಶಿವರಾಜ್​ಕುಮಾರ್​ ಚಿತ್ರರಂಗಕ್ಕೆ ಪ್ರವೇಶಿಸಿ 35 ವರ್ಷ; 35 ಕೆಜಿ ತೂಕದ ಕೇಕ್​ ಕತ್ತರಿಸಿ ಸಂಭ್ರಮಿಸಿದ ಅಭಿಮಾನಿಗಳು

ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಕನಸಿನಲ್ಲಿ ಬಂದ ದೇವರು ಹೇಳಿದ್ದಕ್ಕೆ ಮಣ್ಣು ಅಗೆದಾಗ ನಡೆಯಿತು ಅಚ್ಚರಿ!
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಈ ವರ್ಷದ ಮೊದಲ ಸೂಪರ್ ಮೂನ್ ಭಾರತದಲ್ಲಿ ಕಂಡಿದ್ದು ಹೀಗೆ; ವಿಡಿಯೋ ವೈರಲ್
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಕಾನೂನು ಸುವ್ಯವಸ್ಥೆ ಕಾಪಾಡೋದು ಬಿಟ್ಟು ಶಾಸಕನ ಕಾಪಾಡುತ್ತಿದ್ದಾರೆ: ಜೋಶಿ
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಮೃತ ರಾಜಶೇಖರ್​ ಕುಟುಂಬಕ್ಕೆ 25 ಲಕ್ಷ ರೂ ಪರಿಹಾರ ನೀಡಿದ ಸಚಿವ ಜಮೀರ್
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಹಾರ್ದಿಕ್ ಸಿಡಿಲಬ್ಬರ; ಲಿಸ್ಟ್​ ಎ ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ಸುಂಟರಗಾಳಿಗೆ ಕುಸಿದ ಪೆಂಡಾಲ್​​: ಸಚಿವ ಸತೀಶ್​ ಜಾರಕಿಹೊಳಿ ಪಾರು
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ವೆನೆಜುವೆಲಾ ಮೇಲೆ ಅಮೆರಿಕದಿಂದ ವೈಮಾನಿಕ ದಾಳಿ; ತುರ್ತು ಪರಿಸ್ಥಿತಿ ಘೋಷಣೆ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬಳ್ಳಾರಿ ಗಲಭೆ: ರೆಡ್ಡಿ, ಶ್ರೀರಾಮುಲುಗೆ ಫೋನ್​ ಮಾಡಿ ಧೈರ್ಯ ಹೇಳಿದ ದೇವೇಗೌಡ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
ಬೇಜವಾಬ್ದಾರಿ, ಅಹಂಕಾರ, ಪಕ್ಷಪಾತ: ಗಿಲ್ಲಿ ವಿರುದ್ಧ ದೂರಿನ ಸರಮಾಲೆ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ
4ನೇ ಶತಕ.. ದೇಶಿ ಅಂಗಳದಲ್ಲಿ ಕನ್ನಡಿಗನ ಪಾರುಪತ್ಯ; ವಿಡಿಯೋ