AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಬರ್ಟ್ ಅಂದ್ರು ಬಾ.. ಬಾ.. ನಾ ರೆಡಿ.. ಚಿತ್ರಮಂದಿರಗಳ ಗ್ಲಾಸ್ ಪುಡಿ ಪುಡಿ, ದರ್ಶನ್ ಅಭಿಮಾನಿಗಳ ಮೇಲೆ ಬಿತ್ತು ಲಾಠಿ

ಚಿತ್ರದುರ್ಗದಲ್ಲಿ ರಾಬರ್ಟ್ ಸಿನಿಮಾ ಟಿಕೆಟ್​ಗಾಗಿ ಮುಗಿ ಬಿದ್ದ ನಟ ದರ್ಶನ್ ಅಭಿಮಾನಿಗಳು ರಾಬರ್ಟ್ ಚಿತ್ರ ವೀಕ್ಷಿಸಲು ಮಧ್ಯರಾತ್ರಿಯಿಂದಲೇ ಜಮಾವಣೆಯಾಗಿದ್ರು. ಈ ವೇಳೆ ನೂಕುನುಗ್ಗಲು ಉಂಟಾಗಿದ್ದು ಎಲ್ಲ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ.

ರಾಬರ್ಟ್ ಅಂದ್ರು ಬಾ.. ಬಾ.. ನಾ ರೆಡಿ.. ಚಿತ್ರಮಂದಿರಗಳ ಗ್ಲಾಸ್ ಪುಡಿ ಪುಡಿ, ದರ್ಶನ್ ಅಭಿಮಾನಿಗಳ ಮೇಲೆ ಬಿತ್ತು ಲಾಠಿ
ಟಾಕೀಸ್​ನ ಮೇನ್ ಡೋರ್ ಬಾಗಿಲಿನ ಗ್ಲಾಸ್ ಪುಡಿ ಪುಡಿ
Follow us
ಆಯೇಷಾ ಬಾನು
| Updated By: ರಾಜೇಶ್ ದುಗ್ಗುಮನೆ

Updated on:Mar 11, 2021 | 12:57 PM

ಬೆಂಗಳೂರು: ಟ್ರೈಲರ್, ಟೀಸರ್, ಹಾಡುಗಳ ಮೂಲಕವೇ ಭಾರಿ ನಿರೀಕ್ಷೆ ಹುಟ್ಟಿಸಿದ್ದ ರಾಬರ್ಟ್ ಸಿನಿಮಾ ಇಂದು ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಂಡಿದ್ದು ಥಿಯೇಟರ್​ಗಳಲ್ಲಿ ಧೂಳೆಬ್ಬಿಸಿದೆ. ರಾಬರ್ಟ್​ನ ಫಸ್ಟ್ ಶೋ ವೀಕ್ಷಿಸಿದ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. ಆದ್ರೆ ಮತ್ತೊಂದು ಕಡೆ ಥಿಯೇಟರ್​ಗಳಲ್ಲಿ ಫ್ಯಾನ್ಸ್​ಗಳಿಂದ ಕೆಲ ಅವಾಂತರಗಳು ಸಹ ಸಂಭವಿಸಿದೆ.

ಇಂದು ರಾಬರ್ಟ್​ ರಿಲೀಸ್ ಆದ ಸಿನಿಮಾ ಮಂದಿರಗಳಲ್ಲಿ ಹಬ್ಬದ ವಾತಾವರಣ ಕಂಡು ಬಂದಿತ್ತು. ಪಟಾಕಿ ಸಿಡಿಸಿ, ದರ್ಶನ್ ಕಟೌಟ್​ಗಳಿಗೆ ಹಾಲಿನ ಅಭಿಷೇಕ ಮಾಡಿ ಡಿಬಾಸ್ ಘೋಷಣೆ ಕೋಗಿ ಅಭಿಮಾನಿಗಳು ಸಂಭ್ರಮಿಸಿದ್ರು. ಇದರ ನಡುವೆ ಕೆಲವು ಕಡೆ ಅಭಿಮಾನಿಗಳು ಬೆತ್ತದ ಪೆಟ್ಟು ತಿನ್ನುವಂತಾದ್ರೆ, ಮತ್ತೆ ಕೆಲವು ಕಡೆ ಅಭಿಮಾನಿಗಳು ಕೆರಳಿ ಚಿತ್ರಮಂದಿರಗಳ ಗ್ಲಾಸ್ ಹೊಡೆದು ಹಾಕಿದ ಘಟನೆಗಳು ಸಹ ನಡೆದಿವೆ.

ಚಿತ್ರದುರ್ಗದಲ್ಲಿ ರಾಬರ್ಟ್ ಸಿನಿಮಾ ಟಿಕೆಟ್​ಗಾಗಿ ಮುಗಿ ಬಿದ್ದ ನಟ ದರ್ಶನ್ ಅಭಿಮಾನಿಗಳು ರಾಬರ್ಟ್ ಚಿತ್ರ ವೀಕ್ಷಿಸಲು ಮಧ್ಯರಾತ್ರಿಯಿಂದಲೇ ಜಮಾವಣೆಯಾಗಿದ್ರು. ಈ ವೇಳೆ ನೂಕುನುಗ್ಗಲು ಉಂಟಾಗಿದ್ದು ಎಲ್ಲ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ. ವೆಂಕಟೇಶ್ವರ ಚಿತ್ರಮಂದಿರ ಬಳಿ ಅಭಿಮಾನಿಗಳ ನೂಕು ನುಗ್ಗಲು ಆಗ್ತಿದ್ದಂತೆ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡಬೇಕಾಯಿತು.

ಇನ್ನು ಮತ್ತೊಂದೆಡೆ ಕೊಪ್ಪಳದಲ್ಲಿ ರಾಬರ್ಟ್ ಚಿತ್ರ ನೋಡಲು ರಾತ್ರಿಯಿಂದ ಕಾಯುತ್ತಿದ್ದ ಅಭಿಮಾನಿಗಳು ಟಿಕೆಟ್​ ಸಿಗದಿದ್ದಕ್ಕೆ ರೊಚ್ಚಿಗೆದ್ದಿದ್ದು ಗಂಗಾವತಿ ಚಂದ್ರಹಾಸ ಚಿತ್ರಮಂದಿರದಲ್ಲಿ ಅಭಿಮಾನಿಗಳು ಗೇಟ್ ಮುರಿಯಲು ಯತ್ನಿಸಿದ ಘಟನೆ ನಡೆದಿದೆ. ಗೇಟ್ ಕೀ ಹಾಕಿದ್ರು ಕಲ್ಲಿನಿಂದ ಚಚ್ಚಿ ಗೇಟ್ ಮುರಿಯಲು ಯತ್ನಿಸಿದ್ದಾರೆ. ಇಂದು ಬೆಳಿಗ್ಗೆಯಿಂದಲೇ ರಾಬರ್ಟ್ ಜಾತ್ರೆ ಶುರುವಾಗಿದೆ. ಸಿನಿಮಾ ಆರಂಭವಾಗುತ್ತಿದ್ದಂತೆ ಥಿಯೇಟರ್ ಮುಂದೆ ಇದ್ದ ದರ್ಶನ್ ಕಟೌಟ್​ಗೆ ಆರತಿ ಬೆಳಗಿ ಹಾಲಿನ ಅಭಿಷೇಕ್ ಮಾಡಿ ಅಭಿಮಾನಿಗಳು ಸಂಭ್ರಮಿಸಿದ್ರು. ಇದೇ ವೇಳೆ ಸ್ಕ್ರೀನ್ ಮುಂದೆ ಇದ್ದ ಅಭಿಮಾನಿಗಳನ್ನ ಚದುರಿಸಲು ಥಿಯೇಟರ್ ಒಳಗಡೆಯೇ ಪೊಲೀಸರು ಲಾಠಿಚಾರ್ಜ್​ ಮಾಡಿದ್ರು.

ಯಾದಗಿರಿಯ ಶಹಪುರದ ಜಯಶ್ರೀ ಟಾಕೀಸ್​ನಲ್ಲಿ ಡಿ‌ ಬಾಸ್ ಅಭಿಮಾನಿಗಳ ನುಕೂನುಗ್ಗಲು ನಡೆದಿದೆ. ಇದೇ ವೇಳೆ ಟಾಕೀಸ್​ನ ಮೇನ್ ಡೋರ್ ಬಾಗಿಲಿನ ಗ್ಲಾಸ್ ಪುಡಿ ಪುಡಿಯಾಗಿದೆ. ಟಿಕೆಟ್ ಪಡೆದ ಅಭಿಮಾನಿಗಳು ಟಾಕೀಸ್ ಒಳಗಡೆ ಹೋಗಲು‌ ಆತುರಪಟ್ಟ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಇದನ್ನೂ ಓದಿ: Roberrt Twitter Review: ರಾಬರ್ಟ್​ ಸಿನಿಮಾಗೆ ಥಂಮ್ಸ್​ ಅಪ್​ ತೋರಿದ ಟ್ವಿಟ್ಟರ್​ ಮಂದಿ

Published On - 11:12 am, Thu, 11 March 21