Roberrt Movie Review: ರಾಬರ್ಟ್ ಸಿನಿಮಾದ ಸೆಕೆಂಡ್ ಹಾಫ್ ಹೇಗಿದೆ ಗೊತ್ತಾ?
ಇಂದು ರಿಲೀಸ್ ಆದ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಮೊದಲಾರ್ಧ ಹೇಗಿದೆ ಎಂಬುದನ್ನು ಟಿವಿ9 ಕನ್ನಡ ಡಿಜಿಟಿಲ್ ಬಿಚ್ಚಿಟ್ಟಿತ್ತು. ಈಗ ಸಿನಿಮಾದ ಎರಡನೇ ಅರ್ಧ ಹೇಗಿದೆ ಎನ್ನುವ ವಿಚಾರವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ..
ಇಂದು ರಿಲೀಸ್ ಆದ ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಮೊದಲಾರ್ಧ ಹೇಗಿದೆ ಎಂಬುದನ್ನು ಟಿವಿ9 ಕನ್ನಡ ಡಿಜಿಟಿಲ್ ಬಿಚ್ಚಿಟ್ಟಿತ್ತು. ಈಗ ಸಿನಿಮಾದ ಎರಡನೇ ಅರ್ಧ ಹೇಗಿದೆ ಎನ್ನುವ ವಿಚಾರವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ..
ಟ್ವಿಸ್ಟ್ ಆ್ಯಂಡ್ ಟರ್ನ್ ರಾಬರ್ಟ್ ಎರಡನೇ ಅರ್ಧದಲ್ಲಿ ಸಿನಿಮಾ ಸಾಕಷ್ಟು ಟರ್ನ್ ಆ್ಯಂಡ್ ಟ್ವಿಸ್ಟ್ಗಳನ್ನು ಪಡೆದುಕೊಳ್ಳುತ್ತದೆ. ಇದನ್ನು ನೋಡಿದ ಅಭಿಮಾನಿಗಳು ರೋಮಾಂಚನಗೊಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೊದಲಾರ್ಧ ಅದ್ಭುತ ಎನಿಸುವ ಸಿನಿಮಾ ಎರಡನೇ ಅರ್ಧದಲ್ಲಿ ಮತ್ತಷ್ಟು ರೋಚಕತೆ ಪಡೆದುಕೊಳ್ಳಲಿದೆ.
ವಿನೋಧ ಪ್ರಭಾಕರ್ ಎಂಟ್ರಿ ವಿನೋಧ ಪ್ರಭಾಕರ್ ರಾಬರ್ಟ್ ಸಿನಿಮಾದ ಎರಡನೇ ಭಾಗದಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರ ಪಾತ್ರಕ್ಕೂ ತುಂಬಾನೇ ತೂಕವಿದೆ. ಮಿಂಚಿದ ಜಗಪತಿ ಬಾಬು ತೆಲುಗಿನಲ್ಲಿ ವಿಲನ್ ಆಗಿ ಮಿಂಚಿರುವ ಜಗಪತಿ ಬಾಬು ರಾಬರ್ಟ್ ಸಿನಿಮಾದಲ್ಲೂ ನಟಿಸಿದ್ದಾರೆ. ಅವರ ಖಡಕ್ ವಿಲನ್ ಪಾತ್ರ ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗಿದೆ. ಓರ್ವ ಖಡಕ್ ವಿಲನ್ ಆಗಿ ತೆರೆಮೇಲೆ ಮಿಂಚುತ್ತಾರೆ ಜಗಪತಿ ಬಾಬು. ಮೂರು ಆ್ಯಕ್ಷನ್ ದೃಶ್ಯ ದರ್ಶನ್ ಸಿನಿಮಾ ಎಂದಾಗ ನೆನಪಾಗೋದು ಆ್ಯಕ್ಷನ್ ದೃಶ್ಯಗಳು. ರಾಬರ್ಟ್ ಸಿನಿಮಾದಲ್ಲೂ ಸಾಕಷ್ಟು ಆ್ಯಕ್ಷನ್ ಇದೆ. ಮೊದಲಾರ್ಧದಲ್ಲಿ ಎರಡು ಆ್ಯಕ್ಷನ್ ದೃಶ್ಯಗಳು ಇದ್ದವು. ಎರಡನೇ ಅರ್ಧದಲ್ಲಿ ಮೂರು ಆ್ಯಕ್ಷನ್ ದೃಶ್ಯಗಳಿವೆ.
ಮೊದಲಾರ್ಧ ಹೇಗಿದೆ?:
ಭಿನ್ನ ಪಾತ್ರದ ಮೂಲಕ ಎಂಟ್ರಿ ದರ್ಶನ್ ಸಿನಿಮಾದಲ್ಲಿ ಎಂಟ್ರಿ ನೋಡೋಕೆ ಪ್ರೇಕ್ಷಕರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಆ್ಯಕ್ಷನ್ ದೃಶ್ಯಗಳೊಂದಿಗೆ ಅವರಿಗೆ ಎಂಟ್ರಿ ಕೊಡಿಸೋಕೆ ನಿರ್ದೇಶಕರು ಕಾಯುತ್ತಿರುತ್ತಾರೆ. ಆದರೆ, ಈ ಬಾರಿ ನಿರ್ದೇಶಕ ತರುಣ್ ಸುಧೀರ್ ದರ್ಶನ್ಗೆ ಬೇರೆ ರೀತಿಯಲ್ಲಿ ಎಂಟ್ರಿ ಕೊಡಿಸಿದ್ದಾರೆ. ಹನುಮನ ಪಾತ್ರದ ಮೂಲಕ ದರ್ಶನ್ ಎಂಟ್ರಿ ಕೊಡುತ್ತಾರೆ.
ಎಲ್ಲಕ್ಕಿಂತಲೂ ಭಿನ್ನವಾಗಿದೆ ಪಾತ್ರ ದರ್ಶನ್ ಈ ಮೊದಲು ಸಾಕಷ್ಟು ಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ, ಈ ಸಿನಿಮಾದ ಪಾತ್ರ ಇವೆಲ್ಲವುಗಳಿಗಿಂತಲೂ ವಿಶಿಷ್ಟವಾಗಿದೆ. ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ದರ್ಶನ್ ಮಿಂಚಿದ್ದಾರೆ. ಇದು ಪ್ರೇಕ್ಷಕರಿಗೆ ತುಂಬಾನೇ ಇಷ್ಟವಾಗಿದೆ.
ನಾಯಕಿಗೆ ಮಾಸ್ ಎಂಟ್ರಿ ಸಾಮಾನ್ಯವಾಗಿ ಸ್ಟಾರ್ ಹೀರೋಗಳ ಚಿತ್ರಗಳಲ್ಲಿ ನಾಯಕಿಯ ಪಾತ್ರ ಅಷ್ಟಾಗಿ ಹೈಲೈಟ್ ಆಗುವುದಿಲ್ಲ. ಅಷ್ಟೇ ಅಲ್ಲ ಅವರ ಎಂಟ್ರಿ ಕೂಡ ತುಂಬಾನೇ ರೊಮ್ಯಾಂಟಿಕ್ ಆಗಿರುತ್ತದೆ. ಆದರೆ, ರಾಬರ್ಟ್ ಸಿನಿಮಾ ನಾಯಕಿ ಆಶಾ ಭಟ್ಗೆ ಮಾಸ್ ಎಂಟ್ರಿ ಸಿಕ್ಕಿದೆ.
ಕಾಮಿಡಿ ಪಾತ್ರಗಳು ಕ್ಲಿಕ್ ಸಿನಿಮಾ ಅಂದ ಮೇಲೆ ಅಲ್ಲಿ ಹಾಸ್ಯ ಅನ್ನೋದು ತುಂಬಾನೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಅದೇ ರೀತಿ, ರಾಬರ್ಟ್ ಸಿನಿಮಾದ ಮೊದಲಾರ್ಧದಲ್ಲಿ ಕಾಮಿಡಿ ಪಾತ್ರಗಳು ಸಾಕಷ್ಟು ಕ್ಲಿಕ್ ಆಗಿದೆ. ಶಿವರಾಜ್ ಕೆಆರ್ ಪೇಟೆ, ಚಿಕ್ಕಣ್ಣ, ಧರ್ಮಣ್ಣ ಪಾತ್ರಗಳು ಸಾಕಷ್ಟು ಹೈಲೈಟ್ ಆಗಿದೆ.
ಫಸ್ಟ್ ಹಾಫ್ನಲ್ಲಿ ಎರಡು ಆ್ಯಕ್ಷನ್ ದೃಶ್ಯ ದರ್ಶನ್ ಸಿನಿಮಾ ಎಂದಾಗ ನೆನಪಾಗೋದು ಆ್ಯಕ್ಷನ್ ದೃಶ್ಯಗಳು. ರಾಬರ್ಟ್ ಸಿನಿಮಾದಲ್ಲೂ ಸಾಕಷ್ಟು ಆ್ಯಕ್ಷನ್ ಇದೆ ಎಂದು ಹೇಳಲಾಗಿತ್ತು. ಮೊದಲಾರ್ಧದಲ್ಲಿ ಕೇವಲ ಎರಡು ಆ್ಯಕ್ಷನ್ ದೃಶ್ಯ ಮಾತ್ರ ಇಡಲಾಗಿದೆ. ಹೀಗಾಗಿ, ಪ್ರೇಕ್ಷಕರು ಎರಡನೇ ಆ್ಯಕ್ಷನ್ ದೃಶ್ಯಕ್ಕಾಗಿ ಕಾದು ಕೂರಬೇಕಾಗಿದೆ.
ಮೊದಲಾರ್ಧದಲ್ಲಿ ಕಣ್ಣು ಹೊಡ್ಯಾಕ ಸಾಂಗ್! ಕಣ್ಣು ಹೊಡ್ಯಾಕ ಹಾಡನ್ನು ಚಿತ್ರತಂಡ ಯೂಟ್ಯೂಬ್ನಲ್ಲಿ ರಿಲೀಸ್ ಮಾಡಿತ್ತು. ಈ ಹಾಡನ್ನು ನೋಡಿ ಅಭಿಮಾನಿಗಳು ಹುಚ್ಚೆದ್ದು ಕುಣಿದಿದ್ದರು. ಈ ಹಾಡು ಪ್ರೇಕ್ಷಕರಿಗೆ ಮೊದಲಾರ್ಧದಲ್ಲೇ ಎದುರುಗೊಳ್ಳಲಿದೆ. ಇದು ಅಭಿಮಾನಿಗಳನ್ನು ರಂಜಿಸುವ ಕೆಲಸ ಮಾಡುತ್ತಿದೆ.
ಕಥೆ ಬಿಟ್ಟುಕೊಟ್ಟಿಲ್ಲ… ಸಿನಿಮಾದ ಇಂಟರ್ವಲ್ ಬಂದರೂ ಕಥೆ ಏನು ಎಂಬುದನ್ನು ರಾಬರ್ಟ್ ಗುಟ್ಟಾಗಿಯೇ ಇಟ್ಟಿದ್ದಾನೆ. ಇದು ಪ್ರೇಕ್ಷಕರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಇದನ್ನೂ ಓದಿ: Roberrt Kannada Movie Review: ದರ್ಶನ್ ನಟನೆಯ ರಾಬರ್ಟ್ ಸಿನಿಮಾದ ಫಸ್ಟ್ ಹಾಫ್ನಲ್ಲಿ ಏನೆಲ್ಲ ಇದೆ?