AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Roberrt Release: ಶುರುವಾಯ್ತು ‘ಬಾಕ್ಸಾಫೀಸ್‌’ ಮೇಲೆ ‘ರಾಬರ್ಟ್‌’ ರೇಡ್; ಥಿಯೇಟರ್‌ಗೆ ದರ್ಶನ್​ ಫ್ಯಾನ್ಸ್ ದಾಂಗುಡಿ

Roberrt Kannada Movie: ಡಿ ಬಾಸ್ ಫ್ಯಾನ್ಸ್ ಕಾತುರಕ್ಕೆ, ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದೆ. ಬಹುನಿರೀಕ್ಷಿತ ರಾಬರ್ಟ್‌ ಚಿತ್ರ ದೇಶಾದ್ಯಂತ ರಿಲೀಸ್ ಆಗಿದೆ. ಕನ್ನಡ, ತೆಲುಗು ಭಾಷೆಯಲ್ಲಿ ಧೂಳೆಬ್ಬಿಸೋಕೆ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಎಂಟ್ರಿ ಆಗಿದ್ದಾರೆ.

Roberrt Release: ಶುರುವಾಯ್ತು ‘ಬಾಕ್ಸಾಫೀಸ್‌’ ಮೇಲೆ ‘ರಾಬರ್ಟ್‌’ ರೇಡ್; ಥಿಯೇಟರ್‌ಗೆ ದರ್ಶನ್​ ಫ್ಯಾನ್ಸ್ ದಾಂಗುಡಿ
ಥಿಯೇಟರ್​ಗಳ ಬಳಿ ಫ್ಯಾನ್ಸ್ ನೂಕುನುಗ್ಗಲು
ಆಯೇಷಾ ಬಾನು
| Updated By: Digi Tech Desk|

Updated on:Mar 11, 2021 | 9:29 AM

Share

ರಾಬರ್ಟ್… ಎಲ್ಲೆಲ್ಲೂ ರಾಬರ್ಟ್‌ ರಂಗು.. ರಿಲೀಸ್‌ಗೂ ಮೊದಲೇ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದ ರಾಬರ್ಟ್‌.. ಇದೀಗ ಅಭಿಮಾನಿಗಳ ಎದೆಬಡಿತ ಹೆಚ್ಚಿಸಿದೆ. ರಾಬರ್ಟ್ ಅಬ್ಬರ ಇಂದಿನಿಂದ ಶುರುವಾಗಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಾ ಬಾ ನಾ ರೆಡಿ ಅಂತಾ ಥಿಯೇಟರ್‌ಗೆ ಲಗ್ಗೆ ಇಟ್ಟಾಗಿದೆ. ನಾನು.. ದಶಕಂಠ ರಾವಣ ಅಂತಾ ಅದ್ಯಾವಾಗ ದರ್ಶನ್ ಕೇಕೆ ಹಾಕಿದ್ರೋ.. ಈ ಕೇಕೆಯ ಸದ್ದಿಗೆ ಕನ್ನಡ ಚಿತ್ರರಂಗದಲ್ಲಿ ರಾಬರ್ಟ್‌ ರಾರಾಜಿಸ್ತಿದೆ. ದಶದಿಕ್ಕುಗಳಿಂದ ಸುಂಟರಗಾಳಿಯಂತೆ ಎಂಟ್ರಿ ಕೊಟ್ಟ ರಾಬರ್ಟ್ ವೇಗ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. ಇದೀಗ ಥಿಯೇಟರ್‌ಗಳನ್ನ ಶೇಕ್‌ ಮಾಡೋಕೆ ಎಂಟ್ರಿ ಕೊಟ್ಟಿರೋ ರಾಬರ್ಟ್‌ ಇಂದಿನಿಂದ ದೇಶಾದ್ಯಂತ ಅಬ್ಬರಿಸಲಿದ್ದಾನೆ. ಬೆಳಗ್ಗೆಯಿಂದಲೇ ರಾಬರ್ಟ್‌ ಬಾಕ್ಸಾಫೀಸ್‌ ರೇಡ್ ಆರಂಭವಾಗಿದೆ.

darshan Roberrt Realease

ಚಿತ್ರಮಂದಿರಗಳ ಮುಂದೆ ಪಟಾಕಿ ಸಿಡಿಸಿ ಅಭಿಮಾನಿಗಳ ಸಂಭ್ರಮ

ಇನ್ನು ಅಭಿಮಾನಿಗಳಿಗಾಗಿ ರಾಬರ್ಟ್‌ ಚಿತ್ರದ ಬೆಳಗಿನ ಶೋಗಳು ಆರಂಭವಾಗಿವೆ. ಜೊತೆಗೆ ರಾತ್ರಿ ಹೆಚ್ಚುವರಿ 2 ಗಂಟೆ ಶೋಗಳನ್ನ ಆಯೋಜನೆ ಮಾಡಲಾಗಿದೆ. ಬೆಳಗ್ಗೆ 6 ಗಂಟೆ ಮತ್ತು 6.30ರಿಂದ್ಲೇ ಬೆಳಗಿನ ಶೋಗಳು ಶುರುವಾಗಿವೆ. ಬೆಂಗಳೂರಿನ 12 ಚಿತ್ರಮಂದಿರಗಳಲ್ಲಿ ಬೆಳಗಿನ 6 ಗಂಟೆಯ ಪ್ರದರ್ಶನ ನಡೆಯುತ್ತಿವೆ. ಜೊತೆಗೆ ತುಮಕೂರು, ಕೋಲಾರದ ಜೊತೆಗೆ ಕೆಲವು ಜಿಲ್ಲೆಗಳಲ್ಲಿ ಬೆಳ್‌ ಬೆಳಗ್ಗೆಯೇ ಶೋಗಳು ಆರಂಭವಾಗಿವೆ.

ಚಿತ್ರಮಂದಿರಗಳ ಬಳಿ ಹಬ್ಬದ ಸಂಭ್ರಮ ಪದ್ಮನಾಭನಗರದ ಶ್ರೀನಿವಾಸ ಥಿಯೇಟರ್​ನಲ್ಲಿ ವಿಶೇಷ ಪೂಜೆ ಮಾಡಲಾಗಿದೆ. ರಾಬರ್ಟ್ ತಂಡದಿಂದ ಥಿಯೇಟರ್ ಸ್ಕ್ರೀನ್​ಗೆ ವಿಶೇಷ ಪೂಜೆ ಸಲ್ಲಿಸಿದ್ದು ಪೂಜೆಯಲ್ಲಿ ನಿರ್ದೇಶಕ ತರುಣ್ ಸುಧೀರ್, ನಾಯಕಿ ಆಶಾ ಭಟ್ ಹಾಗೂ ಚಿತ್ರತಂಡ ಭಾಗಿಯಾಗಿದ್ದಾರೆ.

darshan Roberrt Realease

ಫಸ್ಟ್ ಶೋ ನೋಡಿ ಸಂಭ್ರಮಿಸಿದ ಫ್ಯಾನ್ಸ್

ಥಿಯೇಟರ್​ಗಳ ಬಳಿ ಫ್ಯಾನ್ಸ್ ನೂಕುನುಗ್ಗಲು, ಲಾಠಿ ಚಾರ್ಜ್ ಇನ್ನು ಚಿತ್ರದುರ್ಗದಲ್ಲಿ ರಾಬರ್ಟ್ ಸಿನೆಮಾ ಟಿಕೆಟ್​ಗೆ ಅಭಿಮಾನಿಗಳು ಮುಗಿ ಬಿದ್ದಿದ್ದಾರೆ. ಬಹತೇಕ ಕಡೆ ರಾಬರ್ಟ್ ಚಿತ್ರ ವೀಕ್ಷಿಸಲು ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ಜಮಾವಣೆಗೊಂಡಿದ್ದಾರೆ. ಚಿತ್ರದುರ್ಗದಲ್ಲಿ ಅಭಿಮಾನಿಗಳನ್ನು ಚದುರಿಸಲು ಲಾಠಿ ಚಾರ್ಜ್ ಮಾಡುವಂತೆ ಪರಿಸ್ಥಿತಿ ಉಂಟಾಗಿದೆ. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ. ವೆಂಕಟೇಶ್ವರ ಚಿತ್ರಮಂದಿರ ಬಳಿ ಅಭಿಮಾನಿಗಳ ನೂಕು ನುಗ್ಗಲು ಉಂಟಾಗಿದೆ. ಮಾರ್ನಿಗ್ ಶೋ ಟಿಕೆಟ್ ಸಿಗದೆ ದರ್ಶನ್ ಅಭಿಮಾನಿಗಳಿಗೆ ನಿರಾಸೆ ಉಂಟಾಗಿದೆ. ಡಿ ಬಾಸ್, ಚಾಲೆಂಜಿಂಗ್ ಸ್ಟಾರ್ ಘೋಷಣೆ ಕೂಗಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.

ಇಂದು ರಾಬರ್ಟ್ ಸಿನಿಮಾ ಬಿಡುಗಡೆ ಹಿನ್ನೆಲೆ ಕೋಲಾರದಲ್ಲೂ ಸಂಭ್ರಮ ಹೆಚ್ಚಾಗಿದೆ. ಭವಾನಿ ಚಿತ್ರಮಂದಿರದ ಎದುರು ಅಭಿಮಾನಿಗಳು ಜಮಾಯಿಸಿದ್ದು ದರ್ಶನ್ ಕಟೌಟ್​ಗೆ ಹೂವು ಹಾಕಿ, ಹಾಲಿನ ಅಭಿಷೇಕ ಮಾಡಿ ಪಟಾಕಿ ಹೊಡೆದು ಸಂಭ್ರಮಿಸುತ್ತಿದ್ದಾರೆ. ಆದ್ರೆ ತಾಂತ್ರಿಕ ಸಮಸ್ಯೆ ಹಿನ್ನೆಲೆ ಸಿನಿಮಾ ಇನ್ನೂ ಆರಂಭವಾಗಿಲ್ಲ.

1,596 ಚಿತ್ರಮಂದಿರ.. 3,889 ಶೋಗಳು!

ನೂರಲ್ಲ, ಇನ್ನೂರಲ್ಲ.. ರಾಬರ್ಟ್‌ ಹವಾ ಯಾವ್ ರೇಂಜ್‌ಗಿದೆ ಅಂದ್ರೆ, ದೇಶಾದ್ಯಂತ ಬರೋಬ್ಬರಿ 1 ಸಾವಿರದ 596 ಚಿತ್ರಮಂದಿರದಲ್ಲಿ ಚಿಂದಿ ಉಡಾಯಿಸೋಕೆ ಗೆರೆ ಬರೆದಿದ್ದಾನೆ. ಕರ್ನಾಟಕದಲ್ಲೇ 656 ಥಿಯೇಟರ್, ಆಂಧ್ರದಲ್ಲಿ 433, ತೆಲಂಗಾಣದಲ್ಲೂ 407 ಥಿಯೇಟರ್‌ನಲ್ಲಿ ಫ್ಯಾನ್ಸ್‌ಗೆ ರಾಬರ್ಟ್ ದರ್ಶನವಾಗಲಿದೆ. ಇವತ್ತು ಬೆಳಗ್ಗೆ 6ಗಂಟೆಯಿಂದ ನಾಳೆ ಮುಂಜಾನೆವರೆಗೂ ರಾಬರ್ಟ್ ಶೋ ನಡೆಯಲಿದೆ. ಇದನ್ನ ಹೊರತುಪಡಿಸಿ ಮಹಾರಾಷ್ಟ್ರ, ತಮಿಳುನಾಡು, ಕೇರಳ ಮತ್ತು ದೆಹಲಿಯಲ್ಲಿನ ಮಲ್ಟಿಫ್ಲೆಕ್ಸ್‌ಗಳಲ್ಲಿ ರಾಬರ್ಟ್‌ ರಿಲೀಸ್ ಆಗ್ತಿದೆ. ಇನ್ನು ಕರ್ನಾಟಕದಲ್ಲೇ 100ಕ್ಕೂ ಹೆಚ್ಚು ಶೋಗಳು ಮಲ್ಟಿಫ್ಲೆಕ್ಸ್‌ನಲ್ಲಿ ನಡೆಯಲಿವೆ.

darshan Roberrt Realease

ಪದ್ಮನಾಭನಗರದ ಶ್ರೀನಿವಾಸ ಥಿಯೇಟರ್​ನಲ್ಲಿ ರಾಬರ್ಟ್ ತಂಡದಿಂದ ಥಿಯೇಟರ್ ಸ್ಕ್ರೀನ್​ಗೆ ವಿಶೇಷ ಪೂಜೆ

ಒಂದೇ ಥಿಯೇಟರ್ ಮುಂದೆ 13ಕಟೌಟ್.. ಡಿ ಬಾಸ್ ರೆಕಾರ್ಡ್ ಇನ್ನು ದರ್ಶನ್ ಫಿಲ್ಮ್ ಬಂತೂ ಅಂದ್ರೆ ಫ್ಯಾನ್ಸ್‌ಗೆ ಹಬ್ಬ.. ವರ್ಷದ ಬಳಿಕ ಸಿನಿಮಾ ಬರ್ತಿದೆ ಅಂದ್ರೆ ಬಿಡ್ತಾರಾ. ಬೆಂಗಳೂರಿನ ಸಿದ್ದೇಶ್ವರ ಚಿತ್ರಮಂದಿರದಲ್ಲಿ ದರ್ಶನ್‌ರ 13 ಪ್ರತ್ಯೇಕ ಕಟೌಟ್ ರಾರಾಜಿಸುತ್ತಿವೆ. ಒಂದೊಂದು ಕಟೌಟ್‌ 13 ಅಡಿ ಇರಲಿವೆ. ಇದಕ್ಕಾಗಿಯೇ ಹೈದ್ರಾಬಾದ್‌ನಿಂದ ಕ್ರಿಯೇಟಿವ್ ಆರ್ಟಿಸ್ಟ್ ಕೆಲಸ ಮಾಡಿದ್ದಾರೆ.

ಇನ್ನೂ ರಿಲೀಸ್‌ಗೆ ಎರಡು ದಿನದ ಮೊದಲೇ ರಾಬರ್ಟ್ ಚಿತ್ರದ ಟಿಕೆಟ್‌ಗಳು ಸೋಲ್ಡ್‌ಔಟ್‌ ಆಗಿವೆ. ಬಹುತೇಕ ಥಿಯೇಟರ್‌ ಮುಂದೆ ಹೌಸ್‌ಪುಲ್‌ ಬೋರ್ಡ್‌ ಬಿದ್ದಿದೆ. ಇನ್ನೇನಿದ್ರೂ ಶಿವರಾತ್ರಿ ಜೊತೆಗೆ ರಾಬರ್ಟ್‌ ಹಬ್ಬ ಮಾಡೋದೊಂದೇ ಬಾಕಿ.

ಇದನ್ನೂ ಓದಿ: Roberrt Movie: ರಾಬರ್ಟ್​ ಸ್ವಾಗತಕ್ಕೆ ಒಂದೇ ಥಿಯೇಟರ್​ನಲ್ಲಿ ದರ್ಶನ್​ 13 ಕಟೌಟ್​!

Published On - 7:24 am, Thu, 11 March 21

ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?