Roberrt: ಬೆಳಗಿನ ಜಾವವೇ ‘ರಾಬರ್ಟ್’ ದರ್ಶನ! ಎಷ್ಟು ಚಿತ್ರಮಂದಿರದಲ್ಲಿ ಅಬ್ಬರಿಸ್ತಾರೆ ‘ಡಿ ಬಾಸ್’?
‘ರಾಬರ್ಟ್’ ಸಿನಿಮಾ ರಿಲೀಸ್ ಡೇಟ್ ಘೋಷಣೆ ಆದ ದಿನದಿಂದಲೂ ದರ್ಶನ್ ಅಭಿಮಾನಗಳು ಈ ದಿನಕ್ಕಾಗಿ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತ ಇದ್ದರು. ಈಗ ‘ರಾಬರ್ಟ್’ ನೋಡೋ ಸಮಯ ಬಂದೇಬಿಟ್ಟಿದೆ.
ಒಡೆಯ ಸಿನಿಮಾ ನಂತರ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಥಿಯೇಟರ್ ಅಂಗಳಕ್ಕೆ ಬರೋಬ್ಬರಿ ಒಂದು ವರ್ಷದ ಬಳಿಕ ನಾನ್ ರೆಡಿ ಅಂತ ಬರ್ತಿದ್ದಾರೆ. ಪ್ರೇಕ್ಷಕರಲ್ಲಿ ರಾಬರ್ಟ್ ಭಾರಿ ನಿರೀಕ್ಷೆ ಕ್ರಿಯೇಟ್ ಮಾಡಿದ್ದು, ಮಾರ್ಚ್ 11ರಂದು ಅದ್ದೂರಿಯಾಗಿ ರಿಲೀಸ್ ಆಗ್ತಿದೆ. ಎಷ್ಟು ಗಂಟೆಗೆ ಶೋಗಳು ಶುರುವಾಗ್ತಿದೆ? ಎಷ್ಟು ಚಿತ್ರಮಂದಿರಗಳಲ್ಲಿ ರಿಲೀಸ್ ಆಗ್ತಿದೆ? ಇಲ್ಲಿದೆ ಉತ್ತರ..
ಕನ್ನಡದ ಜೊತೆಗೆ ತೆಲುಗಿನಲ್ಲಿಯೂ ಈ ಸಿನಿಮಾ ತಯಾರಾಗಿದ್ದು ಕರ್ನಾಟಕ, ಆಂಧ್ರ ಮತ್ತು ತೆಲಂಗಾಣದಲ್ಲಿ ರಿಲೀಸ್ ಆಗುತ್ತಿದೆ. ಕರ್ನಾಟಕದಲ್ಲಿ ಸುಮಾರು 180ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ಬೆಳಗ್ಗೆ 6 ಗಂಟೆಯಿಂದಲೇ ಶೋಗಳು ಶುರುವಾಗಲಿವೆ. ಟಾಲಿವುಡ್ನಲ್ಲೂ ರಾಬರ್ಟ್ ಸೌಂಡ್ ಮಾಡ್ತಿದ್ದು, ಆಂಧ್ರದ 433, ತೆಲಂಗಾಣದ 407 ಥಿಯೇಟರ್ಗಳಲ್ಲಿ ರಾಬರ್ಟ್ ರಿಲೀಸ್ ಆಗ್ತಿದೆ.
ಕರ್ನಾಟಕದ ಅತಿ ಹೆಚ್ಚು ಸ್ಕ್ರೀನ್ಗಳಲ್ಲಿ ರಾಬರ್ಟ್ ರಿಲೀಸ್ ಆಗ್ತಿದೆ. 650ಕ್ಕೂ ಹೆಚ್ಚು ಚಿತ್ರಮಂದಿರದಲ್ಲಿ ರಾಬರ್ಟ್ ಸಿನಿಮಾ ಬಿಡುಗಡೆ ಆಗುತ್ತಿದ್ದು, ಮೊದಲ ದಿನವೇ ಅಂದಾಜು 2750 ಶೋ ನಡೆಯಲಿದೆ. ಜತೆಗೆ 100ಕ್ಕೂ ಹೆಚ್ಚು ಮಲ್ಟಿಪ್ಲೆಕ್ಸ್ಗಳಲ್ಲಿ ರಾಬರ್ಟ್ ಅಬ್ಬರಿಸಲಿದ್ದಾನೆ. ಮಲ್ಟಿಪ್ಲೆಕ್ಸ್ ಮತ್ತು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳನ್ನೂ ಸೇರಿಸಿದರೆ 3889 ಶೋಗಳಲ್ಲಿ ರಾಬರ್ಟ್ ಸಿನಿಮಾ ಸೌಂಡು ಮಾಡಲಿದೆ.
ಈಗಾಗಲೇ ಎಲ್ಲೆಡೆ ರಾಬರ್ಟ್ ಪೋಸ್ಟರ್ ಚಿತ್ರಮಂದಿರಗಳ ಮುಂದೆ ರಾರಾಜಿಸುತ್ತಿದೆ. ಎಲ್ಲ ಥಿಯೇಟರ್‌ಗಳು ಸಿಂಗಾರಗೊಂಡಿವೆ. ರಾಜ್ಯದಲ್ಲಿ ಸುಮಾರು 130ಕ್ಕೂ ಹೆಚ್ಚು ಕಟೌಟ್ಗಳನ್ನ ನಿಲ್ಲಿಸಲಾಗಿದ್ದು, ಡಿ ಫ್ಯಾನ್ಸ್ ಹಾಲಿನಾಭಿಷೇಕ ಮಾಡಿ, ಪಟಾಕಿ ಸಿಡಿಸಿ, ಜೈಕಾರ ಹಾಕಿ ಆರತಿ ಬೆಳಗೋಕೆ ಸಿದ್ಧರಾಗಿದ್ದಾರೆ. ಬುಕ್ ಮೈ ಶೋನಲ್ಲಿ ಟಿಕೆಟ್ಗಳು ಹಾಟ್ ಕೇಕ್ ರೀತಿ ಸೋಲ್ಡ್ ಔಟ್ ಆಗಿವೆ.
ಈ ಹಿಂದೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದ ‘ಚೌಕ’ ಸಿನಿಮಾದಲ್ಲಿ ದರ್ಶನ್ ಅವರು ರಾಬರ್ಟ್ ಎಂಬ ಅತಿಥಿ ಪಾತ್ರವನ್ನು ಮಾಡಿದ್ದರು. ಈಗ ಅದೇ ಪಾತ್ರವನ್ನು ಮುಖ್ಯವಾಗಿ ಇಟ್ಟುಕೊಂಡು ತರುಣ್ ಅವರು ಹೊಸ ಕಥೆ ಬರೆದು ‘ರಾಬರ್ಟ್’ ಸಿನಿಮಾ ಮಾಡಿದ್ದಾರೆ. ಆಶಾ ಭಟ್ ಸಿನಿಮಾದ ನಾಯಕಿ. ತೆಲುಗಿನ ಖಳ ಜಗಪತಿ ಬಾಬು ಈ ಸಿನಿಮಾದಲ್ಲಿ ಪ್ರಮುಖ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ. ವಿನೋದ್ ಪ್ರಭಾಕರ್, ರವಿಶಂಕರ್, ಸೋನಲ್ ಮಂಥೆರೋ, ಚಿಕ್ಕಣ್ಣ, ಅವಿನಾಶ್, ದೇವರಾಜ್, ಶಿವರಾಜ್ ಕೆ.ಆರ್. ಪೇಟೆ, ಐಶ್ವರ್ಯಾ ಪ್ರಸಾದ್ ಮುಂತಾದವರು ಸಿನಿಮಾದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Roberrt Movie: ರಾಬರ್ಟ್ ಸ್ವಾಗತಕ್ಕೆ ಒಂದೇ ಥಿಯೇಟರ್ನಲ್ಲಿ ದರ್ಶನ್ 13 ಕಟೌಟ್!
ದರ್ಶನ್ಗೆ ಸ್ವಿಮ್ಮಿಂಗ್ ಬರಲ್ಲ; ಆದರೂ ರಾಬರ್ಟ್ಗಾಗಿ ದೊಡ್ಡ ರಿಸ್ಕ್ ತೆಗೆದುಕೊಂಡ ‘ಚಾಲೆಂಜಿಂಗ್ ಸ್ಟಾರ್’!