ಫ್ಯಾನ್ಸ್ ಆಸೆಗೆ ತಣ್ಣೀರು ಎರಚಿದ ‘ಡಿ ಬಾಸ್’! ಅದರ ಹಿಂದಿನ ಉದ್ದೇಶಕ್ಕೆ ಭೇಷ್ ಎನ್ನಲೇಬೇಕು
‘ರಾಬರ್ಟ್’ ಸಿನಿಮಾವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಅಭಿಮಾನಿಗಳು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಕಟೌಟ್ ವಿಚಾರದಲ್ಲಿ ಕೆಲವು ಫ್ಯಾನ್ಸ್ಗೆ ನಿರಾಸೆ ಆಗಿದೆ.
‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅವರು ಬಹುದಿನಗಳ ಬಳಿಕ ಬೆಳ್ಳಿತೆರೆ ಮೇಲೆ ಅಭಿಮಾನಿಗಳಿಗೆ ದರ್ಶನ ನೀಡಲು ಬರುತ್ತಿರುವುದರಿಂದ ಸಹಜವಾಗಿಯೇ ಹಬ್ಬದ ವಾತಾವರಣ ನಿರ್ಮಾಣ ಆಗಿದೆ. ಹಲವು ಕಡೆಗಳಲ್ಲಿ ಕಟೌಟ್ಗಳು ತಲೆ ಎತ್ತಿವೆ. ಆದರೆ ಫ್ಯಾನ್ಸ್ ಮಾಡಿಕೊಂಡಿದ್ದ ಒಂದು ಭರ್ಜರಿ ಪ್ಲ್ಯಾನ್ಗೆ ‘ಡಿ ಬಾಸ್’ ನೋ ಎಂದಿದ್ದಾರೆ.
ಬೆಂಗಳೂರಿನ ಅನೇಕ ಚಿತ್ರಮಂದಿರಗಳ ಎದುರು ದರ್ಶನ್ ಅವರ ಬೃಹತ್ ಕಟೌಟ್ಗಳು ರಾರಾಜಿಸುತ್ತಿವೆ. ಅದೇ ರೀತಿ ಕೆ.ಆರ್. ಪುರದ ಕೃಷ್ಣ ಥಿಯೇಟರ್ ಎದುರಿನಲ್ಲಿ 201 ಅಡಿ ಎತ್ತರದ ಕಟೌಟ್ ನಿಲ್ಲಿಸಲು ಫ್ಯಾನ್ಸ್ ಪ್ಲ್ಯಾನ್ ಮಾಡಿಕೊಂಡಿದ್ದರು. ಅಷ್ಟೇ ಅಲ್ಲ, ಅದಕ್ಕೆ ಹೆಲಿಕಾಪ್ಟರ್ ಮೂಲಕ ಹೂವಿನ ಮಳೆ ಸುರಿಸಬೇಕು ಎಂಬುದು ಕೂಡ ಅಭಿಮಾನಿಗಳ ಆಸೆ ಆಗಿತ್ತು. ಆದರೆ ಅದಕ್ಕೆ ದರ್ಶನ್ ಅವಕಾಶ ನೀಡಿಲ್ಲ! ಅದು ಕೆಲವು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಈ ಬಗ್ಗೆ ಉಮಾಪತಿ ಶ್ರೀನಿವಾಸ್ ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ದರ್ಶನ್ ವೈಭವೀಕರಣವನ್ನು ಇಷ್ಟಪಡುತ್ತಾರೆ ಅಂತ ಜನರು ತಿಳಿದುಕೊಂಡಿದ್ದಾರೆ. ಆದರೆ ಅದು ನಿಜವಲ್ಲ. ಬೇರೆ ಕಲಾವಿದರಿಗೋಸ್ಕರ ದರ್ಶನ್ ಏನು ಬೇಕಾದರೂ ಮಾಡಿಸುತ್ತಾರೆ. ಆದರೆ ತಮ್ಮ ವಿಚಾರದಲ್ಲಿ ಆಡಂಬರ ಬಯಸುವುದಿಲ್ಲ. ಅದೇ ದುಡ್ಡನ್ನು ಬಡವರಿಗೆ ನೀಡಿ ಅಂತ ದರ್ಶನ್ ಹೇಳುತ್ತಾರೆ’ ಎಂಬುದು ಉಮಾಪತಿ ಶ್ರೀನಿವಾಸ್ ಮಾತುಗಳು.
ದರ್ಶನ್ರನ್ನು ಮೆಚ್ಚಿಸಬೇಕು ಅಂತ ಅಭಿಮಾನಿಗಳು ತಮ್ಮ ದುಡ್ಡು ಕರ್ಚು ಮಾಡುತ್ತಾರೆ. ಆದರೆ ಅದು ದರ್ಶನ್ಗೆ ಇಷ್ಟ ಆಗುವುದಿಲ್ಲ. ಅಭಿಮಾನದ ಹೆಸರಿನಲ್ಲಿ ಹಾಗೆಲ್ಲ ಹಣ ವ್ಯಯ ಮಾಡಿಸಲು ದರ್ಶನ್ ಬಿಡುವುದಿಲ್ಲ. ಅದನ್ನು ಅವರು ಒಪ್ಪುವುದೂ ಇಲ್ಲ. ಅದರ ಬದಲು ಅಭಿಮಾನಿಗಳು ಅವರವರ ತಂದೆ-ತಾಯಿಯನ್ನು ಚೆನ್ನಾಗಿ ನೋಡಿಕೊಂಡರೆ ಸಾಕು ಎಂಬುದು ದರ್ಶನ್ ಉದ್ದೇಶ.
ಇದನ್ನೂ ಓದಿ: ದರ್ಶನ್ಗೆ ಸ್ವಿಮ್ಮಿಂಗ್ ಬರಲ್ಲ; ಆದರೂ ರಾಬರ್ಟ್ಗಾಗಿ ದೊಡ್ಡ ರಿಸ್ಕ್ ತೆಗೆದುಕೊಂಡ ‘ಚಾಲೆಂಜಿಂಗ್ ಸ್ಟಾರ್’!
‘ರಾಬರ್ಟ್’ನಲ್ಲಿ ದರ್ಶನ್ ಖಡಕ್ ಆಗಿ ಹೇಳಿದ ‘ಏ ತುಕಾಲಿ…’ ಡೈಲಾಗ್ನ ಹಿಂದಿದೆ ಇಂಟರೆಸ್ಟಿಂಗ್ ವಿಷ್ಯ!