ಶಿವರಾಜ್ಕುಮಾರ್ ಚಿತ್ರರಂಗಕ್ಕೆ ಪ್ರವೇಶಿಸಿ 35 ವರ್ಷ; 35 ಕೆಜಿ ತೂಕದ ಕೇಕ್ ಕತ್ತರಿಸಿ ಸಂಭ್ರಮಿಸಿದ ಅಭಿಮಾನಿಗಳು
ಇಂದಿಗೆ ನಟ ಶಿವರಾಜ್ಕುಮಾರ್ ಚಿತ್ರರಂಗಕ್ಕೆ ಪ್ರವೇಶಿಸಿ 35 ವರ್ಷ ಪೂರೈಸಿದೆ. ಈ ನಿಟ್ಟಿನಲ್ಲಿ ಅಭಿಮಾನಿಗಳೆಲ್ಲ ಶಿವರಾಜ್ಕುಮಾರ್ಗೆ ಶುಭಕೋರಿ ಅಂಭ್ರಮಿಸಿದ್ದಾರೆ.
ಬೆಂಗಳೂರು: ಇಂದಿಗೆ ನಟ ಶಿವರಾಜ್ಕುಮಾರ್ ಚಿತ್ರರಂಗಕ್ಕೆ ಪ್ರವೇಶಿಸಿ 35 ವರ್ಷ ಪೂರೈಸಿದೆ. ಈ ನಿಟ್ಟಿನಲ್ಲಿ ಅಭಿಮಾನಿಗಳೆಲ್ಲ ಶಿವರಾಜ್ಕುಮಾರ್ಗೆ ಶುಭ ಕೋರಿ ಸಂಭ್ರಮಿಸುತ್ತಿದ್ದಾರೆ. ಶಿವರಾಜ್ಕುಮಾರ್ ನಿವಾಸದ ಬಳಿ ಸನ್ಮಾನ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿದ್ದು, 35 ಕೆಜಿ ತೂಕದ ಕೇಕ್ ಕತ್ತರಿಸುವ ಮೂಲಕ ಆಚರಿಸಿದ್ದಾರೆ.
ನಟ ಶಿವರಾಜ್ಕುಮಾರ್ ಚಿತ್ರರಂಗಕ್ಕೆ ಪ್ರವೇಶಿಸಿ ಇಂದಿಗೆ 35 ವರ್ಷ ಪೂರೈಸಿದೆ. ಆನಂದ್ ಚಿತ್ರ ಮೂಲಕ ಮೊದಲ ಬಾರಿಗೆ ಶಿವರಾಜ್ಕುಮಾರ್ ಚಿತ್ರರಂಗಕ್ಕೆ ಪ್ರವೇಶಿಸಿದ್ದರು. ಆನಂದ್ ಚಿತ್ರ 19 ಜೂನ್ 1986 ರಂದು ಬಿಡುಗಡೆಗೊಂಡಿದ್ದು, ನಟನಾಗಿ ಶಿವರಾಜ್ಕುಮಾರ್ ಮತ್ತು ನಟಿಯಾಗಿ ಸುಧಾರಾಣಿ ಅಭಿನಯಿಸಿದ್ದರು.
ಚಿತ್ರರಂಗಕ್ಕೆ ಪ್ರವೇಶಿಸಿದ ನಂತರದ ಮೂರು ಸಿನಿಮಾಗಳೂ ಕೂಡಾ ಅಭಿಮಾನಿಗಳ ಮೆಚ್ಚುಗೆ ಪಡೆದು ಶತದಿನೋತ್ಸವದ ಮೂಲಕ ಯಶಸ್ಸು ಕಂಡಿತು. ಈ ಮೂಲಕ ‘ಹ್ಯಾಟ್ರಿಕ್ ಹಿರೋ’ ಎಂಬ ಬಿರುದಿಗೆ ನಟ ಶಿವರಾಜ್ಕುಮಾರ್ ಪಾತ್ರರಾದರು. ಇವರು ನಟಿಸಿರುವ ನಮ್ಮೂರ ಮಂದಾರ ಹೂವೆ, ಜನುಮದ ಜೋಡಿ ಚಿತ್ರಗಳೆಲ್ಲ ಅಭೂತಪೂರ್ವ ಹೆಸರಿಗೆ ಪಾತ್ರವಾಗಿ ಜನಮನಗಳಿಸಿಕೊಂಡಿದೆ. ಆಗಿನ ಕಾಲದ ಅವರ ಚಿತ್ರಗಳು ಇಂದಿನವರೆಗೂ ಕೂಡಾ ಜನರ ನೆನಪಿನಲ್ಲಿ ಅಚ್ಚಳಿಯದೇ ಉಳಿದಿದೆ. ಇಲ್ಲಿವರೆಗೆ 117ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ ಶಿವರಾಜ್ಕುಮಾರ್ ಅಭಿಮಾನಿಗಳ ಹ್ಯಾಟ್ರಿಕ್ ಹಿರೋ ಆಗಿ ಅಪಾರ ಪ್ರೀತಿಯನ್ನು ಗಳಿಸಿದ್ದಾರೆ.
ನಟನೆಯೊಂದೆ ಅಲ್ಲದೇ ಗಾಯನದಲ್ಲೂ ಕೂಡಾ ಇವರ ಸಾಧನೆ ಇದೆ. ಅದೆಷ್ಟೋ ಚಿತ್ರಗಳಿಗೆ ಹಿನ್ನೆಲೆ ಗಾಯಕರಾಗಿ ನಟ ಶಿವರಾಜ್ಕುಮಾರ್ ಹಾಡಿದ್ದಾರೆ. ಅವುಗಳಲ್ಲಿ ಆಸೆಗೊಬ್ಬ ಮೀಸೆಗೊಬ್ಬ, ಮೋಡದ ಮರೆಯಲ್ಲಿ, ಅಂಡಮಾನ್ ಹೀಗೆ ಅನೇಕ ಚಿತ್ರಗಳಲ್ಲಿ ಹಾಡುಗಳನ್ನು ಹಾಡಿದ್ದಾರೆ.
ಶಿವರಾಜ್ಕುಮಾರ್ಗೆ ದೊರೆತ ಪ್ರಶಸ್ತಿಗಳು ಶಿವರಾಜ್ಕುಮಾರ್ ಅವರು 1995 ರಲ್ಲಿ ಬಿಡುಗಡೆಗೊಂಡ ಓಂ ಚಿತ್ರ, 1999ರಲ್ಲಿ ಬಿಡುಗಡೆಗೊಂಡ ಹೃದಯ ಹೃದಯ ಚಿತ್ರ, 2003ರಲ್ಲಿ ಬಿಡುಗಡೆಗೊಂಡ ಚಿಗುರಿದ ಕನಸು ಹಾಗೂ 2006ರಲ್ಲಿ ಬಿಡುಗಡೆಗೊಂಡ ಜೋಗಿ ಚಿತ್ರದಲ್ಲಿ ಅಭಿನಯಿಸಿ ಅತ್ಯುತ್ತಮ ನಟ ರಾಜ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಹಾಗೂ ಉಜ್ವಲ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಚಿತ್ರ ರಸಿಕರ ಸಂಘ ಪ್ರಶಸ್ತಿ ಸೇರಿದಂತೆ ಫಿಲ್ಮ್ಫೇರ್ ಪ್ರಶಸ್ತಿಗೆ ಶಿವರಾಜ್ಕುಮಾರ್ ಪಾತ್ರರಾಗಿದ್ದಾರೆ.
ಇದನ್ನೂ ಓದಿ: ಕೊರೊನಾ ಸಂಕಷ್ಟದಲ್ಲಿರೋ ಸ್ಯಾಂಡಲ್‌ವುಡ್‌ಗೆ ಶಿವಣ್ಣನೇ.. ದಿ ಲೀಡರ್!
ಶಿವರಾಜ್ಕುಮಾರ್ ಟ್ವೀಟ್: ಸಿನಿಮಾ ಹಾಲ್ ಭರ್ತಿಯಾಗುವಷ್ಟು ಪ್ರೇಕ್ಷಕರು ಬರಲು ಅವಕಾಶ ಬೇಕು