AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾಜ್​ಕುಮಾರ್ ಟ್ವೀಟ್: ಸಿನಿಮಾ ಹಾಲ್​ ಭರ್ತಿಯಾಗುವಷ್ಟು ಪ್ರೇಕ್ಷಕರು ಬರಲು ಅವಕಾಶ ಬೇಕು

ಥಿಯೇಟರ್​ನಲ್ಲಿ ಶೇ. 100 ಪ್ರೇಕ್ಷಕರಿಗೆ ಅವಕಾಶ ನೀಡುವ ವಿಚಾರಕ್ಕೆ ಸ್ಯಾಂಡಲ್​ವುಡ್ ನಲ್ಲಿಗ ಒಗ್ಗಟ್ಟಿನ ಮಂತ್ರ ಕೇಳಿಬಂದಿದೆ. ಬೆಳಗಿನಿಂದ ಹಲವಾರು ಮಂದಿ ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಹೇಳಿಕೆಗಳನ್ನು ಕೊಡುತ್ತಿದ್ದಾರೆ.

ಶಿವರಾಜ್​ಕುಮಾರ್ ಟ್ವೀಟ್: ಸಿನಿಮಾ ಹಾಲ್​ ಭರ್ತಿಯಾಗುವಷ್ಟು ಪ್ರೇಕ್ಷಕರು ಬರಲು ಅವಕಾಶ ಬೇಕು
ಶಿವರಾಜ್ ಕುಮಾರ್
TV9 Web
| Updated By: ganapathi bhat|

Updated on:Apr 06, 2022 | 8:22 PM

Share

ಬೆಂಗಳೂರು: ಥಿಯೇಟರ್​ ಭರ್ತಿಯಾಗುವಷ್ಟು ಪ್ರೇಕ್ಷಕರಿಗೆ ಪ್ರವೇಶ ಅವಕಾಶ ಸಿಗಬೇಕು ಎಂಬ ಕೂಗು ಜೋರಾಗುತ್ತಿದೆ. ಸ್ಯಾಂಡಲ್​ವುಡ್​ನ ನಟ, ನಟಿ, ತಂತ್ರಜ್ಞರು, ನಿರ್ಮಾಪಕರು ಸಿನಿಮಾ ಹಾಲ್ ಭರ್ತಿಗೊಳಿಸಲು ಅನುಮತಿ ನೀಡಬೇಕು ಎಂಬ ಬಗ್ಗೆ ಒಕ್ಕೊರಲ ಆಗ್ರಹ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ದುನಿಯಾ ವಿಜಯ್, ರಕ್ಷಿತ್ ಶೆಟ್ಟಿ, ನಿರ್ಮಾಪಕ ಪುಷ್ಕರ ಮಲ್ಲಿಕಾರ್ಜುನಯ್ಯ, ಸಿಂಪಲ್ ಸುನಿ, ಧ್ರುವ ಸರ್ಜಾ ಮುಂತಾದವರು ಟ್ವೀಟ್ ಮಾಡಿದ್ದಾರೆ.

ಇದೀಗ #KFIDemandsFullOccupancy ಟ್ವಿಟರ್ ಆಂದೋಲನಕ್ಕೆ ಕರುನಾಡ ಚಕ್ರವರ್ತಿ ಶಿವರಾಜ್​ಕುಮಾರ್ ಎಂಟ್ರಿ ಕೊಟ್ಟಿದ್ದಾರೆ. ನಮಗೆ ಚಿತ್ರಮಂದಿರಗಳಲ್ಲಿ ಶೇ 100 ಸೀಟು ಭರ್ತಿಗೆ ಅವಕಾಶಬೇಕು ಎಂದು ವಿಡಿಯೊ ಹೇಳಿಕೆಯನ್ನು ಟ್ವೀಟ್ ಮಾಡಿದ್ದಾರೆ.

ಥಿಯೇಟರ್​ನಲ್ಲಿ ಶೇ. 100 ಪ್ರೇಕ್ಷಕರಿಗೆ ಅವಕಾಶ ನೀಡುವ ವಿಚಾರಕ್ಕೆ ಸ್ಯಾಂಡಲ್​ವುಡ್ ನಲ್ಲಿಗ ಒಗ್ಗಟ್ಟಿನ ಮಂತ್ರ ಕೇಳಿಬಂದಿದೆ. ಬೆಳಗಿನಿಂದ ಹಲವಾರು ಮಂದಿ ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ. ಹೇಳಿಕೆಗಳನ್ನು ಕೊಡುತ್ತಿದ್ದಾರೆ.

ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಶೇ 50 ಆಕ್ಯೂಪೆನ್ಸಿ ಇದ್ದಾಗ ಆರ್ಥಿಕವಾಗಿ ನಷ್ಟ ಆಗ್ತಿತ್ತು. ಒಂದು ವರ್ಷ ನಷ್ಟದ ನೋವು ಅನುಭವಿಸಿದ್ದೇವೆ. ನಿನ್ನೆ ಸಂಜೆ ಮತ್ತೆ ಶೇ 50 ಜನರಿಗೆ ಮಾತ್ರ ಅವಕಾಶ ಎಂದು ಮಾಹಿತಿ ಸಿಕ್ಕಿದಾಗ ತುಂಬಾ ಬೇಸರ ಆಯಿತು ಎಂದು ಹೇಳಿಕೆ ನೀಡಿದ್ದಾರೆ. ಈ ಬಗ್ಗೆ, ಈಗ ಮನವಿ ಪತ್ರ ಕೊಟ್ಟಿದ್ದೇವೆ. ಹಾಗಾಗಿ ಇಂದು ಸಂಜೆಯೇ ಒಳ್ಳೆ ಸುದ್ದಿ ಸಿಗುವ ಭರವಸೆ ಇದೆ ಎಂದು ತಿಳಿಸಿದ್ದಾರೆ.

ಚಿತ್ರಮಂದಿರಕ್ಕೆ ಶೇ. 50 ನಿರ್ಬಂಧ ಏಕೆ? Housefull ಪ್ರದರ್ಶನಕ್ಕೆ ಅವಕಾಶ ನೀಡಿ: ಸಿನಿ ದಿಗ್ಗಜರಿಂದ ಆಗ್ರಹ

Dhruva Sarja Tweet ರಾಜ್ಯ ಸರ್ಕಾರದ ವಿರುದ್ಧ ಧ್ರುವ ಸರ್ಜಾ ತೀವ್ರ ಅಸಮಾಧಾನ; ಟ್ವಿಟರ್​ನಲ್ಲಿ 3 ಪ್ರಶ್ನೆ ಮುಂದಿಟ್ಟ ನಟ

Published On - 3:45 pm, Wed, 3 February 21

ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ