Shiva Rajkumar: ಚಿತ್ರರಂಗದಲ್ಲಿ 35ವರ್ಷ ಪೂರೈಸಿದ ಶಿವರಾಜ್​ಕುಮಾರ್​ಗೆ ಪ್ರೀತಿಯಿಂದ ಶುಭ ಹಾರೈಸಿದ ಕಿಚ್ಚ ಸುದೀಪ್​

Kichcha Sudeep ನಟಸಾರ್ವಭೌಮ ರಾಜಕುಮಾರ್​ ಕುಟುಂಬದೊಟ್ಟಿಗೆ ಮೊದಲಿನಿಂದಲೂ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಸುದೀಪ್​ ಹಾಗೂ ಶಿವರಾಜ್​ಕುಮಾರ್ ಅಭಿನಯದ ದಿ ವಿಲನ್​ ಸಿನಿಮಾ 2018ರಲ್ಲಿ ತೆರೆಕಂಡಿತ್ತು.

Shiva Rajkumar: ಚಿತ್ರರಂಗದಲ್ಲಿ 35ವರ್ಷ ಪೂರೈಸಿದ ಶಿವರಾಜ್​ಕುಮಾರ್​ಗೆ ಪ್ರೀತಿಯಿಂದ ಶುಭ ಹಾರೈಸಿದ ಕಿಚ್ಚ ಸುದೀಪ್​
ಕಿಚ್ಚ ಸುದೀಪ್​ ಮತ್ತು ಶಿವರಾಜಕುಮಾರ್​
Follow us
|

Updated on: Feb 20, 2021 | 2:35 PM

ಬೆಂಗಳೂರು: ಹ್ಯಾಟ್ರಿಕ್​ ಹೀರೋ ಶಿವರಾಜ್​ಕುಮಾರ್ ಸಿನಿರಂಗಕ್ಕೆ ಕಾಲಿಟ್ಟು 35ವರ್ಷ ಕಳೆಯಿತು. ಈ ಸಂಭ್ರಮವನ್ನು ನಿನ್ನೆ ಅವರ ಅಭಿಮಾನಿಗಳು ಅದ್ದೂರಿಯಾಗಿ, 35 ಕೆ.ಜಿ ತೂಕದ ಕೇಕ್​ ಕತ್ತರಿಸುವ ಮೂಲಕ ಆಚರಿಸಿದ್ದಾರೆ. ತಮ್ಮ ನೆಚ್ಚಿನ ಶಿವಣ್ಣನಿಗೆ ಸನ್ಮಾನವನ್ನೂ ಮಾಡಿದ್ದಾರೆ. 1974ರಲ್ಲಿ ಶ್ರೀನಿವಾಸ ಕಲ್ಯಾಣ ಸಿನಿಮಾದಲ್ಲಿ ಬಾಲಕಲಾವದರಾಗಿದ್ದ ಶಿವರಾಜ್​ ಕುಮಾರ್ ಅವರು, ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ ಆನಂದ್​. 1986ರಲ್ಲಿ ತೆರೆಕಂಡ ಈ ಸಿನಿಮಾ ಭರ್ಜರಿ ಯಶಸ್ಸು ಕಂಡಿತು. ಹಾಗೇ, ಮೊದಲ ಸಿನಿಮಾದಲ್ಲೇ ಶಿವರಾಜ್​ ಕುಮಾರ್​ ಅವರಿಗೆ ಉತ್ತಮ ನಟ ಎಂದು ಸಿನಿ ಎಕ್ಸ್​ಪ್ರೆಸ್​ ಪ್ರಶಸ್ತಿ ಕೂಡ ಬಂತು. ಅಂದಿನಿಂದ ಇಂದಿನವರೆಗೂ ಸ್ಯಾಂಡಲ್​ವುಡ್​ನ ಮೋಸ್ಟ್​ ಎನರ್ಜಿಟಿಕ್​ ನಟ ಎಂದೇ ಎನ್ನಿಸಿಕೊಂಡಿರುವ ಶಿವಣ್ಣಂಗೆ ಈಗ 58ನೇ ವರ್ಷ. ಒಂದೆರಡು ಬಾರಿ ಆರೋಗ್ಯ ಸಮಸ್ಯೆಗೆ ಒಳಗಾಗಿದ್ದರೂ ಸಿನಿಮಾ ಶೂಟಿಂಗ್​ನಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾ ವಿಚಾರದಲ್ಲೆಂದೂ ಅಭಿಮಾನಿಗಳನ್ನು ನಿರಾಸೆ ಗೊಳಿಸಿಲ್ಲ.

ಸುದೀಪ್​ ವಿಶ್​ ಸುಮಾರು 117 ಸಿನಿಮಾಗಳಲ್ಲಿ ನಟಿಸಿರುವ ಶಿವರಾಜ್​ಕುಮಾರ್​ಗೆ ಅವರ ಸಿನಿರಂಗದ ಪ್ರಯಾಣಕ್ಕೆ 35ವರ್ಷ ಕಳೆದಿದ್ದು, ನಟ ಕಿಚ್ಚ ಸುದೀಪ್​ ವಿಶ್​ ಮಾಡಿದ್ದಾರೆ. ಟ್ವೀಟ್ ಮಾಡಿದ ಅಭಿನಯ ಚಕ್ರವರ್ತಿ, ಚಿತ್ರರಂಗದಲ್ಲಿ 30ವರ್ಷ ಪೂರೈಸಿದ ಅಸಾಧಾರಣ, ಬಹುಮುಖ ಪ್ರತಿಭೆಯ ನಟ ಶಿವಣ್ಣನವರಿಗೆ ನನ್ನ ಶುಭಹಾರೈಕೆಗಳು. ಇದು ಮಹತ್ತರವಾದ ಸಾಧನೆ. ಚಿತ್ರರಂಗದಲ್ಲಿ ನೀವು ನಿರ್ಮಿಸಿದ ಮೈಲಿಗಲ್ಲು, ದಾಖಲೆಗಳೇ ನಿಮ್ಮ ಬಗ್ಗೆ ಮಾತನಾಡುತ್ತವೆ. ನಿಮಗೆ ನನ್ನ ಪ್ರೀತಿಯ ಅಪ್ಪುಗೆ ಎಂದು ಹೇಳಿದ್ದಾರೆ.

ಕಿಚ್ಚ ಸುದೀಪ್​, ನಟಸಾರ್ವಭೌಮ ರಾಜಕುಮಾರ್​ ಕುಟುಂಬದೊಟ್ಟಿಗೆ ಮೊದಲಿನಿಂದಲೂ ಒಳ್ಳೆಯ ಸಂಬಂಧ ಹೊಂದಿದ್ದಾರೆ. ಸುದೀಪ್​ ಹಾಗೂ ಶಿವರಾಜ್​ಕುಮಾರ್ ಅಭಿನಯದ ದಿ ವಿಲನ್​ ಸಿನಿಮಾ 2018ರಲ್ಲಿ ತೆರೆಕಂಡಿತ್ತು. ಈ ಸಿನಿಮಾವನ್ನು ಪ್ರೇಮ್​ ನಿರ್ದೇಶಿಸಿದ್ದರು. ಇನ್ನು ಸಿನಿಮಾ ಪ್ರಮೋಶನ್​ಗಾಗಿ ಹಲವು ರಿಯಾಲಿಟಿ ಶೋಗಳಲ್ಲಿ ಸುದೀಪ್ ಮತ್ತು ಶಿವರಾಜ್​ಕುಮಾರ್ ಭಾಗವಹಿಸಿದ್ದರು. ಇವರಿಬ್ಬರ ಮಧ್ಯೆ ಇರುವ ಬಾಂಧವ್ಯ ಆ ರಿಯಾಲಿಟಿ ಶೋಗಳಲ್ಲೂ ಕಾಣಿಸಿತ್ತು. ಹಾಗೇ, ಸುದೀಪ್​ ಅವರ ಪೈಲ್ವಾನ್ ಸಿನಿಮಾ ಧ್ವನಿಸುರುಳಿಯನ್ನು ಪುನೀತ್​ ರಾಜಕುಮಾರ್ ಬಿಡುಗಡೆ ಮಾಡಿದ್ದರು.

ಚಿತ್ರರಂಗಕ್ಕೆ ಕಾಲಿಡುತ್ತಿದ್ದಂತೆ ಸತತ ಮೂರು ಸಿನಿಮಾಗಳಲ್ಲಿ ಅದ್ಭುತ ಯಶಸ್ಸು ಕಂಡವರು ಶಿವರಾಜ್ ಕುಮಾರ್​. ಇನ್ನು ಅವರ ನೃತ್ಯದ ಶೈಲಿಗಂತೂ ತುಂಬ ಜನ ಅಭಿಮಾನಿಗಳಿದ್ದಾರೆ. ಶಿವರಾಜ್​ಕುಮಾರ್​ಗೆ 2014ರಲ್ಲಿ ಕೃಷ್ಣದೇವರಾಯ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್​ ತಮ್ಮ ಎಲ್ಲ ಯಶಸ್ಸಿಗೂ ಅಭಿಮಾನಿಗಳೇ ಕಾರಣ ಎನ್ನುವ ಶಿವಣ್ಣ, ಸದ್ಯ ಭಜರಂಗಿ-2 ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ: ಶಿವರಾಜ್​ಕುಮಾರ್​ ಚಿತ್ರರಂಗಕ್ಕೆ ಪ್ರವೇಶಿಸಿ 35 ವರ್ಷ; 35 ಕೆಜಿ ತೂಕದ ಕೇಕ್​ ಕತ್ತರಿಸಿ ಸಂಭ್ರಮಿಸಿದ ಅಭಿಮಾನಿಗಳು

ತಾಜಾ ಸುದ್ದಿ
ಕರ್ನಾಟಕ ಬಂದ್ ಗೆ ನಮ್ಮ ನೈತಿಕ ಬೆಂಬಲವಿದೆ: ಶಶಿಕುಮಾರ್-ಕಾಮ್ಸ್ ಅಧ್ಯಕ್ಷ
ಕರ್ನಾಟಕ ಬಂದ್ ಗೆ ನಮ್ಮ ನೈತಿಕ ಬೆಂಬಲವಿದೆ: ಶಶಿಕುಮಾರ್-ಕಾಮ್ಸ್ ಅಧ್ಯಕ್ಷ
ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ
ಕಾವೇರಿ ಹೋರಾಟವನ್ನು ವಿಭಿನ್ನವಾಗಿ ಬೆಂಬಲಿಸಿದ ಮೈಸೂರು ಮೂಲದ ವೈದ್ಯ
ರಾಜ್ಯದ ಸಂಸದರೆಲ್ಲ ರಣಹೇಡಿಗಳು: ಟಿಎ ನಾರಾಯಣಗೌಡ, ಕರವೇ-ಅಧ್ಯಕ್ಷ
ರಾಜ್ಯದ ಸಂಸದರೆಲ್ಲ ರಣಹೇಡಿಗಳು: ಟಿಎ ನಾರಾಯಣಗೌಡ, ಕರವೇ-ಅಧ್ಯಕ್ಷ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ವ್ಯವಸಾಯ ಮಾಡಲು ಲಕ್ಷಾಂತರ ಎಕರೆ ಜಮೀನು ವಶಪಡಿಸಿಕೊಂಡ ಪಾಕಿಸ್ತಾನ ಸೇನ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ನಾಳೆ ಓಲಾ-ಊಬರ್ ಕ್ಯಾಬ್​ಗಳು ರಸ್ತೆಗಿಳಿಯಲ್ಲ; ಕ್ಯಾಬ್ ಚಾಲಕರ ಸಂಘದ ಅಧ್ಯಕ್ಷ
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಬ್ರಿಟಿಷರು ಭಾರತ ಬಿಟ್ಟು ಹೋಗಿದ್ದು ನೇತಾಜಿ ಭಯದಿಂದ: ಬಸನಗೌಡ ಯತ್ನಾಳ್
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ಚಿರಂಜೀವಿ ಕೊನೆಯ ಸಿನಿಮಾ ‘ರಾಜಮಾರ್ತಂಡ’ಕ್ಕೆ ಭರ್ಜರಿ ಪ್ರಚಾರ
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
ದರ್ಶನ್ ತಮಗೆ ಮಾಡಿರುವ ಸಹಾಯದ ಬಗ್ಗೆ ಯಶಸ್ ಸೂರ್ಯ ಭಾವುಕ ಮಾತು
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
Video: ನೋಡ ನೋಡುತ್ತಿದ್ದಂತೆ ಚಲಿಸಿದ ಕಾರು: ಯುವಕನಿಂದ ಮಗು ಬಚಾವ್
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ
ಕಾಂಗ್ರೆಸ್ ನಾಯಕರನ್ನು ಭೇಟಿಯಾದರೆ  ಪಕ್ಷ ಸೇರಿದಂತಲ್ಲ: ಎಂಪಿ ರೇಣುಕಾಚಾರ್ಯ