ಶ್ರೀದೇವಿ ಇನ್ನೊಬ್ಬ ಪುತ್ರಿ ಬಾಲಿವುಡ್​ಗೆ ಎಂಟ್ರಿ ಕೊಡಲು ಸಿದ್ಧ; ನನ್ನ ಬ್ಯಾನರ್​ನಡಿ ಪರಿಚಯಿಸುವುದಿಲ್ಲ ಎಂದು ಬಿಗುಮಾನ ತೋರಿದ ಬೋನಿ

  • TV9 Web Team
  • Published On - 13:15 PM, 19 Jan 2021
ಶ್ರೀದೇವಿ ಇನ್ನೊಬ್ಬ ಪುತ್ರಿ ಬಾಲಿವುಡ್​ಗೆ ಎಂಟ್ರಿ ಕೊಡಲು ಸಿದ್ಧ; ನನ್ನ ಬ್ಯಾನರ್​ನಡಿ ಪರಿಚಯಿಸುವುದಿಲ್ಲ ಎಂದು ಬಿಗುಮಾನ ತೋರಿದ ಬೋನಿ
ಖುಷಿ ಕಪೂರ್​

ಬಾಲಿವುಡ್​ನ ಮೋಹಕ ತಾರೆಯೆನಿಸಿದ್ದ, ನಟಿ ಶ್ರೀದೇವಿಯ ಪುತ್ರಿ ಜಾನ್ವಿ ಕಪೂರ್​ 2018ರಲ್ಲಿ ಬಾಲಿವುಡ್​ಗೆ ಪಾದಾರ್ಪಣೆ ಮಾಡಿದ್ದಾಗಿದೆ. ಧಡಕ್​ ಸಿನಿಮಾ ಮೂಲಕ ಎಂಟ್ರಿಕೊಟ್ಟ ಇವರು ಸಿನಿಮಾ ರಂಗದಲ್ಲಿ ಈಗ ಸಕ್ರಿಯರಾಗಿದ್ದಾರೆ. ಜಾನ್ವಿ ಅಪ್ಪ ಬೋನಿ ಕಪೂರ್ ಇದೀಗ ಇನ್ನೊಂದು ಗುಡ್​ನ್ಯೂಸ್​ ಹೊರಹಾಕಿದ್ದಾರೆ. ತಮ್ಮ ಇನ್ನೊಬ್ಬ ಮಗಳು ಖುಷಿ ಕಪೂರ್ ಕೂಡ ಶೀಘ್ರದಲ್ಲೇ ಬಾಲಿವುಡ್​ಗೆ ಕಾಲಿಡಲಿದ್ದಾರೆ ಎಂಬುದನ್ನು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಖುಷಿ ಕೂಡ ನಟನೆಯಲ್ಲಿ ತುಂಬ ಆಸಕ್ತಿ ಹೊಂದಿದ್ದಾರೆ. ಅತಿ ಶೀಘ್ರದಲ್ಲೇ ಅವಳೂ ಕೂಡ ಒಂದು ಸಿನಿಮಾ ಮೂಲಕ ನಿಮ್ಮೆದುರು ಬರಲಿದ್ದಾಳೆ ಎಂದು ಹೇಳಿದ ಬೋನಿ ಕಪೂರ್​, ನಾನು ನಿರ್ಮಾಪಕನಾದರೂ ನಾನವಳನ್ನು ಪರಿಚಯಿಸುವುದಿಲ್ಲ ಎಂದೂ ಸ್ಪಷ್ಟಪಡಿಸಿದ್ದಾನೆ.

ಖುಷಿ ನನ್ನ ಮಗಳು..ಹಾಗೇ ನಾನೇ ಸ್ವತಃ ನಿರ್ಮಾಪಕ. ಅವಳನ್ನು ಸಿನಿರಂಗಕ್ಕೆ ಪರಿಚಯಿಸಲು ಬೇಕಾದ ಎಲ್ಲ ಸಂಪನ್ಮೂಲಗಳೂ ನನ್ನ ಬಳಿ ಇವೆ. ಆದರೂ ನಾನದನ್ನು ಮಾಡುವುದಿಲ್ಲ. ನನ್ನ ಬದಲಿಗೆ ಇನ್ಯಾರಾದರೂ ಆಕೆಯನ್ನು ಬಾಲಿವುಡ್​ಗೆ ಅಧಿಕೃತವಾಗಿ ಕರೆತರಲಿ ಎಂಬುದು ನನ್ನ ಆಸೆ. ಹೀಗಾದರೆ ನನ್ನಲ್ಲೂ ಒಂದು ತೃಪ್ತಿ ಇರುತ್ತದೆ ಎಂದು ಹೇಳಿದ್ದಾರೆ.

ಖುಷಿ ಕಪೂರ್​ ನ್ಯೂಯಾರ್ಕ್​ನ ಫಿಲ್ಮ್​ ಅಕಾಡೆಮಿಯಲ್ಲಿ ನಟನಾ ತರಬೇತಿ ಪಡೆದಿದ್ದಾರೆ. ಈ ಹಿಂದೆ ರಿಯಾಲಿಟಿ ಶೋ ಒಂದರಲ್ಲಿ ಭಾಗವಹಿಸಿದ್ದ ಖುಷಿ, ತನಗೂ ನಟನೆ ಬಗ್ಗೆ ಆಸಕ್ತಿ ಇದೆ ಎಂದು ಹೇಳಿದ್ದರು.

ಕುಟುಂಬ ಸಮೇತ ಮಾಲ್ಡೀವ್ಸ್​ ಪ್ರವಾಸ ಕೈಗೊಂಡ ಯಶ್