ರೈತರ ಆತ್ಮಹತ್ಯೆಗೆ ಸರ್ಕಾರದ ನೀತಿಗಳು ಕಾರಣವಲ್ಲ; ಅವರ ವೀಕ್​ ಮೈಂಡ್ ಕಾರಣ: ಕೃಷಿ ಸಚಿವ ಬಿ.ಸಿ.ಪಾಟೀಲ್

ರೈತರ ಆತ್ಮಹತ್ಯೆ ನಿರ್ಧಾರಕ್ಕೆ ಸರ್ಕಾರದ ನೀತಿಗಳು ಕಾರಣವಲ್ಲ. ಅದಕ್ಕೆ ಅವರ ದುರ್ಬಲ ಮನಸ್ಸು ಕಾರಣ ಎಂದು ಬಿ.ಸಿ. ಪಾಟೀಲ್ ಮಾತನಾಡಿದ್ದಾರೆ.

ರೈತರ ಆತ್ಮಹತ್ಯೆಗೆ ಸರ್ಕಾರದ ನೀತಿಗಳು ಕಾರಣವಲ್ಲ; ಅವರ ವೀಕ್​ ಮೈಂಡ್ ಕಾರಣ: ಕೃಷಿ ಸಚಿವ ಬಿ.ಸಿ.ಪಾಟೀಲ್
ಬಿ.ಸಿ.ಪಾಟೀಲ್​
Follow us
TV9 Web
| Updated By: ganapathi bhat

Updated on:Apr 06, 2022 | 8:47 PM

ಮೈಸೂರು: ರೈತರ ಆತ್ಮಹತ್ಯೆ ಕುರಿತು ಇತ್ತೀಚೆಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ಇಂದು ಮತ್ತೊಂದು ಅಂತಹುದೇ ಹೇಳಿಕೆ ನೀಡಿದ್ದಾರೆ. ರೈತರ ಮನಸ್ಸು ದುರ್ಬಲವಾದಾಗ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳುತ್ತಾರೆ. ರೈತರ ಆತ್ಮಹತ್ಯೆಗೆ ಅವರ ವೀಕ್​ ಮೈಂಡ್ ಕಾರಣ ಎಂದು ರಾಜ್ಯ ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ.

ರೈತರ ಆತ್ಮಹತ್ಯೆ ನಿರ್ಧಾರಕ್ಕೆ ಸರ್ಕಾರದ ನೀತಿಗಳು ಕಾರಣವಲ್ಲ. ಅದಕ್ಕೆ ಅವರ ದುರ್ಬಲ ಮನಸ್ಸು ಕಾರಣ ಎಂದು ರೈತರ ಆತ್ಮಹತ್ಯೆಯ ಕುರಿತಾಗಿ ಬಿ.ಸಿ. ಪಾಟೀಲ್ ಮಾತನಾಡಿದ್ದಾರೆ.

ಆತ್ಮಹತ್ಯೆ ಮಾಡಿಕೊಂಡ ರೈತರ ಮನೆಗಳಿಗೆ ಹೋಗಿ, ಹಾರ ಹಾಕಿ, ಸಾಂತ್ವನ ಹೇಳಿದ್ರೆ ರೈತರ ಆತ್ಮಹತ್ಯೆ ನಿಲ್ಲಲ್ಲ. ಅದಕ್ಕೆ ಪರ್ಯಾಯವಾಗಿ ಕಾರ್ಯಕ್ರಮ ರೂಪಿಸಬೇಕು ಎಂದು ಸಚಿವ ಬಿ.ಸಿ.ಪಾಟೀಲ್ ಹೇಳಿಕೆ ನೀಡಿದ್ದಾರೆ. ಕೇವಲ ರೈತರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಿಲ್ಲ. ಉದ್ಯಮಿಗಳು, ಅಧಿಕಾರಿಗಳು, ಇತರೇ ಕ್ಷೇತ್ರದವರು ಸೇರಿ ಎಲ್ಲಾ ವಲಯದ ಜನರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಸರ್ಕಾರದ ನೀತಿ ಕಾರಣವಲ್ಲಎಂದು ಬಿ.ಸಿ.ಪಾಟೀಲ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸರ್ಕಾರಗಳು ತನ್ನ ಕೆಲಸ ಮಾಡುತ್ತಿವೆ. ಹಳ್ಳಿಯಲ್ಲಿರುವವರು ಬಹುತೇಕರು ರೈತರೇ ಆಗಿರುತ್ತಾರೆ. ಹಳ್ಳಿಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರೆಲ್ಲಾ ರೈತರಾಗಲ್ಲ. ಆತ್ಮಹತ್ಯೆಗೆ ಕಾರಣವನ್ನು ತಜ್ಞರು ಹುಡುಕಬೇಕಾಗಿದೆ. ತಜ್ಞರ ವರದಿಯಂತೆ ಸರ್ಕಾರ ತೀರ್ಮಾನ ಕೈಗೊಳ್ಳುತ್ತದೆ ಎಂದು ಮೈಸೂರಿನಲ್ಲಿ ಬಿ.ಸಿ.ಪಾಟೀಲ್ ಹೇಳಿಕೆ ತಿಳಿಸಿದ್ದಾರೆ.

ಸಾಲದಿಂದ ಕಂಗಾಲಾಗಿದ್ದ ರೈತ; ವಿಷ ಸೇವಿಸಿ ಆತ್ಮಹತ್ಯೆ

Published On - 12:56 pm, Tue, 19 January 21