ಯುವರಾಜ್ ವಂಚನೆ: ನಿವೃತ್ತ ನ್ಯಾಯಮೂರ್ತಿ ವಿರುದ್ದವೂ ತನಿಖೆ ನಡೆಸುವಂತೆ CCBಗೆ ವಕೀಲರಿಂದ ದೂರು
ಯುವರಾಜ್ ಹಲವರಿಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿದ್ದಾನೆ. ಈ ನಿವೃತ್ತ ನ್ಯಾಯಮೂರ್ತಿಗೆ ಗವರ್ನರ್ ಹುದ್ದೆ ಕೊಡಿಸುವುದಾಗಿ ಆಸೆ ತೋರಿಸಿ ವಂಚಿಸಿದ್ದಾನೆ. ಇವರು ಉನ್ನತ ಹುದ್ದೆಗಾಗಿ ಹಣ ಸಂದಾಯ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಬೆಂಗಳೂರು: ವಂಚಕ ಯುವರಾಜ್ ಸ್ವಾಮಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ವಕೀಲರೊಬ್ಬರು ನಿವೃತ್ತ ನ್ಯಾಯಮೂರ್ತಿ ವಿರುದ್ಧ ಸಿಸಿಬಿಗೆ ದೂರು ನೀಡಿದ್ದಾರೆ. ಯುವರಾಜ್ ಸ್ವಾಮಿ ಈಗಾಗಲೇ ಹಲವರಿಗೆ ಮೋಸ ಮಾಡಿದ್ದು, ಈ ಕೇಸ್ನಲ್ಲಿ ನಟಿ ರಾಧಿಕಾ ಕುಮಾರಸ್ವಾಮಿಯ ಹೆಸರೂ ಕೇಳಿಬಂದಿದ್ದು, ಸದ್ಯ ಇದಕ್ಕೆ ಸಂಬಂಧಪಟ್ಟಂತೆ ತನಿಖೆ ನಡೆಯುತ್ತಿದೆ.
ಇದೀಗ ವಕೀಲ ಅಮೃತೇಶ್ ಎಂಬುವರು ಯುವರಾಜ್ ಸ್ವಾಮಿಯಿಂದ ಮೋಸ ಹೋದ ನಿವೃತ್ತ ನ್ಯಾಯಮೂರ್ತಿ ವಿರುದ್ಧ ಸಿಸಿಬಿಗೆ ದೂರು ನೀಡಿದ್ದಾರೆ. ಯುವರಾಜ್ ಹಲವರಿಗೆ ಕೋಟ್ಯಂತರ ರೂಪಾಯಿ ಮೋಸ ಮಾಡಿದ್ದಾನೆ. ಈ ನಿವೃತ್ತ ನ್ಯಾಯಮೂರ್ತಿಗೆ ಗವರ್ನರ್ ಹುದ್ದೆ ಕೊಡಿಸುವುದಾಗಿ ಆಸೆ ತೋರಿಸಿ ವಂಚಿಸಿದ್ದಾನೆ. ಇವರು ಉನ್ನತ ಹುದ್ದೆಗಾಗಿ ಹಣ ಸಂದಾಯ ಮಾಡಿದ್ದಾರೆ. ತಾನೂ ಯುವರಾಜ್ನಿಂದ ಮೋಸ ಹೋಗಿದ್ದಾಗಿ ನಿವೃತ್ತ ನ್ಯಾಯಮೂರ್ತಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಹೇಳಿದ್ದಾರೆ. ಇದೆಲ್ಲವನ್ನೂ ಪರಿಗಣಿಸಿ ಸೂಕ್ತ ತನಿಖೆ ನಡೆಸಬೇಕು. ಹಣ ನೀಡಿರುವ ನಿವೃತ್ತ ನ್ಯಾಯಮೂರ್ತಿ ವಿರುದ್ಧವೂ ತನಿಖೆಯಾಗಬೇಕು ಎಂದು ವಕೀಲ ಅಮೃತೇಶ್ ದೂರಿನಲ್ಲಿ ತಿಳಿಸಿದ್ದಾರೆ.