ಒಂದೇ ರಾತ್ರಿಯಲ್ಲಿ 43 ಮೆಟ್ರಿಕ್ ಟನ್ ಕಬ್ಬು ಟ್ರ್ಯಾಕ್ಟರ್​ಗೆ ತುಂಬಿಸಿ ಸಾಹಸ ಮೆರೆದ ಕಾರ್ಮಿಕ

ಗ್ರಾಮದ ಶ್ರೀನಿವಾಸ ಲೆಂಡಿ ಎನ್ನುವ ರೈತರ ಜಮೀನಿನಲ್ಲಿ ಕಡಿದು ಹಾಕಿದ್ದ ಕಬ್ಬನ್ನು ಕಾರ್ಮಿಕರಾದ ಶ್ರೀನಿವಾಸ ಹೊತ್ತುಕೊಂಡು ಟ್ರ್ಯಾಕ್ಟರ್​ನಲ್ಲಿ ಹಾಕಿದ್ದು, ಈ ಹಿಂದೆ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಒಂದು ರಾತ್ರಿಯಲ್ಲಿ 34 ಟನ್ ಕಬ್ಬು ಲೋಡ್ ಮಾಡಿದ್ದರು.

ಒಂದೇ ರಾತ್ರಿಯಲ್ಲಿ 43 ಮೆಟ್ರಿಕ್ ಟನ್ ಕಬ್ಬು ಟ್ರ್ಯಾಕ್ಟರ್​ಗೆ ತುಂಬಿಸಿ ಸಾಹಸ ಮೆರೆದ ಕಾರ್ಮಿಕ
ಶ್ರೀನಿವಾಸ ಕಬ್ಬು ಟ್ರ್ಯಾಕ್ಟರ್​ಗೆ ಲೋಡ್ ಮಾಡುತ್ತಿರುವ ದೃಶ್ಯ
Follow us
| Updated By: ಸಾಧು ಶ್ರೀನಾಥ್​

Updated on:Jan 19, 2021 | 12:33 PM

ಬಾಗಲಕೋಟೆ: ಕಡಿದು ಹಾಕಿದ್ದ 43 ಮೆಟ್ರಿಕ್ ಟನ್ ಕಬ್ಬನ್ನು ಒಂದೇ ರಾತ್ರಿಯಲ್ಲಿ  ಟ್ರ್ಯಾಕ್ಟರ್​ನಲ್ಲಿ ಹೇರುವ ಮೂಲಕ ಕೂಲಿ ಕಾರ್ಮಿಕರೊಬ್ಬರು ಸಾಹಸ ಮೆರೆದ ಘಟನೆ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ನಾವಲಗಿ ಗ್ರಾಮದಲ್ಲಿ ನಡೆದಿದೆ.

ಕಬ್ಬು ಕಡಿಯುವ ಗ್ಯಾಂಗ್​ನಲ್ಲಿ ಕೂಲಿ ಕೆಲಸ ಮಾಡುವ ಶ್ರೀನಿವಾಸ ನಾಯಕ ಎನ್ನುವ 21 ವರ್ಷದ ಯುವಕ ಈ ಸಾಹಸ ಮಾಡಿದ್ದಾರೆ. ಶ್ರೀನಿವಾಸ ಅವರು ರಾತ್ರಿ 11.50 ಕ್ಕೆ ಕಬ್ಬು ಹೇರುವ ಕೆಲಸವನ್ನು ಆರಂಭಿಸಿ, ಬೆಳಗ್ಗೆ 6.20 ರವರೆಗೆ ಮೂರು ಟ್ರ್ಯಾಲಿಗಳಲ್ಲಿ ಒಟ್ಟು 43 ಟನ್ ಕಬ್ಬು ಲೋಡ್ ಮಾಡಿದ್ದಾರೆ.

ಟ್ರ್ಯಾಕ್ಟರ್​ನಲ್ಲಿ ಕಬ್ಬು ಹೇರುವ ಚಿತ್ರಣ

ಗ್ರಾಮದ ಶ್ರೀನಿವಾಸ ಲೆಂಡಿ ಎನ್ನುವ ರೈತರ ಜಮೀನಿನಲ್ಲಿ ಕಡಿದು ಹಾಕಿದ್ದ ಕಬ್ಬನ್ನು ಕಾರ್ಮಿಕರಾದ ಶ್ರೀನಿವಾಸ ಹೊತ್ತುಕೊಂಡು ಟ್ರ್ಯಾಕ್ಟರ್​ನಲ್ಲಿ ಹಾಕಿದ್ದು, ಈ ಹಿಂದೆ ಗ್ರಾಮದಲ್ಲಿ ಕೂಲಿ ಕಾರ್ಮಿಕರೊಬ್ಬರು ಒಂದು ರಾತ್ರಿಯಲ್ಲಿ 34 ಟನ್ ಕಬ್ಬು ಲೋಡ್ ಮಾಡಿದ್ದರು. ಆದರೆ ಈಗ ಈ ದಾಖಲೆ ಮುರಿಯಲು ಶ್ರೀನಿವಾಸ 43 ಟನ್ ಕಬ್ಬು ಲೋಡ್ ಮಾಡಿ, ಕಬ್ಬಿನ ಗ್ಯಾಂಗ್​ನವರಿಂದ ಶಹಬ್ಬಾಸ್​ಗಿರಿ ಪಡೆದಿದ್ದಾರೆ.

ಕಬ್ಬು ಕಟಾವು ಕಾರ್ಮಿಕರ ಅಲೆದಾಟ, ಶಿಕ್ಷಣವಿಲ್ಲದೆ ಮಕ್ಕಳ ಭವಿಷ್ಯ ಅತಂತ್ರ..!

Published On - 12:32 pm, Tue, 19 January 21

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ನವರಾತ್ರಿಯ ಮೂರನೇ ದಿನದ ರಾಶಿ ಭವಿಷ್ಯ ತಿಳಿಯಿರಿ