AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಸಿಕೆಯೇನೋ ಬಂತು.. ಆದರೆ, ಪಡೆಯಲು ನಿರೀಕ್ಷಿತ ಮಟ್ಟದಲ್ಲಿ ಜನರೇ ಬರುತ್ತಿಲ್ಲ.. ಏನಿರಬಹುದು ಕಾರಣ?

ಒಂದುವೇಳೆ, ಮೊದಲ ಹಂತದ ಲಸಿಕೆ ವಿತರಣೆ ಕಾರ್ಯಕ್ರಮವೇ ನಿರೀಕ್ಷಿತ ಗುರಿ ತಲುಪಿಲ್ಲವೆಂದರೆ ಮುಂದಿನ ಹಂತದಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳಲು ತಾವಾಗಿಯೇ ಮುಂದೆ ಬರುವುದು ಸಾಧ್ಯವೇ?

ಕೊರೊನಾ ಲಸಿಕೆಯೇನೋ ಬಂತು.. ಆದರೆ, ಪಡೆಯಲು ನಿರೀಕ್ಷಿತ ಮಟ್ಟದಲ್ಲಿ ಜನರೇ ಬರುತ್ತಿಲ್ಲ.. ಏನಿರಬಹುದು ಕಾರಣ?
ಪ್ರಾತಿನಿಧಿಕ ಚಿತ್ರ
Follow us
Skanda
|

Updated on: Jan 19, 2021 | 2:23 PM

ದೇಶದಲ್ಲಿ ಕೊರೊನಾ ಲಸಿಕೆ ವಿತರಣೆ ಆರಂಭವಾಗಿ 3 ದಿನ ಕಳೆದಿದೆ. ಸದ್ಯಕ್ಕೆ ಲಸಿಕೆಯಿಂದ ದೊಡ್ಡಮಟ್ಟದ ಅನಾಹುತವೇನೂ ಸಂಭವಿಸಿಲ್ಲವಾದರೂ ಲಸಿಕೆ ಪಡೆಯಲು ಈ ಮೊದಲು ಹೆಸರು ನೋಂದಾಯಿಸಿಕೊಂಡಿದ್ದ ಸ್ವಯಂಸೇವಕರೇ ಹಿಂದೇಟು ಹಾಕುತ್ತಿದ್ದಾರೆ. ಬೆಂಗಳೂರು ನಗರದಲ್ಲಿ ಕೊರೊನಾ ಲಸಿಕೆ ಪಡೆದವರ ಅಂಕಿ ಅಂಶಗಳನ್ನು ಗಮನಿಸಿದರೆ ಕೆಲವೊಂದು ಪ್ರಶ್ನೆಗಳು ಹುಟ್ಟಿಕೊಳ್ಳುತ್ತಿವೆ.

ಲಸಿಕೆ ವಿತರಣೆಯ ಮೊದಲ ದಿನವಾದ ಜ.16 ರಂದು ಒಟ್ಟು 8 ಕಡೆಗಳಲ್ಲಿ 816 ಜನರಿಗೆ ಲಸಿಕೆ ನೀಡಲು ಉದ್ದೇಶಿಸಲಾಗಿತ್ತು. ಆದರೆ ಅದರಲ್ಲಿ 497 ಜನರಿಗಷ್ಟೇ ಲಸಿಕೆ ಕೊಡಲಾಗಿದ್ದು, ಶೇ.61ರಷ್ಟು ಜನರನ್ನು ತಲುಪಿದಂತಾಗಿದೆ. ಜ.17 ರಂದು ನಗರದ ಒಟ್ಟು 63 ಕಡೆಗಳಲ್ಲಿ 6,277 ಜನರನ್ನು ತಲುಪಲು ಉದ್ದೇಶಿಸಲಾಗಿತ್ತು. ಆದರೆ ಅಂದು 3,659 ಜನರಿಗೆ ಲಸಿಕೆ ನೀಡಲಾಗಿದೆ. ಅಂದರೆ ಶೇ.58ರಷ್ಟು ಜನರಿಗೆ ಲಸಿಕೆ ನಿಡಲಾಗಿದೆ. ಮೂರನೆಯ ದಿನವಾದ ಜ.18ರಂದು ಒಟ್ಟು 228ಸ್ಥಳಗಳಲ್ಲಿ 20,226 ಜನರಿಗೆ ಕೊರೊನಾ ಲಸಿಕೆ ನೀಡಬೇಕಾಗಿತ್ತು. ಆದರೆ, ಆ ಪೈಕಿ ಕೇವಲ 8,499 ಜನರು ಮಾತ್ರ ಲಸಿಕೆ ಪಡೆದಿದ್ದು ಶೇ.42ರಷ್ಟು ಜನರನ್ನು ತಲುಪಲಾಗಿದೆ. ಒಟ್ಟಾರೆ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.54ರಷ್ಟು ಆರೋಗ್ಯ ಕಾರ್ಯಕರ್ತರು ಮಾತ್ರ ಮೂರು ದಿನಗಳಲ್ಲಿ ಕೊರೊನಾ ಲಸಿಕೆ ಪಡೆದಿದ್ದಾರೆ.

ಇಲ್ಲಿ ಗಮನಾರ್ಹ ವಿಚಾರವೆಂದರೆ ಮೇಲೆ ನೀಡಲಾದ ಅಂಕೆ ಸಂಖ್ಯೆಗಳು ಹೆಸರು ನೋಂದಾಯಿಸಿಕೊಂಡವರನ್ನಷ್ಟೇ ಪ್ರತಿನಿಧಿಸುತ್ತವೆ. ಅಂದರೆ ಅವರೆಲ್ಲರೂ ಕೊರೊನಾ ಲಸಿಕೆ ಪಡೆಯಲು ಮನಸಿಕವಾಗಿ ಸನ್ನದ್ಧರಾಗಿದ್ದವರು. ಅದಾಗ್ಯೂ ಸ್ವಯಂಪ್ರೇರಿತರಾಗಿ ಹೆಸರು ನೀಡಿದ್ದವರೇ ಹೀಗೆ ಹಿಂದೇಟು ಹಾಕುತ್ತಿರುವುದರ ಹಿಂದಿರುವ ಕಾರಣ ಏನಿರಬಹುದು.. ಆರೋಗ್ಯ ಕಾರ್ಯಕರ್ತರೇ ಹಿಂಜರಿದರೆ ಜನರಿಗೆ ಯಾವ ಸಂದೇಶ ಹೋಗಬಹುದು.. ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲು ಏನು ಮಾಡಬಹುದು.. ಎನ್ನುವುದೇ ಸದ್ಯಕ್ಕಿರುವ ಪ್ರಶ್ನೆ.

ಈ ಸಮಸ್ಯೆಗಳಿಗೆ ಮುಖ್ಯ ಕಾರಣ ಏನಿರಬಹುದು? 1. ಕೊವಿಶೀಲ್ಡ್​ ಮತ್ತು ಕೊವ್ಯಾಕ್ಸಿನ್​ ಲಸಿಕೆಗಳ ಕುರಿತು ಜನರಿಗೆ ಇನ್ನೂ ಸಂಪೂರ್ಣ ನಂಬಿಕೆ ಬಂದಿಲ್ಲ. ಕೆಲವು ದೇಶಗಳಲ್ಲಿ ಕೊರೊನಾ ಲಸಿಕೆಯಿಂದ ಅಲರ್ಜಿ ಸಮಸ್ಯೆ ಉಂಟಾಗಿದೆ. ವಿಪರೀತ ಜ್ವರ ಕಾಣಿಸಿಕೊಂಡಿದೆ ಎಂಬ ಸುದ್ದಿಗಳಿಂದ ಜನರು ಸಹಜವಾಗಿಯೇ ಲಸಿಕೆ ಪಡೆಯಲು ಯೋಚಿಸುವಂತಾಗಿದೆ. ಹೀಗಾಗಿ ಸ್ವಯಂಸೇವಕರು ಸಹ ಕಡೇಕ್ಷಣದಲ್ಲಿ ಹಿಂದೇಟು ಹಾಕುತ್ತಿರುವ ಸಾಧ್ಯತೆ ಇದೆ 2. ಕೊವ್ಯಾಕ್ಸಿನ್​ ಲಸಿಕೆ ವಿತರಣೆ ಆಗಿರುವ ಬಹುತೇಕ ಕೇಂದ್ರಗಳಲ್ಲಿ ವೈದ್ಯರೇ ಲಸಿಕೆ ಪಡೆಯಲು ಹಿಂದೇಟು ಹಾಕಿರುವುದು ವರದಿಯಾಗಿದೆ. ಭಾರತ್ ಬಯೋಟೆಕ್​ ಸಂಸ್ಥೆಯ ಕೊವ್ಯಾಕ್ಸಿನ್​ ಇನ್ನೂ 3ನೇ ಹಂತದ ಪ್ರಯೋಗವನ್ನು ಪೂರ್ಣಗೊಳಿಸಿಲ್ಲವಾದ್ದರಿಂದ ಜನರಿಗೆ ಲಸಿಕೆಯ ಪರಿಣಾಮದ ಕುರಿತು ಭಯವಿದೆ 3. ಕೊರೊನಾ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವೈದ್ಯರೊಬ್ಬರು ನೀಡಿದ ಮಾಹಿತಿ ಪ್ರಕಾರ ಹಲವೆಡೆ ಕೊವಿನ್​ ಸಾಫ್ಟ್​ವೇರ್​ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ. ಫಲಾನುಭವಿಗಳಿಗೆ ಲಸಿಕೆ ಪಡೆಯುವ ಕುರಿತು ಕಳುಹಿಸಬೇಕಾದ ಸಂದೇಶವೇ ಸರಿಯಾಗಿ ತಲುಪದೇ ಇರುವುದು ಸಹ ಲಸಿಕೆ ವಿತರಣೆಗೆ ಹಿನ್ನೆಡೆ ಉಂಟುಮಾಡುತ್ತಿರಬಹುದು ಎನ್ನಲಾಗಿದೆ. ಆದ್ದರಿಂದ ತುರ್ತಾಗಿ ಕೊವಿನ್​ ತಂತ್ರಾಂಶದಲ್ಲಿರುವ ಸಮಸ್ಯೆಯನ್ನು ಪತ್ತೆಹಚ್ಚಿ ಸರಿಪಡಿಸಬೇಕಿದೆ 4. ಲಸಿಕೆ ಪಡೆದ ಕೆಲವರಲ್ಲಿ ಜ್ವರ, ಮೈ ಕೈ ನೋವು, ಚುಚ್ಚುಮದ್ದು ಪಡೆದ ಜಾಗದಲ್ಲಿ ಊತ, ವಾಂತಿ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಂಡಿವೆ. ಸಣ್ಣ ಪ್ರಮಾಣದ ಅಡ್ಡಪರಿಣಾಮವನ್ನು ವೈದ್ಯರು ನಿರೀಕ್ಷಿಸಿದ್ದರಾದರೂ ಜನರಲ್ಲಿ ಮಾತ್ರ ಇದು ಆತಂಕ ಮೂಡಿಸುತ್ತಿದೆ 5. ಲಸಿಕೆ ಪಡೆದ ನಂತರ ಅಡ್ಡಪರಿಣಾಮ ಕಂಡುಬಂದರೆ ಅದನ್ನು ಹೇಗೆ ನಿರ್ವಹಿಸಬೇಕು. ಯಾವ ತೆರನಾದ ಅಡ್ಡಪರಿಣಾಮ ಕಾಣಿಸಿಕೊಳ್ಳಬಹುದು ಮತ್ತು ಅದನ್ನು ನಿಯಂತ್ರಿಸುವುದು ಹೇಗೆ ಎಂಬ ವಿಚಾರಗಳ ಕುರಿತಾಗಿ ಆರೋಗ್ಯ ಇಲಾಖೆ ಬಹಿರಂಗ ಪ್ರಕಟಣೆ ಹೊರಡಿಸಬೇಕಿದೆ. ಜನರಲ್ಲಿ ಮೊದಲೇ ಅರಿವು ಮೂಡಿದರೆ ಭಯ ನಿವಾರಣೆ ಆಗಬಹುದು ಎನ್ನುವುದು ತಜ್ಞರ ಅಭಿಪ್ರಾಯ

ಕೊರೊನಾ ಲಸಿಕೆ ವಿತರಣೆ ಸಂದರ್ಭದಲ್ಲಿ ಕಂಡುಬಂದ ಲೋಪ ದೋಷಗಳು 1. ಯಾವುದೇ ಲಸಿಕೆ ವಿತರಿಸಬೇಕಾದರೆ ಚುಚ್ಚುಮದ್ದು ನೀಡುವ ಮುನ್ನ ಫಲಾನುಭವಿಗೆ ಸಂಪೂರ್ಣ ಮಾಹಿತಿ ನೀಡಿ ಒಪ್ಪಿಗೆ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಬೇಕು. ಆದರೆ, ಕೆಲವು ಕೇಂದ್ರಗಳಲ್ಲಿ ಇದನ್ನು ಪಾಲಿಸುತ್ತಿಲ್ಲ ಎಂಬ ಆರೋಪ ವ್ಯಕ್ತವಾಗಿದೆ 2. ಕೊರೊನಾ ಲಸಿಕೆ ನೀಡಿದ ನಂತರ ಅರ್ಧ ಗಂಟೆಗಳ ಕಾಲ ಫಲಾನುಭವಿಯ ಆರೋಗ್ಯ ವಿಚಾರಿಸಿ ಮನೆಗೆ ಕಳುಹಿಸಲಾಗುತ್ತಿದೆ. ಆದರೆ, ಅವರನ್ನು ಕಳುಹಿಸುವಾಗ ಲಸಿಕೆ ಪಡೆದ ನಂತರ ಏನು ಮಾಡಬೇಕು? ಏನು ಮಾಡಬಾರದು? ಎಂಬುದರ ಕುರಿತು ಮಾಹಿತಿ ನೀಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿಲ್ಲ ಎಂಬ ಆರೋಪವಿದೆ. ಮೌಖಿಕವಾಗಿ ಮಾಹಿತಿ ನೀಡುವುದಕ್ಕಿಂತ ಲಿಖಿತ ರೂಪದ ಮಾಹಿತಿ ಕೈಪಿಡಿ ನೀಡುವುದು ಸೂಕ್ತ ಎಂಬ ಸಲಹೆಯನ್ನು ತಜ್ಞರು ನೀಡಿದ್ದಾರೆ 3. ಮೊದಲ ಬಾರಿಗೆ ಕೊರೊನಾ ಲಸಿಕೆ ಪಡೆದ 28 ದಿನಗಳ ನಂತರ ಮತ್ತೆ ಲಸಿಕೆ ಪಡೆಯಬೇಕೆಂದು ಫಲಾನುಭವಿಗಳಿಗೆ ಮೌಖಿಕವಾಗಿ ಹೇಳಿಕಳುಹಿಸಲಾಗುತ್ತಿದೆ. ಆದರೆ, ಅದರ ಕುರಿತು ವ್ಯವಸ್ಥಿತ ಮಾಹಿತಿ ನೀಡಲಾಗುತ್ತಿಲ್ಲ. ಯಾವ ದಿನಾಂಕದಂದು ಬರಬೇಕು? ಎಲ್ಲಿಗೆ ಬರಬೇಕು? ಬರುವ ಮುನ್ನ ಏನು ಸೇವಿಸಬೇಕು ಅಥವಾ ಸೇವಿಸಬಾರದು? ಹೀಗೆ ಅತಿ ಸಾಧಾರಣ ಮಾಹಿತಿಗಳು ಸಹ ಕೆಲವರನ್ನು ತಲುಪಿಲ್ಲ. ಒಂದು ವೇಳೆ ಮೊದಲ ಹಂತದ ಲಸಿಕೆ ಪಡೆದವರು ಮರಳಿ ಬಾರದಿದ್ದರೆ ಅದು ಇನ್ನೊಂದು ರೀತಿಯ ಸಮಸ್ಯೆ ಸೃಷ್ಟಿಗೆ ಕಾರಣವಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ

ಸರ್ಕಾರ ಈ ಮೇಲಿನ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಅದನ್ನು ಬಗೆಹರಿಸಲು ಶ್ರಮಿಸಬೇಕಿದೆ. ಒಂದುವೇಳೆ, ಮೊದಲ ಹಂತದ ಲಸಿಕೆ ವಿತರಣೆ ಕಾರ್ಯಕ್ರಮವೇ ನಿರೀಕ್ಷಿತ ಗುರಿ ತಲುಪಿಲ್ಲವೆಂದರೆ ಮುಂದಿನ ಹಂತದಲ್ಲಿ ಜನರು ಲಸಿಕೆ ಹಾಕಿಸಿಕೊಳ್ಳಲು ತಾವಾಗಿಯೇ ಮುಂದೆ ಬರುವುದು ಸಾಧ್ಯವೇ? ಎನ್ನುವುದನ್ನು ಆಲೋಚಿಸಬೇಕಿದೆ.

ಕೊರೊನಾ ಲಸಿಕೆ ಪಡೆದ ಇಬ್ಬರು ಮೃತಪಟ್ಟಿದ್ದಾರೆ, ಆದರೆ ಇದಕ್ಕೆ ಔಷಧ ಕಾರಣವಲ್ಲ: ಕೇಂದ್ರ ಸರ್ಕಾರ

ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
ಅಕ್ಷಯ ಅಮಾವಾಸ್ಯೆ: ಈ ದಿನದಂದು ಯಾವೆಲ್ಲಾ ರಾಶಿಗಳಿಗೆ ಶುಭ, ಅಶುಭ ತಿಳಿಯಿರಿ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
‘ಕಿತ್ಗೊಂಡು ತಿನ್ನುವವರಿಗೆ ಹೊಟ್ಟೆ ತುಂಬಲ್ಲ’; ಹಾಡು ಹೇಳಿದ ಸಾಧು ಕೋಕಿಲ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಸಚಿವ ವೆಂಕಟೇಶ್​ರನ್ನು ವಿಶೇಷವಾಗಿ ಹೊಗಳಿದ ಸಿದ್ದರಾಮಯ್ಯ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
ಅಮಿತ್ ಶಾ ಆದೇಶ ಕೇಳಿ ಪಾಕಿಸ್ತಾನಿ ಮಹಿಳೆಯ ಅತ್ತೆಗೆ ಹೃದಯಾಘಾತ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
‘ಅವರು ಹೇಡಿಗಳು, ಗಂಡಸ್ತನ ಇದ್ರೆ ಸೈನಿಕರ ವಿರುದ್ಧ ಹೋರಾಡಲಿ’; ಚಂದನ್ ಶೆಟ್ಟ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಬರವಣಿಗೆ ನನ್ನ ಶಕ್ತಿಯಾಗಿತ್ತು ಎನ್ನುತ್ತಾರೆ 425 ನೇ ರ‍್ಯಾಂಕ್ ಪಡೆದ ಮೇಘನಾ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಇಂದಿನಿಂದ ಹುಬ್ಬಳ್ಳಿಯಲ್ಲಿ ಆರಂಭವಾಗಿರುವ 2-ದಿನದ ಎಜುಕೇಶನ್ ಎಕ್ಸ್​ಪೋ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಯುದ್ಧದ ಬಗ್ಗೆ ಸಿಎಂ ಸಿದ್ದರಾಮಯ್ಯ ಏನು ಹೇಳಿದ್ದಾರೆ ಗೊತ್ತಿಲ್ಲ: ಲಕ್ಷ್ಮಿ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಕೋಲಾರದಲ್ಲಿ ಜನಪದ ಗಾಯಕನಿಂದ ನಿರ್ಮಾಣವಾದ ಹೈಟೆಕ್ ​ಬಸ್ ನಿಲ್ದಾಣ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ
ಪಾಕಿಸ್ತಾನಕ್ಕೆ ಅದರದ್ದೇ ಭಾಷೆಯಲ್ಲಿ ಉತ್ತರ ಕೊಡಬೇಕು: ಧ್ರುವ ಸರ್ಜಾ