ಮಕ್ಕಳ ಭಿಕ್ಷಾಟನೆ ತಪ್ಪಿಸಿ ಶಾಲೆಗೆ ಕಳಿಸಿಲು ಹೊಸ ಯೋಜನೆ ಸ್ಕೂಲ್ಸ್ ಇನ್ ವೀಲ್ಸ್
ಮಕ್ಕಳು ಭಿಕ್ಷಾಟನೆ ಹಾಗೂ ವ್ಯಾಪಾರದಲ್ಲಿ ತೊಡಗಲು ಕಾರಣವೇನು ಎಂಬುದರ ಬಗ್ಗೆ 5 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ. ಈ ಸಮೀಕ್ಷೆ ಆಧರಿಸಿ ಮಕ್ಕಳಿಗೆ ಸಹಾಯ ಮಾಡಲು ಯೋಜನೆ ರೂಪಿಸಲಾಗುವುದು ಎಂದು ಬಿಬಿಎಂಪಿ ಕಮಿಷನರ್ ಹೇಳಿದ್ದಾರೆ.

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಟ್ರಾಫಿಕ್ ಸಿಗ್ನಲ್ , ಮಾರುಕಟ್ಟೆ , ದೇವಸ್ಥಾನ ಮುಂದೆ ಸಣ್ಣ ಮಕ್ಕಳು , ದೊಡ್ಡವರು ಭಿಕ್ಷೆ ಬೇಡುವ ಪ್ರಕರಣ ಕಂಡು ಬಂದಿದೆ. ಕೋವಿಡ್ ಸಂದರ್ಭದ ಸಂಕಷ್ಟದಲ್ಲಿ ಮಕ್ಕಳು ಶಾಲೆ ಬಿಟ್ಟು ಭಿಕ್ಷೆ , ವ್ಯಾಪಾರಕ್ಕೆ ಇಳಿದಿದ್ದಾರೆ ಎಂದು ಬಿಬಿಎಂಪಿ ಕಮಿಷನರ್ ಮಂಜುನಾಥ ಪ್ರಸಾದ್ ಹೇಳಿದ್ದಾರೆ.
ಮಕ್ಕಳು ಭಿಕ್ಷಾಟನೆ ಹಾಗೂ ವ್ಯಾಪಾರದಲ್ಲಿ ತೊಡಗಲು ಕಾರಣವೇನು ಎಂಬುದರ ಬಗ್ಗೆ 5 ದಿನಗಳ ಕಾಲ ಸಮೀಕ್ಷೆ ನಡೆಯಲಿದೆ. ಈ ಸಮೀಕ್ಷೆ ಆಧರಿಸಿ ಮಕ್ಕಳಿಗೆ ಸಹಾಯ ಮಾಡಲು ಯೋಜನೆ ರೂಪಿಸಲಾಗುವುದು. ಮಕ್ಕಳ ಭಿಕ್ಷಾಟನೆ ತಪ್ಪಿಸಿ ಅವರನ್ನು ಶಿಕ್ಷಣದತ್ತ ಕರೆತರಲು ಸ್ಕೂಲ್ಸ್ ಇನ್ ವೀಲ್ಸ್ ಎಂಬ ಯೋಜನೆಯಡಿ ಮನೆ ಅಂಗಳಕ್ಕೆ ಶಾಲೆ ಬರಲಿದೆ. ವಿಶೇಷ ಆಯುಕ್ತರ ನೇತೃತ್ವದಲ್ಲಿ ಶಾಲೆ ನಡೆಯಲಿದೆ. ಸ್ಕೂಲ್ ಇನ್ ವೀಲ್ಸ್ ಎಂದರೆ ಸಂಚಾರಿ ಶಾಲೆ. ಇಲ್ಲಿ ಅಧ್ಯಾಪಕರು ಮನೆಗಳಿಗೆ ತೆರಳಿ ವಾಹನದಲ್ಲಿಯೇ ಪಾಠ ಹೇಳಿಕೊಡಲಿದ್ದಾರೆ. ಈ ಸಂಚಾರಿ ಶಾಲೆ ಬಸ್ ಸ್ಲಂಗಳಲ್ಲಿ 4 ಗಂಟೆಗಳ ಕಾಲ ಕಳೆಯಲಿದೆ. ನಗರದ 10 ಕಡೆ ಈ ಬಸ್ ಸಂಚರಿಸಲಿದ್ದು ಎಲ್ಲ ಕಡೆ ಈ ಯೋಜನೆ ಮಾಡುವ ಚಿಂತನೆ ಇದೆ ಎಂದಿದ್ದಾರೆ ಬಿಬಿಎಂಪಿ ಕಮಿಷನರ್.
ಲಸಿಕೆ ಫಲಾನುಭವಿಗಳ ಸಂಖ್ಯೆ ಇಳಿಮುಖವಾಗಿರುವ ಬಗ್ಗೆ ಮಾತನಾಡಿದ ಮಂಜುನಾಥ ಪ್ರಸಾದ್ ಅವರು ಈ ಬಗ್ಗೆ ಅಧಿಕಾರಿಗಳನ್ನು ಕರೆದು ವಿಶ್ಲೇಷಣೆ ಮಾಡಿಯಾಗಿದೆ. ಕೋವಿ ಪೋರ್ಟಲ್ ಶೆಡ್ಯೂಲ್ ಮಾಡಬೇಕಿದೆ. ಹಿಂದಿನ ದಿನವೇ ಫಲಾಭವಿಗಳ ಲಿಸ್ಟ್ ರೆಡಿ ಮಾಡಬೇಕಿದೆ ಮತ್ತು ಹೆಲ್ತ್ ಸೆಂಟರ್ಗೂ ಸಹ ಪಟ್ಟಿ ಕಳುಹಿಸಬೇಕಿದೆ ಎಂದ ಅವರು ಫಲಾನುಭವಿಗಳಿಗೆ ಮಾಹಿತಿ ತಲುಪುವುದು ತಡವಾಗಿತ್ತು ಎಂದಿದ್ದಾರೆ.
ಮೂರು ದಿನವೂ ತಡರಾತ್ರಿ 11 ಗಂಟೆಗೆ ನಾಳೆ ಲಸಿಕೆ ಪಡೆಯಿರಿ ಎಂದು ಸಂದೇಶ ತಲುಪಿದೆ. ಹೀಗಾಗಿ ಬೇರೆ ಕೆಲಸ ಇರುವವರು ಲಸಿಕೆ ಪಡೆಯುಲು ಬಂದಿಲ್ಲ. ನಾಳೆಯಿಂದ ಈ ಸಮಸ್ಯೆ ಇರಲ್ಲ. ಲಸಿಕೆ ಪಡೆಯುವ ಒಂದು ದಿನದ ಮುನ್ನ ಫಲಾನುಭವಿಗೆ ಸಂದೇಶ ತಲುಪಲಿದೆ. ನಿನ್ನೆ 20 ಸಾವಿರ ಜನರಿಗೆ ಟಾರ್ಗೆಟ್ ಇತ್ತು , 8 ಸಾವಿರ ಜನ ಮಾತ್ರ ತೆಗೆದುಕೊಂಡರು. ಒಂದು ದಿನದ ಮುಂಚೆಯೇ ಎಲ್ಲರಿಗೂ ಲಸಿಕೆ ಮಾಹಿತಿ ಲಭ್ಯ ಆಗಲಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವರಿಗೂ ಮುಂದಿನ ದಿನ ಲಸಿಕೆ ನೀಡಲಿದ್ದೇವೆ. ಲಸಿಕೆ ಪಡೆಯಲು ನಿರ್ದಿಷ್ಟ ಅವಧಿ ಏನೂ ಇಲ್ಲ. 1.80 ಲಕ್ಷ ಜನರಿಗೆ ಲಸಿಕೆ ಕೊಡಬೇಕಿದೆ. ಪೂರ್ಣ ಪ್ರಮಾಣದಲ್ಲಿ ಲಸಿಕೆಗಳನ್ನು ನೀಡಲು ಬಿಬಿಎಂಪಿ ಬದ್ಧವಾಗಿದೆ ಎಂದು ಮಂಜುನಾಥ ಪ್ರಸಾದ್ ನುಡಿದಿದ್ದಾರೆ.
ಮೆಸೇಜ್ ಇದ್ದರಷ್ಟೇ ಕೊರೊನಾ ಲಸಿಕೆ: 50 ವರ್ಷ ಮೇಲ್ಪಟ್ಟವರ ಮಾಹಿತಿ ಸಂಗ್ರಹಕ್ಕೆ ಮುಂದಾದ ಬಿಬಿಎಂಪಿ
Published On - 1:43 pm, Tue, 19 January 21



