ಬಾಲಕನ‌ ಮೇಲೆ ಕರಡಿ ದಾಳಿ.. ಪ್ರಾಣ ಉಳಿಸಿದ್ದು ಎರಡು ನಾಯಿಗಳು!

ಬೆಳಿಗ್ಗೆ ಜಮೀನಿಗೆ ನೀರು ಬಿಡಲು ಹೋದ ವೇಳೆ ಅಜಾನಕ್ ಆಗಿ ಕರಡಿಯೊಂದು ಓಬಲೇಶ್ ಮೇಲೆ ದಾಳಿ ನಡೆಸಿದೆ. ಈ ವೇಳೆ ದಾಳಿಯನ್ನ ಗಮನಿಸಿದ ಎರಡು ನಾಯಿಗಳು ಕರಡಿ ಮೇಲೆ ದಾಳಿ ನಡೆಸಿ ಕರಡಿಯಿಂದ ಬಾಲಕನನ್ನು ಬಿಡಿಸಿ ರಕ್ಷಣೆ ಮಾಡಿದೆ.

ಬಾಲಕನ‌ ಮೇಲೆ ಕರಡಿ ದಾಳಿ.. ಪ್ರಾಣ ಉಳಿಸಿದ್ದು ಎರಡು ನಾಯಿಗಳು!
ಓಬಲೇಶ್
Follow us
ಆಯೇಷಾ ಬಾನು
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 19, 2021 | 1:48 PM

ದಾವಣಗೆರೆ: ಜಿಲ್ಲೆಯ ಜಗಳೂರು ತಾಲೂಕಿನ ಕಸ್ತೂರಿಪುರದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ. ಬಾಲಕನ‌ ಮೇಲೆ ಕರಡಿ ದಾಳಿ ನಡೆಸಿದ್ದು ನಾಯಿಗಳು ಕರಡಿಯನ್ನು ಓಡಿಸಿ ಬಾಲಕನ ಪ್ರಾಣ ಉಳಿಸಿವೆ. ಓಬಲೇಶ್ (16) ತೀವ್ರ ಗಾಯಗೊಂಡ ಬಾಲಕ.

ಬೆಳಿಗ್ಗೆ ಜಮೀನಿಗೆ ನೀರು ಬಿಡಲು ಹೋದ ವೇಳೆ ಅಚಾನಕ್ ಆಗಿ ಕರಡಿಯೊಂದು ಓಬಲೇಶ್ ಮೇಲೆ ದಾಳಿ ನಡೆಸಿದೆ. ಈ ವೇಳೆ ದಾಳಿಯನ್ನ ಗಮನಿಸಿದ ಎರಡು ನಾಯಿಗಳು ಕರಡಿ ಮೇಲೆ ದಾಳಿ ನಡೆಸಿ ಕರಡಿಯಿಂದ ಬಾಲಕನನ್ನು ಬಿಡಿಸಿ ರಕ್ಷಣೆ ಮಾಡಿವೆ.

ನಾಯಿ ದಾಳಿಗೆ ಓಬಲೇಶ್​ನನ್ನು ಬಿಟ್ಟು ಕರಡಿ ಕಾಡಿನತ್ತ ಓಡಿ ಹೋಗಿದೆ. ಸದ್ಯ ನಾಯಿಗಳ ಸಮಯ ಪ್ರಜ್ಞೆಯಿಂದ ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಾಲಕನಿಗೆ ಗಾಯಗಳಾಗಿದ್ದು ಜಗಳೂರು ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೀದಿ ನಾಯಿಗಳ ಹಾವಳಿಗೆ ತತ್ತರಿಸಿದ ಮೊಳಕಾಲ್ಮೂರು ಜನ!

Published On - 1:36 pm, Tue, 19 January 21