ಕಾಂಗರೂಗಳ ಬಾಲ ಕಟ್; 4ನೇ ಟೆಸ್ಟ್​ ಗೆದ್ದುಬೀಗಿದ ಭಾರತ: ಸರಣಿಯೂ ಬ್ಲೂ ಬಾಯ್ಸ್​ ಮಡಿಲಿಗೆ!

138 ಎಸೆತಗಳಲ್ಲಿ 89 ರನ್​ ಗಳಿಸಿ ಅಜೇಯರಾದ ರಿಷಬ್​ ಪಂತ್​ ಮತ್ತು 146 ಎಸೆತಗಳಲ್ಲಿ 91 ರನ್​ ಗಳಿಸಿದ ಶುಭ್​ಮನ್​ ಗಿಲ್​ ಎಲ್ಲರ ಗಮನ ಸೆಳೆದಿದ್ದಾರೆ. ಈ ಗೆಲುವಿನ ಮೂಲಕ ಟೆಸ್ಟ್​ ಸರಣಿ ಭಾರತದ ಪಾಲಾಗಿದೆ.

ಕಾಂಗರೂಗಳ ಬಾಲ ಕಟ್; 4ನೇ ಟೆಸ್ಟ್​ ಗೆದ್ದುಬೀಗಿದ ಭಾರತ: ಸರಣಿಯೂ ಬ್ಲೂ ಬಾಯ್ಸ್​ ಮಡಿಲಿಗೆ!
ಆಸಿಸ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಗೆದ್ದು ಬೀಗಿದ ಭಾರತ
Follow us
Skanda
| Updated By: ಸಾಧು ಶ್ರೀನಾಥ್​

Updated on:Jan 19, 2021 | 3:38 PM

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಭಾರತ ವಿಜಯ ಸಾಧಿಸಿದೆ. ಕಾಂಗರೂ ಪಡೆ ನೀಡಿದ್ದ 328 ರನ್​ಗಳ ಗುರಿಯನ್ನು ಬೆನ್ನತ್ತಿದ ಭಾರತ 2ನೇ ಇನ್ನಿಂಗ್ಸ್​ನಲ್ಲಿ ಅತ್ಯುತ್ತಮ ಪ್ರದರ್ಶನ ತೋರಿಸಿ ಗೆಲುವು ದಕ್ಕಿಸಿಕೊಂಡಿದೆ. ಇನ್ನೂ 18 ಎಸೆತಗಳು ಬಾಕಿ ಇರುವಾಗಲೇ ಗೆಲುವಿನ ದಡ ಮುಟ್ಟಿದೆ. ಗೆಲ್ಲಲು 25 ಎಸೆತಕ್ಕೆ 10 ರನ್​ ಬಾಕಿ ಇರುವಾಗ ವಾಷಿಂಗ್ಟನ್​ ಸುಂದರ್​ ನಿರ್ಗಮಿಸಿದರಾದರೂ, ಅನಂತರ ಬಂದ ಶಾರ್ದೂಲ್​ ಠಾಕೂರ್, ರಿಷಬ್​ ಪಂತ್​ಗೆ ಸಾಥ್​ ನೀಡಿದರು.

138 ಎಸೆತಗಳಲ್ಲಿ 89 ರನ್​ ಗಳಿಸಿ ಅಜೇಯರಾದ ರಿಷಬ್​ ಪಂತ್​ ಮತ್ತು 146 ಎಸೆತಗಳಲ್ಲಿ 91 ರನ್​ ಗಳಿಸಿದ ಶುಭ್​ಮನ್​ ಗಿಲ್​ ಎಲ್ಲರ ಗಮನ ಸೆಳೆದಿದ್ದಾರೆ. ಈ ಗೆಲುವಿನ ಮೂಲಕ ಟೆಸ್ಟ್​ ಸರಣಿ ಭಾರತದ ಪಾಲಾಗಿದೆ. ವಿಶೇಷವೆಂದರೆ ಬ್ರಿಸ್ಬೇನ್​ನ ಗಬ್ಬಾ ಕ್ರೀಡಾಂಗಣದಲ್ಲಿ 32 ವರ್ಷಗಳ ಬಳಿಕ ಆಸ್ಟ್ರೇಲಿಯಾ ತಂಡ ಮಣ್ಣು ಮುಕ್ಕಿದೆ.

ಸರಣಿಯುದ್ದಕ್ಕೂ ಸ್ಲೆಡ್ಜಿಂಗ್ (Sledging) ​ ಮೂಲಕ ಭಾರತದ ಆಟಗಾರರರನ್ನು ಗೋಳು ಹೊಯ್ದುಕೊಂಡಿದ್ದ ಆಸ್ಟ್ರೇಲಿಯಾದ ಆಟಗಾರರಿಗೆ ಸರಣಿ ಸೋಲು ಉಣಿಸುವ ಮೂಲಕ ಭಾರತೀಯ ಆಟಗಾರರು ಸರಿಯಾಗಿ ನೀರು ಕುಡಿಸಿದ್ದಾರೆ.

ಪ್ರಧಾನ ಮಂತ್ರಿಗಳಿಂದ ಅಭಿನಂದನೆ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ವಿಜಯ ಸಾಧಿಸಿರುವ ಭಾರತ ತಂಡಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶುಭ ಕೋರಿದ್ದಾರೆ. ಪಂದ್ಯದುದ್ದಕ್ಕೂ ಭಾರತೀಯ ಆಟಗಾರರು ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ.

ಈ ಸರಣಿಯಲ್ಲಿ ಭಾರತ ತಂಡದ ಆಟಗಾರರು ತೋರಿದ ಉತ್ಸಾಹ ಮತ್ತು ಗೆಲುವಿನೆಡೆಗೆ ಸಾಗಿದ ಪರಿ ನಿಜಕ್ಕೂ ಅಭಿನಂದನೀಯ ಎಂದು ಬಣ್ಣಿಸಿರುವ ಮೋದಿ, ಟ್ವೀಟ್​ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.

Published On - 1:08 pm, Tue, 19 January 21