ಅಂಬರೀಷ್ ಪ್ರೀತಿಯ ‘ಕನ್ವರ್’ ನಿಧನ; ಈ ಶ್ವಾನವನ್ನು ಗಿಫ್ಟ್ ಆಗಿ ಕೊಟ್ಟಿದ್ದು ಕನ್ನಡದ ಸ್ಟಾರ್ ನಟ
ಕನ್ವರ್ ಮೇಲೆ ಅಭಿಷೇಕ್ಗೆ ವಿಶೇಷ ಕಾಳಜಿ ಇತ್ತು. ಅವರು ಮುದ್ದಿನಿಂದ ಅದನ್ನು ಸಾಕಿದ್ದರು. ಅಭಿಷೇಕ್ ಮಾಸ್ಟರ್ ಮಾಡೋಕೆ ಲಂಡನ್ಗೆ ತೆರಳಿದಾಗ ಕನ್ವರ್ ಊಟ್ ಮಾಡುವುದನ್ನೇ ನಿಲ್ಲಿಸಿದ್ದ.
ಅಂಬರೀಷ್ ಶ್ವಾನ ಪ್ರಿಯರು. ಹೀಗಾಗಿ, ಅವರು ನಾಯಿಗಳನ್ನು ಸಾಕೋಕೆ ಇಷ್ಟಪಡುತ್ತಿದ್ದರು. ಕನ್ವರ್ ಹಾಗೂ ಬುಲ್ಬುಲ್ ಹೆಸರಿನ ಎರಡು ಶ್ವಾನಗಳನ್ನು ಸಾಕಿದ್ದರು. ವಿಶೇಷ ಎಂದರೆ ಈ ಎರಡೂ ನಾಯಿಗಳಿಗೆ ಹೆಸರಿಟ್ಟಿದ್ದು ಅಂಬಿ ಮಗ ಅಭಿಷೇಕ್. ಹಾಗಾದರೆ ಇವುಗಳನ್ನು ಕೊಟ್ಟಿದ್ದು ಯಾರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.
ಕನ್ವರ್ ಹೆಸರಿನ ಶ್ವಾನವನ್ನು ನೀಡಿದ್ದು ರಿಯಲ್ ಸ್ಟಾರ್ ಉಪೇಂದ್ರ. ಅಂಬರೀಷ್ ಅವರು ಪ್ರಾಣಿ ಪ್ರಿಯರು ಎಂದು ಅರಿತಿದ್ದ ಉಪೇಂದ್ರ ಈ ಶ್ವಾನವನ್ನು ನೀಡಿದ್ದರು. ಎರಡು ವರ್ಷಗಳ ನಂತರ ಬಂದಿದ್ದು ಬುಲ್ಬುಲ್. ಇದಕ್ಕೆ ಹೆಸರಿಟ್ಟಿದ್ದು, ಕೂಡ ಅಭಿಷೇಕ್. ‘ನಾಗರಹಾವು’ ಸಿನಿಮಾದಲ್ಲಿ ಅಂಬರೀಷ್ ಹೇಳುವ ‘ಏನ್ ಬುಲ್ಬುಲ್ ಮಾತಾಡಕಿಲ್ವಾ?’ ಡೈಲಾಗ್ ಭಾರೀ ಫೇಮಸ್ ಆಗಿತ್ತು. ಹೀಗಾಗಿ, ಬುಲ್ಬುಲ್ ಎಂದು ಹೆಸರಿಡಲಾಗಿತ್ತು.
ಅಂಬರೀಷ್ ಫೇವರೆಟ್ ಶ್ವಾನ:
ಅಂಬರೀಷ್ ಬದುಕಿರುವಾಗ ಕನ್ವರ್ ಶ್ವಾನ ಅಂಬಿಗೆ ಮೋಸ್ಟ್ ಫೇವರಿಟ್ ಆಗಿತ್ತು. ಅಲ್ಲದೇ ಅಂಬರೀಷ್ ಅವರು ಕನ್ವರ್‌ನನ್ನು ಪ್ರತಿದಿನ ವಾಕಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಈ ಶ್ವಾನ ಅಂಬರೀಷ್ ಅವರನ್ನು ತುಂಬಾನೇ ಹಚ್ಚಿಕೊಂಡಿತ್ತು. 2018ರ ನವೆಂಬರ್ 24ರಂದು ಅಂಬರೀಶ್ ಮೃತಪಟ್ಟಿದ್ದರು. ಅಂಬಿ ಅಗಲಿದ ಕ್ಷಣ ಈ ಶ್ವಾನ ಊಟ ಕೂಡ ಮಾಡದೇ ಕಂಬನಿ ಸುರಿಸುತ್ತಿತ್ತು. ಕನ್ವರ್ ಕೂಡ ಅಂಬಿಯನ್ನು ಹಚ್ಚಿಕೊಂಡಿತ್ತು. ಅಂಬರೀಷ್ ಮೃತಪಟ್ಟ ನಂತರ ಕನ್ವರ್ ಅಷ್ಟಾಗಿ ಆ್ಯಕ್ಟಿವ್ ಆಗಿರಲಿಲ್ಲ. ಇದೀಗ ಅಂಬಿ ಪ್ರೀತಿಯ ಕನ್ವರ್ ಇಹಲೋಕ ತ್ಯಜಿಸಿದೆ.
ಅಭಿ ದೇವರಾಗಿದ್ದರು!
ಕನ್ವರ್ ಮೇಲೆ ಅಭಿಷೇಕ್ಗೆ ವಿಶೇಷ ಕಾಳಜಿ ಇತ್ತು. ಅವರು ಮುದ್ದಿನಿಂದ ಅದನ್ನು ಸಾಕಿದ್ದರು. ಅಭಿಷೇಕ್ ಮಾಸ್ಟರ್ ಮಾಡೋಕೆ ಲಂಡನ್ಗೆ ತೆರಳಿದಾಗ ಕನ್ವರ್ ಊಟ್ ಮಾಡುವುದನ್ನೇ ನಿಲ್ಲಿಸಿದ್ದ. ಎಲ್ಲವನ್ನೂ ಒತ್ತಾಯಪೂರ್ವಕವಾಗಿ ಅವನಿಗೆ ನೀಡಬೇಕಿತ್ತು. ಅಭಿ ವಾಪಾಸಾದ ನಂತರ ಆತ ಮತ್ತೆ ಊಟ ಮಾಡಲು ಆರಂಭಿಸಿದ್ದ. ಅಭಿ ಎಂದರೆ ಕನ್ವರ್ಗೆ ದೇವರು.
ಹೂವಿ ಹಾಕಿ ಅಂತ್ಯ ಸಂಸ್ಕಾರ:
ಅಂಬಿ ಪರಮಾಪ್ತರಾಗಿದ್ದ ಶ್ರೀನಿವಾಸ್, ಕನ್ವರ್ ಫೋಟೊಗಳನ್ನ ಹಂಚಿಕೊಂಡಿದ್ದಾರೆ. ಕನ್ವರ್ ನಿಧನಕ್ಕೆ ಕುಟುಂಬವರ್ಗವೂ ಬೇಸರದಲ್ಲಿದೆ ಎಂದಿದ್ದಾರೆ. ಈ ವಿಚಾರ ಕೇಳಿ ಅಂಬಿ ಅಭಿಮಾನಿಗಳು ಕೂಡ ಬೇಸರ ಹೊರ ಹಾಕಿದ್ದಾರೆ. ಈ ಶ್ವಾನಕ್ಕೆ ಹೂವು ಹಾಕಿ ಅಂತ್ಯ ಸಂಸ್ಕಾರ ಮಾಡಲಾಗಿದೆ.
ಕೊನೆವರೆಗೂ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದ ಅಂಬಿ
ಅಂಬರೀಷ್ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಛಾಪು ಮೂಡಿಸಿದ್ದರು. ಕೊನೆಯದಿನದವರೆಗೂ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು. 2018ರ ನವೆಂಬರ್ 24ರಂದು ಅವರು ಮೃತಪಟ್ಟ ನಂತರ ಇಡೀ ಚಿತ್ರರಂಗ ಕಂಬನಿ ಮಿಡಿದಿತ್ತು. ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿತ್ತು.
ಇದನ್ನೂ ಓದಿ: ಅಂಬರೀಷ್ ಮೃತಪಟ್ಟಾಗ ಊಟ ಬಿಟ್ಟಿದ್ದ ಅವರ ಮನೆಯ ಪ್ರೀತಿಯ ಶ್ವಾನ ಕನ್ವರ್ ನಿಧನ
Published On - 6:03 pm, Mon, 24 May 21