KGF Chapter 2: ‘ಕೆಜಿಎಫ್ 2’ ಚಿತ್ರ ತಂಡದಿಂದ ಮಹತ್ವದ ನಿರ್ಧಾರ; ಅಭಿಮಾನಿಗಳಿಗೆ ಖುಷಿಯೋ, ಬೇಸರವೋ?
KGF Chapter 2 Release Date: ಈಗತಾನೇ ಚೇತರಿಕೆ ಕಾಣುತ್ತಿದ್ದ ಸ್ಯಾಂಡಲ್ವುಡ್ಗೆ ಎರಡನೇ ಅಲೆ ಹೊಡೆತ ನೀಡಿದೆ. ಕೊರೊನಾ ಹರಡುತ್ತಿರುವ ವೇಗ ನೋಡಿದರೆ, ಸದ್ಯಕ್ಕಂತೂ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ.
ಕೊವಿಡ್ ಎರಡನೇ ಅಲೆ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಜೂನ್-ಜುಲೈ ವೇಳೆಗೆ ಎರಡನೇ ಅಲೆ ತಣ್ಣಗಾಗಬಹುದು ಎಂಬುದು ತಜ್ಞರ ಮಾಹಿತಿ. ಸದ್ಯ, ಯಾವಾಗ ಲಾಕ್ಡೌನ್ ಪೂರ್ಣಗೊಳ್ಳಲಿದೆ, ಯಾವಾಗ ಎಲ್ಲವೂ ಮೊದಲಿನಂತಾಗಲಿದೆ ಎಂಬುದನ್ನು ಈಗಲೇ ಹೇಳುವುದು ಕಷ್ಟ. ಹೀಗಿರುವಾಗಲೇ ಕೆಜಿಎಫ್-2 ರಿಲೀಸ್ ದಿನಾಂಕ ಮುಂದೂಡಲ್ಪಡಲಿದೆಯೇ ಅಥವಾ ಇಲ್ಲವೇ ಎನ್ನುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿದೆ.
ಭಾರತದಲ್ಲಿ ಕೊರೊನಾ ಒಂದನೇ ಅಲೆ ದೊಡ್ಡ ಮಟ್ಟದಲ್ಲಿ ಹಾವಳಿ ಸೃಷ್ಟಿಮಾಡಿತ್ತು. ಎಲ್ಲವೂ ತಣ್ಣಗಾಯಿತು ಎನ್ನುವಾಗಲೇ ಕೊರೊನಾ ಎರಡನೇ ಅಲೆ ಕಾಣಿಸಿಕೊಂಡಿದೆ. ಮೊದಲನೇ ಅಲೆಗಿಂತ ಭೀಕರವಾಗಿ ಎರಡನೇ ಅಲೆ ಜನರ ಜೀವ ಹಿಂಡುತ್ತಿದೆ. ಕೊರೊನಾ ನಿಯಂತ್ರಣಕ್ಕೆ ಸಿನಿಮೋದ್ಯಮ ಸೇರಿ ಬಹುತೇಕ ಎಲ್ಲಾ ಆರ್ಥಿಕ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ.
ಈಗತಾನೇ ಚೇತರಿಕೆ ಕಾಣುತ್ತಿದ್ದ ಸ್ಯಾಂಡಲ್ವುಡ್ಗೆ ಎರಡನೇ ಅಲೆ ಹೊಡೆತ ನೀಡಿದೆ. ಕೊರೊನಾ ಹರಡುತ್ತಿರುವ ವೇಗ ನೋಡಿದರೆ, ಸದ್ಯಕ್ಕಂತೂ ನಿಯಂತ್ರಣಕ್ಕೆ ಬರುವ ಲಕ್ಷಣ ಕಾಣುತ್ತಿಲ್ಲ. ಒಂದೊಮ್ಮೆ ಜೂನ್, ಜುಲೈ ವೇಳೆಗೆ ಕೊರೊನಾ ನಿಯಂತ್ರಣಕ್ಕೆ ಬಂದು ಚಿತ್ರಮಂದಿರಗಳು ಮತ್ತೆ ತೆರೆದುಕೊಂಡರೂ ಜನರು ಒಮ್ಮೆಲೇ ಸಿನಿಮಾ ನೋಡೋಕೆ ಆಸಕ್ತಿ ತೋರುವುದು ಅನುಮಾನವೇ.
ಹಾಗಾದರೆ ಕೆಜಿಎಫ್-2 ರಿಲೀಸ್ ದಿನಾಂಕದ ಕಥೆ? ಈ ಬಗ್ಗೆ ಚಿತ್ರ ವಿಶ್ಲೇಷಕ ಕೌಶಿಕ್ ಮಾಹಿತಿ ನೀಡಿದ್ದಾರೆ. ಕೆಜಿಎಫ್ ಚಾಪ್ಟರ್-2 ಪೋಸ್ಟ್ ಪ್ರೊಡಕ್ಷನ್ ಬಹುತೇಕ ಪೂರ್ಣಗೊಂಡಿದೆ. ದೇಶದಲ್ಲಿ ಚಿತ್ರಮಂದಿರ ರೀ-ಓಪನ್ ಆಗುವುದನ್ನು ಆಧರಿಸಿ ಸಿನಿಮಾ ರಿಲೀಸ್ ದಿನಾಂಕ ನಿಗದಿ ಆಗಲಿದೆ. ಜುಲೈ 16ಕ್ಕೆ ಕೆಜಿಎಫ್-2 ರಿಲೀಸ್ ಮಾಡಲು ಚಿತ್ರತಂಡ ನಿರ್ಧರಿಸಿದ್ದು ನಿಜ. ಆದರೆ, ಕೊರೊನಾ ಎರಡನೇ ಅಲೆ ನಿರಂತರವಾಗಿ ಹಬ್ಬುತ್ತಿದೆ. ಚಿತ್ರಮಂದಿರಗಳಲ್ಲಿ ಹೌಸ್ಫುಲ್ಗೆ ಅವಕಾಶ ನೀಡದೇ ಇದ್ದರೆ ಸಹಜವಾಗಿಯೇ ಸಿನಿಮಾ ರಿಲೀಸ್ ದಿನಾಂಕ ಮುಂದೂಡಲ್ಪಡಲಿದೆ ಎಂದು ಅವರು ಬರೆದುಕೊಂಡಿದ್ದಾರೆ.
#Yash‘s #KGF2 #KGFChapter2 entire post-production is almost done. The team will finalize the release date based on theaters reopening across the country, after this lockdown. Since it’s gonna be a huge pan-Indian release, the situation has to be conducive all over India
— Kaushik LM (? #StaySafe) (@LMKMovieManiac) May 24, 2021
ಕೆಜಿಎಫ್-2 ದೊಡ್ಡ ಬಜೆಟ್ನಲ್ಲಿ ಸಿದ್ಧಗೊಳ್ಳುತ್ತಿರುವ ಸಿನಿಮಾ. ಅಲ್ಲದೆ, ಇದರ ಮೇಲೆ ನಿರೀಕ್ಷೆ ಕೂಡ ಹೆಚ್ಚಿದೆ. ಹೀಗಾಗಿ, ಈ ‘ಕೆಜಿಎಫ್ 2’ ನಿರ್ಮಾಪಕರು ತರಾತುರಿಯಲ್ಲಿ ಸಿನಿಮಾ ರಿಲೀಸ್ ಮಾಡುವ ನಿರ್ಧಾರಕ್ಕೆ ಬರುವುದಿಲ್ಲ. ನೇರವಾಗಿ ಒಟಿಟಿಯಲ್ಲಿ ಚಿತ್ರ ರಿಲೀಸ್ ಮಾಡುವ ಸಾಧ್ಯತೆ ಕೂಡ ಕಡಿಮೆಯೇ.
ಇದನ್ನೂ ಓದಿ: ಕೆಜಿಎಫ್ 2 ಸಿನಿಮಾ ಅವಧಿ ಬರೋಬ್ಬರಿ 3 ಗಂಟೆ ಇದೆಯಾ? ಕೇಳಿಬರ್ತಿದೆ ಹೊಸ ಗುಸುಗುಸು
Published On - 7:53 pm, Mon, 24 May 21