AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep: ಗುರುಗಳಿಗೆ ಕಿಚ್ಚನ ನಮನ; ಸಂಕಷ್ಟದಲ್ಲಿರುವ 50 ಶಿಕ್ಷಕರಿಗೆ ನೆರವಾಗಲು ಸುದೀಪ್ ನಿರ್ಧಾರ

ಅವಶ್ಯಕತೆ ಇರುವ ಶಿಕ್ಷಕರಿಗೆ 2000 ರೂಪಾಯಿ ಧನ ಸಹಾಯ ಮಾಡಲು ಸುದೀಪ್ ನಿರ್ಧರಿಸಿದ್ದಾರೆ. ಈ ಕಾರ್ಯಕ್ಕೆ 50 ಜನ ಶಿಕ್ಷಕರನ್ನು ಆಯ್ಕೆ ಮಾಡಲು ತೀರ್ಮಾನ ಮಾಡಿದ್ದಾರೆ.

Kichcha Sudeep: ಗುರುಗಳಿಗೆ ಕಿಚ್ಚನ ನಮನ; ಸಂಕಷ್ಟದಲ್ಲಿರುವ 50 ಶಿಕ್ಷಕರಿಗೆ ನೆರವಾಗಲು ಸುದೀಪ್ ನಿರ್ಧಾರ
ಕಿಚ್ಚ ಸುದೀಪ್
TV9 Web
| Edited By: |

Updated on:Aug 21, 2021 | 9:51 AM

Share

ಬೆಂಗಳೂರು: ಸಂಕಷ್ಟದಲ್ಲಿರುವ 50 ಶಿಕ್ಷಕರಿಗೆ ನೆರವಾಗಲು ಸುದೀಪ್ ನಿರ್ಧರಿಸಿದ್ದಾರೆ. ಅವಶ್ಯಕತೆ ಇರುವ ಶಿಕ್ಷಕರಿಗೆ ತಲಾ 2 ಸಾವಿರ ರೂಪಾಯಿ ನೀಡಲು ಕಿಚ್ಚ ಸುದೀಪ್ ತೀರ್ಮಾನಿಸಿದ್ದಾರೆ. ಇದಕ್ಕೂ ಮೊದಲು ಸುದೀಪ್ ಕನ್ನಡ ಚಲನಚಿತ್ರ ರಂಗದ ಹಿರಿಯ ಕಲಾವಿದರಿಗೆ ನೆರವು ನೀಡಿದ್ದರು. ಕೊರೊನಾ ಲಾಕ್​ಡೌನ್ ಸಂದರ್ಭದಲ್ಲಿ ಸಂಕಷ್ಟದಲ್ಲಿ ಇರುವ ಕಲಾವಿದರಿಗೆ ಸುದೀಪ್ ಸಹಾಯ ಮಾಡಿದ್ದರು.

ಇದೀಗ ಅವಶ್ಯಕತೆ ಇರುವ ಶಿಕ್ಷಕರಿಗೆ 2000 ರೂಪಾಯಿ ಧನ ಸಹಾಯ ಮಾಡಲು ಸುದೀಪ್ ನಿರ್ಧರಿಸಿದ್ದಾರೆ. ಈ ಕಾರ್ಯಕ್ಕೆ 50 ಜನ ಶಿಕ್ಷಕರನ್ನು ಆಯ್ಕೆ ಮಾಡಲು ತೀರ್ಮಾನ ಮಾಡಿದ್ದಾರೆ. ಅರ್ಹ ಶಿಕ್ಷಕರಿಗೆ ನೆರವು ಸಿಗಬೇಕು ಎಂಬ ಕಾರಣಕ್ಕೆ ಈ ಕಾರ್ಯಕ್ಕೆ ನಿಬಂಧನೆಗಳಿವೆ ಎಂದು ಪೋಸ್ಟ್​ನಲ್ಲಿ ನಮೂದಿಸಲಾಗಿದೆ. ಹೀಗಾಗಿ ಅರ್ಹ ಶಿಕ್ಷಕರನ್ನು ಪರೀಶೀಲಿಸಿ ಸಹಾಯ ಮಾಡಲು ಕಿಚ್ಚನ ತಂಡ ತಯಾರಾಗಿದೆ. ಗುರುಗಳಿಗೆ ಕಿಚ್ಚನ ನಮನ ಎಂದು ನೆರವಾಗಲು ಸುದೀಪ್ ಸಿದ್ಧರಾಗಿದ್ದಾರೆ.

ಕಿಚ್ಚ ಸುದೀಪ್​ ಚಾರಿಟೆಬಲ್ ಟ್ರಸ್ಟ್​ ವತಿಯಿಂದ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಾಗುತ್ತಿದೆ. ಈಗ ಸ್ಯಾಂಡಲ್​ವುಡ್ ಹಿರಿಯ ಪೋಷಕ ನಟ ಮತ್ತು ನಟಿಯರ ಆರೋಗ್ಯ ವಿಚಾರಿಸಿ ಫುಡ್ ಕಿಟ್ ವಿತರಣೆ ಮಾಡಿದ್ದರು. ಈ ಕಿಟ್​ನಲ್ಲಿ ಕಿಚ್ಚ ಸುದೀಪ್ ಅವರ ಒಂದು ಪತ್ರವಿದೆ. ಈ ಪತ್ರದಲ್ಲಿ ‘ನನ್ನ ಕುಟುಂಬದ ಹಿರಿಯರು ನೀವು, ನೀವೆಲ್ಲ ಹೇಗಿದ್ದೀರಿ? ಪ್ರೀತಿಯಿಂದ ನಿಮ್ಮ ಕಿಚ್ಚ ಸುದೀಪ’ ಎಂದು ಬರೆಯಲಾಗಿತ್ತು.

ಕನ್ನಡದ ನೂರಕ್ಕೂ ಹೆಚ್ಚು ಪೋಷಕ ಕಲಾವಿದರಿಗೆ ಕಿಚ್ಚನ ಯೋಗಕ್ಷೇಮದ ಪತ್ರ ತಲುಪಿತ್ತು. ಜತೆಗೆ ಅಗತ್ಯವಿರುವ ರೇಷನ್​ ಕಿಟ್​ ಕೂಡ ಅವರ ಮನೆ ಸೇರಿತ್ತು. ಸದ್ಯ, ಕಿಚ್ಚ ಸುದೀಪ್​ ಮಾಡಿದ ಕೆಲಸಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸಹಾಯ ಕೇಳಿಕೊಂಡು ಬಂದವರಿಗೆ ತಮ್ಮ ಕೈಲಾದ ನೆರವನ್ನು ನೀಡುವುದು ಸುದೀಪ್​ ಜಾಯಮಾನ. ಇತ್ತೀಚೆಗೆ ಅವರು ಬಿಗ್ ಬಾಸ್​ ಸೀಸನ್​ 6ರ ಸ್ಪರ್ಧಿ ಸೋನು ಪಾಟೀಲ್​ಗೆ ಸಹಾಯ ಮಾಡಿದ್ದರು. ಸೋನು ಪಾಟೀಲ್​ ಅವರ ತಾಯಿಗೆ ತೀವ್ರ ಅನಾರೋಗ್ಯವಾಗಿದ್ದು, ಅವರ ಚಿಕಿತ್ಸೆಗೆ ಸುದೀಪ್​ ಲಕ್ಷಾಂತರ ರೂಪಾಯಿ ನೀಡಿದ್ದರು. ಈ ವಿಷಯವನ್ನು ವಿಡಿಯೋ ಮೂಲಕ ಸ್ವತಃ ಸೋನು ಪಾಟೀಲ್​ ಹೇಳಿಕೊಂಡಿದ್ದರು.

‘ಧನ್ಯವಾದಗಳು ಅಣ್ಣ. ಯಾಕೆಂದರೆ ಈ ಸಮಯದಲ್ಲಿ ದುಡ್ಡು ಹೊಂದಿಸುವುದು ನಮಗೆ ಬಹಳ ಕಷ್ಟ ಆಗುತ್ತಿತ್ತು. ನನಗೆ ಏನು ಹೇಳಬೇಕು ಎಂಬುದು ತಿಳಿಯುತ್ತಿಲ್ಲ. ನಾನು ಸಾಯುವವರೆಗೆ ನಿಮ್ಮ ಋಣವನ್ನು ಮರೆಯುವುದಿಲ್ಲ. ಇವತ್ತಿನ ಸಂದರ್ಭದಲ್ಲಿ ಯಾರ ಬಳಿಯೂ ದುಡ್ಡು ಇಲ್ಲ. ದುಡ್ಡು ಇದ್ದವರು ಕೊಡಲು ಮುಂದೆ ಬರುವುದಿಲ್ಲ. ಎಲ್ಲರೂ ಕೈಬಿಟ್ಟರೂ ಸುದೀಪ್​ ಅಣ್ಣ ನಮ್ಮ ಕೈ ಬಿಡಲಿಲ್ಲ. ಫ್ಯಾಮಿಲಿ ಎಂದು ಹೇಳಿದ್ದರು. ಇಂದಿಗೂ ಅದೇ ರೀತಿ ನಡೆದುಕೊಳ್ಳುತ್ತಿದ್ದಾರೆ. ನನಗೆ ಮಾತ್ರವಲ್ಲ, ಕೊವಿಡ್​ ಸಂದರ್ಭದಲ್ಲಿ ಕಷ್ಟಪಡುತ್ತಿರುವ ಅನೇಕರಿಗೆ ಸುದೀಪ್​ ಚಾರಿಟೆಬಲ್​ ಟ್ರಸ್ಟ್​ನಿಂದ ಸಹಾಯ ಮಾಡುತ್ತಿದ್ದಾರೆ. ನನ್ನ ಆಯಷ್ಯವನ್ನೂ ಆ ದೇವರು ನಿಮಗೆ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ ಅಣ್ಣ’ ಎಂದು ಸೋನು ಪಾಟೀಲ್​ ಹೇಳಿದ್ದರು.

ಇದನ್ನೂ ಓದಿ: Kichcha Sudeep: ವೀಕೆಂಡ್​ನಲ್ಲಿ ಮತ್ತೆ ಬಿಗ್​ ಬಾಸ್​ ಸ್ಪರ್ಧಿಗಳ ಜೊತೆ ಕಾಣಿಸಿಕೊಳ್ಳಲಿರುವ ಸುದೀಪ್; ಕಾರಣ ಏನು?

Kotigobba 3: ದರ್ಶನ್​ಗೆ ಹೀರೋಯಿನ್​ ಆಗಿದ್ದ ನಟಿಗೆ ಈಗ ಸುದೀಪ್ ತಾಯಿ ಪಾತ್ರ?

Published On - 6:37 pm, Tue, 25 May 21

ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಮೋದಿಯಿಂದ ಆದಂಪುರ ವಿಮಾನ ನಿಲ್ದಾಣಕ್ಕೆ ಸಂತ ರವಿದಾಸ್ ಎಂದು ಮರುನಾಮಕರಣ
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಪಕ್ಕದಲ್ಲಿ ಬೋರ್​ವೆಲ್ ಕೊರೆದಿದ್ದಕ್ಕೆ ಮನೆಯ ನೆಲವನ್ನೂ ಸೀಳಿ ಚಿಮ್ಮಿದ ನೀರು
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಬೋಗಸ್ ಮಾಡವ್ರೆ, ಯಶ್ ಹೆಸರು ಹಾಳು ಮಾಡ್ತಾವ್ರೆ: ಯಶ್ ತಾಯಿ ಆರೋಪ
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ಫಿಲಂ ಚೇಂಬರ್ ನೂತನ ಅಧ್ಯಕ್ಷೆ ಜಯಮಾಲ ಹಾಕಿಕೊಂಡಿರುವ ಯೋಜನೆಗಳೇನು?
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ದೇವದತ್ ಪಡಿಕ್ಕಲ್ ಶತಕ; ಕ್ವಾರ್ಟರ್ ಫೈನಲ್​ಗೇರಿದ ಕರ್ನಾಟಕ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಮದ್ವೆಯಾಗಿ 5 ವರ್ಷವಾದರೂ ಅವ್ನ ಕೈಯಲ್ಲಿ ಮಗು ಮಾಡಿಕೊಳ್ಳಲಾಗಿಲ್ಲ
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಕೇಂದ್ರ ಬಜೆಟ್ ಬಗ್ಗೆ ವ್ಯಂಗ್ಯ ಮಾಡುತ್ತಲ್ಲೇ ಕಟುವಾಗಿ ಟೀಕಿಸಿದ ಸಿಎಂ!
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಆಸ್ಟ್ರೇಲಿಯನ್ ಓಪನ್ ಗೆದ್ದು ಇತಿಹಾಸ ನಿರ್ಮಿಸಿದ ಕಾರ್ಲೋಸ್ ಅಲ್ಕರಾಝ್
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಚಿಮುಲ್ ಚುನಾವಣೆ: ಮತದಾರರಿಗೆ ಲಕ್ಷ ಲಕ್ಷ ನಗದು, ಬೆಳ್ಳಿ ತಟ್ಟೆ!
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ
ಟ್ಯಾಕ್ಸ್‌ ಟೆರರಿಸಂ: ಐಟಿ ದಾಳಿ ವಿರುದ್ಧ ತಿರುಗಿಬಿದ್ದ ಮೋಹನ್ ದಾಸ್ ಪೈ