ಅಂಬರೀಷ್ ಮೃತಪಟ್ಟಾಗ ಊಟ ಬಿಟ್ಟಿದ್ದ ಅವರ ಮನೆಯ ಪ್ರೀತಿಯ ಶ್ವಾನ ಕನ್ವರ್‌ ನಿಧನ

ಅಂಬರೀಷ್ ಬದುಕಿರುವಾಗ ಕನ್ವರ್‌ ಶ್ವಾನ ಅಂಬಿಗೆ ಮೋಸ್ಟ್ ಫೇವರಿಟ್ ಆಗಿತ್ತು. ಅಲ್ಲದೇ ಅಂಬರೀಷ್ ಅವರು ಕನ್ವರ್‌ನನ್ನು ಪ್ರತಿದಿನ ವಾಕಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದರು.

ಅಂಬರೀಷ್ ಮೃತಪಟ್ಟಾಗ ಊಟ ಬಿಟ್ಟಿದ್ದ ಅವರ ಮನೆಯ ಪ್ರೀತಿಯ ಶ್ವಾನ ಕನ್ವರ್‌ ನಿಧನ
ಅಂಬರೀಷ್​ ಜತೆ ಕನ್ವರ್​ಲಾಲ್​

ನಟ ಅಂಬರೀಷ್​ ತಾವು ಸಾಕಿದ ಕನ್ವರ್‌ ಹೆಸರಿನ ನಾಯಿಯನ್ನು ತುಂಬಾನೇ ಇಷ್ಟಪಟ್ಟಿದ್ದರು. ನಿತ್ಯ ಅವರು ಕನ್ವರ್ ​​ನನ್ನು ವಾಕಿಂಗ್​ ಕರೆದುಕೊಂಡು ಹೋಗುತ್ತಿದ್ದರು. ಈಗ ಈ ಶ್ವಾನ ಮೃತಪಟ್ಟಿದೆ. ಈ ಬಗ್ಗೆ ಅಂಬಿ ಪರಮಾಪ್ತರಾಗಿದ್ದ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.

ಅಂಬರೀಷ್ ಬದುಕಿರುವಾಗ ಕನ್ವರ್‌  ಶ್ವಾನ ಅಂಬಿಗೆ ಮೋಸ್ಟ್ ಫೇವರಿಟ್ ಆಗಿತ್ತು. ಅಲ್ಲದೇ ಅಂಬರೀಷ್ ಅವರು ಕನ್ವರ್‌ನನ್ನು ಪ್ರತಿದಿನ ವಾಕಿಂಗ್‌ಗೆ ಕರೆದುಕೊಂಡು ಹೋಗುತ್ತಿದ್ದರು. ಈ ಶ್ವಾನ ಅಂಬರೀಷ್​​​ ಅವರನ್ನು ತುಂಬಾನೇ ಹಚ್ಚಿಕೊಂಡಿತ್ತು.

2018ರ ನವೆಂಬರ್​ 24ರಂದು ಅಂಬರೀಶ್​ ಮೃತಪಟ್ಟಿದ್ದರು. ಅಂಬಿ ಅಗಲಿದ ಕ್ಷಣ ಈ ಶ್ವಾನ ಊಟ ಕೂಡ ಮಾಡದೇ ಕಂಬನಿ ಸುರಿಸುತ್ತಿತ್ತು. ತಮ್ಮ ಸಿನಿಮಾದ ಪಾತ್ರದ ಹೆಸರನ್ನೇ ಅಂಬರೀಷ್ ತಮ್ಮ ಪ್ರೀತಿಯ ಶ್ವಾನಕ್ಕಿಟ್ಟಿದ್ದರು ಅನ್ನೋದು ವಿಶೇಷ. ಕನ್ವರ್‌  ಕೂಡ ಅಂಬಿಯನ್ನು  ಹಚ್ಚಿಕೊಂಡಿತ್ತು. ಇದೀಗ ಅಂಬಿ ಪ್ರೀತಿಯ ಕನ್ವರ್‌ ಇಹಲೋಕ ತ್ಯಜಿಸಿದೆ.

ಅಂಬಿ ಪರಮಾಪ್ತರಾಗಿದ್ದ ಶ್ರೀನಿವಾಸ್, ಕನ್ವರ್‌  ಫೋಟೊಗಳನ್ನ ಹಂಚಿಕೊಂಡಿದ್ದಾರೆ. ಕನ್ವರ್​  ನಿಧನಕ್ಕೆ ಕುಟುಂಬವರ್ಗವೂ ಬೇಸರದಲ್ಲಿದೆ ಎಂದಿದ್ದಾರೆ. ಈ ವಿಚಾರ ಕೇಳಿ ಅಂಬಿ ಅಭಿಮಾನಿಗಳು ಕೂಡ ಬೇಸರ ಹೊರ ಹಾಕಿದ್ದಾರೆ.

ಅಂಬರೀಷ್​ ಸಿನಿಮಾ ಹಾಗೂ ರಾಜಕೀಯ ಎರಡರಲ್ಲೂ ಛಾಪು ಮೂಡಿಸಿದ್ದರು. ಕೊನೆಯದಿನದವರೆಗೂ ಅವರು ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರು. 2018ರ ನವೆಂಬರ್​ 24ರಂದು ಅವರು ಮೃತಪಟ್ಟ ನಂತರ ಇಡೀ ಚಿತ್ರರಂಗ ಕಂಬನಿ ಮಿಡಿದಿತ್ತು. ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿತ್ತು.

ಇದನ್ನೂ ಓದಿ:  ಚಾಮರಾಜನಗರ ಘಟನೆ.. ಘೋರ ಅನ್ಯಾಯ! ನಾವು ತಪ್ಪು ಮಾಡಿದ್ರೆ ದೇವರು ಯಾವತ್ತು ನಮ್ಮನ್ನು ರಕ್ಷಿಸಲ್ಲ : ಸುಮಲತಾ ಅಂಬರೀಷ್

ಸಂಸದೆ ಸುಮಲತಾ ಅಂಬರೀಷ್ ವಿಶೇಷ ಸಂದರ್ಶನ: ‘ಕರ್ತವ್ಯ ದೋಷದಿಂದ ಒಂದು ಜೀವ ಹೋದ್ರೂ ಅದಕ್ಕೆ ನಾವೇ ಜವಾಬ್ದಾರಿಷ್