ಸಂಸದೆ ಸುಮಲತಾ ಅಂಬರೀಷ್ ವಿಶೇಷ ಸಂದರ್ಶನ: ‘ಕರ್ತವ್ಯ ದೋಷದಿಂದ ಒಂದು ಜೀವ ಹೋದ್ರೂ ಅದಕ್ಕೆ ನಾವೇ ಜವಾಬ್ದಾರಿ…‘

Sumalatha Ambareesh Interview: ನಮ್ಮ ಕರ್ತವ್ಯ ದೋಷದಿಂದ ಒಂದೆ ಒಂದು ಜೀವ ಹೋದ್ರೂ ಅದಕ್ಕೆ ನಾವೆ ಜವಾಬ್ಧಾರಿ ಆಗ್ತೀವಿ.. ನಾವೇ ಹೊಣೆಯಾಗ್ತೀವಿ. ಮೊನ್ನೆ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಜನರು ಮೃತಪಟ್ಟದ್ದು ತುಂಬಾ ತುಂಬಾ ದಾರುಣ.. ಅದೊಂಥರ ಅನ್ಯಾಯ. ಆ ರೀತಿ ಆಗ್ಬಾರ್ದು ಅಂತ ನಾನು ನನ್ನ ಕೈಲಾದಮಟ್ಟಿಗೆ ಪ್ರಯತ್ನಪಡ್ತಿದ್ದೀನಿ..

Follow us
|

Updated on:May 09, 2021 | 6:43 PM

ಇತ್ತೀಚಿಗೆ ಕೊವಿಡ್ ವಿರುದ್ಧ ಕರ್ನಾಟಕ ನಡೆಸುತ್ತಿರುವ ಹೋರಾಟದಲ್ಲಿ ಬಹುಮುಖ್ಯವಾಗಿ ಕೇಳಿಬಂದಿರುವ ಹೆಸರು ಮಂಡ್ಯದ ಸಂಸದೆ ಸುಮಲತಾ ಅಂಬರೀಷ್ ಅವರದು. ಚಾಮರಾಜನಗರದಲ್ಲಿ ಮೆಡಿಕಲ್ ಆಕ್ಸಿಜನ್ ಇಲ್ಲದೇ ರೋಗಿಗಳು ಮೃತಪಟ್ಟ ಘಟನೆಯಿಂದ ನೊಂದುಕೊಂಡ ಅವರು, ಇಂತಹ ದುರ್ಘಟನೆ ತಮ್ಮ ಕ್ಷೇತ್ರವ್ಯಾಪ್ತಿಯಲ್ಲಿ ಸಂಭವಿಸಬಾರದು ಎಂದು ಎಚ್ಚೆತ್ತು ಕಾರ್ಯೋನ್ಮುಖರಾದರು. ಸ್ವಂತ ಹಣದಲ್ಲಿ ಮಂಡ್ಯದ ವಿವಿಧ ಆಸ್ಪತ್ರೆಗಳಿಗೆ ಅಗತ್ಯವಿದ್ದ ಆಮ್ಲಜನಕವನ್ನು ಒದಗಿಸಿದರು. ಇದೇ ಹೊತ್ತಲ್ಲಿ ಅವರ ವಿರುದ್ಧ ಸರ್ಕಾರಿ ಹಣದಲ್ಲಿ ಮೆಡಿಕಲ್ ಆಕ್ಸಿಜನ್ ಒದಗಿಸಿ ಪ್ರಚಾರ ಪಡೆದ ಆರೋಪವನ್ನು ರಾಜಕೀಯ ಮುಖಂಡರೋರ್ವರು ಮಾಡಿದರು. ಈ ಎಲ್ಲ ಹಿನ್ನೆಲೆಯಲ್ಲಿ ಓರ್ವ ಪಕ್ಷೇತರ ಸಂಸದೆಯಾಗಿರುವ ಸುಮಲತಾ ಅಂಬರೀಷ್ ಟಿವಿ9 ಡಿಜಿಟಲ್​ಗೆ ನೀಡಿರುವ ಸಂದರ್ಶನ ಇಲ್ಲಿದೆ. ಹಿರಿಯ ನಿರೂಪಕ ಹರಿಪ್ರಸಾದ್ ಈ ಸಂದರ್ಶನವನ್ನು ನಡೆಸಿಕೊಟ್ಟಿದ್ದಾರೆ.

ಹರಿಪ್ರಸಾದ್: ಓರ್ವ ಜನಪ್ರತಿನಿಧಿಯಾಗಿ ಯಾವ ಕೊರೊನಾದ ಈ ದುರಿತ ಪರಿಸ್ಥಿತಿಯನ್ನು ಯಾವ ಸ್ವರೂಪದಲ್ಲಿ ನೊಡುತ್ತಿದ್ದೀರಿ?

ಸಂಸದೆ ಸುಮಲತಾ ಅಂಬರೀಷ್: ಕೊವಿಡ್ ಎರಡನೇ ಅಲೆ, ಕೇವಲ ಅಲೆಯಲ್ಲ. ಅದೊಂದು ಸುನಾಮಿಯಾಗಿ ಪ್ರತಿಯೊಬ್ಬರಿಗೂ ಕಷ್ಟ ಕೊಡುತ್ತಿದೆ. ಕೊವಿಡ್ ಪ್ರಭಾವ ಬೀರದ ಯಾವ ಮನೆಯೂ ಇಲ್ಲ. ಯಾರ ಕುಟುಂಬವೂ ಇಲ್ಲ. ಇಂಥ ಭಯಾನಕ ಪರಿಸ್ಥಿತಿಯಲ್ಲಿ ಜನಪ್ರತಿನಿಧಿಯಲ್ಲದೆಯೂ, ಓರ್ವ ಜವಾಬ್ಧಾರಿಯುತ ನಾಗರಿಕನಾಗಿಯೂ ನನ್ನ ಕರ್ತವ್ಯ ತುಂಬಾ ಇದೆ. ನಾವೆಲ್ಲರೂ ಕೈಜೋಡಿಸಿ ಹೋರಾಡದಿದ್ದರೆ ನಮ್ಮನ್ನು ದೇವರೂ ಕಾಪಾಡಲು ಸಾಧ್ಯವಿಲ್ಲ. ಮೊದಲೇ ಅಲೆ ಬಂದಾಗಿಂದಲೂ ಪ್ರತಿ ಸಾರ್ವಜನಿಕ ಸಭೆಯಲ್ಲೂ ಜನರಿಗೆ, ಅಧಿಕಾರಿಗಳಿಗೆ ಎಚ್ಚರಿಕೆ ಕೊಡುತ್ತಲೇ ಇದ್ದೆ.

ಯಾವುದೇ ಒಂದು ಯುದ್ಧ ಗೆಲ್ಲಬೇಕು ಅಂದ್ರೆ ಯುದ್ಧಕ್ಕೂ ಮುನ್ನವೇ ಬಹಳ ಸಿದ್ಧತೆಗಳನ್ನು ಮಾಡ್ಕೊಂಡಿರಬೇಕು. ನಮ್ಮನ್ನು ಈಗ ಆ ಸಿದ್ಧತೆಯಲ್ಲಿನ ಲೋಪಗಳೇ ಕಾಡುತ್ತಿವೆ. ಈ ಕೊನೆ ನಿಮಿಷದಲ್ಲಿ ರೋಗಿಗಳಿಗೆ ಬೆಡ್ ಸಿಗ್ತಿಲ್ಲ, ಆಕ್ಸಿಜನ್ ಸಾಕಾಗ್ತಿಲ್ಲ..ಇವೆಲ್ಲ ರಾತ್ರಿ ಬೆಳಗಾಗುವುದರ ಒಳಗೆ ಮಾಡುವ ಕೆಲಸವಲ್ಲ. ಬಹಳಾ ಮುಂಚಿನಿಂದಲೇ ತಯಾರಿ ಮಾಡ್ಕೊಂಡು ಸಿದ್ಧವಿಡಬೇಕಿತ್ತು. ಆದರೆ, ಇದನ್ನೆಲ್ಲ ಚರ್ಚೆ ಮಾಡ್ಲಿಕ್ಕೆ, ಹೋರಾಟ ಮಾಡ್ಲಿಕ್ಕೆ, ಸಮಯ ಸಂದರ್ಭ ಅಂತ ಒಂದಿದೆ, ಆಗ ಖಂಡಿತ ಎಲ್ಲರೂ ವ್ಯವಸ್ಥೆಗಳ ಕೊರತೆಯನ್ನು ಚರ್ಚೆ ಮಾಡ್ಲೇಬೇಕು.

ಆದರೆ ಈಗ ನಮ್ಮಂತ ಜನಪ್ರತಿನಿಧಿಗಳ ಕರ್ತವ್ಯ ಏನಂದ್ರೆ, ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನಕ್ಕೆ ಯಾವುದರ ಕೊರತೆ ಇದೆ, ಜನಕ್ಕೆ ಈ ಕ್ಷಣಕ್ಕೆ ಏನು ಬೇಕು ಎಂಬುದನ್ನು ತಿಳಿದು ವ್ಯವಸ್ಥೆ ಮಾಡಬೇಕು. ಒಂದೇ ಒಂದು ಜೀವ ಉಳಿಸಿದರೂ ಅದು ದೊಡ್ಡ ವಿಷ್ಯ.

ಕೊವಿಡ್ ನಮ್ಮ ಕೈಲಿಲ್ಲ, ಡಾಕ್ಟ್ರತ್ರಾನೂ ಏನೂ ಮಾಡೋಕಾಗಲ್ಲ ಅಂದ್ರೆ ಅದು ನಮ್ಮ ಕೈಲಿಲ್ಲ. ಆದ್ರೆ, ನಮ್ಮ ಕರ್ತವ್ಯ ದೋಷದಿಂದ ಒಂದೆ ಒಂದು ಜೀವ ಹೋದ್ರೂ ಅದಕ್ಕೆ ನಾವೇ ಜವಾಬ್ಧಾರಿ ಆಗ್ತೀವಿ.. ನಾವೇ ಹೊಣೆಯಾಗ್ತೀವಿ. ಮೊನ್ನೆ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ ಜನರು ಮೃತಪಟ್ಟದ್ದು ತುಂಬಾ ತುಂಬಾ ದಾರುಣ.. ಅದೊಂಥರ ಅನ್ಯಾಯ. ಆ ರೀತಿ ಆಗ್ಬಾರ್ದು ಅಂತ ನಾನು ನನ್ನ ಕೈಲಾದಮಟ್ಟಿಗೆ ಪ್ರಯತ್ನಪಡ್ತಿದ್ದೀನಿ..

ಹರಿಪ್ರಸಾದ್: ನೀವು ಆಸ್ಪತ್ರೆಗಳಿಗೆ ಜಂಬೋ ಸಿಲಿಂಡರ್ ಒದಗಿಸಿದ್ರಿ ಅಂತ ಹೇಳಿದ್ರಿ..ಆದ್ರೆ ಈ ವಿಷಯದಲ್ಲಿ ರಾಜಕೀಯ ಕೇಳಿಬಂತು. ಏನಿದು?

ಸುಮಲತಾ ಅಂಬರೀಷ್: ಈ ವಿಷಯ ವಿವರಿಸಬೇಕು ಅಂದ್ರೆ ಚೂರು ಹಿನ್ನೆಲೆ ಹೇಳ್ಲೇಬೇಕು. ಹಿಂದಿನ ಲೋಕಸಭಾ ಎಲೆಕ್ಷನ್​ನಲ್ಲಿ ಮಂಡ್ಯ ಕ್ಷೇತ್ರದಲ್ಲಿ ಏನೆಲ್ಲ ಆಯ್ತು ಎಂಬುದನ್ನು ನೀವೆಲ್ಲ ನೋಡಿದ್ದೀರಿ. ಆಗಿಂದ್ಲೇ ಈ ಸಂಚು ಇತ್ತು. ಹಿಂದೆ ಅಂಬರೀಷ್ ಅವ್ರು ಇದ್ದಾಗ ಇದೆಲ್ಲ ಹೊರಬಿದ್ದಿರಲಿಲ್ಲ. ಅಂಬರೀಷ್ ಗಳಿಸಿದ ಜನರ ಪ್ರೀತಿಯೇ ಅಂತಾದ್ದಾಗಿತ್ತು. ಅದೇ ದಾರಿಯಲ್ಲಿ ನಡೆಯುವ ಪ್ರಯತ್ನದಲ್ಲಿ ನಾನಿದ್ದೇನೆ. ಚುನಾವಣಾ ಪ್ರಚಾರದಲ್ಲೂ ಸಹ ನನ್ ಬಳಿ ಆಗೋಕಿಂತ ಜಾಸ್ತಿ ಆಶ್ವಾಸನೆ ಕೊಟ್ಟಿಲ್ಲ. ಪ್ರಚಾರದಲ್ಲಿ ಸುಳ್ಳು ಹೇಳಿ ಜನರ ಮತ ಪಡೀಬೇಕು ಅಂತ ನಾನು ಯೋಚಿಸ್ಲೇ ಇಲ್ಲ. ಹೇಳಿದ್ದನೇ ಮಾಡ್ತೀನಿ… ಮಾಡಿದ್ದನ್ನೇ ಹೇಳ್ತೀನಿ. ಅಷ್ಟನ್ನೇ ಫಾಲೋ ಮಾಡೊ ನನ್ ವಿರುದ್ಧ ಚುನಾವಣೆಲಿ ಸೋತಿರೋದನ್ನ ಅರಗಿಸಿಕೊಳ್ಳೋಕೆ ಅವರ ವಿರುದ್ಧ ಆಗಲೇ ಇಲ್ಲ… ಇದು ಎಲ್ರಿಗೂ ಗೊತ್ತಿರೋ ವಿಚಾರವೂ ಹೌದು..

ಆದ್ರೆ ಇದು ನಮ್ಮಗಳ ನಡುವಿನ ವಿಚಾರ. ಈ ವಿಷ್ಯದಿಂದ ಜನಕ್ಕೆ ಯಾವ್ದೇ ತೊಂದ್ರೆ ಆಗ್ಬಾರ್ದು. ಅವರು ಅದೇ ವಿಷ್ಯಾನ ಇಟ್ಕೊಂಡು ಜನಕ್ಕೆ ತೊಂದ್ರೆ ಕೊಡೋದು ಎಷ್ಟು ಸರಿ? ನೀವು ನನ್ನನ್ನ ಎಷ್ಟೇ ಟಾರ್ಗೆಟ್ ಮಾಡಿ, ನಾನು ಎದುರಿಸ್ತೀನಿ, ಅದನ್ನ ಹ್ಯಾಂಡಲ್ ಮಾಡ್ತೀನಿ. ನಾನು ಹೇಗೆ ಹ್ಯಾಂಡಲ್ ಮಾಡ್ತೀನಿ ಎನ್ನೋದು ಜನಕ್ಕೂ ಗೊತ್ತಿದೆ.

ನನ್ನ ನಡತೆ ವಿಚಾರದಲ್ಲಿ ಪ್ರತಿಯೊಬ್ರೂ ಮೆಚ್ಕೊಂಡಿದ್ದಾರೆ. ಮಾಡೋಕೆ ತುಂಬಾನೇ ವಿಷ್ಯ ಇದ್ರೂ ಈವರೆಗೂ ಯಾರೊಬ್ರನ್ನೂ ಟಾರ್ಗೆಟ್ ಮಾಡಿಲ್ಲ. ಅವ್ರ ಕಡೆ ಪೋಕಸ್ಸೇ ಮಾಡಿಲ್ಲ. ನಾನ್ಯಾಕ್ ಅವ್ರನ್ನ ಫೋಕಸ್ ಮಾಡ್ಬೇಕು? ಎಲೆಕ್ಷನ್​ಗೆ ನಿಂತಾಗಿಂದ್ಲೂ ನನ್ನ ನಡತೆ, ವರ್ತನೆಯನ್ನು ಇಡೀ ರಾಜ್ಯ, ದೇಶದ ಜನರೇ ನೋಡಿ ಮೆಚ್ಕೊಂಡಿದ್ದಾರೆ..

ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಜೆಡಿಎಸ್ ಶಾಸಕರ ಬಳಿ ಮಂಡ್ಯದ ಸ್ವತಂತ್ರ ಸಂಸದರ ಜನಪ್ರಿಯತೆ ಸಹಿಸಲಾಗ್ತಿಲ್ಲ. ಜೆಡಿಎಸ್ ನವರು ಸೋಲಿನ ಹತಾಶೆಯಿಂದ ಇನ್ನು ಹೊರ ಬಂದಿಲ್ಲ. ಅದಕ್ಕಾಗಿ ಸುಮಲತಾ ಅವ್ರನ್ನ ಟಾರ್ಗೆಟ್ ಮಾಡ್ತಿದ್ದಾರೆ.ಚುನಾವಣೆಗೆ ಇನ್ನೂ ಮೂರು ವರ್ಷ ಇದೆ. ಚುನಾವಣೆ ಬಂದಾಗ ಜನರ ಮುಂದೆ ಹೋಗೋಣ. ಆಗ ಜನರೇ ತೀರ್ಪು ಕೊಡ್ತಾರೆ. ಜಿಲ್ಲೆಯಲ್ಲಿ ಸಂಸದರು ಜನಪ್ರಿಯತೆ ಗಳಿಸುತ್ತಿದ್ದಾರೆ. ಇದನ್ನು ಜೆಡಿಎಸ್ ಶಾಸಕರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಕೆಲವು ಜೆಡಿಎಸ್ ಶಾಸಕರು ಸಂಸದರ ವಿರುದ್ಧ ವೃತಾರೋಪ ಮಾಡುತ್ತಿದ್ದಾರೆ ಎಂದು ಸಂಸದೆ ಸುಮಲತಾ ಅಂಬರೀಷ್ ಅವರ ಆಪ್ತ ಎಸ್.ಸಚ್ಚಿದಾನಂದ ಟೀಕಿಸಿದ್ದಾರೆ.

ಇದನ್ನೂ ಓದಿ:  ಸುಮಲತಾ ಅಂಬರೀಶ್ ಸ್ವಂತ ಹಣದಿಂದ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಿದ್ದಾರೆ; ಮಂಡ್ಯ ಉಪ ವಿಭಾಗಾಧಿಕಾರಿ ಸ್ಪಷ್ಟನೆ

ನುಡಿದಂತೆ ನಡೆದ ಸಂಸದೆ ಸುಮಲತಾ; ಮಂಡ್ಯಕ್ಕೆ ಬಂತು 2 ಸಾವಿರ ಲೀಟರ್ ಸಾಮರ್ಥ್ಯದ 20 ಜಂಬೋ ಆಕ್ಸಿಜನ್ ಸಿಲಿಂಡರ್

(Mandya MP Sumalatha Ambareesh special interview about Covid 19 war and medical oxygen issues)

Published On - 4:14 pm, Sun, 9 May 21

ಹೇಗಿತ್ತು ನೋಡಿ ‘ಟಾಕ್ಸಿಕ್’ ಸೆಟ್​ ಹಾಕಿದ ಪ್ರದೇಶ; ಇಲ್ಲಿದೆ ವಿಡಿಯೋ
ಹೇಗಿತ್ತು ನೋಡಿ ‘ಟಾಕ್ಸಿಕ್’ ಸೆಟ್​ ಹಾಕಿದ ಪ್ರದೇಶ; ಇಲ್ಲಿದೆ ವಿಡಿಯೋ
ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ವಿಶೇಷಗಳೇನು?
ಕೆಎಸ್​ಆರ್​ಟಿಸಿ ಐರಾವತ ಕ್ಲಬ್ ಕ್ಲಾಸ್ 2.0: ಹೊಸ ವೋಲ್ವೋ ವಿಶೇಷಗಳೇನು?
ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್
ಪಕ್ಕಾ ಪ್ಲ್ಯಾನ್ ಮಾಡಿ ಎಲ್ಲರನ್ನೂ ಹೊಡೆದ ಹನುಮಂತ; ತಂತ್ರಕ್ಕೆ ಎಲ್ಲರೂ ಶಾಕ್
ಸಾಲಿಗ್ರಾಮ ಮನೆಯಲ್ಲಿದ್ದರೆ ಪೂಜಿಸುವುದು ಹೇಗೆಂದು ತಿಳಿಯಿರಿ
ಸಾಲಿಗ್ರಾಮ ಮನೆಯಲ್ಲಿದ್ದರೆ ಪೂಜಿಸುವುದು ಹೇಗೆಂದು ತಿಳಿಯಿರಿ
Nithya Bhavishya: ಜಲಪೂರ್ಣ ದಿನದಂದು ಯಾವ ರಾಶಿಗೆಲ್ಲಾ ಶುಭ, ಅಶುಭ
Nithya Bhavishya: ಜಲಪೂರ್ಣ ದಿನದಂದು ಯಾವ ರಾಶಿಗೆಲ್ಲಾ ಶುಭ, ಅಶುಭ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ವಿಡಿಯೋ: ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಭಯಭೀತರಾದ ಜನ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಬಿಗ್ ಬಾಸ್ ಶೋನಿಂದ ಒಳ್ಳೆಯ ಪೇಮೆಂಟ್ ಸಿಕ್ತಾ? ಉತ್ತರ ನೀಡಿದ ಹಂಸಾ
ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ಹಾಲಿನ ಪಾತ್ರೆಯಲ್ಲಿ ಉಗುಳಿದ ಡೆಲಿವರಿ ಬಾಯ್; ಶಾಕಿಂಗ್ ವಿಡಿಯೋ ವೈರಲ್
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ
ರಂಗೋಲಿ ಹಾಕುತ್ತಿದ್ದ ಇಬ್ಬರು ಹುಡುಗಿಯರ ಮೇಲೆ ಕಾರು ಚಲಾಯಿಸಿದ ಬಾಲಕ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ
ಅಗಲಿದ ಪ್ರೀತಿಯ ಸಹೋದರನ ಸಮಾಧಿಗೆ ಶಿವಣ್ಣ ದಂಪತಿ ಪೂಜೆ