ನುಡಿದಂತೆ ನಡೆದ ಸಂಸದೆ ಸುಮಲತಾ; ಮಂಡ್ಯಕ್ಕೆ ಬಂತು 2 ಸಾವಿರ ಲೀಟರ್ ಸಾಮರ್ಥ್ಯದ 20 ಜಂಬೋ ಆಕ್ಸಿಜನ್ ಸಿಲಿಂಡರ್

ಮಾತಿಗೆ ತಪ್ಪದೇ ಮದ್ದೂರಿ ಗುರುಶಾಂತಪ್ಪ ತಾಲೂಕು ಆಸ್ಪತ್ರೆಗೆ ಸಿಲಿಂಡರ್​ಗಳನ್ನು ಸಂಸದೆ ಸುಮಲತಾ ಅಂಬರೀಶ್​ ಕಳುಹಿಸಿಕೊಟ್ಟಿದ್ದಾರೆ.

ನುಡಿದಂತೆ ನಡೆದ ಸಂಸದೆ ಸುಮಲತಾ; ಮಂಡ್ಯಕ್ಕೆ ಬಂತು 2 ಸಾವಿರ ಲೀಟರ್ ಸಾಮರ್ಥ್ಯದ 20 ಜಂಬೋ ಆಕ್ಸಿಜನ್ ಸಿಲಿಂಡರ್
20 ಜಂಬೋ ಆಕ್ಸಿಜನ್ ಸಿಲಿಂಡರ್
Follow us
shruti hegde
| Updated By: ಸಾಧು ಶ್ರೀನಾಥ್​

Updated on:May 06, 2021 | 1:17 PM

ಮಂಡ್ಯ: ಮಾತಿಗೆ ತಪ್ಪದೇ ಮದ್ದೂರಿ ಗುರುಶಾಂತಪ್ಪ ತಾಲೂಕು ಆಸ್ಪತ್ರೆಗೆ ಸಿಲಿಂಡರ್​ಗಳನ್ನು ಸಂಸದೆ ಸುಮಲತಾ ಅಂಬರೀಶ್​ ಕಳುಹಿಸಿಕೊಟ್ಟಿದ್ದಾರೆ. ಆಕ್ಸಿಜನ್​ ಕೊರತೆ ತಪ್ಪಿಸಲು ಸುಮಲತಾ ಅವರು ಮುಂದಾಗಿದ್ದು 2,000ಲೀ. ಸಾಮರ್ಥ್ಯದ 20 ಜಂಬೋ ಸಿಲಿಂಡರ್​ಗಳ ವ್ಯವಸ್ಥೆ ಪೂರೈಸಿದ್ದಾರೆ.

ಇತ್ತೀಚೆಗೆ ಕೊವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ವಿಡಿಯೋ ಕಾನ್ಫರೆನ್ಸ್‌ ಮೂಲಕ ಸಭೆ ನಡೆಸಲಾಗಿತ್ತು. ಆಗ ಆಕ್ಸಿಜನ್ ಕೊಡಿಸುವಾಗಿ ಸಂಸದೆ ಸುಮಲತಾ ಹೇಳಿದ್ದರು. ಎಂ.ಪಿ ಫಂಡ್ ಇಲ್ಲದ ಕಾರಣ ಸ್ವಂತ ಹಣದಲ್ಲಿ ಆಕ್ಸಿಜನ್ ಕೊಡುವುದಾಗಿ ಹೇಳಿದ್ದರು. ಕೊಟ್ಟ ಮಾತಿನಂತೆ 2,000ಲೀ ಸಾಮರ್ಥ್ಯದ 20ಜಂಬೋ‌ ಸಿಲಿಂಡರ್​ಗಳನ್ನು ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ಸುಮತಲಾ ಅವರ ಕಾರ್ಯಕ್ಕೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸ್ವಂತ ಹಣದಲ್ಲಿ ಮಂಡ್ಯ ಜನರಿಗೆ ನಿತ್ಯ 2 ಸಾವಿರ ಲೀಟರ್ ಆಕ್ಸಿಜನ್‌ ನೀಡಲು ನಿರ್ಧಾರ: ಸಂಸದೆ ಸುಮಲತಾ

ಮಂಡ್ಯದಲ್ಲಿ ಕೊವಿಡ್ ಹಿನ್ನೆಲೆ 16 ಗ್ರಾಮಗಳು ಕಂಟೇನ್ಮೆಂಟ್ ಝೋನ್ ಜಿಲ್ಲೆಯ ಹಳ್ಳಿಗಳಲ್ಲಿ ಕೊರೋನಾ ಭೀತಿ ಹೆಚ್ಚಾಗುತ್ತಿದೆ. ಮಳವಳ್ಳಿ ತಾಲೂಕಿನ 16 ಗ್ರಾಮಗಳನ್ನು ಕಂಟೋನ್ಮೆಂಟ್ ಝೋನ್ ಎಂದು ಘೋಷಣೆ ಮಾಡಲಾಗಿದೆ. 16 ಗ್ರಾಮಗಳ ಪೈಕಿ ಒಂದೊಂದು ಗ್ರಾಮದಲ್ಲಿ 40 ಕ್ಕೂ ಹೆಚ್ಚು ಮಂದಿಗೆ ಸೋಂಕು ದೃಢಪಟ್ಟಿದೆ. ಗ್ರಾಮಗಳ ಎಲ್ಲಾ ಜನರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿಸಿಕೊಳ್ಳಲು ಸೂಚನೆ ಹೊರಡಿಸಲಾಗಿದ್ದು, ಹಳ್ಳಿಯ ಜನರು ಸುರಕ್ಷಿತ ಕ್ರಮ ವಹಿಸಬೇಕೆಂದು ಜಿಲ್ಲಾಡಳಿತ ಮನವಿ ಮಾಡಿದೆ.

ಇದನ್ನೂ ಓದಿ: ಕೊರೊನಾದಿಂದ ಚೇತರಿಸಿಕೊಂಡರೂ ನಿಮ್ಮಲ್ಲಿ ಸುಸ್ತು, ಅಶಕ್ತತೆ ಕಂಡು ಬರುತ್ತಿದೆಯಾ? ಹೆದರಬೇಡಿ.. ಹೀಗೆ ಮಾಡಿ

ಸರ್ಕಾರವೇ ಎಲ್ಲವನ್ನೂ ಮಾಡಲು ಆಗದು- ಜನ ಜಾಗೃತರಾಗಿ ಕೊರೊನಾ ನಿಯಮ ಪಾಲಿಸಬೇಕು: ಸಚಿವ ಜಗದೀಶ್​ ಶೆಟ್ಟರ್

Published On - 12:25 pm, Thu, 6 May 21