AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾದಿಂದ ಚೇತರಿಸಿಕೊಂಡರೂ ನಿಮ್ಮಲ್ಲಿ ಸುಸ್ತು, ಅಶಕ್ತತೆ ಕಂಡು ಬರುತ್ತಿದೆಯಾ? ಹೆದರಬೇಡಿ.. ಹೀಗೆ ಮಾಡಿ

ಕೊರೊನಾ ನೆಗೆಟಿವ್ ಬಂದರೂ ಒಂದಷ್ಟು ಸಮಸ್ಯೆಗಳು ಪೂರ್ತಿ ಕಡಿಮೆಯಾಗಿರುವುದಿಲ್ಲ. ಹಾಗಾಗಿ ಒಂದೇ ಬಾರಿಗೆ ಸಿಕ್ಕಾಪಟೆ ವಾಕಿಂಗ್ ಮಾಡುವುದು, ವ್ಯಾಯಾಮ ಮಾಡುವುದು ಮಾಡಬೇಡಿ.

ಕೊರೊನಾದಿಂದ ಚೇತರಿಸಿಕೊಂಡರೂ ನಿಮ್ಮಲ್ಲಿ ಸುಸ್ತು, ಅಶಕ್ತತೆ ಕಂಡು ಬರುತ್ತಿದೆಯಾ? ಹೆದರಬೇಡಿ.. ಹೀಗೆ ಮಾಡಿ
ಕೊರೊನಾ ಬಳಿಕ ಹಸಿರು ತರಕಾರಿ, ಹಣ್ಣುಗಳ ಸೇವನೆ ಜಾಸ್ತಿ ಇರಲಿ
Lakshmi Hegde
|

Updated on: May 06, 2021 | 10:42 AM

Share

ಸದ್ಯ ದೇಶ ಕೊರೊನಾ ವಿರುದ್ಧ ಸಿಕ್ಕಾಪಟೆ ಹೋರಾಡುತ್ತಿದೆ. ಪ್ರತಿ ಸಣ್ಣಸಣ್ಣ ನಗರಗಳಲ್ಲೂ ಕೊರೊನಾ ರೋಗಿಗಳು ಇದ್ದಾರೆ. ಬಹುತೇಕ ಕಡೆಗಳಿಂದ ಆಕ್ಸಿಜನ್ ಕೊರತೆ, ಬೆಡ್​ ಅಭಾವ, ಲಸಿಕೆ ಇಲ್ಲ ಎಂಬ ವರದಿಗಳು ಬರುತ್ತಲೇ ಇವೆ. ಹಾಗಾಗಿ ಲಕ್ಷಣ ರಹಿತ ಕೊವಿಡ್ ರೋಗಿಗಳು ಮನೆಯಲ್ಲೇ ಐಸೋಲೇಟ್​ ಆದರೆ ಸಾಕು ಎಂದು ವೈದ್ಯರು ಸಲಹೆ ನೀಡುತ್ತಿದ್ದಾರೆ.

ಕೊರೊನಾ ಪಾಸಿಟಿವ್ ಬಂದ ತಕ್ಷಣ ಹೆದರಬಾರದು. ಆಸ್ಪತ್ರೆಗೆ ಹೋಗುವ ಅಗತ್ಯವೂ ಇಲ್ಲ ಎಂದು ವೈದ್ಯರು ಪದೇಪದೆ ಹೇಳುತ್ತಿದ್ದಾರೆ. ಅದನ್ನು ಅನೇಕರು ಪಾಲಿಸುತ್ತಿದ್ದಾರೆ ಕೂಡ. ಮನೆಯಲ್ಲೇ ಇದ್ದು ವೈದ್ಯರ ಜತೆ ಸಂಪರ್ಕದಲ್ಲಿದ್ದು, ಅವರು ಹೇಳಿದ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಹಾಗೇ, ವೈದ್ಯರು ಹೇಳಿದ ಆಹಾರ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾವಿರಾರು ಜನರು ಚೇತರಿಸಿಕೊಳ್ಳುತ್ತಿದ್ದಾರೆ.

ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿ, ಮನೆಯಲ್ಲೇ ಇದ್ದು ಕೊರೊನಾಕ್ಕೆ ಚಿಕಿತ್ಸೆ ಪಡೆಯಲಿ.. ಕೊರೊನಾದಿಂದ ಗುಣವಾದ ಬಳಿಕವೂ ಸುಸ್ತು ಕಾಣಿಸಿಕೊಳ್ಳುತ್ತಿದೆ ಎಂಬುದು ಬಹುತೇಕರ ಅನುಭವ. ಕೊರೊನಾ ನೆಗೆಟಿವ್ ವರದಿ ಬಂದರೂ ವೀಕ್​ನೆಸ್​ ಅಷ್ಟು ಬೇಗ ಹೋಗೋದಿಲ್ಲ ಎಂದೇ ಹೇಳುತ್ತಿದ್ದಾರೆ. ಹಾಗಾದ್ರೆ ಇದನ್ನು ಹೇಗೆ ಸರಿಪಡಿಸಿಕೊಳ್ಳಬೇಕು? ಪೌಷ್ಟಿಕ ಆಹಾರ ಸೇವನೆ ಮಾಡಬೇಕು. ಹಾಗೇ ಸರಿಯಾಗಿ ನೀರು ಕುಡಿಯಬೇಕು. ಅದರಾಚೆಗೂ ಏನೆಲ್ಲ ಮಾಡಬಹುದು ಎಂಬುದನ್ನು ನಾವಿಲ್ಲಿ ಹೇಳಿದ್ದೇವೆ ನೋಡಿ..

1. ಕೊರೊನಾ ವರದಿ ನೆಗೆಟಿವ್ ಬಂದ ನಂತರ ದಾಳಿಂಬೆ, ಕಿತ್ತಳೆ, ಸೇಬು ಮತ್ತು ಪಪ್ಪಾಯ ಹಣ್ಣುಗಳನ್ನು ಜಾಸ್ತಿ ಪ್ರಮಾಣದಲ್ಲಿ ಸೇವಿಸಿ. ಅವುಗಳಿಂದ ತಯಾರಿಸಿದ ಜ್ಯೂಸ್​ ಕೂಡ ನೀವು ಸೇವಿಸಬಹುದು. ಹಣ್ಣು ಹಾಗೂ ಹಣ್ಣಿನ ರಸಗಳ ಸೇವನೆಯಿಂದ ಸುಸ್ತು ಕಡಿಮೆಯಾಗುತ್ತದೆ.

2. ರಾತ್ರಿ ಮಲಗುವುದಕ್ಕೂ ಮೊದಲು ಹಾಲು ಕುಡಿಯಿರಿ. ಹಾಲು ನಮ್ಮ ಎಲುಬನ್ನು ಬಲಿಷ್ಠ ಮಾಡುತ್ತದೆ. ಹಾಗೇ ಬಲಹೀನತೆಯನ್ನು ಕಡಿಮೆ ಮಾಡುತ್ತದೆ.

3. ಹಾಗೇ, ಊಟದಲ್ಲಿ ತರಕಾರಿಗಳ ಬಳಕೆ ಹೆಚ್ಚು ಇರಲಿ. ಕೆಲವು ತರಕಾರಿಗಳಿಂದ ಜ್ಯೂಸ್ ತಯಾರಿಸಿ ಕೂಡ ಕುಡಿಯಬಹುದು. ಬಸಳೆ, ಕ್ಯಾರೆಟ್​, ಟೊಮ್ಯಾಟೊ, ಬೀಟ್​ರೂಟ್​ ಜ್ಯೂಸ್​ಗಳನ್ನು ಸೇವಿಸಿ. ಇದರಲ್ಲಿ ವಿಟಮಿನ್​ ಮತ್ತು ಮಿನರಲ್ಸ್​ಗಳು ಜಾಸ್ತಿ ಇದ್ದು, ಸುಸ್ತನ್ನು ಕಡಿಮೆ ಮಾಡುತ್ತದೆ.

4. ಉತ್ಕರ್ಷಣ ನಿರೋಧಕ ಆಹಾರಗಳು ಮತ್ತು ಪ್ರೋಟಿನ್​ ಯುಕ್ತ ಆಹಾರಗಳು ನಿಮ್ಮ ಡಯಟ್​​ನಲ್ಲಿರಲಿ. ಯಾಕೆಂದ್ರೆ ಇವು ಸುಲಭಕ್ಕೆ ಜೀರ್ಣವಾಗುತ್ತವೆ. ಗಟ್ಟಿ ಆಹಾರಗಳನ್ನು ಅಷ್ಟು ಬೇಗ ತಿನ್ನಬಾರದು. ಆಗಲೇ ಜೀರ್ಣಶಕ್ತಿ ಕುಂದಿರುತ್ತದೆ. ಮತ್ತೆ ಗಟ್ಟಿ ಆಹಾರ ತಿಂದರೆ ಜೀರ್ಣಕ್ರಿಯೆಗೆ ಸಮಸ್ಯೆ ಆಗುತ್ತದೆ

5. ಕೊರೊನಾದಿಂದ ಚೇತರಿಸಿಕೊಂಡ ಬಳಿಕ ಸ್ವಲ್ಪ ದಿನ ಮಲ್ಟಿ ವಿಟಾಮಿನ್, ವಿಟಮಿನ್​ ಸಿ ಮತ್ತು ಜಿಂಕ್ ಮಾತ್ರೆಗಳನ್ನು ಸೇವನೆಯನ್ನು ಮುಂದುವರಿಸಿ. ಈ ಬಗ್ಗೆ ವೈದ್ಯರ ಬಳಿ ಒಮ್ಮೆ ಸಮಾಲೋಚಿಸಿಕೊ ಕೊರೊನಾ ನೆಗೆಟಿವ್ ಬಂದರೂ ಒಂದಷ್ಟು ಸಮಸ್ಯೆಗಳು ಪೂರ್ತಿ ಕಡಿಮೆಯಾಗಿರುವುದಿಲ್ಲ. ಹಾಗಾಗಿ ಒಂದೇ ಬಾರಿಗೆ ಸಿಕ್ಕಾಪಟೆ ವಾಕಿಂಗ್ ಮಾಡುವುದು, ವ್ಯಾಯಾಮ ಮಾಡುವುದು ಮಾಡಬೇಡಿ. ಳ್ಳಿ.

6. ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯಿರಿ. ಹಾಗೇ ಎಳನೀರು, ಜ್ಯೂಸ್​ಗಳನ್ನು ಕುಡಿಯುತ್ತಿರಿ.

7. ಕೊರೊನಾ ನೆಗೆಟಿವ್ ಬಂದರೂ ಒಂದಷ್ಟು ಸಮಸ್ಯೆಗಳು ಪೂರ್ತಿ ಕಡಿಮೆಯಾಗಿರುವುದಿಲ್ಲ. ಹಾಗಾಗಿ ಒಂದೇ ಬಾರಿಗೆ ಸಿಕ್ಕಾಪಟೆ ವಾಕಿಂಗ್ ಮಾಡುವುದು, ವ್ಯಾಯಾಮ ಮಾಡುವುದು ಮಾಡಬೇಡಿ. ಮೊದಲು ಸ್ವಲ್ಪ ದಿನ ಕಡಿಮೆ ಪ್ರಮಾಣದಲ್ಲಿ ದೇಹದಂಡನೆ ಇರಲಿ. ಅತಿಯಾದ ಕೆಲಸವೂ ಬೇಡ.

8. ಹಾಗೇ, ಕೊರೊನಾದಿಂದ ಗುಣಮುಖರಾದ ಮೇಲೆ ಕೂಡ ನಿಮ್ಮ ಆಮ್ಲಜನಕ ಮಟ್ಟದ ಮೇಲೆ ಗಮನ ಇರಲಿ. ಹಾಗೇ 10 ದಿನಗಳವರೆಗೂ ನಿಮ್ಮ ಕುಟುಂಬ ಉಳಿದ ಸದಸ್ಯರಿಂದ ಸ್ವಲ್ಪ ದೂರವೇ ಇದ್ದುಬಿಡಿ.

ಇದನ್ನೂ ಓದಿ: ನರ್ಸ್ ಕೊರತೆ ಆತಂಕದಲ್ಲಿ ಕೋವಿಡ್ ಆಸ್ಪತ್ರೆ; ಕೈಯಲ್ಲಿ ಅಪಾಯಿಟ್ಮೆಂಟ್​ ಆರ್ಡರ್ ಹಿಡಿದು​ ಕುಳಿತಿದೆ ಆಡಳಿತ ಮಂಡಳಿ

ಕೊಪ್ಪಳದಲ್ಲಿ ಹೆಚ್ಚಾದ ಸೋಂಕಿತರ ಸಾವು; ಡೆತ್ ಅಡಿಟ್​ನಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

This is what you should do after recovering From coronavirus

ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್