AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊಪ್ಪಳದಲ್ಲಿ ಹೆಚ್ಚಾದ ಸೋಂಕಿತರ ಸಾವು; ಡೆತ್ ಅಡಿಟ್​ನಲ್ಲಿ ಸ್ಪೋಟಕ ಮಾಹಿತಿ ಬಹಿರಂಗ

ಡಯಾಬಿಟಿಸ್ ಓವರ್ ಕಂಟ್ರೋಲ್ ಇರುವವರೂ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ. 30 ವರ್ಷದಿಂದ 40 ವರ್ಷದೊಳಗಿನವರಿಗೆ ಆರ್​ಟಿಪಿಸಿ ನೆಗೆಟಿವ್ ಬರತ್ತದೆ. ಸ್ಕ್ಯಾನ್ ಅಲ್ಲಿ ಕೊವಿಡ್ ಲಕ್ಷಣಗಳಿವೆ. ಶ್ವಾಸಕೋಶದ ಸಮಸ್ಯೆ ಶೇಕಡಾ 50 ರಷ್ಟಾದರೆ ಹೊರ ಬರುವ ಸಾಧ್ಯತೆ ಇಲ್ಲ. ನಮ್ಮಲ್ಲಿ ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಇಲ್ಲ ಎಂದು ಹೇಳಿದರು.

ಕೊಪ್ಪಳದಲ್ಲಿ ಹೆಚ್ಚಾದ ಸೋಂಕಿತರ ಸಾವು; ಡೆತ್ ಅಡಿಟ್​ನಲ್ಲಿ ಸ್ಪೋಟಕ ಮಾಹಿತಿ ಬಹಿರಂಗ
ಕಿಮ್ಸ್​ನ ಮೆಡಿಕಲ್ ಸೂಪರಿಟೆಂಡೆಂಟ್ ವೇಣು
sandhya thejappa
|

Updated on:May 06, 2021 | 10:03 AM

Share

ಕೊಪ್ಪಳ: ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿತರ ಸಾವಿನ ಹಿನ್ನೆಲೆ ಡೆತ್ ಅಡಿಟ್​ ನಲ್ಲಿ ಸ್ಪೋಟಕ ಮಾಹಿತಿ ಬಹಿರಂಗವಾಗಿದೆ. ಕೊಪ್ಪಳ ಕಿಮ್ಸ್​ನ ಮೆಡಿಕಲ್ ಸೂಪರಿಟೆಂಡೆಂಟ್ ವೇಣು ಎಂಬುವರಿಂದ ಮಾಹಿತಿ ಬಹಿರಂಗವಾಗಿದ್ದು, ಡಯಾಬಿಟಿಸ್, ಹೈಪರ್ ಟೆನ್ಶನ್ ಹಾಗೂ ಪಾರ್ಶ್ವವಾಯುಗೆ ಒಳಗಾದವರು ಸಾವಿನ ಸಂಖ್ಯೆ ಜಾಸ್ತಿಯಾಗಿದೆ ಎಂದು ಹೇಳಲಾಗುತ್ತಿದೆ. 22 ಜನರ ಡೆತ್ ರಿಪೋರ್ಟ್ ಮಾಡಲಾಗಿದೆ. ಇದರಲ್ಲಿ ವಯಸ್ಕರೇ ಹೆಚ್ಚು ಸಾವನ್ನಪ್ಪಿದ್ದಾರೆ. 30 ರಿಂದ 40 ವರ್ಷದೊಳಗಿನ ಸಾವು ಜಾಸ್ತಿಯಾಗಿದೆ ಎಂದು ವೇಣು ಹೇಳಿದ್ದಾರೆ.

ಡಯಾಬಿಟಿಸ್ ಓವರ್ ಕಂಟ್ರೋಲ್ ಇರುವವರೂ ಹೆಚ್ಚಿನ ಸಂಖ್ಯೆಯಲ್ಲಿ ಸಾಯುತ್ತಿದ್ದಾರೆ. 30 ವರ್ಷದಿಂದ 40 ವರ್ಷದೊಳಗಿನವರಿಗೆ ಆರ್​ಟಿಪಿಸಿ ನೆಗೆಟಿವ್ ಬರತ್ತದೆ. ಸ್ಕ್ಯಾನ್ ಅಲ್ಲಿ ಕೊವಿಡ್ ಲಕ್ಷಣಗಳಿವೆ. ಶ್ವಾಸಕೋಶದ ಸಮಸ್ಯೆ ಶೇಕಡಾ 50 ರಷ್ಟಾದರೆ ಹೊರ ಬರುವ ಸಾಧ್ಯತೆ ಇಲ್ಲ. ನಮ್ಮಲ್ಲಿ ಆಕ್ಸಿಜನ್, ವೆಂಟಿಲೇಟರ್ ಸಮಸ್ಯೆ ಇಲ್ಲ ಎಂದು ಹೇಳಿದರು.

ಇಲ್ಲಿವರೆಗೂ 22 ಕೇಸ್ ಅಡಿಟ್ ಮಾಡಲಾಗಿದೆ. ವಯಸ್ಕರು ಲೇಟ್ ಅಡ್ಮಿಶನ್ ಆಗುತ್ತಿದ್ದಾರೆ. ಅದಾಗಲೇ ಅವರ ಶ್ವಾಸಕೋಶ 50 ಪರ್ಸೆಂಟ್ ಇನ್ಫೆಕ್ಷನ್ ಆಗಿರುತ್ತದೆ. ವ್ಯಾಕ್ಸಿನ್ ಹಾಕಿಸಿಕೊಂಡವರಿಗೂ ಸಮಸ್ಯೆ ಆಗಿದೆ. ಆದರೆ ಅವರು ಆಸ್ಪತ್ರೆಗೆ ದಾಖಲಿಸುವ ಅಗತ್ಯ ಇಲ್ಲ. ಇಲ್ಲಿವರೆಗೂ ವ್ಯಾಕ್ಸಿನ್ ಹಾಕಿಸಿಕೊಂಡವರು ಯಾರೂ ಸಾವನ್ನಪ್ಪಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ

Explainer: ಲಸಿಕೆಗೆ ಬೇಡಿಕೆ ಹೆಚ್ಚು, ಪೂರೈಕೆಗೆ ಹಲವು ಸಮಸ್ಯೆ; ಉತ್ಪಾದನೆ ಹೆಚ್ಚಿಸಲು ಸರ್ಕಾರದ ಮುಂದಿರುವ ಆಯ್ಕೆಗಳೇನು?

ಕೊರೊನಾ ಲಸಿಕೆಗೆ ಪೇಟೆಂಟ್​ ಬೇಡ, ಯಾವ ಸಂಸ್ಥೆ ಬೇಕಿದ್ದರೂ ಅಂಗೀಕೃತ ಲಸಿಕೆ ಉತ್ಪಾದಿಸಲಿ; ಭಾರತದ ಬೇಡಿಕೆಗೆ ಅಮೆರಿಕಾ ಬೆಂಬಲ

(Information on death of Coronavirus is available in Death Audit at koppal)

Published On - 10:02 am, Thu, 6 May 21

ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಜಮ್ಮು-ಕಾಶ್ಮೀರದ ಗಡಿಯಲ್ಲಿ 5 ಪಾಕಿಸ್ತಾನಿ ಡ್ರೋನ್​ಗಳು ಪತ್ತೆ, ಹೈ ಅಲರ್ಟ್​
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಪತಿಯ ಅಂತ್ಯಕ್ರಿಯೆಗೆ ಕಂದನ ಜತೆ ಸ್ಟ್ರೆಚರ್​ನಲ್ಲಿ ಬಂದ ಸೈನಿಕನ ಪತ್ನಿ
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಶುಕ್ರವಾರದಂದು ಹುಳಿ ಪದಾರ್ಥ ತಿನ್ನಲೇಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಅದೃಷ್ಟ!
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಬಂಧನ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!