ಕೊರೊನಾ ಲಸಿಕೆಗೆ ಪೇಟೆಂಟ್​ ಬೇಡ, ಯಾವ ಸಂಸ್ಥೆ ಬೇಕಿದ್ದರೂ ಅಂಗೀಕೃತ ಲಸಿಕೆ ಉತ್ಪಾದಿಸಲಿ; ಭಾರತದ ಬೇಡಿಕೆಗೆ ಅಮೆರಿಕಾ ಬೆಂಬಲ

ಕೊವಿಡ್ ಲಸಿಕೆಗೆ ಬೌದ್ಧಿಕ ಆಸ್ತಿ ಹಕ್ಕಿನ ವಿನಾಯಿತಿ ಸಿಕ್ಕರೆ ಪೇಟೆಂಟ್ ಹೊಂದಿಲ್ಲದ ಕಂಪನಿಯೂ ಲಸಿಕೆ ಉತ್ಪಾದಿಸಬಹುದಾಗಿದ್ದು, ಅಮೆರಿಕದ ಫೈಜರ್, ಮಾಡೆರ್ನಾ, ರಷ್ಯಾದ ಸ್ಪುಟ್ನಿಕ್ ಸೇರಿದಂತೆ ಎಲ್ಲ ಕೊರೊನಾ ಲಸಿಕೆಗಳನ್ನೂ ಪೇಟೆಂಟ್ ಇಲ್ಲದೆ ತಯಾರಿಸಬಹುದಾಗಿದೆ.

ಕೊರೊನಾ ಲಸಿಕೆಗೆ ಪೇಟೆಂಟ್​ ಬೇಡ, ಯಾವ ಸಂಸ್ಥೆ ಬೇಕಿದ್ದರೂ ಅಂಗೀಕೃತ ಲಸಿಕೆ ಉತ್ಪಾದಿಸಲಿ; ಭಾರತದ ಬೇಡಿಕೆಗೆ ಅಮೆರಿಕಾ ಬೆಂಬಲ
ಆಸ್ಟ್ರಾಜೆನೆಕಾ ಲಸಿಕೆ (ಪ್ರಾತಿನಿಧಿಕ ಚಿತ್ರ)
Follow us
Skanda
|

Updated on: May 06, 2021 | 8:52 AM

ಭಾರತದಲ್ಲಿ ಕೊರೊನಾ ಎರಡನೇ ಅಲೆ ಉಲ್ಬಣಿಸಿದ್ದು, ಪರಿಸ್ಥಿತಿ ಕೈ ಮೀರಿ ಹೋಗಿದೆ. ಕೆಲ ತಿಂಗಳ ಹಿಂದಷ್ಟೇ ಪರದೇಶಗಳಿಗೆ ಕೊರೊನಾ ಲಸಿಕೆ ರಫ್ತು ಮಾಡುತ್ತಾ ಜಾಗತಿಕ ಮಟ್ಟದಲ್ಲಿ ಬೆನ್ನು ತಟ್ಟಿಸಿಕೊಂಡಿದ್ದ ಭಾರತವೀಗ ಬೇರೆ ದೇಶಗಳಿಂದ ಲಸಿಕೆ ಸೇರಿದಂತೆ ಅಗತ್ಯ ವೈದ್ಯಕೀಯ ಪರಿಕರಗಳನ್ನು ಆಮದು ಮಾಡಿಕೊಳ್ಳುವ ಹಂತಕ್ಕೆ ಬಂದು ನಿಂತಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೊನಾವನ್ನು ಹತೋಟಿಗೆ ತರಲು ಲಸಿಕೆ ನೀಡುವುದೊಂದೇ ಪರಿಣಾಮಕಾರಿ ಮಾರ್ಗ ಎಂದು ಹಲವು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶದಲ್ಲಿ ಸೆರಮ್​ ಇನ್​ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೊವಿಶೀಲ್ಡ್​ ಹಾಗೂ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೊವ್ಯಾಕ್ಸಿನ್ ಲಸಿಕೆಯನ್ನು ವಿತರಿಸಲಾಗುತ್ತಿದೆ. ಜತೆಗೆ, ಮುಂದಿನ ಹಂತದಲ್ಲಿ ರಷ್ಯಾದ ಸ್ಪುಟ್ನಿಕ್-ವಿ ಲಸಿಕೆಯನ್ನು ಆಮದು ಮಾಡಿಕೊಂಡು ವಿತರಿಸಲು ಸರ್ಕಾರ ನಿರ್ಧರಿಸಿದೆ. ಇದೇ ಸಂದರ್ಭದಲ್ಲಿ ಲಸಿಕೆ ಉತ್ಪಾದನೆಗೆ ಸಂಬಂಧಿಸಿದಂತೆ ಪ್ರಮುಖ ಸಂಗತಿಯೊಂದನ್ನು ವಿಶ್ವ ವ್ಯಾಪಾರ ಸಂಘಟನೆಯ ಸಭೆಯಲ್ಲಿ ಚರ್ಚಿಸಲು ತೀರ್ಮಾನಿಸಲಾಗಿದ್ದು, ಈ ವಿಚಾರದಲ್ಲಿ ಭಾರತಕ್ಕೆ ಅಮೆರಿಕಾ ದೇಶ ಬೆಂಬಲ ಘೋಷಿಸಿದೆ.

ಕೊವಿಡ್ ಲಸಿಕೆಯ ಬೌದ್ಧಿಕ ಆಸ್ತಿ ಹಕ್ಕಿನ ರಕ್ಷಣೆ ವಿಚಾರವನ್ನು ವಿಶ್ವ ವ್ಯಾಪಾರ ಸಂಘಟನೆಯ ಸಭೆಯಲ್ಲಿ ಚರ್ಚಿಸಲು ನಿರ್ಣಯ ಕೈಗೊಳ್ಳಲಾಗಿದೆ. ಬೌದ್ಧಿಕ ಆಸ್ತಿ ಹಕ್ಕಿನ ರಕ್ಷಣೆಯಿಂದ ಕೊವಿಡ್​ ಲಸಿಕೆಗೆ ತಾತ್ಕಾಲಿಕ ವಿನಾಯಿತಿ ನೀಡಬೇಕೆಂಬ ಭಾರತದ ಬೇಡಿಕೆಗೆ ಅಮೆರಿಕಾ ಬೆಂಬಲ ಸೂಚಿಸಿದ್ದು, ಈ ವಿಚಾರ ಮುಂದಿನ ತಿಂಗಳು ನಡೆಯುವ ಸಭೆಯಲ್ಲಿ ಚರ್ಚೆಗೆ ಒಳಪಡಲಿದೆ.

ಕೊವಿಡ್ ಲಸಿಕೆಗೆ ಬೌದ್ಧಿಕ ಆಸ್ತಿ ಹಕ್ಕಿನ ವಿನಾಯಿತಿ ಸಿಕ್ಕರೆ ಪೇಟೆಂಟ್ ಹೊಂದಿಲ್ಲದ ಕಂಪನಿಯೂ ಲಸಿಕೆ ಉತ್ಪಾದಿಸಬಹುದಾಗಿದ್ದು, ಅಮೆರಿಕದ ಫೈಜರ್, ಮಾಡೆರ್ನಾ, ರಷ್ಯಾದ ಸ್ಪುಟ್ನಿಕ್ ಸೇರಿದಂತೆ ಎಲ್ಲ ಕೊರೊನಾ ಲಸಿಕೆಗಳನ್ನೂ ಪೇಟೆಂಟ್ ಇಲ್ಲದೆ ತಯಾರಿಸಬಹುದಾಗಿದೆ. ಸದ್ಯ ಲಸಿಕೆ ಕೊರತೆ ಎದುರಿಸುತ್ತಿರುವ ಭಾರತಕ್ಕೆ ಇದರಿಂದಾಗಿ ಹೆಚ್ಚು ಅನುಕೂಲವಾಗಲಿದೆ. ಭಾರತದ ಜತೆಗೆ ದಕ್ಷಿಣ ಆಫ್ರಿಕಾ ದೇಶಗಳು ಸಹ ಬೌದ್ಧಿಕ ಆಸ್ತಿ ಹಕ್ಕಿನ ರಕ್ಷಣೆಯಿಂದ ಕೊವಿಡ್​ ಲಸಿಕೆಗೆ ತಾತ್ಕಾಲಿಕ ವಿನಾಯಿತಿ ನೀಡಲು ಬೇಡಿಕೆ ಇಟ್ಟಿವೆ. ಬಹುಮುಖ್ಯವಾಗಿ ಭಾರತದ ಬೇಡಿಕೆಗೆ ಅಮೆರಿಕಾ ಬೆಂಬಲ ಸೂಚಿಸುತ್ತಿದ್ದಂತೆಯೇ ಫೈಜರ್, ಮಾಡೆರ್ನಾ ಕಂಪನಿಗಳ ಷೇರುಬೆಲೆ ಮಾರುಕಟ್ಟೆಯಲ್ಲಿ ಕುಸಿತ ಕಂಡಿರುವುದು ಗಮನಾರ್ಹವಾಗಿದೆ.

ಇಲ್ಲಿಯವರೆಗೆ ಅಮೇರಿಕಾ ಅಭಿವೃದ್ಧಿಪಡಿಸಿದ ಔಷಧಿ ವಸ್ತು ರಕ್ಷಣಾ ತಂತ್ರಜ್ಞಾನವನ್ನು ಉಚಿತವಾಗಿ ವಿದೇಶಕ್ಕೆ ನೀಡಲಾಗುತ್ತಿರಲಿಲ್ಲ. ಈ ಬಗ್ಗೆ ವಿಶ್ವದ ಮೂಲೆ ಮೂಲೆಯ ಜನರು ಮತ್ತು ಸರ್ಕಾರಗಳು ಅಮೆರಿಕದ ನೀತಿಯನ್ನು ತೀವ್ರವಾಗಿ ಟೀಕಿಸಿರುವ ಹಿನ್ನೆಲೆಯಲ್ಲಿ ಪೇಟೆಂಟ್​ಗೆ ವಿನಾಯತಿ ನೀಡುವ ಯೋಚನೆಗೆ ಬರಲಾಗಿದೆ. ಜತೆಗೆ, ಕೊರೊನಾ ವೈರಾಣುವನ್ನು ನಿಗ್ರಹಿಸುವಲ್ಲಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೈಜೋಡಿಸಿದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗುತ್ತದೆ ಎಂಬ ಅನಿಸಿಕೆಯನ್ನು ಎಲ್ಲರೂ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಅಮೆರಿಕ ತನ್ನ ನಿಲುವಿನಲ್ಲಿ ಬದಲಾವಣೆ ಮಾಡಿಕೊಳ್ಳಲು ಮುಂದಾಗಿದೆ.

ಇದನ್ನೂ ಓದಿ: Explainer: ಭಾರತದಲ್ಲಿ 2ನೇ ಡೋಸ್ ಕೊರೊನಾ ಲಸಿಕೆ ಪಡೆಯಲು ಏಕಿಷ್ಟು ಪರದಾಟ? ಪರಿಹಾರವೇನು?

(US Supports covid-19 vaccine patent waiver plan proposed by India and South Africa)

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ