ಒಂದು ಡೋಸ್​ ರೆಮ್​ಡೆಸಿವಿರ್​ಗೆ 15 ಸಾವಿರ; ಅರೆಸ್ಟ್​ ಡೋಸ್​ ಕೊಟ್ಟ ಬೆಂಗಳೂರು ಪೊಲೀಸರು, ಆರು ಮಂದಿ ಸೆರೆ

Remdesivir Black Marketing: ಈ ಮಧ್ಯೆ, ಸುಬ್ರಮಣ್ಯ ನಗರ ಪೊಲೀಸರಿಂದಲೂ ಕಾಳಸಂತೆಯಲ್ಲಿ ರೆಮ್​ಡೆಸಿವಿರ್ ಇಂಜಕ್ಷನ್​ ಮಾರಾಟ ಮಾಡ್ತಿದ್ದ ಅರೋಪಿಗಳ ಅರೆಸ್ಟ್ ಆಗಿದೆ. ಸುಬ್ರಮಣ್ಯನಗರ ಪೊಲೀಸರು ಒಟ್ಟು ಮೂವರು ಅರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.

ಒಂದು ಡೋಸ್​ ರೆಮ್​ಡೆಸಿವಿರ್​ಗೆ 15 ಸಾವಿರ; ಅರೆಸ್ಟ್​ ಡೋಸ್​ ಕೊಟ್ಟ ಬೆಂಗಳೂರು ಪೊಲೀಸರು, ಆರು ಮಂದಿ ಸೆರೆ
ಒಂದು ಡೋಸ್​ ರೆಮ್​ಡೆಸಿವಿರ್​ಗೆ 15 ಸಾವಿರ; ಅರೆಸ್ಟ್​ ಡೋಸ್​ ಕೊಟ್ಟ ಬೆಂಗಳೂರು ಪೊಲೀಸರು, ಆರು ಮಂದಿ ಸೆರೆ

ಬೆಂಗಳೂರು: ಕೊರೊನಾ ಮಾಹಾಮಾರಿ ನಡುವೆ ಧನಪಿಶಾಚಿಗಳ ಕಾಟ ಮುಂದುವರಿದಿದೆ. ಬೆಡ್​, ಆಕ್ಸಿಜನ್​, ಆಂಬುಲೆನ್ಸ್, ರೆಮ್​ಡೆಸಿವಿರ್​ ಇಂಜಕ್ಷನ್​ ಕಾಳಸಂತೆ ಮಾರಾಟ ಯಾವುದೇ ಎಗ್ಗಿಲ್ಲದೆ ಜೋರಾಗಿದೆ. ಆದರೆ ಬೆಂಗಳೂರು ಪೊಲೀಸರೂ ಸಹ ಫೀಲ್ಡ್​ಗೆ ಇಳಿದು ಇಂತಹ ರಕ್ಕಸರ ರಣಬೇಟೆಯಾಡುತ್ತಿದ್ದಾರೆ. ರಾಜಧಾನಿಯ ನಾನಾ ಭಾಗಗಳಲ್ಲಿ ಪೊಲೀಸ್​ ಉಪ ಆಯುಕ್ತರ ನೇತೃತ್ವದಲ್ಲಿ ದಾಳಿಗಳು ನಡೆದಿದ್ದು, ಸದ್ಯಕ್ಕೆ ಆರು ಮಂದಿಯನ್ನು ಸರಳುಗಳ ಹಿಂದೆ ಕಳಿಸಿದ್ದಾರೆ. ಜೆ.ಪಿ.ನಗರ, ನಾಗವಾರ, ಸುಬ್ರಮಣ್ಯ ನಗರ ಮತ್ತು ಯಲಹಂಕ ಭಾಗಗಳಲ್ಲಿ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ.

ಕಾಳಸಂತೆಯಲ್ಲಿ ರೆಮ್​ಡೆಸಿವಿರ್​ ಮಾರುತ್ತಿದ್ದ ಸುಳಿವು ಪಡೆದು ಬೆಂಗಳೂರಿನ ಜೆ.ಸಿ.ನಗರದ ಎಸಿಪಿ ನೇತೃತ್ವದಲ್ಲಿ ರೇಡ್ ಮಾಡಲಾಗಿದೆ. ಜೆ.ಪಿ. ನಗರದ ಮೆಡಿಕಲ್ ರೆಪ್​ ಜನಾರ್ದನ್​ ಬಳಿ 3 ರೆಮ್​ಡೆಸಿವಿರ್​ ಇಂಜಕ್ಷನ್​, ನಾಗವಾರದ ಮೆಡಿಕಲ್ ರೆಪ್ ದೀಪಕ್ ಬಳಿ 3 ವಯಲ್, ಯಲಹಂಕ ಆಸ್ಪತ್ರೆ ರಿಸೆಪ್ಷನಿಸ್ಟ್ ಲೋಕೇಶ್​ ಬಳಿ 4 ವಶ ಪಡೆಯಲಾಗಿದೆ.

ಮೂವರು ವಿರುದ್ದ ಜೆಸಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರತ್ಯೇಕ ಕೇಸ್ ದಾಖಲು ಮಾಡಿಕೊಳ್ಳಲಾಗಿದೆ. ಜೆ ಸಿ ನಗರ ಎಸಿಪಿ ರೀನಾ ಸುರ್ವ ನೇತ್ರತ್ವದಲ್ಲಿ ಕಾರ್ಯಚರಣೆ ನಡೆದಿದೆ.

ಸುಬ್ರಮಣ್ಯ ನಗರ ಪೊಲೀಸರಿಂದಲೂ ರೇಡ್:

ಈ ಮಧ್ಯೆ, ಸುಬ್ರಮಣ್ಯ ನಗರ ಪೊಲೀಸರಿಂದಲೂ ಕಾಳಸಂತೆಯಲ್ಲಿ ರೆಮ್​ಡೆಸಿವಿರ್ ಇಂಜಕ್ಷನ್​ ಮಾರಾಟ ಮಾಡ್ತಿದ್ದ ಅರೋಪಿಗಳ ಅರೆಸ್ಟ್ ಆಗಿದೆ. ಸುಬ್ರಮಣ್ಯನಗರ ಪೊಲೀಸರು ಒಟ್ಟು ಮೂವರು ಅರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ.ಅರೋಪಿ ನಂಬರ್ 1: ಜಾನಿ, ಎಸ್ಎಲ್ವಿ ಮೆಡಿಕಲ್ ಸ್ಟೋರ್, ಹೆಸರಘಟ್ಟ ರೋಡ್. ಇವನ ಬಳಿ ಒಟ್ಟು ಮೂರು ರೆಮ್​ಡೆಸಿವಿರ್​ ಇಂಜಕ್ಷನ್​ ಗಳು ಇದ್ದವು. ಅರೋಪಿ ನಂಬರ್ 2: ದಿನೇಶ್, ಲಿಟಲ್ ಪ್ಲವರ್ ನರ್ಸಿಂಗ್ ಕಾಲೇಜು. ಮಾರತ್ ಹಳ್ಳಿ ಬಳಿ. ಮತ್ತು ಅರೋಪಿ ನಂಬರ್ 3 ಶಂಕರ್ ಅಂತಾ, ಗಾಯತ್ರಿ ಡಯಗ್ನಾಸಿಸ್ಟ್ ಸೆಂಟರ್ ನಾಗರ ಬಾವಿ. ಈ ಎಲ್ಲಾ ಅರೋಪಿಗಳು ಒಂದು ಡೋಸ್ ಅನ್ನು ಹದಿನೈದು ಸಾವಿರಕ್ಕಿಂತ ಹೆಚ್ಚಿನ ಹಣಕ್ಕೆ ಮಾರಾಟ ಮಾಡ್ತಿದ್ದರು ಎನ್ನಲಾಗಿದೆ.

(remdesivir injection in black market bengaluru police arrested six persons)

BBMP Bed Blocking Scam: ಮತ್ತೊಂದು ಮಂತ್ರ ದಂಡ ಪ್ರಯೋಗಿಸಿದ ಸಂಸದ ತೇಜಸ್ವಿ ಸೂರ್ಯ; ನಂದನ್ ನಿಲೇಕಣಿ ನೆರವಿಗೆ ಅಸ್ತು