BBMP Bed Blocking Scam: ಮತ್ತೊಂದು ಮಂತ್ರ ದಂಡ ಪ್ರಯೋಗಿಸಿದ ಸಂಸದ ತೇಜಸ್ವಿ ಸೂರ್ಯ; ನಂದನ್ ನಿಲೇಕಣಿ ನೆರವಿಗೆ ಅಸ್ತು
Tejasvi Surya: ಈ ಬಗ್ಗೆ ಸ್ವತಃ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಸಂಸದ ತೇಜಸ್ವಿ ಸೂರ್ಯ ಈಗಾಗಲೇ ನಂದನ್ ನಿಲೇಕಣಿ ಮತ್ತು iSpirit @AProduct_nation ಸಂಸ್ಥೆಗಳ ಸಹಯೋಗಕ್ಕೆ ಮೊರೆಹೋಗಿದ್ದಾರೆ. ಇದಕ್ಕೆ ಸ್ಪಂದಿಸಿರುವ ನಂದನ್ ನಿಲೇಕಣಿ ಮತ್ತು iSpirit ಸಂಸ್ಥೆ We are ready to serve bangaloreans ಅಂದಿದ್ದಾರೆ.
ಕೋವಿಡ್ ಬೆಡ್ ಬ್ಲಾಕಿಂಗ್ ದಂಧೆಯನ್ನು ಪತ್ತೆ ಹಚ್ಚಿ ಕೊರೊನಾ ಸೋಂಕಿತರ ಪಾಲಿಗೆ ಆಶಾಕಿರಣವಾಗಿ ಕಾಣುತ್ತಿರುವ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಈಗ ಇನ್ನೂ ಒಂದು ಹೆಜ್ಜೆ ಮುಂದಿಟ್ಟು, ಸಾಫ್ಟ್ವೇರ್ ದಿಗ್ಗಜರನ್ನು ಎಡತಾಕಿದ್ದಾರೆ. ವ್ಯವಸ್ಥೆಯನ್ನು ಸರಿ ದಾರಿಗೆ ತರಲು ಕಂಕಣಕಟ್ಟಿ ನಿಂತಿರುವ ಯುವ ಸಂಸದ ತೇಜಸ್ವಿ ಸೂರ್ಯ ಅವರು ಈಗ ಅನೇಕ ಲೋಪಗಳಿಂದ ಕೂಡಿರುವ ಬಿಬಿಎಂಪಿ ಕೋವಿಡ್ ಬೆಡ್ ಹಂಚಿಕೆ ಸಾಫ್ಟ್ವೇರ್ ಅನ್ನು ಬಿಬಿಎಂಪಿ ಕಸದ ಬುಟ್ಟಿಗೆ ಹಾಕಿ ಸಾಫ್ಟ್ವೇರ್ ದಿಗ್ಗಜರಿಂದ ತ್ವರಿತವಾಗಿ ನೂತನ ಸಾಫ್ಟ್ವೇರ್ ತಯಾರಿಕೆಗೆ ಮನವಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಸ್ವತಃ ಟ್ವೀಟ್ ಮಾಡಿ ಮಾಹಿತಿ ನೀಡಿರುವ ಸಂಸದ ತೇಜಸ್ವಿ ಸೂರ್ಯ ಈಗಾಗಲೇ ನಂದನ್ ನಿಲೇಕಣಿ ಮತ್ತು iSpirit @AProduct_nation ಸಂಸ್ಥೆಗಳ ಸಹಯೋಗಕ್ಕೆ ಮೊರೆಹೋಗಿದ್ದಾರೆ. ಇದಕ್ಕೆ ಸ್ಪಂದಿಸಿರುವ ನಂದನ್ ನಿಲೇಕಣಿ ಮತ್ತು iSpirit ಸಂಸ್ಥೆ We are ready to serve bangaloreans ಅಂದಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಟ್ವೀಟ್ಗಳ ಸಾರಾಂಶ:
ಇಂದು ಬೆಳಿಗ್ಗೆ ಶ್ರೀ @NandanNilekani ರೊಂದಿಗೆ ಮಾತನಾಡಿ ಬಿಬಿಎಂಪಿ ಬೆಡ್ ಹಂಚಿಕೆಗೆ ಸಂಬಂಧಿಸಿದಂತೆ ಸಾಫ್ಟ್ ವೇರ್ ಅನ್ನು ಮರುವಿನ್ಯಾಸಗೊಳಿಸಲು ತಾಂತ್ರಿಕ ಸಹಕಾರ ಒದಗಿಸುವಂತೆ ಮನವಿ ಮಾಡಿದ್ದು, ಪರಿಣಿತರ ತಂಡವನ್ನು ಇದಕ್ಕೊಸ್ಕರವೇ ಸಜ್ಜುಗೊಳಿಸಿರುವುದು ಶ್ಲಾಘನೀಯ. ಶ್ರೀ ನಂದನ್ ನಿಲೇಕಣಿ ರವರ ಜನಪರ ಕಾಳಜಿ, ಬದ್ಧತೆ ಅಭಿನಂದನಾರ್ಹ ಎಂದಿದ್ದಾರೆ.
ಇಂದು ಬೆಳಿಗ್ಗೆ ಶ್ರೀ@NandanNilekani ರೊಂದಿಗೆ ಮಾತನಾಡಿ ಬಿಬಿಎಂಪಿ ಬೆಡ್ ಹಂಚಿಕೆಗೆ ಸಂಬಂಧಿಸಿದಂತೆ ಸಾಫ್ಟ್ ವೇರ್ ಅನ್ನು ಮರುವಿನ್ಯಾಸಗೊಳಿಸಲು ತಾಂತ್ರಿಕ ಸಹಕಾರ ಒದಗಿಸುವಂತೆ ಮನವಿ ಮಾಡಿದ್ದು, ಪರಿಣಿತರ ತಂಡವನ್ನು ಇದಕ್ಕೊಸ್ಕರವೇ ಸಜ್ಜುಗೊಳಿಸಿರುವುದು ಶ್ಲಾಘನೀಯ.
ಶ್ರೀ ನಂದನ್ ನಿಲೇಕಣಿ ರವರ ಜನಪರ ಕಾಳಜಿ,ಬದ್ಧತೆ ಅಭಿನಂದನಾರ್ಹ.
— Tejasvi Surya (@Tejasvi_Surya) May 5, 2021
ಇನ್ನು, ನುರಿತ ತಂತ್ರಜ್ಞರನ್ನು ಒಳಗೊಂಡಿರುವ ಈ ತಾಂತ್ರಿಕ ತಂಡವು, iSpirit @AProduct_nation ಸಂಸ್ಥೆಗಳ ಸಹಯೋಗದೊಂದಿಗೆ ಬೆಡ್ ಹಂಚಿಕೆಗೆ ಯಾರದೇ ಹಸ್ತಕ್ಷೇಪ ರಹಿತ, ಪಾರದರ್ಶಕ ವ್ಯವಸ್ಥೆ ಒಳಗೊಂಡ ಸಾಫ್ಟ್ ವೇರ್ ಅನ್ನು ಅಭಿವೃದ್ಧಿಗೊಳಿಸಲು ಸಹಕಾರ ನೀಡುತ್ತಿದ್ದು, ಇಡೀ ತಂಡಕ್ಕೆ ಬೆಂಗಳೂರು ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದಿದ್ದಾರೆ.
ನುರಿತ ತಂತ್ರಜ್ಞರನ್ನು ಒಳಗೊಂಡಿರುವ ಈ ತಾಂತ್ರಿಕ ತಂಡವು, iSpirit @AProduct_nation ಸಂಸ್ಥೆಗಳ ಸಹಯೋಗದೊಂದಿಗೆ ಬೆಡ್ ಹಂಚಿಕೆಗೆ ಹಸ್ತಕ್ಷೇಪ ರಹಿತ,ಪಾರದರ್ಶಕ ವ್ಯವಸ್ಥೆ ಒಳಗೊಂಡ ಸಾಫ್ಟ್ ವೇರ್ ಅನ್ನು ಅಭಿವೃದ್ಧಿಗೊಳಿಸಲು ಸಹಕಾರ ನೀಡುತ್ತಿದ್ದು, ಇಡೀ ತಂಡಕ್ಕೆ ಬೆಂಗಳೂರು ಜನತೆಯ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ.
— Tejasvi Surya (@Tejasvi_Surya) May 5, 2021
ಛೇ! ಉನ್ನತ ಐಎಎಸ್, ಐಪಿಎಸ್ ಅಧಿಕಾರಿಗಳದ್ದೇ ನಿಗಾ ಇದ್ದರೂ ನಡೆಯುತ್ತಿತ್ತಾ ಕೋವಿಡ್ ಬೆಡ್ ಬ್ಲಾಕಿಂಗ್ ದಂಧೆ!?
(BBMP Covid Bed Blocking Scam bengaluru south bjp mp tejasvi surya seeks nandan nilekani help to develop software)
ನಿನ್ನೆ ಸಂಸದ ತೇಜಸ್ವಿ ಸೂರ್ಯ ಪ್ರಯೋಗಿಸಿದ್ದ ಮಂತ್ರದಂಡದ ಫಲಶೃತಿ ಇಲ್ಲಿದೆ:
This afternoon BBMP website showed zero beds available in Bengaluru under Govt Quota.
Right now, it is showing 1504 beds as available.
System is reforming. pic.twitter.com/j59Q8Cuk8X
— Tejasvi Surya (@Tejasvi_Surya) May 4, 2021
Published On - 12:50 pm, Wed, 5 May 21