ಛೇ! ಉನ್ನತ ಐಎಎಸ್, ಐಪಿಎಸ್ ಅಧಿಕಾರಿಗಳದ್ದೇ ನಿಗಾ ಇದ್ದರೂ ನಡೆಯುತ್ತಿತ್ತಾ ಕೋವಿಡ್​ ಬೆಡ್ ಬ್ಲಾಕಿಂಗ್ ದಂಧೆ!?

BBMP Covid Bed Blocking Scam | ಹಾಗಿದ್ರೆ ಇದು ಐಎಎಸ್ ಹಾಗೂ ಐಪಿಎಸ್ ಗಳ ಗಮನಕ್ಕೆ ಬಂದೇ ಈ  ಕರಾಳ ದಂಧೆ ನಡೆಯುತ್ತಿತ್ತಾ? ಇಲ್ಲ ಇದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿಯೇ ಇರಲಿಲ್ಲವಾ? ಎಂಬ ಪ್ರಶ್ನೆಗಳೂ ಚಿತೆ ಆರುವುದಕ್ಕೂ ಮುನ್ನ ಜನರನ್ನು ಕಾಡತೊಡಗಿದೆ. ಉತ್ತರ ಶೀಘ್ರವೇ ಸರ್ಕಾರ ನಿಡಬೇಕಿದೆ. 

ಛೇ! ಉನ್ನತ ಐಎಎಸ್, ಐಪಿಎಸ್ ಅಧಿಕಾರಿಗಳದ್ದೇ ನಿಗಾ ಇದ್ದರೂ ನಡೆಯುತ್ತಿತ್ತಾ ಕೋವಿಡ್​ ಬೆಡ್ ಬ್ಲಾಕಿಂಗ್ ದಂಧೆ!?
ಛೇ! ಉನ್ನತ ಐಎಎಸ್, ಐಪಿಎಸ್ ಅಧಿಕಾರಿಗಳದ್ದೇ ನಿಗಾ ಇದ್ರೂ ನಡೆಯುತ್ತಿತ್ತಾ ಬೆಡ್ ಬ್ಲಾಕಿಂಗ್ ದಂಧೆ!?
Follow us
ಸಾಧು ಶ್ರೀನಾಥ್​
|

Updated on:May 05, 2021 | 11:04 AM

ಬೆಂಗಳೂರು: ನಿನ್ನೆ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬಿಬಿಎಂಪಿ ವತಿಯಿಂದ ನಡೆಯುತ್ತಿದ್ದ ಕೊರೊನಾ ಸೋಂಕಿತರಿಗಾಗಿನ ಬೆಡ್ ಬ್ಲಾಕಿಂಗ್ ದಂಧೆಯನ್ನು ಬಯಲಿಗೆಳೆದಿದ್ದೇ ಬಂತು ಜೇನುಗೂಡಿಗೆ ಕಲ್ಲು ಒಗೆದಂತಾಗಿದೆ ಇಡೀ ಪ್ರಕರಣ.  More skeletons tumbling out of BBMP cupboard ಅಂತಾಗಿದೆ. ರಾತ್ರೋರಾತ್ರಿ ಪ್ರಕರಣವನ್ನು ನಿನ್ನೆಯೇ ಸಿಸಿಬಿಗೆ ವಹಿಸಲಾಗಿದ್ದು,  ಬಿಬಿಎಂಪಿ ಪೋರ್ಟ​​ಲ್​ ಮೂಲಕ ಬೆಡ್​ ಬ್ಲಾಕಿಂಗ್ ಕೇಸ್​ಗೆ ಸಂಬಂಧಿಸಿದಂತೆ ಇಬ್ಬರು ವೈದ್ಯರು ಸೇರಿದಂತೆ ಒಟ್ಟು 8 ಮಂದಿಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.  ಈ ಮಧ್ಯೆ, ಅನೇಕ ಕುತೂಹಲಕಾರಿ ಆದರೆ ಗಂಭೀರ ಪ್ರಶ್ನೆಗಳು ಉದ್ಭವವಾಗಿವೆ.  ಹಿರಿಯ ಐಎಎಸ್, ಐಪಿಎಸ್ ಅಧಿಕಾರಿಗಳು ನಿಗಾ ಇದ್ದರು ನಡೆಯುತ್ತಿತ್ತಾ ಬೆಡ್ ಬ್ಲಾಕಿಂಗ್ ದಂಧೆ ನಡೆದಿತ್ತಾ ಎಂಬ ಮಹುಮುಖ್ಯ ಪ್ರಶ್ನೆ ಎದುರಾಗಿದೆ.

ಬೆಂಗಳೂರಿನಲ್ಲಿ ನಡೆಯುತ್ತಿದ್ದ ಬೆಡ್ ಬ್ಲಾಕಿಂಗ್ ದಂಧೆಯನ್ನ ಯುವ ಸಂಸದ ತೇಜಸ್ವಿ ಸೂರ್ಯ ಅವರೇನೋ  ಹೊರಗೆಳದಿದ್ದು ಸರಿ. ಆದರೆ ಬೆಂಗಳೂರಿನಲ್ಲಿ ಖಾಸಗಿ ಆಸ್ಪತ್ರೆಗಳ ಬೆಡ್ ನಿರ್ವಹಣೆಗೆ ಏಪ್ರಿಲ್ 6 ರಂದೇ ಹಿರಿಯ ಐಎಎಸ್ – ಐಪಿಎಸ್ ಅಧಿಕಾರಿಗಳನ್ನು ಸರ್ಕಾರ ನೇಮಿಸಿತ್ತು.

ಅಸುನೀಗಿದ ಅಮಾಯಕ ಜನರ ಕುಟುಂಬಸ್ಥರು ಆಕ್ರೋಶದಿಂದ ಈ ಪ್ರಶ್ನೆಗಳನ್ನ ಕೇಳುತ್ತಿದ್ದಾರೆ..

ಬೆಂಗಳೂರಿನ ಎಲ್ಲಾ ವಲಯಗಳಿಗೂ ಓರ್ವ ಐಪಿಎಸ್ ಅಧಿಕಾರಿ ಹಾಗೂ ಓರ್ವ ಐಎಎಸ್ ಅಧಿಕಾರಿಯನ್ನು ನೇಮಕ ಮಾಡಲಾಗಿತ್ತು. ನೇಮಕ ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅದೇಶ ಹೊರಡಿಸಿದ್ದರು. ಇಷ್ಟಿದ್ದರೂ ಈ ಬೆಡ್ ಬ್ಲಾಕಿಂಗ್ ದಂಧೆ ನಡೆಯುತ್ತಿದ್ದಾದರೂ ಹೇಗೆ? ಎಂಬುದು ಬಿಲಿಯನ್​ ಡಾಲರ್​ ಪ್ರಶ್ನೆಯಾಗಿದೆ. ಬಿಬಿಎಂಪಿ ಅಧಿಕಾರಿಗಳ ಕರಾಳ ದಂಧೆಯಿಂದಾಗಿ ಪ್ರಾಣ ಕಳೆದುಕೊಂಡ ಅಮಾಯಕ ಜನರ ಕುಟುಂಬಸ್ಥರು ಆಕ್ರೋಶದಿಂದ ಈ ಪ್ರಶ್ನೆ ಕೇಳುತ್ತಿದ್ದಾರೆ.

ಇದನ್ನೂ ಓದಿ: ಕೊರೊನಾ ನಿಯಂತ್ರಣಕ್ಕಾಗಿ ವಲಯವಾರು ಉಸ್ತುವಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ನೇಮಕ

ಹಾಗಿದ್ರೆ ಇದು ಐಎಎಸ್ ಹಾಗೂ ಐಪಿಎಸ್ ಗಳ ಗಮನಕ್ಕೆ ಬಂದೇ ಈ  ಕರಾಳ ದಂಧೆ ನಡೆಯುತ್ತಿತ್ತಾ? ಇಲ್ಲ ಇದರ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿಯೇ ಇರಲಿಲ್ಲವಾ? ಎಂಬ ಪ್ರಶ್ನೆಗಳೂ ಚಿತೆ ಆರುವುದಕ್ಕೂ ಮುನ್ನ ಜನರನ್ನು ಕಾಡತೊಡಗಿದೆ. ಉತ್ತರ ಶೀಘ್ರವೇ ಸರ್ಕಾರ ನಿಡಬೇಕಿದೆ.

(bbmp covid bed blocking scam were senior ias ips officers failed to detect it or were the part of scam)

Also Read:

ಆಸ್ಪತ್ರೆಯಲ್ಲಿ ನರ್ಸ್​, ವೈದ್ಯರ ಜಗಳ; ಕಪಾಳಮೋಕ್ಷ ಮಾಡಿ ನಿಂದಿಸಿದ ವಿಡಿಯೋ ವೈರಲ್​

ಕೊರೊನಾ ನಿಯಂತ್ರಣಕ್ಕಾಗಿ ವಲಯವಾರು ಉಸ್ತುವಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ನೇಮಕ

Published On - 10:54 am, Wed, 5 May 21