ಚಾಮರಾಜನಗರ: ಜಿಲ್ಲಾಡಳಿತ ನಿರ್ಲಕ್ಷ್ಯದಿಂದ 24 ವರ್ಷದ ಯುವಕ ಸಾವು ಎಂಬ ಗಂಭೀರ ಆರೋಪ
ಚಾಮರಾಜನಗರ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿಸುತ್ತಿದ್ದರು. ಇದರಿಂದಲೇ 24 ವರ್ಷದ ಯುವಕ ಸಾವಿಗೀಡಾಗಿದ್ದಾನೆ ಎಂಬ ಆರೋಪ ಕೇಳಿ ಬರುತ್ತಿದೆ.
ಚಾಮರಾಜನಗರ: ಮಂಗಳವಾರ ತಡರಾತ್ರಿ ಚಿಕಿತ್ಸೆ ಸಿಗದೇ 24 ವರ್ಷದ ಯುವಕ ಬಲಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆಯೇ ಜಿಲ್ಲಾಡಳಿತ ನಿರ್ಲಕ್ಷ್ಯ ತೋರಿಸುತ್ತಿದ್ದರು. ಇದರಿಂದಲೇ ಯುವಕ ಸಾವಿಗೀಡಾಗಿದ್ದನೆ ಎಂಬ ಆರೋಪ ಕೇಳಿ ಬರುತ್ತಿದೆ. ಕಳೆದ ಮೂರು ದಿನಗಳ ಹಿಂದೆ ಆತನಿಗೆ ಕೊರೊನಾ ಪಾಸಿಟಿವ್ ವರದಿಯಾಗಿತ್ತು. ಆ ಬಳಿಕ ವೈದ್ಯರು ಆತನನ್ನ ಹೋಂ ಐಸುಲೇಷನ್ಗೆ ಕಳುಹಿಸಿ ಕೊಟ್ಟಿದ್ದರು. ಹೋಂ ಐಸೂಲೇಷನ್ನಲ್ಲಿ ಇದ್ದ ಯುವಕನ ಮೇಲೆ ಏಕೆ ನಿಗಾ ಇಡಲಿಲ್ಲ. ಐಸೂಲೇಷನ್ನಲ್ಲಿ ಇದ್ದ ಯುವಕನನಿಗೆ ಫಲ್ಸ್ ಆಕ್ಸಿಮೀಟರ್ ಕಡಿಮೆಯಾಗಿದೆ. ಅದು ಹೇಗೆ? ಎಂಬ ಪ್ರಶ್ನೆಗಳು ಕೇಳಿ ಬರುತ್ತಿವೆ.
ಹೋಂ ಐಸೂಲೇಷನ್ ನಲ್ಲಿ ಇರುವ ಕರೋನ ಸೋಂಕಿತರನ್ನ ವೈದ್ಯರು ಪರೀಕ್ಷೆ ಮಾಡುತ್ತಿಲ್ಲವೇ? ಎಂಬ ಆರೋಪ ಕೇಳಿ ಬಂದಿದೆ. ಜಿಲ್ಲೆಯ 3,237 ಸಕ್ರಿಯ ಪ್ರಕರಣಗಳ ಪೈಕಿ 1,832 ಮಂದಿ ಹೋಂ ಐಸೂಲೇಷನ್ನಲ್ಲಿ ಇದ್ದಾರೆ. ಹೋಂ ಐಸೂಲೇಷನ್ನಲ್ಲಿ ಇದ್ದು ಸ್ಥಿತಿ ಗಂಭೀರವಾದ ವೇಳೆಯಲ್ಲೂ ರೋಗಿಗಳನ್ನು ಆಸ್ಪತ್ರೆಗೆ ದಾಖಲು ಮಾಡಿ ಕೊಳ್ಳುತ್ತಿಲ್ಲ. ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಡುವೆ ಶೀತಲ ಸಮರ ಇದೆಯೇ? ಎಂಬೆಲ್ಲಾ ಪ್ರಶ್ನೆಗಳು ಉದ್ಭವವಾಗಿದೆ.
ಚಿಕ್ಕಬಳ್ಳಾಪುರದಲ್ಲಿ ವೆಂಟಿಲೇಟರ್ ಸಿಗದೆ ನರಳಿ ಮೃತಪಟ್ಟ ಸೋಂಕಿತೆ ಚಿಕ್ಕಬಳ್ಳಾಪುರ ನಗರದ ಸುರಕ್ಷಾ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು, ಶಿಡ್ಲಘಟ್ಟ ತಾಲೂಕಿನ ಜೆ.ವೆಂಕಟಾಪುರದ ನಿವಾಸಿ ಯಶೋದಮ್ಮ (50) ಸಾವಿಗೀಡಾಗಿದ್ದಾರೆ. ವೆಂಟಿಲೇಟರ್ ಬೆಡ್ ನೀಡುವಂತೆ ನಿನ್ನೆ ಮೃತ ಮಹಿಳೆಯ ಸಂಬಂಧಿಕರು ಬೇಡಿಕೊಂಡಿದ್ದರು. ಆದರೂ ಕೂಡಾ ಬೆಡ್ ಇಲ್ಲವೆಂದು ವೈದ್ಯರು ಅವರನ್ನು ಹಿಂತಿರುಗಿಸಿ ಕಳುಹಿಸಿದ್ದರು. ಕೊನೆಗೂ ಬೆಡ್ ಸಿಗದೇ ಯಶೋಧಮ್ಮಾ ಕೆನಿಯುಸಿರೆಳೆದಿದ್ದಾರೆ.
ಕೊಪ್ಪಳ ದೋಟಿಹಾಳ ಗ್ರಾಮದಲ್ಲಿ 40ಕ್ಕೂ ಹೆಚ್ಚು ಜನರಿಗೆ ಕೊರೊನಾ ದೃಢ ಪ್ರತಿನಿತ್ಯ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಕೊಪ್ಪಳ ಜಿಲ್ಲೆಯ ಒಂದೇ ಗ್ರಾಮದಲ್ಲಿ 40 ಕ್ಕೂ ಹೆಚ್ಚು ಜನರಿಗೆ ಸೋಂಕು ದೃಢಪಟ್ಟಿದೆ. ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದಲ್ಲಿ ಕೊರೊನಾ ಆರ್ಭಟ ಹೆಚ್ಚಾಗಿದ್ದು, ಇಡೀ ಗ್ರಾಮಕ್ಕೆ ಸ್ನಾನಿಟೈಸರ್ ಸಿಂಪಡಣೆ ಮಾಡಲಾಗಿದೆ. ಇದನ್ನೂ ಓದಿ: ಕೊರೊನಾ ಸೋಂಕಿಗೆ ಇಬ್ಬರು ಪೊಲೀಸರು ಬಲಿ; ಜಿಲ್ಲೆಯಾದ್ಯಂತ 25 ಸಿಬ್ಬಂದಿಗಳಿಗೆ ಕೊವಿಡ್ ಧೃಡ
ಕೊರೊನಾ ಸೋಂಕಿಗೆ ಇಬ್ಬರು ಪೊಲೀಸರು ಬಲಿ; ಜಿಲ್ಲೆಯಾದ್ಯಂತ 25 ಸಿಬ್ಬಂದಿಗಳಿಗೆ ಕೊವಿಡ್ ಧೃಡ