AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಧಿತ ನೇತ್ರಾವತಿ ಈವೆಂಟ್ ಬ್ಯುಸಿನೆಸ್, ಸಾಮಾಜಿಕ ಕಾರ್ಯಕರ್ತೆ; ಯುವಕ ರೋಹಿತ್ ಆಕೆಯ ಬಾಲ್ಯದ ಗೆಳೆಯನ ಮಗ: ಡಿಸಿಪಿ ಪಾಂಡೆ

ಇನ್ನು ಈ ಮಂದಿ ಎಷ್ಟು ಜನರಿಗೆ ಈ ರೀತಿಯಾಗಿ ಬೆಡ್ ನೀಡಿದ್ದಾರೆ ಎಂಬುದರ ಒಟ್ಟಾರೆ ಮಾಹಿತಿಗಾಗಿ ತನಿಖೆ ನಡೆಯುತ್ತಿದೆ. ಸದ್ಯ ಐದು ಬೆಡ್ ವಿಚಾರ ಮಾತ್ರ ಗೊತ್ತಾಗಿದೆ. ಇವರು ವಾರ್ ರೂಂನಲ್ಲಿ ತಮ್ಮದೇ ಆದ ಸೊರ್ಸ್ ಇಟ್ಟುಕೊಂಡಿರುವ ಶಂಕೆ ಇದೆ. . ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ

ಬಂಧಿತ ನೇತ್ರಾವತಿ ಈವೆಂಟ್ ಬ್ಯುಸಿನೆಸ್, ಸಾಮಾಜಿಕ ಕಾರ್ಯಕರ್ತೆ; ಯುವಕ ರೋಹಿತ್ ಆಕೆಯ ಬಾಲ್ಯದ ಗೆಳೆಯನ ಮಗ: ಡಿಸಿಪಿ ಪಾಂಡೆ
ಬಂಧಿತ ಮಹಿಳೆ ನೇತ್ರಾವತಿ ಈವೆಂಟ್ ಬ್ಯುಸಿನೆಸ್, ಸಾಮಾಜಿಕ ಕಾರ್ಯಕರ್ತೆ; ಬಂಧಿತ ಯುವಕ ರೋಹಿತ್ ಆಕೆಯ ಬಾಲ್ಯ ಗೆಳೆಯರ ಮಗ: ಡಿಸಿಪಿ ಹರೀಶ್ ಪಾಂಡೆ
ಸಾಧು ಶ್ರೀನಾಥ್​
|

Updated on: May 05, 2021 | 12:18 PM

Share

ಬೆಂಗಳೂರು: ಬಿಬಿಎಂಪಿ ಪೋರ್ಟ​​ಲ್​ ಮೂಲಕ ಬೆಡ್​ ಬ್ಲಾಕಿಂಗ್ ಪ್ರಕರಣ ಸದ್ಯಕ್ಕೆ ಬೆಂಗಳೂರು ದಕ್ಷಿಣ ವಲಯದಲ್ಲಿ ಬೆಳಕಿಗೆ ಬಂದಿದೆ. ಬೆಡ್ ಬ್ಲಾಕಿಂಗ್ ದಂಧೆ ಪ್ರಕರಣದಲ್ಲಿ ಈಗಾಗಲೇ ಇಬ್ಬರನ್ನು ಬಂಧಿಸಲಾಗಿದೆ. ಈ ಬಗ್ಗೆ ಸಂಬಂಧ ಪಟ್ಟ ಡಿಸಿಪಿಯಾದ ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಹೇಳುವುದೇನು ಎಂಬುದನ್ನು ನೋಡಿದಾಗ.. 

ಡಿಸಿಪಿ ಹರೀಶ್ ಪಾಂಡೆ ಹೇಳಿಕೆ ಸಾರಾಂಶ.. ಆರೋಪಿಗಳು ವಾಟ್ಸ್ ಆ್ಯಪ್ ಗಳಲ್ಲಿ ನಂಬರ್ ಹಂಚಿಕೆ ಮಾಡುತಿದ್ದರು. ಈ ವೇಳೆ ಬೆಡ್ ಅಗತ್ಯ ಅಂತ ಕರೆ ಬಂದಾಗ ಹಣಕ್ಕೆ ಬೇಡಿಕೆ ಇಟ್ಟು ಬೆಡ್ ನೀಡೊ ದಂಧೆ ಮಾಡಿದ್ದಾರೆ. ತನಿಖೆ ವೇಳೆ ಸದ್ಯ ಒಟ್ಟು ಐದು ಕೇಸ್ ಪತ್ತೆಯಾಗಿದೆ. ಇನ್ನು ಮಾಡಿರುವ ಶಂಕೆಯೂ ಇದೆ. ಬಂಧಿತ ಮಹಿಳೆ ನೇತ್ರಾವತಿ ಈ ಹಿಂದೆ, ಈವೆಂಟ್ ಬ್ಯುಸಿನೆಸ್ ಮಾಡುತಿದ್ದರು. ಬಳಿಕ ಕ್ಲೋಸ್ ಆದ ಮೇಲೆ ಸಾಮಾಜಿಕ ಕಾರ್ಯಕರ್ತೆಯಾಗಿ ತೊಡಗಿಸಿಕೊಂಡಿದ್ದಾರೆ. ಇನ್ನು. ಬಂಧಿತ ವ್ಯಕ್ತಿ ರೋಹಿತ್. ಆಕೆಯ ಬಾಲ್ಯ ಗೆಳೆಯರೊಬ್ಬರ ಮಗ. ಆತ ಈಕೆಯ ಜೊತೆ ಭಾಗಿಯಾಗಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದ.

ಇನ್ನು ಈ ಮಂದಿ ಎಷ್ಟು ಜನರಿಗೆ ಈ ರೀತಿಯಾಗಿ ಬೆಡ್ ನೀಡಿದ್ದಾರೆ ಎಂಬುದರ ಒಟ್ಟಾರೆ ಮಾಹಿತಿಗಾಗಿ ತನಿಖೆ ನಡೆಯುತ್ತಿದೆ. ಸದ್ಯ ಐದು ಬೆಡ್ ವಿಚಾರ ಮಾತ್ರ ಗೊತ್ತಾಗಿದೆ. ಇವರು ವಾರ್ ರೂಂನಲ್ಲಿ ತಮ್ಮದೇ ಆದ ಸೊರ್ಸ್ ಇಟ್ಟುಕೊಂಡಿರುವ ಶಂಕೆ ಇದೆ. ಹುಡುಗರು ಯಾರು ಅಂತ ತನಿಖೆ ನಡೆಯ ಬೇಕು. ಇದರ ಜೊತೆಗೆ ಬೆಡ್ ಅಲಾಟ್ ನ ಸಾಫ್ಟ್ ವೇರ್ ನಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿಕೊಂಡಿದ್ದಾರೆ. ಬೆಡ್ ಬಗ್ಗೆ ಬ್ಲಾಕ್ ಹಾಗೂ ಅನ್ ಬ್ಲಾಕ್ ಮಾಡಿರುವ ಕೆಲಸವೂ ಆಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಮೋಟೊ ಕೇಸ್ ಮಾಡಿಕೊಂಡಿದ್ದೆವು. ಸದ್ಯ ಆ ಕೇಸ್ ಕೂಡ ಈಗ ಸಿಸಿಬಿಗೆ ವರ್ಗಾ ಮಾಡಲಾಗಿದೆ. ಸಿಸಿಬಿಯಿಂದ ತನಿಖೆ ನಡೆಯಲಿದೆ.

(bbmp covid bed blocking scam arrested woman nethravathi and youth rohith are well known to each other says dcp harish pande)