ಕೊರೊನಾ ನಿಯಂತ್ರಣಕ್ಕಾಗಿ ವಲಯವಾರು ಉಸ್ತುವಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ನೇಮಕ

ನಿಯೋಜನೆಗೊಂಡ ವಲಯಗಳಿಗೆ ನಾಳೆಯೇ (ಏಪ್ರಿಲ್ 22) ಭೇಟಿ ನೀಡಿ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಏ. 26ರೊಳಗೆ ಪೊಲೀಸ್ ಮಹಾನಿರ್ದೇಶಕರಿಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ.

  • TV9 Web Team
  • Published On - 23:11 PM, 21 Apr 2021
ಕೊರೊನಾ ನಿಯಂತ್ರಣಕ್ಕಾಗಿ ವಲಯವಾರು ಉಸ್ತುವಾರಿಗೆ ಹಿರಿಯ ಪೊಲೀಸ್ ಅಧಿಕಾರಿಗಳ ನೇಮಕ
ಕರ್ನಾಟಕ ಡಿಜಿಪಿ ಪ್ರವೀಣ್​ ಸೂದ್​

ಬೆಂಗಳೂರು: ಕೊರೊರೊ ಸೋಂಕು ನಿಯಂತ್ರಣಕ್ಕಾಗಿ ರಾಜ್ಯದ ವಲಯವಾರು ಉಸ್ತುವಾರಿಗಳಾಗಿ ಹಿರಿಯ ಪೊಲೀಸ್ ಅಧಿಕಾರಿಗಳನ್ನು ನೇಮಿಸಿ ರಾಜ್ಯ ಸರ್ಕಾರವು ಆದೇಶ ಹೊರಡಿಸಿದೆ. ಗೃಹ ಇಲಾಖೆ ಕೈಗೊಳ್ಳುವ ಕ್ರಮಗಳ ಪರಿಣಾಮಕಾರಿ ಅನುಷ್ಠಾನವನ್ನು ಇವರು ಪರಾಮರ್ಶೆ ನಡೆಸಲಿದ್ದಾರೆ. ರಾಜ್ಯ ಸರ್ಕಾರ ಕಾಲಕಾಲಕ್ಕೆ ಹೊರಡಿಸುವ ಮಾರ್ಗಸೂಚಿ ಪಾಲನೆಯ ವಿಚಾರವನ್ನೂ ಈ ಐಪಿಎಸ್​ ಅಧಿಕಾರಿಗಳು ಗಮನಿಸಲಿದ್ದಾರೆ.

ವಿಜಯಪುರ, ಬಾಗಲಕೋಟೆ ಮತ್ತು ಬೆಳಗಾವಿ ಜಿಲ್ಲೆಗಳಿರುವ ಉತ್ತರ ವಲಯದ ಉಸ್ತುವಾರಿಯಾಗಿ ಭಾಸ್ಕರ್​ ರಾವ್, ಬಳ್ಳಾರಿ ಮತ್ತು ರಾಯಚೂರು ಜಿಲ್ಲೆಗಳಿರುವ ಬಳ್ಳಾರಿ ವಲಯ ಉಸ್ತುವಾರಿಯಾಗಿ ಎ.ಎಸ್​.ಎನ್.ಮೂರ್ತಿ, ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಿರುವ ದಕ್ಷಿಣ ವಲಯ ಉಸ್ತುವಾರಿಯಾಗಿ ಅಮೃತ್ ಪೌಲ್ ಅವರನ್ನು ನೇಮಿಸಲಾಗಿದೆ.

ಬೀದರ್, ಕಲಬುರಗಿ ಜಿಲ್ಲೆಗಳಿರುವ ಈಶಾನ್ಯ ವಲಯ ಉಸ್ತುವಾರಿಯಾಗಿ ಅರುಣ್ ಚಕ್ರವರ್ತಿ, ಬೆಂಗಳೂರು ಗ್ರಾಮಾಂತರ, ತುಮಕೂರು ಜಿಲ್ಲೆಗಳಿರುವ ಕೇಂದ್ರ ವಲಯ ಉಸ್ತುವಾರಿಯಾಗಿ ಸೀಮಂತ್ ಕುಮಾರ್ ಸಿಂಗ್​, ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಿರುವ ಪೂರ್ವ ವಲಯ ಉಸ್ತುವಾರಿಯಾಗಿ ಉಮೇಶ್​ಕುಮಾರ್, ನಿಂಬಾಳ್ಕರ್​​ಗೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿರುವ ಪಶ್ಚಿಮ ವಲಯ ಉಸ್ತುವಾರಿಯಾಗಿ ಹೇಮಂತ್ ನಿಂಬಾಳ್ಕರ್​ ಅವರನ್ನು ನೇಮಿಸಲಾಗಿದೆ.

ನಿಯೋಜನೆಗೊಂಡ ವಲಯಗಳಿಗೆ ನಾಳೆಯೇ (ಏಪ್ರಿಲ್ 22) ಭೇಟಿ ನೀಡಿ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಏ. 26ರೊಳಗೆ ಪೊಲೀಸ್ ಮಹಾನಿರ್ದೇಶಕರಿಗೆ ವರದಿ ನೀಡುವಂತೆ ಸೂಚನೆ ನೀಡಲಾಗಿದೆ. ಕೊವಿಡ್ ಸಮಸ್ಯೆ ಮುಗಿಯುವವರೆಗೂ ತಮ್ಮ ವಲಯಗಳ ಜಿಲ್ಲೆಗಳಿಗೆ ನಿಯಮಿತ ಭೇಟಿ ನೀಡಬೇಕು ಎಂದು ವಲಯವಾರು ಉಸ್ತುವಾರಿ ಅಧಿಕಾರಿಗಳಿಗೆ ಸರ್ಕಾರ ಸೂಚನೆ ನೀಡಿದೆ.

(Senior police officials appointed to take note of implementation of coronavirus guidelines issued by Karnataka govt)

ಇದನ್ನೂ ಓದಿ: ಪೊಲೀಸರಿಗೆ ಚಿಕಿತ್ಸೆ ನಿರಾಕರಿಸಿದರೆ ಶಿಸ್ತುಕ್ರಮ; ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್​ ಎಚ್ಚರಿಕೆ

ಇದನ್ನೂ ಓದಿ: No Mask, Pay Fine : ಬಳ್ಳಾರಿಯಲ್ಲಿ ಮಾಸ್ಕ್‌ ಧರಿಸದವರಿಗೆ ಪೊಲೀಸ್‌ ರುಚಿ.!