ಪೊಲೀಸರಿಗೆ ಚಿಕಿತ್ಸೆ ನಿರಾಕರಿಸಿದರೆ ಶಿಸ್ತುಕ್ರಮ; ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್​ ಎಚ್ಚರಿಕೆ

ಪೊಲೀಸರಿಗೆ ಚಿಕಿತ್ಸೆ ನಿರಾಕರಿಸಿದರೆ ಶಿಸ್ತುಕ್ರಮ; ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್​ ಎಚ್ಚರಿಕೆ
ಕರ್ನಾಟಕ ಡಿಜಿಪಿ ಪ್ರವೀಣ್​ ಸೂದ್​

ಕೊವಿಡ್ ಸೇರಿದಂತೆ ಇತರೆ ಕಾಯಿಲೆಯಿಂದ ಬಳಲುವವರನ್ನು ಕಚೇರಿ ಕರ್ತವ್ಯಕ್ಕೆ ಮಾತ್ರ ನೇಮಿಸಬೇಕು. ಪೊಲೀಸ್ ಸಿಬ್ಬಂದಿ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಠಾಣೆಗಳ ಹೊರಗೆ, ಒಳ ಆವರಣ ಸ್ಯಾನಿಟೈಸ್​ ಮಾಡಬೇಕು ಎಂದು ಪ್ರವೀಣ್ ಸೂದ್ ಹೇಳಿದ್ದಾರೆ.

Ghanashyam D M | ಡಿ.ಎಂ.ಘನಶ್ಯಾಮ

|

Apr 18, 2021 | 6:24 PM


ಬೆಂಗಳೂರು: ಕರ್ನಾಟಕದಲ್ಲಿ ದಿನೇದಿನೆ ಕೊರೊನಾ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರು ತಮ್ಮ ಯೋಗಕ್ಷೇಮದ ಬಗ್ಗೆ ಅಗತ್ಯ ಕ್ರಮಕೈಗೊಳ್ಳಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್​ ಸೂಚನೆ ನೀಡಿದ್ದಾರೆ. 45 ವರ್ಷ ಮೇಲ್ಪಟ್ಟ ಸಿಬ್ಬಂದಿ ಮತ್ತು ಕುಟುಂಬದ ಎಲ್ಲ ಸದಸ್ಯರೂ ಕಡ್ಡಾಯವಾಗಿ ಲಸಿಕೆ ಹಾಕಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕೊವಿಡ್ ಸೇರಿದಂತೆ ಇತರೆ ಕಾಯಿಲೆಯಿಂದ ಬಳಲುವವರನ್ನು ಕಚೇರಿ ಕರ್ತವ್ಯಕ್ಕೆ ಮಾತ್ರ ನೇಮಿಸಬೇಕು. ಪೊಲೀಸ್ ಸಿಬ್ಬಂದಿ 3 ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಬೇಕು. ಠಾಣೆಗಳ ಹೊರಗೆ, ಒಳ ಆವರಣ ಸ್ಯಾನಿಟೈಸ್​ ಮಾಡಬೇಕು. ಕರ್ತವ್ಯದ ಸಮಯದಲ್ಲಿ ಮಾಸ್ಕ್, ಫೇಸ್​ಶೀಲ್ಡ್ ಕಡ್ಡಾಯವಾಗಿ ಧರಿಸಬೇಕು. ಪೊಲೀಸ್ ಸಿಬ್ಬಂದಿ, ಕುಟುಂಬಸ್ಥರ ನೆರವಿಗೆ ಸಮನ್ವಯಾಧಿಕಾರಿ ನೇಮಿಸಲಾಗುವುದು ಎಂದು ತಿಳಿಸಿದ್ದಾರೆ.

ಠಾಣೆಗೆ ಸಾರ್ವಜನಿಕರ ಭೇಟಿಗೆ ಪ್ರತ್ಯೇಕ ವ್ಯವಸ್ಥೆ ಮಾಡಬೇಕು. ‘ಆರೋಗ್ಯ ಭಾಗ್ಯ’ದಡಿ ನೋಂದಾಯಿತ ಆಸ್ಪತ್ರೆಗಳು ಪೊಲೀಸರಿಗೆ ಚಿಕಿತ್ಸೆ ನಿರಾಕರಿಸಿದರೆ ಕ್ರಮ ಜರುಗಿಸಲಾಗುವುದು. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಸ್ವಚ್ಛತೆಗೆ ಗಮನ ನೀಡಬೇಕು. ವಾಹನಗಳನ್ನು ಆಗಾಗ ಸ್ಯಾನಿಟೈಸ್ ಮಾಡಬೇಕು ಎಂದರು.

ಪ್ರಕರಣದ ತನಿಖೆ, ಆರೋಪಿಗಳ ದಸ್ತಗಿರಿಗೆ ಈ ಹಿಂದೆ ಅನುಸರಿಸಿದ ಕ್ರಮಗಳನ್ನೇ ಮುಂದುವರಿಸಬೇಕು. ಪೊಲೀಸರು ಕೂಡ ಕೊವಿಡ್ ಮಾರ್ಗಸೂಚಿ ಪಾಲಿಸಬೇಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್​ ಸೂಚನೆ ನೀಡಿದ್ದಾರೆ.

ಮೇಡಿ ಅಗ್ರಹಾರ ಚಿತಾಗಾರದ ಬಾಗಿಲು ಬಂದ್; ಅಂತ್ಯಕ್ರಿಯೆ ಮಾಡಿ ಬಸವಳಿದ ಸಿಬ್ಬಂದಿ
ಬೆಂಗಳೂರು ನಗರದ ಹೊರವಲದಲ್ಲಿರುವ ಮೇಡಿ ಅಗ್ರಹಾರದ ವಿದ್ಯುತ್ ಚಿತಾಗಾರದ ಬಾಗಿಲನ್ನು ಸೆಕ್ಯುರಿಟಿ ಗಾರ್ಡ್​ಗಳು ಮುಚ್ಚಿದ್ದಾರೆ. ಕೊರೊನಾ ಸೋಂಕಿನಿಂದ ಮೃತಪಟ್ಟವರ 15ಕ್ಕೂ ಹೆಚ್ಚು ಶವಗಳನ್ನು ತಂದಿರುವ ಆ್ಯಂಬುಲೆನ್ಸ್​ಗಳು ಚಿತಾಗಾರದ ಮುಂದೆ ಸಾಲುಗಟ್ಟಿ ನಿಂತಿವೆ. ಬೆಳಗ್ಗೆಯಿಂದ ಈವರೆಗೆ 11 ಶವಗಳ ಅಂತ್ಯಸಂಸ್ಕಾರ ಮಾಡಿರುವ ಚಿತಾಗಾರದ ಸಿಬ್ಬಂದಿ ಬಾಕಿ ಉಳಿದಿರುವ ಶವಗಳನ್ನು ಗಮನಿಸಿ ಚಿತಾಗಾರದ ಬಾಗಿಲು ಹಾಕುವ ನಿರ್ಧಾರಕ್ಕೆ ಬಂದಿದ್ದಾರೆ. ಸಂಸ್ಕಾರಕ್ಕೆಂದು ಸ್ವೀಕರಿಸಿರುವ ಶವಗಳ ಅಂತ್ಯಕ್ರಿಯೆ ಮುಗಿಸಲು ಮಧ್ಯರಾತ್ರಿಯಾಗುತ್ತದೆ ಎನ್ನುವ ಕಾರಣಕ್ಕೆ ಸಿಬ್ಬಂದಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಬೆಳಿಗ್ಗೆಯಿಂದ ಅಂತ್ಯಕ್ರಿಯೆ ಮಾಡಿ ಸಿಬ್ಬಂದಿ ಬಸವಳಿದಿದ್ದಾರೆ.

(take precautions for your health advices dg igp Praveen Sood to all police staff about coronavirus)

ಇದನ್ನೂ ಓದಿ: ಸ್ಯಾಂಡಲ್​ವುಡ್​ ಯುವ ನಟ, ನಿರ್ಮಾಪಕ ಕೊರೊನಾಗೆ ಬಲಿ

ಇದನ್ನೂ ಓದಿ: ಚಿತಾಗಾರಕ್ಕೆ ಬಿಬಿಎಂಪಿ ಆಯುಕ್ತ ಗೌರವ್​​ ಗುಪ್ತಾ ಭೇಟಿ; ಶವಸಂಸ್ಕಾರಕ್ಕೆ ಹೆಚ್ಚಿನ ಹಣ ಕೇಳಿದರೆ ಕ್ರಮ ನಿಶ್ಚಿತ


Follow us on

Related Stories

Most Read Stories

Click on your DTH Provider to Add TV9 Kannada