Coronavirus News Live Updates: ಕಲ್ಯಾಣ ಮಂಟಪಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ
ಕೊರೊನಾ ವೈರಸ್ ಸೋಂಕು, ಲಸಿಕೆ ಲಭ್ಯತೆ, ಲಾಕ್ಡೌನ್ ಅಥವಾ ಇತರ ನಿರ್ಬಂಧಗಳಿಗೆ ಸಂಬಂಧಿಸಿದ ವಿಶ್ವ, ಭಾರತ ಮತ್ತು ಕರ್ನಾಟಕದ ಮಾಹಿತಿ ಇಲ್ಲಿ ಲಭ್ಯ.
ಕರ್ನಾಟಕದಲ್ಲಿ ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡಿದೆ. ಪ್ರತಿದಿನದ ಸೋಂಕು ಪ್ರಕರಣಗಳು ದಾಖಲೆ ಪ್ರಮಾಣದಲ್ಲಿ ವರದಿಯಾಗುತ್ತಿವೆ. ಆಸ್ಪತ್ರೆಗಳಲ್ಲಿ ತೀವ್ರ ನಿಗಾ ಘಟಕಗಳು (ಐಸಿಯು) ಭರ್ತಿಯಾಗಿದ್ದು ರೋಗಿಗಳು ಬೆಡ್ ಸಿಗದೆ ಪರದಾಡುತ್ತಿದ್ದಾರೆ. ಮತ್ತೊಂದೆಡೆ ಚಿತಾಗಾರಗಳಲ್ಲಿ ಶವಗಳನ್ನು ಹೊತ್ತು ಆಂಬುಲೆನ್ಸ್ಗಳು ಪಾಳಿಯಲ್ಲಿ ನಿಂತಿವೆ. ‘ಎಲ್ಲವೂ ಸರಿಯಾಯ್ತು ಇನ್ನೇಕೆ ಮಾಸ್ಕ್’ ಎಂಬ ಧೋರಣೆಗೆ ಜಾರಿದ್ದ ಬಹುತೇಕ ಜನರು ಈಗ ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧಾರಣೆ ಮತ್ತೆ ಸಾಮಾನ್ಯ ಎನಿಸಿದೆ. ಲಸಿಕೆ ಪಡೆದುಕೊಳ್ಳಬೇಕೆನ್ನುವ ಆಸಕ್ತಿಯೂ ಹೆಚ್ಚಾಗುತ್ತಿದೆ. ಬೆಂಗಳೂರು ಸೇರಿದಂತೆ ರಾಜ್ಯದ 8 ನಗರಗಳಿಗೆ ವಿಧಿಸಿದ್ದ ನೈಟ್ ಕರ್ಫ್ಯೂ ಏಪ್ರಿಲ್ 20ಕ್ಕೆ ಮುಕ್ತಾಯವಾಗಲಿದೆ. ಆದರೆ ನಾಳೆಯೇ ಹೊಸ ನಿಯಮಗಳನ್ನು ಸರ್ಕಾರ ಘೋಷಿಸಬಹುದು ಎಂಬ ನಿರೀಕ್ಷೆಗಳಿವೆ.
ಕೊರೊನಾ ವೈರಸ್ ಸೋಂಕು, ಲಸಿಕೆ ಲಭ್ಯತೆ, ಲಾಕ್ಡೌನ್ ಅಥವಾ ಇತರ ನಿರ್ಬಂಧಗಳಿಗೆ ಸಂಬಂಧಿಸಿದ ವಿಶ್ವ, ಭಾರತ ಮತ್ತು ಕರ್ನಾಟಕದ ಮಾಹಿತಿ ಇಲ್ಲಿ ಲಭ್ಯ.
(Coronavirus India Karanataka Covid 19 vaccine lockdown night curfew live updates in Kannada April 18)
LIVE NEWS & UPDATES
-
ಕಲ್ಯಾಣ ಮಂಟಪಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ
ದಾವಣಗೆರೆಯಲ್ಲಿ ಕಲ್ಯಾಣ ಮಂಟಪಗಳ ಮೇಲೆ ಅಧಿಕಾರಿಗಳ ದಿಢೀರ್ ದಾಳಿ. ಕೊವಿಡ್ ನಿಯಮ ಉಲ್ಲಂಘಿಸಿದ 3 ಕಲ್ಯಾಣ ಮಂಟಪಗಳಿಗೆ 30 ಸಾವಿರ ದಂಡ ಹಾಗೂ ನೋಟಿಸ್. ಬಹುತೇಕ ಕಲ್ಯಾಣ ಮಂಟಪಗಳಲ್ಲಿ ನಿಯಮ ಉಲ್ಲಂಘನೆಯಾಗುತ್ತಿದ್ದ ಸಂಗತಿ ಈ ಸಂದರ್ಭ ಬೆಳಕಿಗೆ ಬಂತು.
-
ಗುಲಬರ್ಗಾ ಮತ್ತು ದಾವಣಗೆರೆ ವಿವಿ ಬಿಇಡಿ ಪರೀಕ್ಷೆ ಮುಂದೂಡಿಕೆ
ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡಿರುವ ಹಿನ್ನೆಲೆಯಲ್ಲಿ ಏಪ್ರಿಲ್ 19ರಿಂದ ಪರೀಕ್ಷೆ ಆರಂಭವಾಗಬೇಕಿದ್ದ ಕಲಬುರ್ಗಿಯ ಗುಲಬರ್ಗಾ ವಿಶ್ವವದ್ಯಾಲಯದ 2, 4ನೇ ಸೆಮಿಸ್ಟರ್ ಪರೀಕ್ಷೆ ಮುಂದೂಡಲಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ.ಸೋನಾರ್ ನಂದಪ್ಪ ಮಾಹಿತಿ ನೀಡಿದ್ದಾರೆ.
ದಾವಣಗೆರೆ ವಿವಿ ವ್ಯಾಪ್ತಿಯಲ್ಲಿ ನಾಳೆಯಿಂದ (ಏ.19) ಆರಂಭವಾಗಬೇಕಿದ್ದ ಬಿಇಡಿ ಪರೀಕ್ಷೆ ಮತ್ತು ಇದೇ 20ರಿಂದ ಆರಂಭವಾಗಬೇಕಿದ್ದ ಸ್ನಾತಕೋತ್ತರ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಪರೀಕ್ಷಾಂಗ ವಿಭಾಗದ ಕುಲಸಚಿವೆ ಡಾ.ಎಚ್.ಎಸ್.ಅನಿತಾ ಮಾಹಿತಿ ನೀಡಿದ್ದಾರೆ.
-
ಕೇಂದ್ರದಿಂದ ರೈಲುಗಳ ಮೂಲಕ ಆಮ್ಲಜನಕ ಪೂರೈಕೆ
ದೆಹಲಿ: ಕೊರನಾ ಸೋಂಕಿನ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರೈಲುಗಳ ಮೂಲಕ ರಾಜ್ಯಗಳಿಗೆ 6,177 ಟನ್ ಆಮ್ಲಜನಕ ಪೂರೈಸಲು ನಿರ್ಧರಿಸಿದೆ. ಆಕ್ಸಿಜನ್ ಹೊತ್ತ ರೈಲುಗಾಡಿಗಳ ತುರ್ತು ಸಂಚಾರಕ್ಕಾಗಿ ಗ್ರೀನ್ ಕಾರಿಡಾರ್ ಸ್ಥಾಪಿಸಿದ್ದೇವೆ ಎಂದು ಕೇಂದ್ರ ರೈಲ್ವೆ ಸಚಿವ ಪೀಯೂಷ್ ಗೋಯೆಲ್ ಮಾಹಿತಿ ನೀಡಿದ್ದಾರೆ. ಕೈಗಾರಿಕೆಗಳಲ್ಲಿ ಆಕ್ಸಿಜನ್ ಬಳಕೆಗೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. 9 ವಲಯಗಳ ಕೈಗಾರಿಕೆ ಹೊರತುಪಡಿಸಿ ಉಳಿದ ಕ್ಷೇತ್ರಗಳಿಗೆ ಏ.22ರಿಂದ ಆಕ್ಸಿಜನ್ ಬಳಕೆಗೆ ನಿರ್ಬಂಧ ಜಾರಿಗೆ ಬರಲಿದೆ. ಮಹಾರಾಷ್ಟ್ರಕ್ಕೆ 1500 ಟನ್, ದೆಹಲಿಗೆ 350 ಟನ್, ಉತ್ತರ ಪ್ರದೇಶಕ್ಕೆ 800 ಟನ್ ಆಮ್ಲಜನಕ ಪೂರೈಕೆಗೆ ಕೇಂದ್ರ ಸರ್ಕಾರ ಸಮ್ಮತಿ.
A decision has been taken to start transportation of oxygen cylinders or tankers in trains. Green corridors to be introduced to ensure fast supply of oxygen:Union Minister Piyush Goyal to ANI pic.twitter.com/bmZaauWWgE
— ANI (@ANI) April 18, 2021
ಮಹಾರಾಷ್ಟ್ರ, ದೆಹಲಿ, ತಮಿಳುನಾಡಿನಲ್ಲಿ ಕೊರೊನಾ ಸೋಂಕು ಹೆಚ್ಚಳ
ಮಹಾರಾಷ್ಟ್ರದಲ್ಲಿ ಭಾನುವಾರ (ಏಪ್ರಿಲ್ 18) 68,631 ಜನರಿಗೆ ಕೊರೊನಾ ದೃಢಪಟ್ಟಿದೆ. ಸೋಂಕಿಗೆ ಒಂದೇ ದಿನ 503 ಜನರು ಬಲಿಯಾಗಿದ್ದಾರೆ. ಈವರೆಗೆ ಕೊರೊನಾ ಸೋಂಕಿನಿಂದ 60,473 ಜನರು ಸಾವನ್ನಪ್ಪಿದ್ದಾರೆ. ದೆಹಲಿಯಲ್ಲಿ ಇಂದು 25,462 ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾಗಿವೆ. ಕೊರೊನಾದಿಂದ 161 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡಿನಲ್ಲಿ ಇಂದು 10,723 ಮಂದಿಗೆ ಕೊರೊನಾ ದೃಢಪಟ್ಟಿದೆ. ತಮಿಳುನಾಡಿನಲ್ಲಿ ಕೊರೊನಾದಿಂದ 42 ಮಂದಿ ಸಾವನ್ನಪ್ಪಿದ್ದಾರೆ.
ಕರ್ನಾಟಕದಲ್ಲಿ ಕೊರೊನಾ ಸೋಂಕು, ಸಾವಿನ ವಿವರ
ಕರ್ನಾಟಕದಲ್ಲಿ ಭಾನುವಾರ ವರದಿಯಾದ ಕೊರೊನಾ ಸೋಂಕಿತರು ಮತ್ತು ಸಾವಿನ ವಿವರ ಇಲ್ಲಿದೆ..
ಇಂದಿನ 18/04/2021 ಸಂಪೂರ್ಣ ಪತ್ರಿಕಾ ಪ್ರಕಟಣೆಗಾಗಿ ಇಲ್ಲಿ ನೀಡಲಾಗಿರುವ ಲಿಂಕ್ ಅನ್ನು ಕ್ಲಿಕ್ ಮಾಡಿhttps://t.co/ZmUbLYzG14@mla_sudhakar @DVSadanandGowda @ShobhaBJP @PCMohanMP @Tejasvi_Surya @CTRavi_BJP @kiranshaw @WFRising @citizenkamran @RCBTweets @NammaKarnataka_ pic.twitter.com/BaYHZY3nD0
— K’taka Health Dept (@DHFWKA) April 18, 2021
ಬಳ್ಳಾರಿ, ಹೊಸಪೇಟೆ ನಗರಗಳಲ್ಲಿ ಏಪ್ರಿಲ್ 31ರವರೆಗೆ ನೈಟ್ ಕರ್ಫ್ಯೂ
ಬಳ್ಳಾರಿ ಮತ್ತು ಹೊಸಪೇಟೆ ನಗರಗಳಲ್ಲಿ ನಾಳೆ (ಏಪ್ರಿಲ್ 19) ರಾತ್ರಿ 10 ಗಂಟೆಯಿಂದ ಏಪ್ರಿಲ್ 31ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಿ ಜಿಲ್ಲಾಧಿಕಾರಿ ಪವನ್ ಕುಮಾರ್ ಮಾಲಿಪಾಟಿ ಆದೇಶ ಹೊರಡಿಸಿದ್ದಾರೆ. ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಕೊರೊನಾ ಹೆಚ್ಚಳ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ಕೊವಿಡ್ ಕೇರ್ ಸೆಂಟರ್ನಲ್ಲೂ ಸಿಗ್ತಿಲ್ಲ ಬೆಡ್
ಬೆಂಗಳೂರು: ಆರ್.ಟಿ.ನಗರದ ಅಂಬೇಡ್ಕರ್ ಮೆಡಿಕಲ್ ಕಾಲೇಜಿನಲ್ಲಿ ಕೊವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಆದರೆ ಅಲ್ಲಿಯೂ ಬೆಡ್ಗಳು ಸಿಗದೆ ಸೋಂಕಿತರು ಪರದಾಡುವಂತಾಗಿದೆ. ಮೆಡಿಕಲ್ ಕಾಲೇಜು ಮುಂಭಾಗ ಆ್ಯಂಬುಲೆನ್ಸ್ಗಳು ಸಾಲಾಗಿ ನಿಂತಿವೆ. ಸೋಂಕಿತರು ಶಿಫ್ಟ್ ಆಗುವವರೆಗೂ ಮನೆಗೆ ಹೋಗುವಂತಿಲ್ಲ. ಹೀಗಾಗಿ ಌಂಬುಲೆನ್ಸ್ ವಾಹನಗಳ ಚಾಲಕರು ಹೈರಾಣರಾಗಿದ್ದಾರೆ. ಕೊರೊನಾ ಸೋಂಕಿತ ರೋಗಿಗಳ ಸಂಬಂಧಿಕರು ಅಸಹಾಯಕರಾಗಿದ್ದಾರೆ.
ಕೊರೊನಾ ನಿರ್ವಹಣೆಗೆಂದು ರಾಜ್ಯ ಸರ್ಕಾರದಿಂದ ಬಿಬಿಎಂಪಿಗೆ ₹ 300 ಕೋಟಿ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ರಾಜ್ಯ ಸರ್ಕಾರ ಭಾನುವಾರ ₹ 300 ಕೋಟಿ ಬಿಡುಗಡೆ ಮಾಡಿದೆ. ಕೋವಿಡ್ ನಿಯಂತ್ರಣಕ್ಕೆ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರ ಸಂಬಳ, ವೈದ್ಯಕೀಯ ಸಲಕರಣೆಗಳ ಖರೀದಿಗೆ ಈ ಹಣ ಬಳಸಿಕೊಳ್ಳುವಂತೆ ಸೂಚಿಸಲಾಗಿದೆ. ಱಪಿಡ್ ಕಿಟ್, ಌಂಟಿಜನ್ ಕಿಟ್‌ಗಳ ಖರೀದಿ ಸೇರಿದಂತೆ ಅಗತ್ಯ ವೈದ್ಯಕೀಯ ಸಲಕರಣೆಗಳ ಖರೀದಿಗೆ ಹಣ ಬಳಸಿಕೊಳ್ಳಲು ಅವಕಾಶವಿದೆ. ಹಣ ದುರ್ಬಳಕೆ ಆದಲ್ಲಿ ಬಿಬಿಎಂಪಿ ಆಯುಕ್ತರೇ ಹೊಣೆ ಎಂದು ಕಂದಾಯ ಇಲಾಖೆ ಹೇಳಿದೆ.
ತಮಿಳುನಾಡಿನಲ್ಲಿ ಸಂಡೆ ಕರ್ಫ್ಯೂ, ಬಿಹಾರದ ಕೊರೊನಾ ವಾರಿಯರ್ಸ್‌ಗೆ ಬೋನಸ್
ದೆಹಲಿ: ತಮಿಳುನಾಡು ಮತ್ತು ಬಿಹಾರ ರಾಜ್ಯಗಳಲ್ಲಿ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ. ತಮಿಳುನಾಡಿನಲ್ಲಿ 12ನೇ ತರಗತಿ ಪರೀಕ್ಷೆ ಮುಂದೂಡಲಾಗಿದೆ. ತಮಿಳುನಾಡಿನಲ್ಲಿ ಭಾನುವಾರ ಇಡೀ ದಿನ ಕರ್ಫ್ಯೂ ಜಾರಿ ಮಾಡಲಾಗಿತ್ತು. ಬಿಹಾರ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ಕೊರೊನಾ ವಾರಿಯರ್ಸ್‌ಗೆ 1 ತಿಂಗಳ ಸಂಬಳ ಬೋನಸ್ ನೀಡಲಾಗಿದೆ.
ಶಾಸಕರಾದ ಎಂ.ಪಿ.ರೇಣುಕಾಚಾರ್ಯ, ಸುರೇಶ್‍ಗೆ ಕೋವಿಡ್-19
ದಾವಣಗೆರೆ ಜಿಲ್ಲೆ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಮತ್ತು ತರೀಕೆರೆ ಕ್ಷೇತ್ರದ ಬಿಜೆಪಿ ಶಾಸಕ ಸುರೇಶ್‍ಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ರಾಜ್ಯದಲ್ಲಿ ಇಂದು ಒಂದೇ ದಿನ ಕೊರೊನಾಗೆ 81 ಜನರು ಮೃತಪಟ್ಟಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು, ಅಂದರೆ 60 ಜನರು ಸಾವನ್ನಪ್ಪಿದ್ದಾರೆ. ಧಾರವಾಡ, ಮೈಸೂರು ಜಿಲ್ಲೆಗಳಲ್ಲಿ ತಲಾ ಮೂವರು, ಬಳ್ಳಾರಿ, ಕೊಪ್ಪಳ, ಉತ್ತರ ಕನ್ನಡ, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ತಲಾ ಇಬ್ಬರು, ಬೆಳಗಾವಿ, ಬೀದರ್, ಚಾಮರಾಜನಗರ, ಮಂಡ್ಯ ಹಾಗೂ ತುಮಕೂರು ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 13,351 ಜನರು ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ ಜಿಲ್ಲೆಯಲ್ಲಿ ಅತಿಹೆಚ್ಚು ಅಂದರೆ 12,793 ಮಂದಿಯಲ್ಲಿ ಭಾನುವಾರ (ಏಪ್ರಿಲ್ 18) ಕೊರೊನಾ ಸೋಂಕು ದೃಢಪಟ್ಟಿದೆ. ಉಳಿದಂತೆ ಮೈಸೂರು 777, ಕಲಬುರಗಿ 671, ಬೀದರ್ 469, ತುಮಕೂರು 494, ಮಂಡ್ಯ 338, ಧಾರವಾಡ 265, ಬೆಂಗಳೂರು ಗ್ರಾಮಾಂತರ 245, ದಕ್ಷಿಣ ಕನ್ನಡ 272, ಬಳ್ಳಾರಿ 238, ವಿಜಯಪುರ 200, ಚಿಕ್ಕಬಳ್ಳಾಪುರ 190, ಬಾಗಲಕೋಟೆ 104, ಬೆಳಗಾವಿ 129, ಚಾಮರಾಜನಗರ 102, ಚಿಕ್ಕಮಗಳೂರು 81, ಚಿತ್ರದುರ್ಗ 102, ದಾವಣಗೆರೆ 133, ಗದಗ 48, ಹಾವೇರಿ 43, ಕೊಡಗು 44, ಕೋಲಾರ 175, ಕೊಪ್ಪಳ 65, ಉಡುಪಿ 152, ರಾಯಚೂರು 133, ರಾಮನಗರ 122, ಶಿವಮೊಗ್ಗ 156, ಉತ್ತರ ಕನ್ನಡ 104, ಯಾದಗಿರಿ 74 ಜನರಿಗೆ ಸೋಂಕು ದೃಢಪಟ್ಟಿದೆ.
11.61 ಲಕ್ಷಕ್ಕೇರಿದ ಕರ್ನಾಟಕದ ಸೋಂಕಿತರ ಸಂಖ್ಯೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆಯು 11,61,1065ಕ್ಕೆ (11.61 ಲಕ್ಷ) ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ 13,351 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಪೈಕಿ 10,14,152 (10.14 ಲಕ್ಷ) ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 1,33,543 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಬೆಂಗಳೂರಿನಲ್ಲಿ 12,793 ಜನರಿಗೆ ಕೊರೊನಾ ದೃಢ, 60 ಸಾವು
ಬೆಂಗಳೂರು: ಬೆಂಗಳೂರು ಮಹಾನಗರದಲ್ಲಿ ಇಂದು ಒಂದೇ ದಿನ 12,793 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿಗೆ 60 ಜನರ ಬಲಿಯಾಗಿದ್ದಾರೆ.
ಪೊಲೀಸರಿಗೆ ಚಿಕಿತ್ಸೆ ನಿರಾಕರಿಸಿದರೆ ಶಿಸ್ತುಕ್ರಮ: ಪ್ರವೀಣ್ ಸೂದ್
ಬೆಂಗಳೂರು: ಪೊಲೀಸರಿಗೆ ಚಿಕಿತ್ಸೆ ನಿರಾಕರಿಸಿದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ರಾಜ್ಯದ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಆಸ್ಪತ್ರೆ ಆಡಳಿತ ಮಂಡಳಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ ಆಯುಕ್ತರಿಂದ ಆಸ್ಪತ್ರೆಗಳಿಗೆ ದಿಢೀರ್ ಭೇಟಿ
ಬೆಂಗಳೂರು: ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೆಬ್ಬಾಳ ಸುತ್ತಮುತ್ತಲ ಖಾಸಗಿ ಆಸ್ಪತ್ರೆಗಳಿಗೆ ದಿಢೀರ್ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿದರು. ಹೆಬ್ಬಾಳದ ಆ್ಯಸ್ಟರ್ ಆಸ್ಪತ್ರೆಗೆ ಭೇಟಿ ನೀಡಿದ ಆಯುಕ್ತರು ಬೆಡ್ ಲಭ್ಯತೆ, ಆಕ್ಸಿಜನ್ ಹಾಗೂ ಐಸಿಯು ಘಟಕಗಳಿಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ವೈದ್ಯರೊಂದಿಗೆ ಮಾತನಾಡಿದರು.
ಮೇಡಿ ಅಗ್ರಹಾರ ಚಿತಾಗಾರದ ಬಾಗಿಲು ಬಂದ್; ಅಂತ್ಯಕ್ರಿಯೆ ಮಾಡಿ ಬಸವಳಿದ ಸಿಬ್ಬಂದಿ
ಬೆಂಗಳೂರು: ನಗರದ ಹೊರವಲದಲ್ಲಿರುವ ಮೇಡಿ ಅಗ್ರಹಾರದ ವಿದ್ಯುತ್ ಚಿತಾಗಾರದ ಬಾಗಿಲನ್ನು ಸೆಕ್ಯುರಿಟಿ ಗಾರ್ಡ್ಗಳು ಮುಚ್ಚಿದ್ದಾರೆ. ಕೊರೊನಾ ಸೋಂಕಿನಿಂದ ಮೃತಪಟ್ಟವರ 15ಕ್ಕೂ ಹೆಚ್ಚು ಶವಗಳನ್ನು ತಂದಿರುವ ಆ್ಯಂಬುಲೆನ್ಸ್ಗಳು ಚಿತಾಗಾರದ ಮುಂದೆ ಸಾಲುಗಟ್ಟಿ ನಿಂತಿವೆ. ಬೆಳಗ್ಗೆಯಿಂದ ಈವರೆಗೆ 11 ಶವಗಳ ಅಂತ್ಯಸಂಸ್ಕಾರ ಮಾಡಿರುವ ಚಿತಾಗಾರದ ಸಿಬ್ಬಂದಿ ಬಾಕಿ ಉಳಿದಿರುವ ಶವಗಳನ್ನು ಗಮನಿಸಿ ಚಿತಾಗಾರದ ಬಾಗಿಲು ಹಾಕುವ ನಿರ್ಧಾರಕ್ಕೆ ಬಂದಿದ್ದಾರೆ. ಸಂಸ್ಕಾರಕ್ಕೆಂದು ಸ್ವೀಕರಿಸಿರುವ ಶವಗಳ ಅಂತ್ಯಕ್ರಿಯೆ ಮುಗಿಸಲು ಮಧ್ಯರಾತ್ರಿಯಾಗುತ್ತದೆ ಎನ್ನುವ ಕಾರಣಕ್ಕೆ ಸಿಬ್ಬಂದಿ ಈ ನಿರ್ಧಾರಕ್ಕೆ ಬಂದಿದ್ದಾರೆ. ಬೆಳಿಗ್ಗೆಯಿಂದ ಅಂತ್ಯಕ್ರಿಯೆ ಮಾಡಿ ಸಿಬ್ಬಂದಿ ಬಸವಳಿದಿದ್ದಾರೆ.
ರಾಜ್ಯದಲ್ಲಿ ವೈದ್ಯಕೀಯ ಆಕ್ಸಿಜನ್ ಕೊರತೆಯಿಲ್ಲ: ಸುಧಾಕರ್
ರಾಜ್ಯದಲ್ಲಿ ವೈದ್ಯಕೀಯ ಆಕ್ಸಿಜನ್ ಕೊರತೆಯಿಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ರಾಜ್ಯದಲ್ಲಿ ವೈದ್ಯಕೀಯ ಆಕ್ಸಿಜನ್ ಕೊರತೆ ಇದೆ ಎಂಬ ತಪ್ಪು ಮಾಹಿತಿ ಹಬ್ಬಿಸಬೇಡಿ.. ಏನೂ ತೊಂದರೆ ಇಲ್ಲ: ಡಾ. ಕೆ.ಸುಧಾಕರ್ #KSudhakar #COVID19India https://t.co/UCNDotFEDl
— TV9 Kannada (@tv9kannada) April 18, 2021
ಮಾಸ್ಕ್ ಹಾಕದ ವ್ಯಕ್ತಿಗೆ ಕಪಾಳಮೋಕ್ಷ ಮಾಡಿದ ಎಸ್ಪಿ
ದಾವಣಗೆರೆಯಲ್ಲಿ ಕೊರೊನಾ ಸುರಕ್ಷಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ಹಿರಿಯ ಅಧಿಕಾರಿಗಳು ರಸ್ತೆಗಿಳಿದಿದ್ದಾರೆ. ಮಾಸ್ಕ್ ಹಾಕದ ವ್ಯಕ್ತಿಯೊಬ್ಬರಿಗೆ ದಾವಣಗೆರೆ ಎಸ್ಪಿ ಕಪಾಳಮೋಕ್ಷ ಮಾಡಿದ್ದಾರೆ.
ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್ ಬದಲು ಪರ್ಯಾಯ ಮಾರ್ಗದ ಹುಡುಕಾಟ..
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ 2ನೇ ಅಲೆ ನಿಯಂತ್ರಣಕ್ಕೆ ಲಾಕ್ಡೌನ್ ಬದಲು ಪರ್ಯಾಯ ಮಾರ್ಗಗಳೇನಿವೆ ಎಂಬ ಬಗ್ಗೆ ಅಧಿಕಾರಿಗಳೊಂದಿಗೆ ಹಿರಿಯ ಸಚಿವರು ಶನಿವಾರ ಸಮಾಲೋಚನೆ ನಡೆಸಿದರು. ಮೈಕ್ರೋ ಕಂಟೋನಮೆಂಟ್ ಜೋನ್ ರಚನೆ, ಜನ ಸೇರುವ ಸ್ಥಳಗಳಲ್ಲಿ 144 ಸೆಕ್ಷನ್ ಅನ್ವಯ ನಿಷೇಧಾಜ್ಞೆ ಜಾರಿ, ಧಾರ್ಮಿಕ ಸಭೆ ಸಮಾರಂಭಗಳಿಹರ ಸಂಪೂರ್ಣ ಬ್ರೇಕ್
ಲಾಕ್ಡೌನ್ ಬೇಕೆ? ಬೇಡವೇ? ಸಚಿವರ ಮಧ್ಯೆ ಭಿನ್ನಮತ, ಕಾವೇರಿದ ಚರ್ಚೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಕ್ರಮ ಏನಾಗಿರಬೇಕು ಎಂಬ ಬಗ್ಗೆ ಸಚಿವರು ಇಂದು ಸಭೆ ನಡೆಸಿ ಚರ್ಚಿಸಿದರು. ಮುಖ್ಯಮಂತ್ರಿ ಸೇರಿದಂತೆ ಸಚಿವ ಸಂಪುಟ ಬಹುತೇಕರು ಲಾಕ್ಡೌನ್ ಬೇಡ ಎಂಬ ಅಭಿಪ್ರಾಯ ಹೊಂದಿದ್ದಾರೆ. ಆದರೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತ್ರ ಲಾಕ್ಡೌನ್ ಹೊರತುಪಡಿಸಿ ಬೇರೆ ಮಾರ್ಗವಿಲ್ಲ ಎಂಬ ಅಭಿಪ್ರಾಯ ತಳೆದಿದ್ದಾರೆ ಎಂದು ತಿಳಿದುಬಂದಿದೆ. ಈ ಬಗ್ಗೆ ಟಿವಿ9ಗೆ ರಾಜ್ಯ ಸರ್ಕಾರದ ಉನ್ನತ ಮೂಲಗಳಿಂದ ಮಾಹಿತಿ ಸಿಕ್ಕಿದೆ. ‘ಬಡವರ ಹೊಟ್ಟೆ ಮೇಲೆ ಹೊಡೆಯುವ ಲಾಕ್ ಡೌನ್ ಏಕೆ ಬೇಕು? ಕಠಿಣ ನಿಯಮಗಳನ್ನು ರೂಪಿಸೋಣ. ಜನಸಾಮಾನ್ಯರು ಮತ್ತು ಸರ್ಕಾರದ ಆರ್ಥಿಕ ಸ್ಥಿತಿಗತಿಯ ದೃಷ್ಟಿಯಿಂದ ಲಾಕ್ಡೌನ್ ಒಳ್ಳೆಯದಲ್ಲ’ ಎಂದು ಸಚಿವರ ಸಭೆಯಲ್ಲಿಯೇ ಆರ್.ಅಶೋಕ್ ಹೇಳಿದರು ಎನ್ನಲಾಗಿದೆ. ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಸಹ ಲಾಕ್ಡೌನ್ ಬೇಡ ಎಂದಿದ್ದರು. ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ‘ತಜ್ಞರು ಲಾಕ್ಡೌನ್ ಮಾಡಬೇಕೆಂದು ಸಲಹೆ ನೀಡಿದ್ದರು’ ಎಂದು ತಿಳಿಸಿದ್ದರು. ಸಭೆಯಲ್ಲಿ ಲಾಕ್ಡೌನ್ ವಿಚಾರದ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು ಎಂದು ಉನ್ನತ ಮೂಲಗಳು ಹೇಳಿವೆ.
ಚಿತಾಗಾರಕ್ಕೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಭೇಟಿ
ಬೆಂಗಳೂರು: ನಗರದ ಚಿತಾಗಾರಗಳ ಎದುರು ಆ್ಯಂಬುಲೆನ್ಸ್ಗಳು ಕ್ಯೂ ನಿಲ್ಲುವ ಬಗ್ಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸ್ಥಳ ಪರಿಶೀಲನೆ ನಡೆಸಿದರು. 13 ಚಿತಾಗಾರಗಳ ಪೈಕಿ ಒಂದಕ್ಕೆ ನಾನು ಭೇಟಿ ಕೊಟ್ಟು, ಪರಿಶೀಲಿಸಿದ್ದೇನೆ. ನಿನ್ನೆ 26 ಮೃತದೇಹಗಳನ್ನು ಇಲ್ಲಿ ಸುಡಲಾಗಿದೆ. ಪ್ರತಿದಿನ ಸರಾಸರಿ 20ರಿಂದ 25 ದೇಹಗಳನ್ನು ಸುಡಲಾಗುತ್ತಿತ್ತು. ಬೆಂಗಳೂರು ಪಾಲಿಕೆಯಿಂದ ಬರ್ತಾ ಇರೋದು 2-3 ಮೃತದೇಹಗಳಷ್ಟೇ. ಬೆಂಗಳೂರು ಗ್ರಾಮೀಣ, ಅಕ್ಕಪಕ್ಕದ ಜಿಲ್ಲೆಗಳು ಹಾಗೂ ಖಾಸಗೀ ಆಸ್ಪತ್ರೆಗಳಿಂದ ಬರುತ್ತಿವೆ. ಹೀಗಾಗಿ ಸಿಬ್ಬಂದಿಗೆ ಶಿಫ್ಟ್ ವ್ಯವಸ್ಥೆ ಮಾಡಲಿದ್ದೇವೆ. ಖಾಸಗೀ ಆಸ್ಪತ್ರೆಗಳಿಂದ ಬರುವ ಶವಗಳಿಗೆ ಸ್ಲಾಟ್ ವ್ಯವಸ್ಥೆ ಇರಲಿಲ್ಲ. ಇನ್ನು ಮುಂದೆ ಅದನ್ನೂ ವ್ಯವಸ್ಥೆ ಮಾಡುತ್ತೇವೆ. ಎಂದು ಗೌರವ್ ಗುಪ್ತಾ ಹೇಳಿದರು.
ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಕ್ರಿಯೆಗೆ ಹೆಚ್ಚು ಜನರು ಸೇರಬಾರದು ಎಂದು ಸೂಚಿಸಿದ ಅವರು, ಚಿತಾಗಾರಗಳ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸುವುದಾಗಿ ಹೇಳಿದರು. ಹೆಣ ಸುಡಲು ಸಿಬ್ಬಂದಿ ಹೆಚ್ಚಿನ ಹಣ ಕೇಳುವ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ಅಧಿಕಾರಿಗಳಿಗೆ ಸೂಚಿಸಿ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಉತ್ತರಾಖಂಡ್ನಲ್ಲಿ 10ನೇ ತರಗತಿ ಪರೀಕ್ಷೆ ರದ್ದು
ಕೊರೊನಾ 2ನೇ ಅಲೆ ತೀವ್ರವಾಗಿ ವ್ಯಾಪಿಸಿರುವ ಹಿನ್ನೆಲೆಯಲ್ಲಿ ಉತ್ತರಾಖಂಡ್ ರಾಜ್ಯದಲ್ಲಿ 10ನೇ ತರಗತಿ ಪರೀಕ್ಷೆ ರದ್ದುಪಡಿಸಲಾಗಿದೆ. 12ನೇ ತರಗತಿ ಪರೀಕ್ಷೆ ಮುಂದೂಡಲಾಗಿದೆ.
ಬೆಂಗಳೂರಿನಲ್ಲಿ ನೋ ಲಾಕ್ಡೌನ್, ಟಫ್ ರೂಲ್ಸ್ ಫಿಕ್ಸ್: ಸಚಿವ ಆರ್.ಅಶೋಕ್
ಬೆಂಗಳೂರು: ನಗರದಲ್ಲಿ ಲಾಕ್ಡೌನ್ ಮಾಡುವುದಿಲ್ಲ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಸಚಿವರ ಸಭೆ ನಂತರ ಕಂದಾಯ ಸಚಿವ ಅಶೋಕ್ ಈ ಸ್ಪಷ್ಟನೆ ನೀಡಿದರು. ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡುವುದಿಲ್ಲ. ಬಡವರಿಗೆ ತೊಂದರೆ ಆಗದಂತಹ ರೀತಿಯಲ್ಲೇ ಕ್ರಮ ತೆಗೆದುಕೊಳ್ಳುತ್ತೇವೆ. ಟಫ್ ರೂಲ್ಸ್ ಮಾಡುವುದು ಅನಿವಾರ್ಯ ಎಂದು ಅಶೋಕ್ ತಿಳಿಸಿದರು.ಸಿಎಂ ಯಡಿಯೂರಪ್ಪ ಅವರ ಸಮ್ಮತಿ ಪಡೆದು ಕೊರೊನಾ ನಿಯಂತ್ರಿಸಲು ಮತ್ತಷ್ಟು ಕಠಿಣ ಕ್ರಮ ಜಾರಿ ಮಾಡುತ್ತೇವೆ ಎಂದು ಹೇಳಿದರು.
Published On - Apr 18,2021 10:06 PM