ಆಸ್ಪತ್ರೆಯಲ್ಲಿ ನರ್ಸ್​, ವೈದ್ಯರ ಜಗಳ; ಕಪಾಳಮೋಕ್ಷ ಮಾಡಿ ನಿಂದಿಸಿದ ವಿಡಿಯೋ ವೈರಲ್​

ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್​ ಮಧ್ಯೆ ಜಗಳ ಅತಿರೇಕಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ರಾಂಪುರ್​ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

  • TV9 Web Team
  • Published On - 16:36 PM, 30 Apr 2021
ಆಸ್ಪತ್ರೆಯಲ್ಲಿ ನರ್ಸ್​, ವೈದ್ಯರ ಜಗಳ; ಕಪಾಳಮೋಕ್ಷ ಮಾಡಿ ನಿಂದಿಸಿದ ವಿಡಿಯೋ ವೈರಲ್​
ವೈದ್ಯರು ಮತ್ತು ನರ್ಸ್​ ನಡುವೆ ಜಗಳ.. ವೈದ್ವಿಯರಿಗೆ ನರ್ಸ್​ರಿಂದ ಕಪಾಳಮೋಕ್ಷ.. ವಿಡಿಯೋ ಆಯ್ತು ವೈರಲ್​

ಲಕ್ನೊ: ದೇಶದಲ್ಲಿ ಕೊವಿಡ್​ ಎರಡನೇ ಅಲೆಯ ಆರ್ಭಟ ಹೆಚ್ಚುತ್ತಿದೆ. ಆಸ್ಪತ್ರೆಯಲ್ಲಿ ವೈದ್ಯರು, ರೋಗಿಗಳು ದಣಿವಿಲ್ಲದೇ ಕೆಲಸ ಮಾಡುತ್ತಿದ್ದಾರೆ. ಪ್ರತಿನಿತ್ಯ ಆಸ್ಪತ್ರೆ ಸಿಬ್ಬಂದಿ ವಿರಾಮವಿಲ್ಲದೇ ಕೆಲಸ ಮಾಡುತ್ತಿರುವುದರಿಂದ ಮಾನಸಿಕವಾಗಿಯೂ ಒತ್ತಡಕ್ಕೆ ಸಿಲುಕಿದ್ದಾರೆ. ಇದರಿಂದಾಗಿ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ನರ್ಸ್​ ಮಧ್ಯೆ ಜಗಳ ಅತಿರೇಕವಾಗಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ಉತ್ತರಪ್ರದೇಶದ ರಾಂಪುರ್​ ಆಸ್ಪತ್ರೆಯೊಂದರಲ್ಲಿ ನಡೆದಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಎಎನ್​ಐ ಹಂಚಿಕೊಂಡ 14 ನಿಮಿಷದ ವಿಡಿಯೋದಲ್ಲಿ, ಕಳೆದ ಸೋಮವಾರ ರಾಂಪುರ್​ ಜಿಲ್ಲಾ ಆಸ್ಪತ್ರೆಯಯಲ್ಲಿ ವೈದ್ಯರು ಮತ್ತು ನರ್ಸ್​ ಮಧ್ಯೆ ವಾದವಿವಾದ ಏರ್ಪಟ್ಟಿದೆ. ವಿಡಿಯೋದಲ್ಲಿ ಗಮನಿಸಿದಂತೆ ಇಬ್ಬರೂ ಕೂಡಾ ಒಬ್ಬರನ್ನೊಬ್ಬರು ನಿಂದಿಸಿಕೊಳ್ಳುತ್ತಾರೆ. ಆಸ್ಪತ್ರೆಯಲ್ಲಿ ಜೋರಾಗಿ ಕಿರುಚುತ್ತಾರೆ. ಇಬ್ಬರ ನಡುವಿನ ಜಗಳ ಅತಿರೇಕಕ್ಕೆ ಹೋಗಿ ಹಿಂಸಾತ್ಮಕ ತಿರುವು ಪಡೆದುಕೊಳ್ಳುತ್ತದೆ. ಜಗಳ ಪ್ರಾರಂಭವಾದಾಗ ಸ್ಥಳದಲ್ಲಿದ್ದ ಪೊಲೀಸರು​ ಹಾಜರಿದ್ದರೂ ಕೂಡಾ ಜಗಳವನ್ನು ನಿಲ್ಲಿಸದೇ ನಡೆಯುತ್ತಿರುವ ಘಟನೆಯನ್ನು ನೋಡುತ್ತಾ ಮೌನವಾಗಿದ್ದರು. ಇವರ ಜಗಳವನ್ನು ಕಂಡ ಆಸ್ಪತ್ರೆಯ ಇತರ ಸಿಬ್ಬಂದಿ ಜಗಳವನ್ನು ತಡೆಯಲು ಮುಂದಾಗಿದ್ದಾರೆ.

ವರದಿಯ ಪ್ರಕಾರ, ಆಸ್ಪತ್ರೆಯಲ್ಲಿ ದಾಖಲಾದ ರೋಗಿಯೊಬ್ಬರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದರು. ಈ ಕುರಿತಂತೆ ಪ್ರಮಾಣಪತ್ರವನ್ನು ನೀಡುವಂತೆ ಮೃತರ ಸಂಬಂಧಿಕರು ನರ್ಸ್​ ಬಳಿ ಕೇಳಿದ್ದಾರೆ. ಇದನ್ನು ವೈದ್ಯರಲ್ಲಿ ಹೇಳಿದಾಕ್ಷಣ ಲಿಖಿತ ರೂಪದಲ್ಲಿ ಕೊಡುವಂತೆ ವೈದ್ಯರು ಸಲಹೆ ನೀಡುತ್ತಾರೆ. ಇದನ್ನು ಕೇಳಿದಾಕ್ಷಣ ಕೋಪಗೊಂಡ ನರ್ಸ್​ ಕೋಪಗೊಳ್ಳುತ್ತಾರೆ. ಅಲ್ಲಿ ವೈದ್ಯರು ಮತ್ತು ನರ್ಸ್​ ನಡುವೆ ವಿವಾದ ಉಂಟಾಗುತ್ತದೆ. ವಾದ ವಿವಾದದ ಅತಿರೇಕದಲ್ಲಿ ನರ್ಸ್​, ವೈದ್ಯರಿಗೆ ಕಪಾಳಕ್ಕೆ ಹೊಡೆಯುವುದನ್ನು ವಿಡಿಯೋದಲ್ಲಿ ಹಮನಿಸಬಹುದು.

ರಾಂಪುರದ ಮ್ಯಾಜಿಸ್ಟ್ರೇಟ್​ ರಾಮ್ಜಿ ಮಿಶ್ರಾ ಮಾತನಾಡಿ, ನಾನು ಅವರಿಬ್ಬರೊಂದಿಗೂ ಮಾತನಾಡಿದ್ದೇನೆ. ಅವರಿಬ್ಬರೂ ಒತ್ತಡದಲ್ಲಿದ್ದರು. ಆಸ್ಪತ್ರೆಯಲ್ಲಿ ಇಬ್ಬರಿಗೂ ಹೆಚ್ಚಿನ ಹೊರೆಯಿತ್ತು. ಈ ಕುರಿತಂತೆ ತನಿಖೆ ನಡೆಸುತ್ತೇವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಐಪಿಎಸ್​ ಅಧಿಕಾರಿ ಈತನನ್ನು ಆಫ್ರಿಕಾದ ಬಾಬಾ ರಾಮ್​ದೇವ್​ ಎಂದಿದ್ದಾರೆ; ಏನಿರಬಹುದು ಈತನ ಸಾಹಸಗಾಥೆ? ವಿಡಿಯೋ ವೈರಲ್​