ಐಪಿಎಸ್​ ಅಧಿಕಾರಿ ಈತನನ್ನು ಆಫ್ರಿಕಾದ ಬಾಬಾ ರಾಮ್​ದೇವ್​ ಎಂದಿದ್ದಾರೆ; ಏನಿರಬಹುದು ಈತನ ಸಾಹಸಗಾಥೆ? ವಿಡಿಯೋ ವೈರಲ್​

ಐಪಿಎಸ್​ ಅಧಿಕಾರಿ ರುಪಿನ್​ ಶರ್ಮಾ ಅವರು ಈ ವಿಡಿಯೋ ನೋಡಿ ಆಶ್ಚರ್ಯರಾಗಿದ್ದಾರೆ. ಹಾಗೂ ಈತನ ಸಾಹಸವನ್ನು ನೋಡಿ ಆಫ್ರಿಕಾದ ಬಾಬಾ ರಾಮ್​ದೇವ್​ ಎಂದು ಕರೆದಿದ್ದಾರೆ. ಏನಿರಬಹುದು ಆತನ ಸಾಹಸಗಾಥೆ? ಇಲ್ಲಿದೆ ವಿಡಿಯೋ.

ಐಪಿಎಸ್​ ಅಧಿಕಾರಿ ಈತನನ್ನು ಆಫ್ರಿಕಾದ ಬಾಬಾ ರಾಮ್​ದೇವ್​ ಎಂದಿದ್ದಾರೆ; ಏನಿರಬಹುದು ಈತನ ಸಾಹಸಗಾಥೆ? ವಿಡಿಯೋ ವೈರಲ್​
ವಿಡಿಯೋ ವೈರಲ್​

ಕೆಲವೊಂದು ನಂಬಲಾಗದ ಸಾಹಸಗಳ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್​ ಆಗುತ್ತಿದೆ. ಅದೆಷ್ಟೋ ಎತ್ತರದ ಕಟ್ಟಡಗಳನ್ನು ಹತ್ತುವ ಸಾಹಸ, ಮರದಿಂದ ಮರಕ್ಕೆ ಮಂಗನಂತೆ ಜಿಗಿಯುವ ಸಾಹಸ, ರಸ್ತೆಯ ಮೇಲೆ ಮಲಗಿ ಮೈಮೇಲೆ ಕಾರು ಹತ್ತಿಸಿಕೊಳ್ಳುವ ಸಾಹಸಗಳನ್ನು ನೋಡಿರುತ್ತೇವೆ. ಅಂತಹುದೇ ಒಂದು ಸಾಹಸದ ಕಥೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ಈತನ ಸಾಹಸವನ್ನು ನೋಡಿದರೆ ನೀವೂ ಆಶ್ಚರ್ಯಚಕಿತರಾಗುತ್ತೀರಾ. ಐಪಿಎಸ್​ ಅಧಿಕಾರಿ ರುಪಿನ್​ ಶರ್ಮಾ ಅವರು ಈ ವಿಡಿಯೋ ನೋಡಿ ಆಶ್ಚರ್ಯರಾಗಿದ್ದಾರೆ. ಹಾಗೂ ಈತನ ಸಾಹಸವನ್ನು ನೋಡಿ ಆಫ್ರಿಕಾದ ಬಾಬಾ ರಾಮ್​ದೇವ್​ ಎಂದು ಕರೆದಿದ್ದಾರೆ. ಒಂದೂವರೆ ನಿಮಿಷದ ವಿಡಿಯೋದಲ್ಲಿ ವ್ಯಕ್ತಿ ವಿಭಿನ್ನ ಸಾಹಸಗಳನ್ನು ಮಾಡುತ್ತಿರುವುದನ್ನು ನೋಡಬಹುದು. ನಿಮಗೂ ಆಶ್ಚರ್ಯವಾಗುವಂತಹ ವ್ಯಕ್ತಿಯ ಸಾಹಸದ ವಿಡಿಯೋ ಇಲ್ಲಿದೆ.

ವಿಡಿಯೋದಲ್ಲಿ ನೋಡಿದಂತೆ ವ್ಯಕ್ತಿ ಮೊದಲು ಹಿಂಬಾಗದಿಂದ ಕಾಲನ್ನು ಮಡಚುತ್ತಾನೆ ಮತ್ತು ಕಾಲನ್ನು ಒಂದು ರೌಂಡ್​ ಸುತ್ತಿಸುತ್ತಾನೆ. ಕೈಗಳನ್ನು ಹಗ್ಗದಂತೆ ಬಳಸಿಕೊಂಡು ಸ್ಕಿಪ್ಪಿಂಗ್​ ಆಡುತ್ತಾನೆ. ಕಾಲುಗಳಲ್ಲಿಯೇ ತಲೆ ಮೇಲಿರುವ ಟೋಪಿಯನ್ನು ತೆಗೆಯುತ್ತಾನೆ. ಕೈಗಳನ್ನು ಮಡಚಿ ವಿಭಿನ್ನ ರೀತಿಯಲ್ಲಿ ನಿಂತುಕೊಳ್ಳುತ್ತಾನೆ. ನೆಲದ ಮೇಲೆ ಕುಳಿತು ತನ್ನ ಕತ್ತಿನ ಮೇಲೆ ಎರಡೂ ಕಾಲುಗಳನ್ನು ಇರಿಸಿಕೊಳ್ಳುವುದನ್ನು ನೋಡಿದರೆ ರೋಮಾಂಚನವಾಗುತ್ತದೆ. ಕಬ್ಬಿಣದ ಸರಳಪಳಿಯಂತೆ ಆತನ ಕೈಕಾಲುಗಳು ತಿರುಗುವುದು ಎಲ್ಲರನ್ನೂ ಆಶ್ಚರ್ಯವನ್ನುಂಟು ಮಾಡಿದೆ. ವಿಡಿಯೋ ನೋಡಿದ ನೆಟ್ಟಿಗರು ಈತನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಾವಿರಕ್ಕೂ ಹೆಚ್ಚು ಜನ ವಿಡಿಯೋವನ್ನು ನೋಡಿದ್ದಾರೆ. ಕಾಮೆಂಟ್​ ಮಾಡುವ ಮೂಲಕ ಈತನ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ರೈಲಿನಲ್ಲಿ ಮೇಕೆ, ಕುರಿ, ಜಾನುವಾರುಗಳೂ ಪ್ರಯಾಣಿಸುತ್ತಿವೆ; ವೈರಲ್​ ಆಯ್ತು ದೃಶ್ಯ