ರೈಲಿನಲ್ಲಿ ಮೇಕೆ, ಕುರಿ, ಜಾನುವಾರುಗಳೂ ಪ್ರಯಾಣಿಸುತ್ತಿವೆ; ವೈರಲ್​ ಆಯ್ತು ದೃಶ್ಯ

ಮೇಕೆಗಳು, ಕುರಿಗಳಿಂದ ಹಿಡಿದು ಹಂದಿ, ಹಸು ಹೀಗಿ ಇನ್ನಿತರ ಪ್ರಾಣಿಗಳು ರೈಲಿನಲ್ಲಿ ಪ್ರಯಾಣಿಸುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ರೈಲಿನಲ್ಲಿ ಮೇಕೆ, ಕುರಿ, ಜಾನುವಾರುಗಳೂ ಪ್ರಯಾಣಿಸುತ್ತಿವೆ; ವೈರಲ್​ ಆಯ್ತು ದೃಶ್ಯ
ರೈಲಿನಲ್ಲಿ ಪ್ರಯಾಣಿಸುತ್ತಿರುವ ಮೇಕೆ, ಕುರಿ, ಜಾನುವಾರಗಳು
shruti hegde

| Edited By: Ayesha Banu

Apr 28, 2021 | 7:19 AM

ರಸ್ತೆಯಲ್ಲಿ ಸಂಚರಿಸುವಾಗ ತಮ್ಮ ಬೈಕ್​ನಲ್ಲಿ ಬೆಕ್ಕಿನ ಮರಿಗಳನ್ನೂ, ಕಾರಿನಲ್ಲಿ ಸಾಕಿದ ನಾಯಿ ಮರಿಗಳನ್ನೂ, ಬಸ್​ನಲ್ಲಿ ಸಂಚರಿಸುವಾಗ ಕೋಳಿ ಮರಿಗಳನ್ನೂ ಕರೆದೊಯ್ಯುವ ದೃಶ್ಯವನ್ನು ನೋಡಿಯೇ ಇರುತ್ತೀರಿ. ಅಂತಹುದೇ ದೃಶ್ಯ ಇದೀಗ ಚೀನಾದಲ್ಲಿ ವೈರಲ್​ ಆಗಿದೆ. ಮೇಕೆಗಳು, ಕುರಿಗಳಿಂದ ಹಿಡಿದು ಹಂದಿ, ಹಸು ಹೀಗಿ ಇನ್ನಿತರ ಪ್ರಾಣಿಗಳನ್ನು ರೈತರು ರೈಲಿನಲ್ಲಿ ಕರೆದೊಯ್ಯುತ್ತಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರೈಲಿನಲ್ಲಿ ಜನರು ಪ್ರಯಾಣವನ್ನು ಬೆಳೆಸುತ್ತಾರೆ. ಇದೀಗ ಚೀನಾದಲ್ಲಿ ಮೇಕೆ, ಕುರಿಗಳು ರೈಲಿಗಾಗಿ ಕಾಯುತ್ತಾ ನಿಂತಿರುವ ದಶ್ಯ ಕಂಡುಬಂದಿದೆ. ಪ್ರಯಾಣಿಕರೆಲ್ಲ ಸಾಗುವ ರೈಲಿನಲ್ಲಿ ಕುರಿ, ಮೇಕೆ ಮತ್ತು ಹಂದಿಗಳು ಚೀನಾದ ಸಿಚುವಾನ್​ ಭೂಪ್ರದೇಶದ ಪುಕ್ಸಿಯಾಂಗ್​ನಿಂದ ರೈಲಿನಲ್ಲಿ ಹತ್ತುವ ದೃಶ್ಯವನ್ನು ಸೆರೆ ಹಿಡಿಯಲಾಗಿದ್ದು, ಇದೀಗ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಹಸುಗಳು ಕೂಡಾ ಪ್ರಯಾಣಕ್ಕಾಗಿ ರೈಲನ್ನು ಕಾಯುತ್ತಿರುವ ದೃಶ್ಯ ಸೆರೆಯಾಗಿದೆ. ಇಲ್ಲಿನ ರೈಲು ಕಡಿಮೆ ವೇಗದಲ್ಲಿ ಸಂಚರಿಸುವುದರಿಂದ ರೈತರು ರೈಲು ಹತ್ತಿಕೊಂಡ ಪ್ರಾಣಿಗಳ ಜೊತೆ ಮಾರುಕಟ್ಟೆಗೆ ತಲುಪುತ್ತಾರೆ.

ರೈಲು ಹತ್ತಿಸ ತಕ್ಷಣ ಪ್ರಾಣಿಗಳು ಸೀಟುಗಳೆಲ್ಲಿ.. ಎಂದು ಹುಡುಕಾಡುವ ದೃಶ್ಯ ಕಂಡುಬಂದಿದೆ. ನೆಟ್ಟಿಗರು ಈ ಕುರಿತಂತೆ ಸಾಕಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಈ ದೃಶ್ಯ ಆಸಕ್ತಿದಾಯಕವಾಗಿದೆ ಮತ್ತು ಅಸಹನೀಯ ಎಂಬುದಾಗಿಯೂ ಅಭಿಪ್ರಾಯ ಕೇಳಿ ಬಂದಿದೆ.

ರೈತರು ಹಳ್ಳಿಯಿಂದ ಪಟ್ಟಣಕ್ಕೆ ಹೋಗಲು 353 ಕಿಲೋಮೀಟರ್​ ದೂರವಾಗುತ್ತದೆ. ಅಂದರೆ 9 ತಾಸು ಪ್ರಯಾಣ ಬೇಕು. ರೈತರು ಉತ್ಪಾದಿಸಿದ ಉತ್ಪನ್ನವನ್ನು ಸಾಗಿಸಲು ರೈಲು ವ್ಯವಸ್ಥೆ ಮಾಡಿಕೊಡಲಾಗಿದೆ. ರೈಲಿನಲ್ಲಿ ಕಡಿಮೆ ಟಿಕೆಟ್​ ಹೊಂದಿದ್ದು, ಪ್ರಾಣಿಗಳನ್ನೂ ಸಹ ಕರೆದೊಯ್ಯಲು ಚೀನಾ ಜನರಿಗೆ ಸಹಾಯವಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮ ಸಂಸ್ಥೆ ವರದಿ ಮಾಡಿದೆ.

ಜೊತೆಗೆ, ಈ ರೈಲು ರೈತರಿಗಾಗಿಯೇ ನಿಯೋಜಿಸಲಾಗಿದೆ. ಮುಕ್ತವಾಗಿ ರೈತರು ಇದರಲ್ಲಿ ಸಂಚರಿಸಬಹುದು. ಚೀನಾದ ಪ್ರಾಣಿಗಳನ್ನು ಸಾಗಿಸಲು ಅನುವು ಮಾಡಿಕೊಡುವ ಏಕೈಕ ರೈಲು ಇದಾಗಿದೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ವೈರಲ್​ ಆಯ್ತು ಪುಟ್ಟ ಮುದ್ದು ಕಂದಮ್ಮನ ತೊದಲು ನುಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada