Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಾಕ್​ಡೌನ್ ವೇಳೆ ಓಡಾಡುವವರು ಆಧಾರ್​ ತೋರಿಸಬೇಕು, ಮಾಸ್ಕ್​ ಧರಿಸದವರು ಸೂಪರ್​ ಸ್ಪ್ರೆಡರ್ಸ್​: ಬಾಂಬೆ ಹೈಕೋರ್ಟ್​

ವಿಚಾರಣೆಯ ಹೊತ್ತಿನಲ್ಲಿ ವಿಭಾಗೀಯ ಪೀಠವು ದ್ವಿಚಕ್ರದಲ್ಲಿ ಹೆಲ್ಮೆಟ್ ಧರಿಸದೇ ಓಡಾಡುವವರು ಹಾಗೂ ಸ್ವಂತ ವಾಹನದಲ್ಲಿದ್ದ ಕಾರಣಕ್ಕೆ ಮಾಸ್ಕ್ ಧರಿಸದೇ ಹೋಗುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದೆ. ಅಲ್ಲದೇ ಸರ್ಕಾರ ಸೂಚಿಸಿದ ಸಮಯದ ಹೊರತಾಗಿ ಹೊರಗೆ ಓಡಾಡುವವರು ಸೂಕ್ತ ಕಾರಣ ತಿಳಿಸಬೇಕಾಗಿದ್ದು, ಆಧಾರ್ ಕಾರ್ಡ್​ ತೋರಿಸಿ ಪ್ರಯಾಣಿಸಬೇಕೆಂದು ಅಭಿಪ್ರಾಯಪಟ್ಟಿದೆ.

ಕೊರೊನಾ ಲಾಕ್​ಡೌನ್ ವೇಳೆ ಓಡಾಡುವವರು ಆಧಾರ್​ ತೋರಿಸಬೇಕು, ಮಾಸ್ಕ್​ ಧರಿಸದವರು ಸೂಪರ್​ ಸ್ಪ್ರೆಡರ್ಸ್​: ಬಾಂಬೆ ಹೈಕೋರ್ಟ್​
ಸಂಗ್ರಹ ಚಿತ್ರ
Follow us
Skanda
| Updated By: Digi Tech Desk

Updated on: Apr 27, 2021 | 4:09 PM

ಮುಂಬೈ: ಭಾರತದಲ್ಲಿ ಕೊರೊನಾ ಎರಡನೇ ಅಲೆ ನಿರೀಕ್ಷೆಗೂ ಮೀರಿದ ಉಪಟಳ ನೀಡುತ್ತಿದೆ. ದೇಶದ ಹಲವು ರಾಜ್ಯಗಳು ಸೋಂಕು ನಿಯಂತ್ರಣಕ್ಕಾಗಿ ಕಳೆದ ಬಾರಿಯಂತೆಯೇ ಕಠಿಣ ನಿಯಮಾವಳಿಗಳ ಮೊರೆ ಹೋಗಿವೆ. ಆದರೆ, ಈ ಬಾರಿ ಜನರು ಕೊರೊನಾ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದು ಭಾರೀ ಚಿಂತೆಯನ್ನು ಉಂಟುಮಾಡಿದ್ದು, ಹೀಗೆ ನಿಯಮ ಉಲ್ಲಂಘಿಸುವವರನ್ನು ನಿಯಂತ್ರಿಸಲು ಬಾಂಬೆ ಹೈ ಕೋರ್ಟ್​ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಮಾಸ್ಕ್ ಧರಿಸದವರ ವಿರುದ್ಧ, ಕೊರೊನಾ ಕರ್ಫ್ಯೂ ಉಲ್ಲಂಘನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಹಾರಾಷ್ಟ್ರ ರಾಜ್ಯದ ಪ್ರಮುಖ ಜಿಲ್ಲೆಗಳ ಪೊಲೀಸರಿಗೆ ಹೈಕೋರ್ಟ್​ ಸೂಚನೆ ನೀಡಿದೆ.

ಗಲ್ಲದ ಕೆಳಗೆ ಮಾಸ್ಕ್ ಧರಿಸುವವರು, ಮೂಗು ತೋರಿಸಿಕೊಂಡು ಓಡಾಡುವವರನ್ನು ಕೊರೊನಾ ಸೂಪರ್ ಸ್ಪ್ರೆಡರ್ಸ್​ ಎಂದೇ ಪರಿಗಣಿಸಬೇಕು. ಅಂತಹವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಮೂರ್ತಿ ರವೀಂದ್ರ ಘುಜೆ ಮತ್ತು ಬಿಯು ದೇಬಡ್​ವಾರ್ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶ ನೀಡಿದೆ.

ಇಷ್ಟೇ ಅಲ್ಲದೇ, ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲು ಅಡ್ಡಿಪಡಿಸುವ ಯಾವುದೇ ರಾಜಕಾರಣಿ ಅಥವಾ ಜನಪ್ರತಿನಿಧಿಗಳ ವಿರುದ್ಧವೂ ಕಾರ್ಯಕ್ಕೆ ಅಡ್ಡಿಪಡಿಸಿದ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾವುದೇ ಸಚಿವ ಅಥವಾ ಚುನಾಯಿತ ಪ್ರತಿನಿಧಿಗಳು ಈ ಕಾರ್ಯಕ್ಕೆ ಅಡ್ಡಿಪಡಿಸಕೂಡದು ಎಂದು ಬಾಂಬೆ ಹೈಕೋಟ್​ ನಿರ್ದೇಶನ ನೀಡಿದೆ.

ಇದೇ ವಿಚಾರದಲ್ಲಿ ಮುಂದುವರೆದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ರವೀಂದ್ರ ಘುಜೆ, ನಾನು ಜಾಗಿಂಗ್ ಹೋಗುವಾಗಲೂ ಮಾಸ್ಕ್ ಧರಿಸುವುದನ್ನು ಮರೆಯುವುದಿಲ್ಲ. ಆದರೆ, ಎಷ್ಟೋ ಜನ ಯುವಕರು ಮಾಸ್ಕ್ ಇಲ್ಲದೇ, ಹೆಲ್ಮೆಟ್ ಕೂಡಾ ಇಲ್ಲದೇ ಮೂವರು, ನಾಲ್ವರು ಬೈಕ್​ನಲ್ಲಿ ಕುಳಿತು ಹೋಗುವುದು ಕಾಣಿಸುತ್ತದೆ. ಜನರು ನಿಯಮ ಪಾಲಿಸುವತ್ತ ಗಮನ ನೀಡಲೇಬೇಕಿದೆ. ಈ ವಿಚಾರದಲ್ಲಿ ಶಿಸ್ತು ಅಗತ್ಯ ಎಂದು ಹೇಳಿದ್ದಾರೆ.

ಇನ್ನು ಇದೇ ವೇಳೆ ಮರಾಠವಾಡ ಜಿಲ್ಲೆಯಲ್ಲಿ ಕೊರೊನಾ ನಿರ್ವಹಣೆಯ ಕುರಿತಾಗಿ ದಿನಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ವರದಿ ಆಧರಿಸಿ ದಾಖಲಿಸಿಕೊಂಡ ಸ್ವಯಂಪ್ರೇರಿತ ದೂರಿನಲ್ಲಿ ಕೆಲ ನಿರ್ದೇಶನಗಳನ್ನು ನ್ಯಾಯಾಲಯ ನೀಡಿದೆ. ಜತೆಗೆ, ಇದರಲ್ಲಿ ಕೊರೊನಾ ಸೋಂಕಿತರ ಅಂತ್ಯಕ್ರಿಯೆ, ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ರೆಮ್​ಡೆಸಿವಿರ್, ಆ್ಯಂಟಿ ವೈರಲ್ ಡ್ರಗ್, ಆಮ್ಲಜನಕ ಕೊರತೆ ಬಗ್ಗೆಯೂ ನ್ಯಾಯಾಲಯದ ಗಮನಕ್ಕೆ ತರಲಾಗಿದೆ.

ವಿಚಾರಣೆಯ ಹೊತ್ತಿನಲ್ಲಿ ವಿಭಾಗೀಯ ಪೀಠವು ದ್ವಿಚಕ್ರದಲ್ಲಿ ಹೆಲ್ಮೆಟ್ ಧರಿಸದೇ ಓಡಾಡುವವರು ಹಾಗೂ ಸ್ವಂತ ವಾಹನದಲ್ಲಿದ್ದ ಕಾರಣಕ್ಕೆ ಮಾಸ್ಕ್ ಧರಿಸದೇ ಹೋಗುವವರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಿದೆ. ಅಲ್ಲದೇ ಸರ್ಕಾರ ಸೂಚಿಸಿದ ಸಮಯದ ಹೊರತಾಗಿ ಹೊರಗೆ ಓಡಾಡುವವರು ಸೂಕ್ತ ಕಾರಣ ತಿಳಿಸಬೇಕಾಗಿದ್ದು, ಆಧಾರ್ ಕಾರ್ಡ್​ ತೋರಿಸಿ ಪ್ರಯಾಣಿಸಬೇಕೆಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಮನೆಯೊಳಗೆ ಮಾಸ್ಕ್​ ಧರಿಸಿರುವುದು ಎಷ್ಟರ ಮಟ್ಟಿಗೆ ಪರಿಣಾಮಕಾರಿ? ಅಧ್ಯಯನಗಳು ಏನು ಹೇಳುತ್ತವೆ? 

ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​​ ಧರಿಸುವುದು ಕಡ್ಡಾಯವಲ್ಲ; ಅಚ್ಚರಿಯ ನಿಲುವು ತಳೆದ ಇಸ್ರೇಲ್​ ದೇಶ

ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪುನೀತ್ ರಾಜ್​ಕುಮಾರ್ ನಿಧನರಾದ ವಿಷಯ ಸೋದರತ್ತೆಗೆ ಇನ್ನೂ ತಿಳಿದಿಲ್ಲ ಯಾಕೆ?
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಪೊಲೀಸ್ ಕಸ್ಟಡಿಗೆ ತೆರಳುವಾಗ ಮಂಕಾಗಿ ಕುಳಿತ ರಜತ್ ಕಿಶನ್, ವಿನಯ್ ಗೌಡ
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಹಳೆಯ ಸಂಪ್ರದಾಯ ಮುಂದುವರೆಸಿದ ಸಂಜು
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಯತ್ನಾಳ್ ಉಚ್ಛಾಟನೆ: ವಿಜಯಪುರದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಕಾಳಿ ಪೂಜೆ
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ಕನ್ನಡಿಗ ವೈಶಾಕ್​ನನ್ನು ಕಣಕ್ಕಿಳಿಸಿ ಪಂದ್ಯ ಗೆದ್ದ ಪಂಜಾಬ್
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
ದೆಹಲಿಯಲ್ಲಿ ಹೆಚ್​ಡಿಕೆ ಮತ್ತು ದೇವೇಗೌಡರನ್ನು ಭೇಟಿಯಾಗಿರುವ ಜಾರಕಿಹೊಳಿ
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
‘ಅವಕಾಶ ಕೊಡಿ, ನಾನು ಕೆಟ್ಟ ನಟ ಅಲ್ಲ’ ಹೀಗೆಂದರ್ಯಾಕೆ ಮೋಹನ್​ಲಾಲ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಸದ್ಯಕ್ಕೆ ವಾಪಸ್ಸು ಹೋಗುತ್ತಿದ್ದೇನೆ ಎಂದಷ್ಟೇ ಹೇಳಿದ ಬಸನಗೌಡ ಯತ್ನಾಳ್
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ಯುವ ಕ್ರಿಕೆಟಿಗನ ಕ್ವಾಟ್ಲೆ ನೋಡಿ ಶಾಕ್ ಆದ ಇಡೀ ಆರ್​ಸಿಬಿ ತಂಡ
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!
ನಮ್ಮ ಸಿಎಂ ಕಚೇರಿಯೂ ಇಷ್ಟು ಭವ್ಯವಾಗಿಲ್ಲವೆಂದು ಉದ್ಗರಿಸಿದ ಪರಮೇಶ್ವರ್!