ವೈರಲ್​ ವಿಡಿಯೋ; ಕೊರೊನಾ ವೈರಾಣುವಿಗೆ ವಿದಾಯ ಹೇಳುವುದು ಹೇಗೆ? ಇಲ್ಲಿದೆ ನೋಡಿ ತಮಾಷೆ ದೃಶ್ಯ

ಕೊರೊನಾ ಹೊಡೆದೋಡಿಸುವುದು ಹೇಗೆ? ಎಂಬ ತಮಾಷೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವೈರಲ್​ ವಿಡಿಯೋ; ಕೊರೊನಾ ವೈರಾಣುವಿಗೆ ವಿದಾಯ ಹೇಳುವುದು ಹೇಗೆ? ಇಲ್ಲಿದೆ ನೋಡಿ ತಮಾಷೆ ದೃಶ್ಯ
ವೈರಲ್​ ವಿಡಿಯೋ
shruti hegde

| Edited By: Skanda

Apr 27, 2021 | 3:02 PM

ಕೊರೊನಾ ಸಾಂಕ್ರಾಮಿಕ ರೋಗವು ವಿಶ್ವಾದ್ಯಂತ ತನ್ನ ಆರ್ಭಟವನ್ನು ಹೆಚ್ಚಿಸುತ್ತಿದೆ. ಲಸಿಕೆಯ ಹೊರತಾಗಿಯೂ ಕೂಡಾ ಪ್ರಕರಣಗಳ ಸಂಖ್ಯೆ ಹೆಚ್ಚು ದಾಖಲಾಗುತ್ತಿದೆ. ಕೊರೊನಾಕ್ಕೆ ಸಂಬಂಧಿಸಿದಂತೆ ಅದೆಷ್ಟೋ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕೆಲವು ವಿಡಿಯೋಗಳು ಚಿಕಿತ್ಸೆಗೆ ಹಾಗೂ ಕೊರೊನಾ ತಡೆಗಟ್ಟುವಿಕೆಗೆ ಸಂಬಂಧಿಸಿದ ಮಾಹಿತಿಯನ್ನು ತಿಳಿಸಿದರೆ ಇನ್ನು ಕೆಲವು, ಜನರು ಮತ್ತು ಪ್ರಾಣಿಗಳ ಮೇಲೆ ಕೊರೊನಾ ಬೀರಿದ ಪ್ರಭಾವವನ್ನು ಭಾವನಾತ್ಮಕವಾಗಿ ತೋರಿಸುತ್ತವೆ. ಅವೆಲ್ಲದರ ನಡುವೆ ಕೊರೊನಾ ಹೊಡೆದೋಡಿಸುವ ಕುರಿತಾಗಿ ತಮಾಷೆ ವಿಡಿಯೋವೊಂದು ಸಾಮಾಜಿಕ ಜಾಲಾತಾಣದಲ್ಲಿ ಸಕತ್​ ವೈರಲ್​ ಆಗಿದೆ.

ಕೊರೊನಾದಿಂದಾಗಿ ಜನರು ಬೇಸತ್ತಿದ್ದಾರೆ. ಪ್ರತಿನಿತ್ಯ ಕೊರೊನಾ ವೈರಾಣುವಿನ ಹಾವಳಿ ಜನರನ್ನು ಚಿಂತೆಗೀಡು ಮಾಡಿದೆ. ಕೊರೊನಾ ಎಂಬ ಮಹಾಮಾರಿ ದೇಶದಿಂದ ಯಾವಾಗ ತೊಲಗುವುದು ಎಂಬ ಚಿಂತೆಯಲ್ಲಿದ್ದಾರೆ. ಏತನ್ಮಧ್ಯೆ, ಕೊರೊನಾ ಹೊಡೆದೋಡಿಸುವುದು ಹೇಗೆ ಎಂಬುದರ ತಮಾಷೆ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮದುವೆಯಾದ ನಂತರ ತಂದೆಯನ್ನು ಬಿಟ್ಟು ಮಗಳು ಗಂಡನ ಮನೆಗೆ ಹೋಗಬೇಕು. ಈ ಸಂದರ್ಭದಲ್ಲಿ ಮಗಳು ತಂದೆಗೆ ವಿದಾಯ ಹೇಳುವ ಪ್ರಸಂಗ ವಿಡಿಯೋದಲ್ಲಿ ವ್ಯಕ್ತವಾಗುತ್ತದೆ. ಮಗಳು, ತಂದೆಯ ಆಶೀರ್ವಾದ ಪಡೆದು, ಅಳುತ್ತಾ ತಂದೆಯನ್ನು ತಬ್ಬಿಕೊಳ್ಳುತ್ತಾಳೆ. ಮತ್ತು ಗಂಡನೊಂದಿಗೆ ಹೊರಡುತ್ತಾಳೆ. ಒಂದು ಚೂರು ಮುಂದೆ ಹೋದ ನಂತರ ಮತ್ತೆ ಹಿಂತಿರುಗಿ ಬಂದು ಪುನಃ ತಂದೆಯನ್ನು ಅಪ್ಪಿಕೊಳ್ಳುತ್ತಾಳೆ. ಮತ್ತೆ ತಂದೆಗೆ ವಿದಾಯ ಹೇಳಿ ಹೊರಡುತ್ತಾಳೆ. ಇನ್ನೊಂದು ಚೂರು ಮುಂದೆ ಹೋಗಿ, ಪುನಃ ಹಿಂತಿರುಗಿ ಓಡೋಡಿ ಬರಬೇಕು ಅನ್ನುವಷ್ಟರಲ್ಲಿ ತಂದೆ ಚಪ್ಪಲಿ ತೋರಿಸಿ.. ಹೋಗು ಮೊದಲು ಎಂದು ಹೆದರಿಸುತ್ತಾರೆ. ಇದೇ ರೀತಿ, ಹೋಗು ಎಂದರೂ ಮತ್ತೆ ಬರುತ್ತಿರುವ ಕೊರೊನಾಗೆ ಚಪ್ಪಲಿಯಿಂದ ಹೊಡೆದೋಡಿಸಬೇಕು ಎಂಬ ಅರ್ಥವನ್ನು ನೀಡುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಬಹಳಷ್ಟು ಮೆಚ್ಚುಗೆ ಪಡೆದುಕೊಂಡಿದೆ.

ಈ ತಮಾಷೆಯ ವಿಡಿಯೋವನ್ನು ಐಪಿಎಸ್​ ಅಧಿಕಾರಿ ರುಪಿನ್​ ಶರ್ಮಾ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಕೊರೊನಾ ಮತ್ತು ಇವರ ವಿದಾಯ ಒಂದೇ ಸಂಗತಿಯನ್ನು ಸಾರುತ್ತದೆ. ಇದು ಕೊರೊನಾಕ್ಕೆ ವಿದಾಯ ಹೇಳುವ ಒಂದು ನೋಟವಾಗಿದೆ. ವಿಡಿಯೋ ನೋಡಿದ ನೆಟ್ಟಿಗರು ತುಂಬಾ ಇಷ್ಟಪಟ್ಟಿದ್ದು, ವಿಡಿಯೋ ದೃಶ್ಯಕ್ಕೆ ಕಮೆಂಟ್​ಗಳ ಸುರಿಮಳೆಯೇ ಬಂದಿದೆ.

ಇದನ್ನೂ ಓದಿ: Anupama Parameswaran: ವೈರಲ್ ಆಯ್ತು ಅನುಪಮಾ ಪರಮೇಶ್ವರನ್ ಕ್ಯೂಟ್ ಫೋಟೋಸ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada