ತನ್ನ ಹೆಂಡತಿಯನ್ನು 7 ವರ್ಷದ ನಂತರ ಆಕೆಯ ಬಾಯ್​ಫ್ರೆಂಡ್​​ಗೆ ಮದುವೆ ಮಾಡಿಸಿಕೊಟ್ಟ ಗಂಡ; ಇದು ಸಿನಿಮಾ ಅಲ್ಲ, ರಿಯಲ್​

ಇಂಥ ಒಂದು ವಿಚಿತ್ರ ಮದುವೆ ನಡೆಯುತ್ತಿದೆ ಎಂದು ಸುದ್ದಿ ಹಬ್ಬುತ್ತಿದ್ದಂತೆಯೇ ನೂರಾರು ಜನರು ಆ ಮದುವೆ ನೋಡಲು ಬಂದು ಜಮಾಯಿಸಿದರು. ದೇವಸ್ಥಾನದಲ್ಲಿ ಸಪ್ನಾ ಕುಮಾರಿ ಮತ್ತು ರಾಜು ಕುಮಾರ್​ ವಿವಾಹ ನೆರವೇರಿಸಲಾಯಿತು.

ತನ್ನ ಹೆಂಡತಿಯನ್ನು 7 ವರ್ಷದ ನಂತರ ಆಕೆಯ ಬಾಯ್​ಫ್ರೆಂಡ್​​ಗೆ ಮದುವೆ ಮಾಡಿಸಿಕೊಟ್ಟ ಗಂಡ; ಇದು ಸಿನಿಮಾ ಅಲ್ಲ, ರಿಯಲ್​
‘ಹಮ್ ದಿಲ್ ದೇ ಚುಕೇ ಸನಮ್’ ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Apr 27, 2021 | 12:19 PM

ಪ್ರೀತಿ ಕುರುಡು ಅಂತಾರೆ. ಅದು ಏನನ್ನು ಬೇಕಾದರೂ ಮಾಡಿಸುತ್ತದೆ. ಪ್ರೀತಿ ನಿಜವೇ ಆಗಿದ್ದರೆ ಪ್ರೇಮಿಗಳು ಎಷ್ಟೇ ದೂರ ಇದ್ದರೂ ಕೂಡ ಒಂದಾಗುತ್ತಾರೆ. ಬೇರೆ ಯಾರೂ ಕೂಡ ಅವರನ್ನು ತಡೆಯಲಾರರು. ಆದರೆ ಇಂಥ ಮಾತುಗಳನ್ನು ಸಿನಿಮಾದಲ್ಲಿ ಹೇಳಿದರೆ ಕೇಳಬಹುದು. ನಿಜ ಜೀವನದಲ್ಲಿ ಸ್ವಲ್ಪ ಕಷ್ಟ. ಆದರೂ ಇಲ್ಲೊಂದು ವಿಲಕ್ಷಣ ಘಟನೆ ನಡೆದಿದೆ. ತನ್ನ ಹೆಂಡತಿಯನ್ನು ಬರೋಬ್ಬರಿ 7 ವರ್ಷಗಳ ಬಳಿಕ ಆಕೆಯ ಬಾಯ್​ಫ್ರೆಂಡ್​ ಜೊತೆಗೆ ಮದುವೆ ಮಾಡಿಸಿಕೊಟ್ಟಿದ್ದಾನೆ ಪತಿರಾಯ!

ಈ ಘಟನೆ ನಡೆದಿರುವುದು ಬಿಹಾರದಲ್ಲಿ. ಇದನ್ನು ನೋಡುತ್ತಿದ್ದರೆ ಬಾಲಿವುಡ್​ನ ‘ಹಮ್​ ದಿಲ್​ ದೇ ಚುಕೇ ಸನಮ್​’ ಸಿನಿಮಾ ನೆನಪಾಗುತ್ತದೆ. ಆ ಸಿನಿಮಾದಲ್ಲಿ ಅಜಯ್​ ದೇವಗನ್​ ಮತ್ತು ಐಶ್ವರ್ಯಾ ರೈ ಗಂಡ-ಹೆಂಡತಿ ಆಗಿರುತ್ತಾರೆ. ಆದರೆ ಐಶ್ವರ್ಯಾ ಮನಸ್ಸು ಪ್ರಿಯಕರ ಸಲ್ಮಾನ್​ ಖಾನ್​ಗಾಗಿ ಪರಿತಪಿಸುತ್ತ ಇರುತ್ತದೆ. ಹಾಗಾಗಿ ತನ್ನ ಹೆಂಡತಿಯನ್ನು ಆಕೆಯ ಪ್ರಿಯಕರನ ಜೊತೆಗೆ ಮರಳಿ ಸೇರಿದಲು ಅಜಯ್​ ದೇವಗನ್​ ಪ್ರಯತ್ನಿಸುತ್ತಾರೆ. ಈ ಘಟನೆ ಈಗ ರಿಯಲ್​ ಆಗಿ ನಡೆದಿದೆ.

ಬಿಹಾರದಲ್ಲಿ ಸಪ್ನಾ ಕುಮಾರಿ ಮತ್ತು ಉತ್ತಮ್​ ಮಂಡಲ್​ ಎಂಬುವವರು ಮದುವೆ ಆಗಿದ್ದರು. ಇಬ್ಬರ ದಾಂಪತ್ಯ ಜೀವನ ಚೆನ್ನಾಗಿಯೇ ಸಾಗುತ್ತಿತ್ತು. ಈ ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದರು. ಆದರೆ ರಾಜು​ ಕುಮಾರ್​ ಎಂಬ ಯುವಕನನ್ನು ಸಪ್ನಾ ಪ್ರೀತಿಸುತ್ತಿದ್ದರು! ಈ ವಿಚಾರ ಆಕೆಯ ಗಂಡ ಉತ್ತಮ್​ಗೆ ತಿಳಿದ ಬಳಿಕ ಸಂಸಾರದಲ್ಲಿ ಬಿರುಗಾಳಿ ಎದ್ದಿತು. ಪ್ರತಿದಿನ ಅವರ ನಡುವೆ ಜಗಳ ಆಗುತ್ತಿತ್ತು. ಏನು ಮಾಡಿದರೂ ತನ್ನ ಹೆಂಡತಿಯು ಪ್ರಿಯಕರನ ಗುಂಗಿನಿಂದ ಹೊರಬರುವುದಿಲ್ಲ ಎಂದು ಗೊತ್ತಾಗ ಬಳಿಕ ಉತ್ತಮ್​ ಮಂಡಲ್​ ಒಂದು ಗಟ್ಟಿ ನಿರ್ಧಾರ ತೆಗೆದುಕೊಂಡರು.

ತನ್ನ ಹೆಂಡತಿಯನ್ನು ಆಕೆಯ ಬಾಯ್​ಫ್ರೆಂಡ್​ ಜೊತೆಗೆ ಮದುವೆ ಮಾಡಿಸಿಬಿಡುವುದೇ ಉತ್ತಮ ಎಂದು ಉತ್ತಮ್​ ಮಂಡಲ್​ ತೀರ್ಮಾನಿಸಿದರು. ಸಮೀಪದ ದೇವಸ್ಥಾನದಲ್ಲಿ ಸಪ್ನಾ ಕುಮಾರಿ ಮತ್ತು ರಾಜು ಕುಮಾರ್​ ವಿವಾಹ ನೆರವೇರಿಸಲಾಯಿತು. ಇಂಥ ಒಂದು ವಿಚಿತ್ರ ಮದುವೆ ನಡೆಯುತ್ತಿದೆ ಎಂದು ಸುದ್ದಿ ಹಬ್ಬುತ್ತಿದ್ದಂತೆಯೇ ನೂರಾರು ಜನರು ಆ ಮದುವೆ ನೋಡಲು ಬಂದು ಜಮಾಯಿಸಿದರು. ತನ್ನ ಪತ್ನಿಯನ್ನು ಆಕೆಯ ಬಾಯ್​ಫ್ರೆಂಡ್​ಗೆ ಬಿಟ್ಟುಕೊಟ್ಟ ಬಳಿಕ ಆಶೀರ್ವಾದ ಮಾಡಿದ ಉತ್ತಮ್​ ಮಂಡಲ್​ ಅವರು ‘ಮದುವೆಗಳು ಸ್ವರ್ಗದಲ್ಲಿಯೇ ನಿಶ್ಚಯ ಆಗಿರುತ್ತವೆ’ ಅಂತ ಹೇಳಿದ್ದಾರೆ ಎಂದು ವರದಿ ಆಗಿದೆ.

ಇದನ್ನೂ ಓದಿ: ಸ್ಟಾರ್ ನಟಿಗೆ ಮೋಸ; ಲಾಕ್​​ಡೌನ್ ವೇಳೆ ಹೊರಬಿತ್ತು ಎರಡನೇ ಗಂಡನ ಅನೈತಿಕ ಸಂಬಂಧ

ರಕ್ಷಿತ್​ ಶೆಟ್ಟಿ ಜೊತೆ ರಮ್ಯಾ ಮದುವೆ ಆಗ್ಬೇಕು; ಫ್ಯಾನ್ಸ್​ ಬಯಕೆಗೆ ಉತ್ತರ ಕೊಟ್ಟ ಸ್ಯಾಂಡಲ್​ವುಡ್​ ಕ್ವೀನ್​