#KarnatakaLockdown: ‘ಉಪಚುನಾವಣೆ ಮುಗೀತಾ ಮುಖ್ಯಮಂತ್ರಿಗಳೇ’: ಲಾಕ್​ಡೌನ್ ಘೋಷಣೆಯ ಬೆನ್ನಲ್ಲೇ ಟ್ವಿಟರ್​ನಲ್ಲಿ ಮೀಮ್​ಗಳ ಸುರಿಮಳೆ

Karnataka Lockdown: ಸರ್ಕಾರದ ಕ್ರಮವನ್ನು ಹಲವು ವೈದ್ಯರು ಸ್ವಾಗತಿಸಿದ್ದಾರೆ. ವಿಷಾದದ ಆಳದಲ್ಲೂ ನಗುವಿನ ಅಲೆ ಚಿಮ್ಮಿಸುವುದರಲ್ಲಿ ಖ್ಯಾತರಾದ ಕೆಲ ನೆಟಿಜನ್ನರು ಮೀಮ್​ಗಳನ್ನು ಹರಿಬಿಡುವ ಮೂಲಕ ನಗೆಯುಕ್ಕಿಸಿದ್ದಾರೆ.

#KarnatakaLockdown: ‘ಉಪಚುನಾವಣೆ ಮುಗೀತಾ ಮುಖ್ಯಮಂತ್ರಿಗಳೇ’: ಲಾಕ್​ಡೌನ್ ಘೋಷಣೆಯ ಬೆನ್ನಲ್ಲೇ ಟ್ವಿಟರ್​ನಲ್ಲಿ ಮೀಮ್​ಗಳ ಸುರಿಮಳೆ
ಲಾಕ್​ಡೌನ್ ಘೋಷಣೆಯ ನಂತರ ತೇಲಿ ಬಂದಿರುವ ಮೀಮ್​ಗಳು
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Apr 26, 2021 | 6:20 PM

ಕೊರೊನಾ ಸೋಂಕಿನ 2ನೇ ಅಲೆ ಕಾರಣದಿಂದ ತೀವ್ರ ಆರೋಗ್ಯ ಬಿಕ್ಕಟ್ಟು ಎದುರಿಸುತ್ತಿರುವ ಕರ್ನಾಟಕದಲ್ಲಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲೆಂದು ಸರ್ಕಾರವು ಸೋಮವಾರ (ಏಪ್ರಿಲ್ 26) ಕಠಿಣ ನಿರ್ಬಂಧ ವಿಧಿಸಲು ಮುಂದಾಗಿದೆ. ನಾಳೆಯಿಂದ 14 ದಿನಗಳ ಅವಧಿಗೆ ರಾಜ್ಯದಲ್ಲಿ ಕೊವಿಡ್ ಕರ್ಫ್ಯೂ ಇರುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಧಾನಸೌಧದಲ್ಲಿ ನಡೆಸಿದ ಮಾಧ್ಯಮ ಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿರುವ ಪ್ರಸ್ತುತ ಇರುವ ಅತ್ಯಂತ ಗಂಭೀರ ಮತ್ತು ಚಿಂತಾಜನಕ ಸ್ಥಿತಿಯಲ್ಲಿ ಅನಿವಾರ್ಯವಾಗಿ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ. ಸರ್ಕಾರದ ಕ್ರಮವನ್ನು ಹಲವು ವೈದ್ಯರು ಸ್ವಾಗತಿಸಿದ್ದಾರೆ. ವಿಷಾದದ ಆಳದಲ್ಲೂ ನಗುವಿನ ಅಲೆ ಚಿಮ್ಮಿಸುವುದರಲ್ಲಿ ಖ್ಯಾತರಾದ ಕೆಲ ನೆಟಿಜನ್ನರು ಮೀಮ್​ಗಳನ್ನು ಹರಿಬಿಡುವ ಮೂಲಕ ನಗೆಯುಕ್ಕಿಸಿದ್ದಾರೆ.

ಈ ಪೈಕಿ ಎಲ್ಲರ ಗಮನ ಸೆಳೆಯುತ್ತಿರುವುದು ಸಂಗೀತ ನಿರ್ದೇಶಕ ರಾಜೇಶ್​ ಕೃಷ್ಣನ್ ಟ್ವೀಟ್​ ಮಾಡಿರುವ ವಿಡಿಯೊ ತುಣುಕು. ‘ಗುರುಶಿಷ್ಯರು’ ಸಿನಿಮಾದ ದೃಶ್ಯವೊಂದನ್ನು ಅವರು ಹಂಚಿಕೊಂಡಿದ್ದಾರೆ. ‘ನಿಮ್ಮ ಮುಂದಿನ ಕಾರ್ಯಕ್ರಮವೇನು’ ಎಂಬ ಕಲಾವಿದರ ರಾಜಾನಂದ ಅವರ ಪ್ರಶ್ನೆಗೆ ಕಲಾವಿದ ಮುಸುರಿ ಕೃಷ್ಣಮೂರ್ತಿ ಹೇಳು ಸಾಲುಸಾಲು ಪ್ಲಾನ್​ಗಳು ಟ್ವಿಟರ್​ ಬಳಕೆದಾರರಲ್ಲಿ ನಗೆಯುಕ್ಕಿಸುತ್ತಿವೆ.

ಮಂಗಳೂರಿನ ಕೆಎಂಸಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಪಿ.ಕಾಮತ್, ಸರ್ಕಾರದ ಕ್ರಮವನ್ನು ಸ್ವಾಗತಿಸಿದ್ದಾರೆ. ‘ಕರ್ನಾಟಕವು ನಾಳೆಯಿಂದ 15 ದಿನಗಳ ಲಾಕ್​ಡೌನ್​ಗೆ ಹೋಗಲಿದೆ. ರಾಜ್ಯದಲ್ಲಿ ಎಲ್ಲೆಲ್ಲೂ ವೈದ್ಯಕೀಯ ಸಿಬ್ಬಂದಿ ಹಾಗೂ ಬೆಡ್​ಗಳ ಕೊರತೆ ಕಾಣಿಸಿಕೊಂಡಿದೆ. ವೈದ್ಯಕೀಯ ಸಿಬ್ಬಂದಿಯ ಮೇಲೆ ವಿಪರೀತ ಒತ್ತಡವಿದೆ. ನಾವೆಲ್ಲರೂ ಇನ್ನು 15 ದಿನಗಳಲ್ಲಿ ನಮ್ಮ ಸಂಪನ್ಮೂಲಗಳನ್ನು ಒಗ್ಗೂಡಿಸಿಕೊಂಡು ಪುನರ್ ಸಂಘಟಿತರಾಗಬೇಕು. ಅಮೂಲ್ಯ ಜೀವಗಳನ್ನು ಉಳಿಸಲು ಸಿದ್ಧರಾಗಬೇಕು’ ಎಂದು ಅವರು ಟ್ವೀಟ್ ಮಾಡಿದ್ದಾರೆ.

ರಾಜ್ಯ ಸರ್ಕಾರದ ನಿರ್ಧಾರವನ್ನು ಉಪಚುನಾವಣೆಗಳ ನೆಲೆಯಲ್ಲಿ ಶಿವಾನಂದ ಮಲಗಾವಿ ವಿಮರ್ಶಿಸಿದ್ದಾರೆ. ‘ರಾಜ್ಯ ಸರ್ಕಾರವು ಈಗ ಲಾಕ್​ಡೌನ್ ಘೋಷಿಸಿದೆ. ಬಹುಶಃ ಎಲ್ಲ ಉಪಚುನಾವಣೆಗಳನ್ನು ಯಶಸ್ವಿಯಾಗಿ ಅವರು ಪೂರೈಸಿದ್ದಾರೆ’ ಎಂದು ಅವರು ಲೇವಡಿ ಮಾಡಿದ್ದಾರೆ.

ಬೆಳಿಗ್ಗೆ 6ರಿಂದ 10ರವರೆಗೆ ಮಾತ್ರ ಅಂಗಡಿಗಳನ್ನು ತೆರೆಯಲು ಅವಕಾಶ ನೀಡುವ ರಾಜ್ಯ ಸರ್ಕಾರದ ಕ್ರಮವನ್ನೂ ಹಲವರು ವಿಮರ್ಶೆ ಮಾಡಿದ್ದಾರೆ. ‘ಕಳೆದ ವರ್ಷ ಪ್ರವೀಣ್ ಸೂದ್ ಅವರು ಅತ್ಯಗತ್ಯ ವಸ್ತುಗಳ ಮಾರಾಟದ ಅಂಗಡಿಗಳನ್ನು ದಿನವಿಡೀ ತೆರೆಯಲು ಅವಕಾಶ ನೀಡಿದ್ದರು. ಆದರೆ ಈ ವರ್ಷ ಮುಖ್ಯ ಕಾರ್ಯದರ್ಶಿ ಕೇವಲ 4 ಗಂಟೆಗಳ ಅವಧಿಗೆ ಅಂಗಡಿ ತೆರೆಯಲು ಅವಕಾಶ ನೀಡಿದ್ದಾರೆ. ಇದರಿಂದ ಅಂಗಡಿಗಳ ಎದುರು ಗುಂಪು ಸೇರುತ್ತದೆ. ಲಾಕ್​ಡೌನ್​ನ ಆಶಯ ವಿಫಲವಾಗುತ್ತದೆ’ ಎಂದು ಅನಂತು ಸುದರ್ಶನ್ ಎಂಬುವವರು ಟ್ವೀಟ್ ಮಾಡಿದ್ದಾರೆ.

ಟ್ವಿಟರ್​ನಲ್ಲಿ ಗಮನ ಸೆಳೆದ ಕೆಲ ಮೀಮ್​ಗಳು ಇಲ್ಲಿವೆ..

(Karnataka Lockdown memes rise in twitter after Karnataka Government announces covid curfew to curtail pandemic)

ಇದನ್ನೂ ಓದಿ: ನಾಳೆಯಿಂದ ರಾಜ್ಯದಲ್ಲಿ ಕೊವಿಡ್ ಕರ್ಫ್ಯೂ: ಏನಿರುತ್ತೆ? ಏನಿರಲ್ಲ?

ಇದನ್ನೂ ಓದಿ: karnataka Covid Curfew: ರಾಜ್ಯದಲ್ಲಿ 14 ದಿನ ಕಟ್ಟುನಿಟ್ಟಿನ ಕರ್ಫ್ಯೂ ಘೋಷಿಸಿದ ಸಿಎಂ ಯಡಿಯೂರಪ್ಪ

Published On - 6:19 pm, Mon, 26 April 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್