Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid curfew: ನಾಳೆ ರಾತ್ರಿಯಿಂದ ಬಿಗಿ ಬಂದೋಬಸ್ತ್​; ಸ್ವಗ್ರಾಮಕ್ಕೆ ಹೊರಟ ಜನ, ಬಸ್​ ನಿಲ್ದಾಣ ಫುಲ್​ ರಶ್

ಬೆಂಗಳೂರು ತೊರೆದು ಸರ್ಕಾರಿ ಬಸ್‌ಗಳಲ್ಲಿ ತಮ್ಮ ಊರುಗಳಿಗೆ ತೆರಳುವ ಸಿದ್ಧತೆ ಮಾಡಿಕೊಂಡು ಜನರು ಮೆಜೆಸ್ಟಿಕ್​ ಬಳಿ ಬಂದು ನಿಂತಿದ್ದಾರೆ.

Covid curfew: ನಾಳೆ ರಾತ್ರಿಯಿಂದ ಬಿಗಿ ಬಂದೋಬಸ್ತ್​; ಸ್ವಗ್ರಾಮಕ್ಕೆ ಹೊರಟ ಜನ, ಬಸ್​ ನಿಲ್ದಾಣ ಫುಲ್​ ರಶ್
ಸ್ವಗ್ರಾಮಕ್ಕೆ ಹಿಂತಿರುಗುತ್ತಿರುವ ಜನ
Follow us
shruti hegde
|

Updated on:Apr 26, 2021 | 5:02 PM

ಬೆಂಗಳೂರು: ರಾಜ್ಯದಲ್ಲಿ ನಾಳೆಯಿಂದ 14 ದಿನ ಕಟ್ಟುನಿಟ್ಟಾದ ರೂಲ್ಸ್​ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಸ್ವಗ್ರಾಮಕ್ಕೆ ತೆರಳಲು ಲಗೇಜ್​ ಸಮೇತವಾಗಿ ಮೆಜೆಸ್ಟಿಕ್​ ಬಸ್​ ನಿಲ್ದಾಣಕ್ಕೆ ಜನರು ಆಗಮಿಸುತ್ತಿದ್ದಾರೆ. ಸರ್ಕಾರಿ ಬಸ್‌ಗಳಲ್ಲಿ ತಮ್ಮ ಊರುಗಳಿಗೆ ಜನರು ತೆರಳುವ ಸಿದ್ಧತೆ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿದ್ದ ಹುಬ್ಬಳ್ಳಿ, ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಚಿತ್ರದುರ್ಗ, ದಾವಣಗೆರೆ, ಕಲಬುರಗಿ ಹೀಗೆ ಹೆಚ್ಚಿನ ಭಾಗಗಳ ಪ್ರಯಾಣಿಕರು ಹಿಂತಿರುಗಿ ಊರಿಗೆ ಹೊರಡಲು ಸಿದ್ಧರಾಗಿದ್ದಾರೆ.

ಕೊವಿಡ್​ ಪ್ರಕರಣಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕೊವಿಡ್​ ಸೋಂಕು ತಡೆಯಲು ಕಟ್ಟುನಿಟ್ಟಾದ ಕ್ರಮ ಕೈಗೊಳ್ಳಲಾಗಿದೆ. ಗಂಟೂ ಮೂಟೆಯೊಂದಿಗೆ ಮೆಜೆಸ್ಟಿಕ್ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದತ್ತ ಪ್ರಯಾಣಿಕರು ಆಗಮಿಸಿದ್ದಾರೆ. ಹೀಗಾಗಿ ಬಸ್ ನಿಲ್ದಾಣದ ಬಳಿ ಜನಸಂದಣಿ ಹೆಚ್ಚಾಗಿದೆ. ಹೊಸಪೇಟೆ, ಗಂಗಾವತಿ, ಬಾಗಲಕೋಟೆ, ಗುಲ್ಬರ್ಗ, ವಿಜಯಪುರ ಬಸ್​ಗಳಿಗಾಗಿ ಪ್ರಯಾಣಿಕರು ಕಾಯುತ್ತಾ ನಿಂತಿದ್ದಾರೆ. ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಸಂಖ್ಯೆಯನ್ನು ಹೆಚ್ಚಳ ಮಾಡುವ ಸಾಧ್ಯತೆ ಇದೆ.

ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿನ 2ನೇ ಅಲೆ ನಿಯಂತ್ರಣ ಮೀರಿ ಹರಡುತ್ತಿದೆ. ಇದಕ್ಕೆ ಕಡಿವಾಣ ಹಾಕಲೆಂದು ರಾಜ್ಯದಲ್ಲಿ 14 ದಿನಗಳ ಬಿಗಿಕ್ರಮ ಜಾರಿಗೊಳಿಸಲಾಗಿದೆ. ಬಹುತೇಕ ಲಾಕ್​ಡೌನ್​ ನಿಯಮಗಳನ್ನೇ ಹೋಲುವ ಈ ಕ್ರಮವನ್ನು ಸರ್ಕಾರ ‘ಕೊವಿಡ್ ಕರ್ಫ್ಯೂ’ ಎಂದು ಕರೆದಿದೆ. 2 ವಾರಗಳಲ್ಲಿ ಪರಿಸ್ಥಿತಿ ತಹಬದಿಗೆ ಬರದಿದ್ದರೆ ನಿರ್ಬಂಧ ಮುಂದುವರಿಸಲಾಗುವುದು ಎಂದು ಸರ್ಕಾರ ಹೇಳಿದೆ.

ಇದನ್ನೂ ಓದಿ: Covid Curfew: ಕರ್ನಾಟಕ ಕೊವಿಡ್​ ಕರ್ಫ್ಯೂನಲ್ಲಿ ಮದ್ಯಪ್ರಿಯರಿಗೆ ಸಿಹಿಸುದ್ದಿ; ಬಾರ್​ಗಳಲ್ಲಿ ಪಾರ್ಸೆಲ್​ಗೆ ಅವಕಾಶ

Published On - 4:43 pm, Mon, 26 April 21