Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯೊಳಗೆ ಮಾಸ್ಕ್​ ಧರಿಸಿರುವುದು ಎಷ್ಟರ ಮಟ್ಟಿಗೆ ಪರಿಣಾಮಕಾರಿ? ಅಧ್ಯಯನಗಳು ಏನು ಹೇಳುತ್ತವೆ?

ಕೆಲ ಅಧ್ಯಯನಗಳಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರ ಆರು ಅಡಿ ಅಂತರದಲ್ಲಿದ್ದು ಮಾಸ್ಕ್ ಧರಿಸಿದ್ದರೆ ಕೂಡ ಸೋಂಕು ಹಬ್ಬುವ ಸಾಧ್ಯತೆ ತೀರಾ ಕಡಿಮೆ ಎಂಬುದು ಸಾಬೀತಾಗಿದೆ.

ಮನೆಯೊಳಗೆ ಮಾಸ್ಕ್​ ಧರಿಸಿರುವುದು ಎಷ್ಟರ ಮಟ್ಟಿಗೆ ಪರಿಣಾಮಕಾರಿ? ಅಧ್ಯಯನಗಳು ಏನು ಹೇಳುತ್ತವೆ?
ಸಾಂದರ್ಭಿಕ ಚಿತ್ರ
Follow us
Skanda
| Updated By: Lakshmi Hegde

Updated on:Apr 27, 2021 | 11:40 AM

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ಎರಡನೇ ಅಲೆಯ ಹೊಡೆತದಿಂದ ಜನರನ್ನು ರಕ್ಷಿಸಲು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಕಠಿಣ ಕ್ರಮಗಳ ಮೊರೆಹೋಗಿವೆ. ಕೊರೊನಾ ಹಬ್ಬುವಿಕೆಯ ಕೊಂಡಿಯನ್ನು ತಪ್ಪಿಸಲು ಜನರು ಮನೆಯಲ್ಲೂ ಮಾಸ್ಕ್ ಧರಿಸಬೇಕು ಎಂದು ಕೊವಿಡ್ 19 ಟಾಸ್ಕ್ ಪೊರ್ಸ್​ ಮುಖ್ಯಸ್ಥ ಡಾ.ವಿ.ಕೆ.ಪೌಲ್ ರಾಷ್ಟ್ರದ ಜನತೆಗೆ ಸಲಹೆ ನೀಡಿದ್ದಾರೆ. ಸೋಮವಾರ (ಏಪ್ರಿಲ್ 26) ದೇಶದಲ್ಲಿ 3.52 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾದ ಬೆನ್ನಲ್ಲೇ ಇಂಥದ್ದೊಂದು ಹೇಳಿಕೆ ಹೊರಬಿದ್ದಿದ್ದು ಮನೆಯೊಳಗೂ ಮಾಸ್ಕ್ ಅನಿವಾರ್ಯವಾಗುವ ಸ್ಥಿತಿ ಎದುರಾಗಿರುವುದು ಜನರಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟಿಸಿದೆ.

ಕೊವಿಡ್ 19 ವೈರಾಣು ಒಬ್ಬರಿಂದ ಒಬ್ಬರಿಗೆ ಹಬ್ಬುತ್ತದೆ ಎನ್ನುವುದು ಕಳೆದ ವರ್ಷವೇ ಎಲ್ಲರ ಅರಿವಿಗೆ ಬಂದಿದೆ. ಕೆಮ್ಮು, ಸೀನು, ಮಾತು ಅಥವಾ ಉಸಿರಾಟದ ವೇಳೆ ಮೂಗು, ಬಾಯಿಯಿಂದ ಹೊರಬೀಳುವ ಸಣ್ಣ ಕಣಗಳು ಶ್ವಾಸದ ಮೂಲಕ ಇನ್ನೊಬ್ಬರ ದೇಹವನ್ನು ಪ್ರವೇಶಿಸಿ ಅಲ್ಲಿ ಸೋಂಕು ಹರಡುವಂತೆ ಮಾಡುತ್ತದೆ. ಈ ಬಾರಿಯಂತೂ ಸೋಂಕು ತಗುಲಿದರೂ ಹೆಚ್ಚಿನವರಿಗೆ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲವಾದ್ದರಿಂದ ಹೆಚ್ಚಿನ ಜಾಗ್ರತೆ ಅನಿವಾರ್ಯವಾಗಿದೆ.

ಮೇಲಾಗಿ ಎರಡನೇ ಅಲೆಯಲ್ಲಿ ಸೋಂಕು ಹಬ್ಬುವ ವೇಗ ಅಧಿಕವಾಗಿದ್ದು ಮನೆಯಲ್ಲಿ ಒಬ್ಬರಿಗೆ ಸೋಂಕು ಬಂದರೂ ಉಳಿದವರೆಲ್ಲರಿಗೂ ತಕ್ಷಣವೇ ಹರಡುತ್ತಿರುವುದು ಕಂಡುಬಂದಿದೆ. ಜತೆಗೆ ಏರುತ್ತಿರುವ ಸೋಂಕಿತರ ಸಂಖ್ಯೆಗೆ ಅನುಗುಣವಾಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೌಲಭ್ಯಗಳು ಲಭ್ಯವಾಗದೇ ಇರುವುದು ಅಪಾಯವನ್ನು ಮತ್ತಷ್ಟು ಹೆಚ್ಚಿಸಿದೆ. ಇಂತಹ ವಿಷಮ ಸಂದರ್ಭದಲ್ಲಿ ಮನೆಯಲ್ಲೂ ಮಾಸ್ಕ್ ಧರಿಸುವುದೇ ಸೋಂಕು ಹರಡುವುದನ್ನು ತಪ್ಪಿಸಲು ಇರುವ ಪ್ರಮುಖ ಮಾರ್ಗ ಎಂದು ಡಾ.ವಿ.ಕೆ.ಪೌಲ್ ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೇ ಕೆಲ ಅಧ್ಯಯನಗಳಲ್ಲಿ ಇಬ್ಬರು ವ್ಯಕ್ತಿಗಳು ಪರಸ್ಪರ ಆರು ಅಡಿ ಅಂತರದಲ್ಲಿದ್ದು ಮಾಸ್ಕ್ ಕೂಡಾ ಧರಿಸಿದ್ದರೆ ಸೋಂಕು ಹಬ್ಬುವ ಸಾಧ್ಯತೆ ತೀರಾ ಕಡಿಮೆ ಎಂಬುದು ಸಾಬೀತಾಗಿದೆ. ಇಬ್ಬರೂ ವ್ಯಕ್ತಿ ಮಾಸ್ಕ್ ಧರಿಸಿದ್ದರೆ ಶೇ.1.5ರಷ್ಟು ಅಪಾಯದ ಸಾಧ್ಯತೆ ಮಾತ್ರ ಇರುತ್ತದೆ. ಸೋಂಕಿತ ವ್ಯಕ್ತಿ ಮಾತ್ರ ಮಾಸ್ಕ್ ಧರಿಸಿ ಇನ್ನೊಬ್ಬರು ಧರಿಸದೇ ಇದ್ದಲ್ಲಿ ಅಪಾಯ ಶೇ.5ರಷ್ಟು ಇರುತ್ತದೆ. ಅದೇ ಸೋಂಕಿತ ವ್ಯಕ್ತಿ ಮಾತ್ರ ಧರಿಸದೇ ಇದ್ದಲ್ಲಿ ಶೇ.30ರಷ್ಟು ಅಪಾಯವಿರಲಿದೆ. ಒಂದು ವೇಳೆ ಇಬ್ಬರೂ ಮಾಸ್ಕ್ ಧರಿಸದೇ ಇದ್ದಲ್ಲಿ ಗರಿಷ್ಠ ಅಪಾಯ ಅಂದರೆ ಶೇ.90ರಷ್ಟು ಅಪಾಯ ಇರಲಿದೆ ಎಂದು ಸಾಬೀತಾಗಿದೆ.

ಈ ಎಲ್ಲಾ ಕಾರಣಗಳಿಂದ ಎರಡನೇ ಅಲೆ ಹಬ್ಬುತ್ತಿರುವ ವೇಳೆಯಲ್ಲಿ ಕುಟುಂಬಸ್ಥರನ್ನು ಸೋಂಕಿನಿಂದ ರಕ್ಷಿಸಿಕೊಳ್ಳಲು ಮತ್ತು ಸೋಂಕು ಹಬ್ಬುತ್ತಿರುವ ಕೊಂಡಿಯನ್ನು ತಪ್ಪಿಸಲು ಮನೆಯಲ್ಲಿ ಮಾಸ್ಕ್ ಧರಿಸುವುದು ಅತ್ಯಗತ್ಯವಾಗಿದೆ.

(How can wearing mask inside home will reduce the risk of Covid 19 spreading)

ಇದನ್ನೂ ಓದಿ: ಕೊರೊನಾ ಎರಡನೇ ಅಲೆ: ಒಂದು ವಾರದಲ್ಲಿ ಪಾಸಿಟಿವಿಟಿ ಮತ್ತು ಮರಣ ಪ್ರಮಾಣ ಎರಡೂ ಹೆಚ್ಚಳ 

ಕುಟುಂಬದವರ ಜತೆಗಿದ್ದರೂ ಮಾಸ್ಕ್ ಧರಿಸಿ, ಮಾಸ್ಕ್ ಧರಿಸುವುದು ಕಡ್ಡಾಯ: ನೀತಿ ಆಯೋಗದ ಸದಸ್ಯ ಡಾ.ವಿ.ಕೆ. ಪೌಲ್

Published On - 11:39 am, Tue, 27 April 21

ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ
IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ