Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್​ ಆಯ್ತು ಪುಟ್ಟ ಮುದ್ದು ಕಂದಮ್ಮನ ತೊದಲು ನುಡಿ

ಮಗು ಎಷ್ಟು ಚಂದ ಮಾತನಾಡುತ್ತಿದೆ.. ಮಕ್ಕಳು ಹಠ ಮಾಡುತ್ತಿರುವಾಗ ಓಲೈಸುವ ರೀತಿಯನ್ನು ಈ ವಿಡಿಯೋ ಹೇಳುತ್ತದೆ. ಈ ವಿಡಿಯೋವನ್ನು ವಿಶೇಷವಾಗಿ ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ

ವೈರಲ್​ ಆಯ್ತು ಪುಟ್ಟ ಮುದ್ದು ಕಂದಮ್ಮನ ತೊದಲು ನುಡಿ
ಮಗು ಮಾತನಾಡುತ್ತಿರುವ ದೃಶ್ಯ
Follow us
shruti hegde
|

Updated on: Apr 25, 2021 | 1:27 PM

ಪುಟ್ಟ ಪುಟ್ಟ ಪಾದಗಳು, ಹೆಜ್ಜೆಯ ಮೇಲೆ ಹೆಜ್ಜೆಯ ಇಡುತ್ತಾ ವಾಲಾಡುತ್ತಾ, ಆಗಾಗ ಬಿದ್ದೇಳುತ್ತಾ ಓಡಾಡುವ ಪುಟ್ಟ ಮಗುವನ್ನು ನೋಡುವುದೇ ಚಂದ. ಸ್ಪಷ್ಟ ಮಾತು ಬಾರದಿದ್ದರೂ ತೊದಲು ನುಡಿಯನ್ನ ಆಡುತ್ತಾ ಇದ್ದರಂತೂ ಹೇಳಿಕೊಳ್ಳಲಾಗದ ಸಂತೋಷ. ಪುಟ್ಟ ತುಟಿಯಂಚಿನಲ್ಲಿ ಹೊರಡುವ ಪದಗಳಿಗೆ ಸಾಟಿ ಎಲ್ಲಿದೆ? ಅಸ್ಪಷ್ಟ ಮಾತಾಗಿದ್ದರೂ, ಪುಟ್ಟ ಕಂದಮ್ಮ ಬಾಯಿಯಲ್ಲಿ ತೊದಲು ನುಡಿಗೆ ಅಮ್ಮ ಕಾಯುತ್ತಿರುತ್ತಾಳೆ. ಅಮ್ಮ ಹೇಳಿಕೊಡುವ ಪದಗಳನ್ನು ಮಗು, ನಗು ನಗುತ್ತಾ ಹೇಳುತ್ತಿರುವ ಪರಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಕಷ್ಟ ಪದಗಳನ್ನು ಮಗು ಹೇಳುವ ರೀತಿ ಎಲ್ಲರನ್ನೂ ರಂಜಿಸುತ್ತಿದೆ. ಇಲ್ಲಿದೆ ವಿಡಿಯೋ ನೀವೂ ನೋಡಿ.

ಮಕ್ಕಳು ಹಠ ಮಾಡುತ್ತಿರುವಾಗ ಓಲೈಸುವ ರೀತಿಯನ್ನು ಈ ವಿಡಿಯೋ ಹೇಳುತ್ತದೆ. ಈ ವಿಡಿಯೋವನ್ನು ವಿಶೇಷವಾಗಿ ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ. ಅಮ್ಮ ಹೇಳಿಕೊಡುತ್ತಿರುವ ಶಬ್ದಗಳನ್ನು ಮಗು ಹೇಳಲು ಕಷ್ಟಪಡುವ ತಮಾಷೆ ಸಂಗತಿ ಎಲ್ಲರಿಗೂ ನಗು ತರಿಸುತ್ತದೆ. ಹೇಳಲು ಕಷ್ಟವಾದ ಅಕ್ಷರಗಳನ್ನು ಮಗು ತನ್ನಲ್ಲಾದಷ್ಟು ಪ್ರಯತ್ನಿಸಿ ಹೇಳುತ್ತದೆ. ಮಗುವಿನ ಈ ವಿಡಿಯೋ ಎಲ್ಲರ ಮುಖದಲ್ಲಿ ನಗು ತರಿಸುವಂತಿದೆ.

ಟಿಕ್​ಟಾಕ್​ನಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋವನ್ನು ಸುಮಾರು 4.3 ಮಿಲಿಯನ್​ ಜನ ನೋಡಿದ್ದಾರೆ. ನೆಟ್ಟಿಗರಿಂದ ಕಾಮೆಂಟ್​ಗಳ ಸುರಿಮಳೆಯೇ ಬಂದಿದ್ದು, ಶಬ್ದ ಹೇಳಲು ಕಷ್ಟವಾಗುತ್ತಿದ್ದರೂ ಉಚ್ಛರಿಸಲು ಪ್ರಯತ್ನಿಸಿದಕ್ಕೆ ನೆಟ್ಟಿಗರು  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.‘ಓಹ್​ ಮಗು ತುಂಬಾ ಮುದ್ದಾಗಿದೆ. ತುಂಬಾ ಚುರುಕಾಗಿಯೂ ಇದೆ ಎಂದು ಟ್ವಿಟರ್​ ಬಳಕೆದಾರರು ಬರೆದುಕೊಂಡಿದ್ದಾರೆ. ಮಕ್ಕಳು ಅತ್ಯಂತ ಬುದ್ಧಿವಂತರಾಗಿರುತ್ತಾರೆ ಎಂದು ಮತ್ತೋರ್ವರು ಶ್ಲಾಘಿಸಿದ್ದಾರೆ.

ಇದನ್ನೂ ಓದಿ: ಸೆಕೆ ತಾಳಲಾರದೆ ತಣ್ಣೀರಿನಲ್ಲಿ ಸ್ನಾನ ಮಾಡಲು ಗಂಗಾತೀರಕ್ಕೆ ಹೊರಟ ಆನೆಗಳ ದಂಡು; ವಿಡಿಯೋ ವೈರಲ್​