AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊವಿಡ್​ ವಾರ್ಡ್​ನಲ್ಲಿ ಸರಳವಾಗಿ ನಡೆಯಿತು ಮದುವೆ; ಪಿಪಿಇ ಕಿಟ್ ಧರಿಸಿ ತಾಳಿ ಕಟ್ಟಿಸಿಕೊಂಡ ವಧು

ಶರತ್ ಮೋನ್​ ಮತ್ತು ಅಭಿರಾಮಿ ಎಂಬುವರು ಕೇರಳದ ಅಲಪ್ಪುಳ ವೈದ್ಯಕೀಯ ಕಾಲೇಜಿನ ಕೊವಿಡ್​ ವಾರ್ಡ್​ನಲ್ಲಿ ವಿವಾಹವಾಗಿದ್ದಾರೆ. ಇಲ್ಲಿ ವರ ಶರತ್​ ಮೋನ್​ ಕೊವಿಡ್-19 ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಕೊವಿಡ್​ ವಾರ್ಡ್​ನಲ್ಲಿ ಸರಳವಾಗಿ ನಡೆಯಿತು ಮದುವೆ; ಪಿಪಿಇ ಕಿಟ್ ಧರಿಸಿ ತಾಳಿ ಕಟ್ಟಿಸಿಕೊಂಡ ವಧು
ಸಾಂದರ್ಭಿಕ ಚಿತ್ರ
Lakshmi Hegde
|

Updated on: Apr 25, 2021 | 3:42 PM

Share

ಕೊವಿಡ್​-19 ಸೋಂಕಿನಿಂದಾಗಿ ಮದುವೆ ಸೇರಿ ಯಾವುದೇ ಶುಭಸಮಾರಂಭಗಳನ್ನು ನಡೆಸುವುದೇ ದೊಡ್ಡ ತಲೆನೋವಾಗಿಬಿಟ್ಟಿದೆ. ಆದರೂ ಜನ ಮಾತ್ರ ಹೊಸಹೊಸ ರೀತಿಯಲ್ಲಿ ಮದುವೆ ಸಮಾರಂಭ ನಡೆಸುತ್ತಲೇ ಇದ್ದಾರೆ. ಇದೀಗ ಕೇರಳದಲ್ಲಿ ಜೋಡಿಯೊಂದು ಕೊವಿಡ್​-19 ಆಸ್ಪತ್ರೆ ವಾರ್ಡ್​​ನಲ್ಲೇ ವಿವಾಹವಾಗಿ ದೇಶದ ಗಮನಸೆಳೆದಿದೆ.

ಶರತ್ ಮೋನ್​ ಮತ್ತು ಅಭಿರಾಮಿ ಎಂಬುವರು ಕೇರಳದ ಅಲಪ್ಪುಳ ವೈದ್ಯಕೀಯ ಕಾಲೇಜಿನ ಕೊವಿಡ್​ ವಾರ್ಡ್​ನಲ್ಲಿ ವಿವಾಹವಾಗಿದ್ದಾರೆ. ಇಲ್ಲಿ ವರ ಶರತ್​ ಮೋನ್​ ಕೊವಿಡ್-19 ಸೋಂಕಿಗೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹಾಗಾಗಿ ಮುಹೂರ್ತ ತಪ್ಪಿಸಲು ಇಷ್ಟವಿಲ್ಲದೆ ವಧು ಪಿಪಿಇ ಕಿಟ್​ ಧರಿಸಿ ಆಸ್ಪತ್ರೆಗೇ ಬಂದು ವಿವಾಹವಾಗಿದ್ದಾರೆ. ಶರತ್​ ಹಾಗೂ ಅಭಿರಾಮಿ ಇಬ್ಬರೂ ಕೈಂಕರಿ ನಿವಾಸಿಗಳಾಗಿದ್ದಾರೆ.

ಶರತ್​ ವಿದೇಶದಲ್ಲಿ ಕೆಲಸ ಮಾಡುತ್ತಾರೆ. ಮದುವೆ ಫಿಕ್ಸ್ ಆಗಿ ಇನ್ನೇನು ಕೆಲವೇ ದಿನ ಇದೆ ಎನ್ನುವಾಗ ಅವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಅವರ ತಾಯಿಗೂ ಸೋಂಕು ತಗುಲಿದೆ. ತಾಯಿ-ಮಗ ಇಬ್ಬರನ್ನೂ ಅಲಪ್ಪುಳ ವೈದ್ಯಕೀಯ ಕಾಲೇಜಿನ ಕೊವಿಡ್​ ಸೆಂಟರ್​ನಲ್ಲಿ ದಾಖಲು ಮಾಡಲಾಗಿತ್ತು. ಏಪ್ರಿಲ್​ 25ರಂದು ನಿಶ್ಚಯವಾಗಿದ್ದ ಮದುವೆಯನ್ನು ಮುಂದೂಡುವುದು ಬೇಡ ಎಂದು ಎರಡೂ ಕುಟುಂಬಸ್ಥರು ನಿರ್ಧರಿಸಿ, ಜಿಲ್ಲಾಡಳಿತದಿಂದ ಅನುಮತಿ ಪಡೆದು, ಕೊವಿಡ್ 19 ವಾರ್ಡ್​ನಲ್ಲಿ ವಿವಾಹವಾಗಿದ್ದಾರೆ. ಇಲ್ಲಿ ತುಂಬ ಜನ ಸೇರಿರಲಿಲ್ಲ. ಎಲ್ಲ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನೂ ಕೈಗೊಳ್ಳಲಾಗಿತ್ತು. ಅಲ್ಲೇ ಇದ್ದ ವರನ ತಾಯಿ, ಹೊಸ ಜೋಡಿ ಹೂಗುಚ್ಛ ನೀಡಿ ಶುಭ ಹಾರೈಸಿದರು ಎಂದು ಆಸ್ಪತ್ರೆ ತಿಳಿಸಿದೆ.

ಇದನ್ನೂ ಓದಿ: ವರ್ಷಪೂರ್ತಿ ಬರ್ತ್ ಡೇ ಗಿಫ್ಟ್​​ ಪಡೆಯಲು ಖತರ್ನಾಕ್ ಉಪಾಯ ಮಾಡಿದ್ದವ ಅರೆಸ್ಟ್​; ಈತನ ವಿರುದ್ಧ 35 ಯುವತಿಯರು ಒಗ್ಗಟ್ಟಾಗಿದ್ದೇಕೆ?

ತೆಲುಗಿನಲ್ಲಿ ಮಿಂಚಲಿದ್ದಾರೆ ಮಳಯಾಳಂ ನಟಿ ನಜ್ರಿಯಾ ನಜೀಮ್…!

couple in Kerala tied the knot inside a Covid ward Of Alappuzha Media College after groom testes positive for coronavirus

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ