ವರ್ಷಪೂರ್ತಿ ಬರ್ತ್ ಡೇ ಗಿಫ್ಟ್​​ ಪಡೆಯಲು ಖತರ್ನಾಕ್ ಉಪಾಯ ಮಾಡಿದ್ದವ ಅರೆಸ್ಟ್​; ಈತನ ವಿರುದ್ಧ 35 ಯುವತಿಯರು ಒಗ್ಗಟ್ಟಾಗಿದ್ದೇಕೆ?

ತನ್ನ ಕೆಲಸವನ್ನೂ ಪ್ರತಿಯೊಬ್ಬರ ಬಳಿ ಬೇರೆಬೇರೆಯದಾಗೇ ಹೇಳಿಕೊಂಡಿದ್ದ. ಪ್ರತಿ ಯುವತಿಯ ಬಳಿಯೂ ನಿನ್ನನ್ನೇ ಮದುವೆಯಾಗುವುದು ಎಂದು ನಂಬಿಸಿದ್ದ. ಅದರಲ್ಲೂ ಶ್ರೀಮಂತ ಯುವತಿಯರ ಬೆನ್ನೇ ಬಿದ್ದಿದ್ದ.

ವರ್ಷಪೂರ್ತಿ ಬರ್ತ್ ಡೇ ಗಿಫ್ಟ್​​ ಪಡೆಯಲು ಖತರ್ನಾಕ್ ಉಪಾಯ ಮಾಡಿದ್ದವ ಅರೆಸ್ಟ್​; ಈತನ ವಿರುದ್ಧ 35 ಯುವತಿಯರು ಒಗ್ಗಟ್ಟಾಗಿದ್ದೇಕೆ?
ಬಂಧಿತ ಆರೋಪಿ
Follow us
Lakshmi Hegde
|

Updated on: Apr 25, 2021 | 3:25 PM

ಬರೋಬ್ಬರಿ 35 ಮಹಿಳೆಯರೊಟ್ಟಿಗೆ ಏಕಕಾಲಕ್ಕೆ ಡೇಟಿಂಗ್ ಮಾಡುತ್ತಿದ್ದ 39 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ವರ್ಷಪೂರ್ತಿ ಬರ್ತ್​ ಡೇ ಗಿಫ್ಟ್ ಪಡೆಯುವುದಕ್ಕೋಸ್ಕ ಈ ವ್ಯಕ್ತಿ ಇಂಥ ಐಡಿಯಾ ಮಾಡಿದ್ದ..35 ಜನರ ಬಳಿಯೂ ತನ್ನ ಹುಟ್ಟಿದ ದಿನಾಂಕವನ್ನು ಬೇರೆಬೇರೆಯಾಗಿ ಹೇಳಿಕೊಂಡಿದ್ದ ಈ ಅಷ್ಟೂ ಮಹಿಳೆಯರನ್ನು ವಂಚಿಸಿದ್ದ.

ಇಂಥದ್ದೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು ಜಪಾನ್​​ನಲ್ಲಿ. 39ವರ್ಷದ ತಕಾಶಿ ಮಿಯಾಗಾವಾ ದಕ್ಷಿಣ ಜಪಾನ್​ನ ಕನ್ಸೈ ಎಂಬ ಪ್ರದೇಶದ ನಿವಾಸಿ. ಹಾಗಂತ ಈತನಿಗೇನೂ ಒಂದು ನಿರ್ದಿಷ್ಟ ವಿಳಾಸ ಇರಲಿಲ್ಲ. 35 ಮಹಿಳೆಯರೊಂದಿಗೆ ಡೇಟಿಂಗ್​ ಮಾಡುತ್ತಿದ್ದ ಈತ, ಪ್ರತಿಯೊಬ್ಬರ ಬಳಿಯೂ, ನಾನು ನಿನ್ನನ್ನು ತುಂಬ ಇಷ್ಟಪಡುತ್ತೇನೆ ಎಂದೇ ಹೇಳಿಕೊಂಡಿದ್ದ. ವರ್ಷಪೂರ್ತಿ ಒಬ್ಬರಲ್ಲ ಒಬ್ಬರಿಂದ ಬೆಲೆಬಾಳುವ ಉಡುಗೋರೆ ಪಡೆಯುವ ಸಲುವಾಗಿ 35 ಯುವತಿಯರ ಬಳಿಯೂ ತನ್ನ ಹುಟ್ಟಿದ ದಿನಾಂಕವನ್ನು ಬೇರೆಬೇರೆಯಾಗಿಯೇ ಹೇಳಿಕೊಂಡಿದ್ದ. ಈತನ ನಿಜವಾದ ಹುಟ್ಟುಹಬ್ಬ ನವೆಂಬರ್ 13ರಂದು ಆದರೂ, ವರ್ಷದ ಎಲ್ಲ ತಿಂಗಳಲ್ಲೂ ಹೊಂದಿಸಿ ಬರ್ತ್ ಡೇಟ್​ ಸೃಷ್ಟಿ ಮಾಡಿಕೊಂಡಿದ್ದರಿಂದ ತಿಂಗಳಲ್ಲಿ ಮೂರರಂತೆ ವರ್ಷಕ್ಕೆ 35 ಗಿಫ್ಟ್ ಪಕ್ಕಾ ಆಗಿತ್ತು. ಹಾಗೇ, ಆತನ ಗರ್ಲ್​ಫ್ರೆಂಡ್ಸ್ ಅವನಿಗಾಗಿ ಕೇಕ್​ ಕತ್ತರಿಸಿ ಸಂಭ್ರಮಿಸುತ್ತಿದ್ದರು.

ಹಾಗೇ, ತನ್ನ ಕೆಲಸವನ್ನೂ ಪ್ರತಿಯೊಬ್ಬರ ಬಳಿ ಬೇರೆಬೇರೆಯದಾಗೇ ಹೇಳಿಕೊಂಡಿದ್ದ. ಪ್ರತಿ ಯುವತಿಯ ಬಳಿಯೂ ನಿನ್ನನ್ನೇ ಮದುವೆಯಾಗುವುದು ಎಂದು ನಂಬಿಸಿದ್ದ. ಅದರಲ್ಲೂ ಶ್ರೀಮಂತ ಯುವತಿಯರ ಬೆನ್ನೇ ಬಿದ್ದಿದ್ದ. ಹಾಗಾಗಿ ಅದೆಷ್ಟೋ ಬೆಲೆಬಾಳುವ ಉಡುಗೊರೆಗಳನ್ನು ಪಡೆದಿದ್ದ. ಆದರೆ ಈತ ಕಳ್ಳಾಟ ಅದು ಹೇಗೋ ಯುವತಿಯರಿಗೆ ಗೊತ್ತಾಗಿ, ಎಲ್ಲರೂ ಸೇರಿ ಪೊಲೀಸರಿಗೆ ಹಿಡಿದುಕೊಟ್ಟಿದ್ದಾರೆ.

ಇದನ್ನೂ ಓದಿ: ಆಕ್ಸಿಜನ್​ ಅಭಾವ ನೀಗಿಸಲು ಕೇಂದ್ರ ಸರ್ಕಾರದಿಂದ ಕ್ರಮ; ದೇಶಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ 551 ಆಮ್ಲಜನಕ ಉತ್ಪಾದನಾ ಘಟಕ ಸ್ಥಾಪನೆ

ಹಂಪಿಯ ಬಡವಿಲಿಂಗ ಅರ್ಚಕ ಕೆ.ಎನ್.ಕೃಷ್ಣ ಭಟ್ ಇನ್ನಿಲ್ಲ

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್