ಭಾರತದ ಬ್ಯಾಂಕ್​ಗಳು ನೀಡಿರುವುದು ಸಾರ್ವಜನಿಕರ ಹಣ, ನನ್ನನ್ನು ದಿವಾಳಿ ಎಂದು ಘೋಷಿಸಲು ಆಗಲ್ಲ ಎಂದ ಮಲ್ಯ

ಭಾರತದ ಬ್ಯಾಂಕ್​ಗಳು ತನಗೆ ಸಾಲ ನೀಡಿರುವುದು ಸಾರ್ವಜನಿಕರ ಹಣ. ಆದ್ದರಿಂದ ಭದ್ರತೆ ನೀಡಿರುವುದನ್ನು ಕೈಬಿಟ್ಟು, ದಿವಾಳಿ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ದೇಶಭ್ರಷ್ಟ ಆರ್ಥಿಕ ಅಪರಾಧಿ ವಿಜಯ್ ಮಲ್ಯ ಹೇಳಿದ್ದಾರೆ.

ಭಾರತದ ಬ್ಯಾಂಕ್​ಗಳು ನೀಡಿರುವುದು ಸಾರ್ವಜನಿಕರ ಹಣ, ನನ್ನನ್ನು ದಿವಾಳಿ ಎಂದು ಘೋಷಿಸಲು ಆಗಲ್ಲ ಎಂದ ಮಲ್ಯ
ವಿಜಯ್ ಮಲ್ಯ (ಸಂಗ್ರಹ ಚಿತ್ರ)
Follow us
Srinivas Mata
|

Updated on: Apr 25, 2021 | 12:04 AM

ಲಂಡನ್: ಸಾಲದಲ್ಲಿ ಮುಳುಗಿಹೋಗಿರುವ ದೇಶಭ್ರಷ್ಟ ಆರ್ಥಿಕ ಅಪರಾಧಿ ವಿಜಯ್ ಮಲ್ಯ ವಿರುದ್ಧ ಇರುವ ದಿವಾಳಿ ಪ್ರಕರಣದ ಹೋರಾಟದಲ್ಲಿ ಯುನೈಟೆಡ್ ಕಿಂಗ್​ಡಮ್ ಕೋರ್ಟ್​ನಲ್ಲಿ ಶುಕ್ರವಾರ ಇನ್ನೂ ಒಂದು ಹೆಜ್ಜೆಯನ್ನು ಅವರು ಮುಂದಕ್ಕೆ ಇಟ್ಟಿದ್ದಾರೆ. ಬ್ಯಾಂಕ್​ಗಳು ಬ್ರಿಟನ್​ನಲ್ಲಿ ತಮ್ಮ ವಿರುದ್ಧ ತಂದಿರುವ ದಿವಾಳಿ ಅರ್ಜಿ ಕಾನೂನಿನ ಮುಂದೆ ನಿಲ್ಲುವುದಿಲ್ಲ. ಭಾರತದಲ್ಲಿ ಇರುವ ತನ್ನ ಆಸ್ತಿಯ ಮೇಲಿನ ಭದ್ರತೆಯನ್ನು ಕೈಬಿಡುವುದಕ್ಕೆ ಆಗುವುದಿಲ್ಲ. ಏಕೆಂದರೆ, ಅದು ಭಾರತದಲ್ಲಿ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದದ್ದು. ತಾನು ಸಾಲ ಪಡೆದಿರುವುದು “ಸಾರ್ವಜನಿಕರ ಹಣ” ಎಂದು ಅವರು ಹೇಳಿದ್ದಾರೆ.

ಭಾರತದ ಉದ್ಯಮಿ ವಿಜಯ್ ಮಲ್ಯ ಅವರನ್ನು ಬ್ರಿಟನ್​ನಲ್ಲಿ ದಿವಾಳಿ ಎಂದು ಘೋಷಣೆ ಮಾಡಬೇಕು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಬ್ಯಾಂಕ್​ಗಳ ಒಕ್ಕೂಟವು ಕೇಳುತ್ತಿದೆ. ಹಾಗೆ ಮಾಡುವುದರಿಂದ ದಿವಾಳಿ ಪರವಾಗಿ ಟ್ರಸ್ಟಿಯೊಬ್ಬರ ನೇಮಕ ಆಗುತ್ತದೆ. ಆ ನಂತರ ವಿಜಯ್ ಮಲ್ಯ ಹೆಸರಿನಲ್ಲಿ ವಿಶ್ವದಾದ್ಯಂತ ಎಲ್ಲೆಲ್ಲಿ ಆಸ್ತಿ ಇದೆಯೋ ಆ ಬಗ್ಗೆ ವಿಚಾರಣೆ ನಡೆಸಿ, ಕಿಂಗ್​ಫಿಷರ್ ಏರ್​ಲೈನ್ಸ್​ಗೆ ಮಲ್ಯ ವೈಯಕ್ತಿಕ ಖಾತ್ರಿಯಾಗಿ ನಿಂತು, ಬಾಕಿ ಉಳಿಸಿಕೊಂಡಿರುವ 11,000 ಕೋಟಿ ರೂಪಾಯಿ ವಸೂಲಿ ಮಾಡಬಹುದು ಎಂಬ ಉದ್ದೇಶ ಇದರ ಹಿಂದೆ ಇದೆ.

ಏಪ್ರಿಲ್ 9, 2020ರಂದು ತಿದ್ದುಪಡಿಯಾದ ದಿವಾಳಿ ಅರ್ಜಿಯನ್ನು ಸಲ್ಲಿಸುವುದಕ್ಕೆ ಬ್ಯಾಂಕ್​ಗಳಿಗೆ ಆದೇಶಿಸಲಾಗಿತ್ತು. ಒಂದು ವೇಳೆ ಯು.ಕೆ. ದಿವಾಳಿ ಕಾನೂನು ಅನ್ವಯ ಬದ್ಧವಾಗಬೇಕಿದ್ದಲ್ಲಿ ಭಾರತದಲ್ಲಿ ವಿಜಯ್ ಮಲ್ಯ ಆಸ್ತಿ ಮೇಲಿರುವ ಯಾವುದೇ ಭದ್ರತೆ ಮನ್ನಾ ಮಾಡಬೇಕಾಗುತ್ತದೆ. ಬ್ಯಾಂಕ್​ಗಳು ಆ ಆದೇಶಕ್ಕೆ ಅರ್ಜಿ ಹಾಕಿಕೊಳ್ಳುವ ಪ್ರಕ್ರಿಯೆಯಲ್ಲಿವೆ. ಆದರೆ ವಿಜಯ್ ಮಲ್ಯ ಪರ ವಕೀಲರಾದ ಫಿಲಿಪ್ ಮಾರ್ಷಲ್ ಮಾತನಾಡಿ, ಯುನೈಟೆಡ್​ ಕಿಂಗ್​ಡಮ್​ನಲ್ಲಿ ಮಲ್ಯ ಅವರನ್ನು ದಿವಾಳಿ ಎಂದು ಘೋಷಿಸುವ ಉದ್ದೇಶದಿಂದ ಭಾರತದಲ್ಲಿ ಮಲ್ಯ ಅವರ ಆಸ್ತಿಯನ್ನು ಭದ್ರತೆಯಾಗಿ ಇರಿಸಿಕೊಂಡಿರುವುದನ್ನು ಬಿಡುವುದಕ್ಕೆ ಭಾರತೀಯ ಕಾನೂನಿನ ಪ್ರಕಾರವಾಗಿ ಸಾಧ್ಯವಿಲ್ಲ. ಏಕೆಂದರೆ ಸಾಲ ನೀಡಿರುವುದು ಸಾರ್ವಜನಿಕರ ಹಣದಿಂದ. ಅದು ರಾಷ್ಟ್ರೀಕೃತ ಬ್ಯಾಂಕ್. ಯಾವುದೇ ದಿವಾಳಿ ಆದೇಶವನ್ನು ತಿದ್ದುಪಡಿ ಅರ್ಜಿಯ ಆಧಾರದಲ್ಲಿ ನೀಡಿದರೆ ಅದು, “ಸುಳ್ಳು ಆರೋಪದ” ಮೇಲೆ ನೀಡಿದಂತಾಗುತ್ತದೆ ಎಂದಿದ್ದಾರೆ.

ಭಾರತದಲ್ಲಿ ಮಲ್ಯ ಅವರಿಗೆ ಸಂಬಂಧಿಸಿದಂತೆ ಬಂದಿರುವ ಹಲವು ಆದೇಶಗಳ ಕಡೆಗೆ ಮಾರ್ಷಲ್ ಗಮನ ಸೆಳೆದರು. ಅದರಲ್ಲಿ ಡಿಆರ್​ಟಿ ಮತ್ತು ಪಿಎಲ್​ಎಂಎ ಕೂಡ ಇತ್ತು. ಬ್ಯಾಂಕ್​ಗಳ ಬಳಿ ಡಿಯಾಜಿಯೋ ಸೆಕ್ಯೂರ್ಡ್ ಕ್ರೆಡಿಟರ್ಸ್ ಕೂಡ ಸೇರಿ ಮಲ್ಯರ ಇತರ ಆಸ್ತಿಯನ್ನು ಬ್ಯಾಂಕ್​ಗಳಿಂದ ಭದ್ರತೆಯಾಗಿ ಪಡೆಯಲಾಗಿದೆ. ಜಾರಿ ನಿರ್ದೇಶನಾಲಯದ ಮೇಲ್ಪಟ್ಟು ಹಣ ಸಾಲವಾಗಿ ಇಟ್ಟುಕೊಂಡಿರುವುದು ಸಾರ್ವಜನಿಕರದು. ಇದರಲ್ಲಿ ಸಾರ್ವಜನಿಕ ಹಿತಾಸಕ್ತಿ ಏನಿಲ್ಲ ಅಂತ ಹೇಳುವುದಕ್ಕೆ ಸಾಧ್ಯವಿಲ್ಲ ಎಂದು ಮಲ್ಯ ಪರ ವಕೀಲರು ಹೇಳಿದ್ದಾರೆ. ಇನ್ನು 11,000 ಕೋಟಿ ರೂಪಾಯಿ ಮೊತ್ತದಲ್ಲಿ ಬಹುಪಾಲು ಅಸಲು ಸಾಲದ ಮೇಲಿನ ಬಡ್ಡಿ ಮತ್ತು ಅದನ್ನು ಮಲ್ಯ ಪ್ರಶ್ನಿಸಿದ್ದಾರೆ, ಪ್ರಕರಣ ಭಾರತದ ಕೋರ್ಟ್​ಗಳಲ್ಲಿವೆ. ಅರ್ಜಿದಾರರು, ಇತರ ಜಂಟಿ ಸಾಲಗಾರರ ಆಸ್ತಿಯನ್ನು ಮಾರಾಟ ಮಾಡಿದಲ್ಲಿ ದಿವಾಳಿ ಅರ್ಜಿಯನ್ನು ಸರಿತೂಗಿಸುವಷ್ಟು ಮೊತ್ತ ಆಗುತ್ತದೆ. ಇಲ್ಲಿ ಭದ್ರತೆಯ ಪ್ರಶ್ನೆಗೆ ಬಹಳ ಪ್ರಾಮುಖ್ಯ ಇದೆ ಎಂದು ವಕೀಲರು ಹೇಳಿದ್ದಾರೆ.

ಇನ್ನು ಭಾರತದಲ್ಲಿ ಗಡಿ ಆಚೆಗೆ ದಿವಾಳಿ ಎಂದು ಗುರುತಿಸುವ ಪರಿಪಾಠ ಇಲ್ಲ. ಇಂಗ್ಲಿಷ್ ದಿವಾಳಿ ಟ್ರಸ್ಟಿಯನ್ನು ಗುರುತಿಸುವ ಕಾನೂನು ಭಾರತದಲ್ಲಿ ಇಲ್ಲ. ಇಂಥ ಸಂದರ್ಭಲ್ಲಿ ಬಿಡುಗಡೆಯೇ ಆಗದೆ ಭಾರತದಲ್ಲಿನ ಭದ್ರತೆಯನ್ನು ಟ್ರಸ್ಟಿ ಹೇಗೆ ಪರಿಣಾಮಕಾರಿಯಾಗಿ ಪಡೆಯಲು ಸಾಧ್ಯ? ಎಂದಿದ್ದಾರೆ ಮಲ್ಯ ವಕೀಲರು.

ಬ್ಯಾಂಕ್​ಗಳ ಪರ ವಕೀಲರು ಮಾತನಾಡಿ, ಭಾರತದಲ್ಲಿ ಬ್ಯಾಂಕ್​ಗಳು ಭದ್ರತೆಯನ್ನು ಕೈಬಿಡುವುದಕ್ಕೆ ತಡೆಯಲು ಸಾರ್ವಜನಿಕ ನೀತಿ ನಿಯಮ ಇಲ್ಲ. ಅದು ಭಾರತದಲ್ಲಿ ಎಲ್ಲಿಯೂ ಇಲ್ಲ. ಹೇಗೆ ಒಂದು ಬ್ಯಾಂಕ್ ತನ್ನ ಬಳಿಯ ಭದ್ರತೆಯನ್ನು ತನ್ನ ಇಚ್ಛೆಯಂತೆ ಬಳಸುವುದಕ್ಕೆ ಸಾಧ್ಯವಿಲ್ಲವಾ? ಎಂದು ಪ್ರಶ್ನಿಸಿದ್ದಾರೆ. ಮುಖ್ಯ ಐಸಿಸಿ ನ್ಯಾಯಾಧೀಶರು ತೀರ್ಪು ಕಾಯ್ದಿರಿಸಿದ್ದಾರೆ.

ಇದನ್ನೂ ಓದಿ: ಮಲ್ಯನಿಗೆ 1 ರೂಪಾಯಿ ಸಾಲವೂ ಕೊಡಲ್ಲ ಎಂದಿದ್ದ ದಿಟ್ಟ ಬ್ಯಾಂಕ್​ ಅಧಿಕಾರಿ ನಿನ್ನೆ ನಿವೃತ್ತರಾದರು!

(Indian fugitive businessman Vijay Mallya said on Friday in UK that, Indian banks gave me public money. So, they cannot forfeit security and made bankrupt)