ಮಲ್ಯನಿಗೆ 1 ರೂಪಾಯಿ ಸಾಲವೂ ಕೊಡಲ್ಲ ಎಂದಿದ್ದ ದಿಟ್ಟ ಬ್ಯಾಂಕ್​ ಅಧಿಕಾರಿ ನಿನ್ನೆ ನಿವೃತ್ತರಾದರು!

ವಿಜಯ್​ ಮಲ್ಯ, ನೀರವ್​ ಮೋದಿ ಅಂತಹ ಕುಳಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ನೀಡಿ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಎಂಬುದಕ್ಕೆ ಕಿಂಚಿತ್ತೂ ಮರ್ಯಾದೆ ನೀಡದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ, ಪಂಜಾಬ್ ಬ್ಯಾಂಕ್​ಗಳು ಕೆಟ್ಟ ಉದಾಹರಣೆಯಾಗಿ ನಮ್ಮ ಕಣ್ಣೆದುರು ಇವೆ. ಅಂದ್ರೆ ಸಾವಿರಾರು ಕೋಟಿ ರೂಪಾಯಿಗಳನ್ನು ಈ ಬ್ಯಾಂಕುಗಳು ಕಡ್ಲೆಪುರಿಯಂತೆ ಹಂಚಿ ನೀರು ಕುಡಿಯೋದ್ದಕ್ಕೆ ಅವಕಾಶ ಮಾಡಿಕೊಟ್ಟು, ಪರೋಕ್ಷವಾಗಿ ಸಾರ್ವಜನಿಕರಿಗೆ ದ್ರೋಹ ಬಗೆದವು. ಆದರೆ.. ಒಬ್ಬ ಖಡಕ್ ಅಧಿಕಾರಿ ಬ್ಯಾಂಕಿನ ಚುಕ್ಕಾಣಿ ಹಿಡಿದರೆ ಅದನ್ನು ಇಂತಹ ಖದೀಮರಿಂದ […]

ಮಲ್ಯನಿಗೆ 1 ರೂಪಾಯಿ ಸಾಲವೂ ಕೊಡಲ್ಲ ಎಂದಿದ್ದ ದಿಟ್ಟ ಬ್ಯಾಂಕ್​ ಅಧಿಕಾರಿ ನಿನ್ನೆ ನಿವೃತ್ತರಾದರು!
Follow us
ಸಾಧು ಶ್ರೀನಾಥ್​
|

Updated on: Oct 27, 2020 | 11:39 AM

ವಿಜಯ್​ ಮಲ್ಯ, ನೀರವ್​ ಮೋದಿ ಅಂತಹ ಕುಳಗಳಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ನೀಡಿ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಎಂಬುದಕ್ಕೆ ಕಿಂಚಿತ್ತೂ ಮರ್ಯಾದೆ ನೀಡದ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ, ಪಂಜಾಬ್ ಬ್ಯಾಂಕ್​ಗಳು ಕೆಟ್ಟ ಉದಾಹರಣೆಯಾಗಿ ನಮ್ಮ ಕಣ್ಣೆದುರು ಇವೆ. ಅಂದ್ರೆ ಸಾವಿರಾರು ಕೋಟಿ ರೂಪಾಯಿಗಳನ್ನು ಈ ಬ್ಯಾಂಕುಗಳು ಕಡ್ಲೆಪುರಿಯಂತೆ ಹಂಚಿ ನೀರು ಕುಡಿಯೋದ್ದಕ್ಕೆ ಅವಕಾಶ ಮಾಡಿಕೊಟ್ಟು, ಪರೋಕ್ಷವಾಗಿ ಸಾರ್ವಜನಿಕರಿಗೆ ದ್ರೋಹ ಬಗೆದವು. ಆದರೆ..

ಒಬ್ಬ ಖಡಕ್ ಅಧಿಕಾರಿ ಬ್ಯಾಂಕಿನ ಚುಕ್ಕಾಣಿ ಹಿಡಿದರೆ ಅದನ್ನು ಇಂತಹ ಖದೀಮರಿಂದ ಹೇಗೆ ರಕ್ಷಿಸಬಹುದು ಮತ್ತು ಆ ಬ್ಯಾಂಕ್​ಅನ್ನು ಹೇಗೆ ಸದೃಢವಾಗಿ ಕಟ್ಟಬಹುದು ಎಂಬುದಕ್ಕೆ ಖಡಕ್ ಉದಾಹರಣೆಯಾಗಿ ಆದಿತ್ಯ ಪುರಿ ಎಂಬ ದಿಟ್ಟ ಬ್ಯಾಂಕ್​ ಅಧಿಕಾರಿ ನಮ್ಮ ಕಣ್ಣೆದುರು ರಾರಾಜಿಸುತ್ತಾರೆ. ಕೊನೆಗೆ, ಐಸಿಐಸಿಐ ಬ್ಯಾಂಕ್​ನ​ ಮುಖ್ಯಸ್ಥೆಯಾಗಿದ್ದ ಚಂದಾ ಕೊಚ್ಚಾರ್ ಎಂಬ ಹೆಣ್ಣುಮಗಳೂ ತನಗೆ ದಕ್ಕಿದ ಅಧಿಕಾರವನ್ನು ಹೇಗೆ ದುರುಪಯೋಗ ಪಡಿಸಿಕೊಂಡರು ಎಂಬುದು ಇಲ್ಲಿ ದಾಖಲಾರ್ಹ. ತನ್ನ ಗಂಡನ ಮಾಲೀಕತ್ವದ ವಿಡಿಯೋಕಾನ್​ ಕಂಪನಿಗೆ ಸಾವಿರಾರು ಕೋಟಿ ರೂಪಾಯಿ ಸಾಲ ನೀಡಿದ ಆರೋಪ ಇದೇ ಐಸಿಐಸಿಐ ಬ್ಯಾಂಕಿನ ಎಂ.ಡಿ. ಆಗಿದ್ದ ಚಂದಾ ಕೊಚಾರ್ ಮೇಲಿದೆ.

ಆದ್ರೆ ಆದಿತ್ಯ ಪುರಿ ಎಂಬ ದಿಟ್ಟ ಬ್ಯಾಂಕರ್ 25 ವರ್ಷಗಳ ಹಿಂದೆ HDFC ಬ್ಯಾಂಕ್ ಚುಕ್ಕಾಣಿ ಹಿಡಿದು ಅದನ್ನು ಅತ್ಯುತ್ತಮ ಖಾಸಗಿ ಬ್ಯಾಂಕ್​ ಆಗಿ ಪರಿವರ್ತಿಸಿದ್ದು ಸಣ್ಣ ವಿಷಯವೇನಲ್ಲ. ಚಂದಾ ಕೊಚಾರ್, ವಿಜಯ್​ ಮಲ್ಯ, ನೀರವ್​ ಮೋದಿಗಳಂತೆ ಆಗದೆ ದಿಟ್ಟತನ ತೋರಿ, ಬ್ಯಾಂಕ್​ನ ದಡಮುಟ್ಟಿಸಿದ್ದು ನಿನ್ನೆ ನಿವೃತ್ತರಾದ ಇದೇ ಆದಿತ್ಯ ಪುರಿ.

ಆದಿತ್ಯ ಪುರಿ, 1994ರಲ್ಲಿ HDFC Bankನ ಎಂ.ಡಿ. ಆಗಿ ಬ್ಯಾಂಕ್ ಪ್ರವೇಶಿಸಿದ್ದರು. ಅದಕ್ಕೂ ಮುನ್ನ ಆದಿತ್ಯ, ಮಲೇಷ್ಯಾದಲ್ಲಿ ವಿದೇಶಿ ಬ್ಯಾಂಕ್​ ಒಂದರ ಮುಖ್ಯಸ್ಥರಾಗಿದ್ದರು. ದೇಶದಲ್ಲಿ ಕಾಣಿಸಿಕೊಂಡಿದ್ದ 1991ರ ಉದಾರೀಕರಣದ ಬೀಸುಗಾಳಿಯಲ್ಲಿ.. HDFCಯ ಅಂದಿನ ಮುಖ್ಯಸ್ಥ ದೀಪಕ್ ಪಾರೇಖ್, HDFC ಬ್ಯಾಂಕ್ ಚುಕ್ಕಾಣಿಯನ್ನು ಆದಿತ್ಯ ಪುರಿಗೆ ಒಪ್ಪಿಸಿದ್ದರು.

ಇನ್ನು, ಆದಿತ್ಯ ಪುರಿ ಅಂತಹ ಅಧಿಕಾರಿ ಹೀಗೆ ಮೇಲ್ಪಂಕ್ತಿ ಹಾಕಿಕೊಟ್ಟಿರುವಾಗ ಅವರ ಜಾಗಕ್ಕೆ ಇಂದಿನಿಂದ ಬಂದು ಕುಳಿತಿರುವವರು ಸಹ ಅವರಷ್ಟೇ ಖಡಕ್ ಆಗಿರುವ ಅಧಿಕಾರಿ. ಅಂದ್ರೆ 1996ರಿಂದಲೂ ಆದಿತ್ಯ ಪುರಿಗೆ ಜೊತೆಜೊತೆಯಾಗಿ HDFC Bank ನಲ್ಲಿ ಹೆಜ್ಜೆ ಹಾಕಿರುವ ಶಶಿಧರ್ ಜಗದೀಶನ್ ಇಂದಿನಿಂದ HDFC Bank MD-CEO!

ಖಾಸಗಿ ಕ್ಷೇತ್ರದ ಬ್ಯಾಂಕುಗಳಲ್ಲಿ ಹೀಗೆ 26 ವರ್ಷ ಸುದೀರ್ಘ ಕಾಲ ಚುಕ್ಕಾಣಿ ಹಿಡಿದಿದ್ದು ಆದಿತ್ಯ ಪುರಿ ಅವರ ಸಾಧನೆಯೇ ಸರಿ. ಅದರಲ್ಲೂ ಮಲ್ಯನಿಗೆ ಒಂದು ರೂಪಾಯಿಯೂ ಸಾಲ ನೀಡಲ್ಲ ಎಂದಿದ್ದ ದಿಟ್ಟ ಅಧಿಕಾರಿ ಆದಿತ್ಯ ಪುರಿ ನಿನ್ನೆ ನಿವೃತ್ತರಾಗಿದ್ದರೆ ಏನಂತೆ ಇನ್ನೂ ನನ್ನ ಮೈ-ಮಸ್ತಿಷ್ಕದಲ್ಲಿ ಕಸುವು ಇದೆ. ಇನ್ನೂ ಸಕ್ರಿಯನಾಗಿದ್ದು ಅಂತಾರಾಷ್ಟ್ರೀಯ ಮಟ್ಟದ ಬ್ಯಾಂಕಿಂಗ್​ ವ್ಯವಸ್ಥೆಯಲ್ಲಿ ನನ್ನ ಛಾಪನ್ನು ಮೂಡಿಸುವೆ ಎಂದು 70 ವರ್ಷ ವಯಸ್ಸಿನ ಆದಿತ್ಯ ಪುರಿ ಹೇಳಿದ್ದಾರೆ.